20/09/2026
⚜️ ರಾಜ್ಯ ಮಟ್ಟದ ಸಂಘಟಕರ ಸಭೆ ⚜️
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ದಿನಾಂಕ 19.09.2026 ರಿಂದ 20.09.2026 ರವರೆಗೆ ಬೆಂಗಳೂರಿನ ರಾಜ್ಯ ಕೇಂದ್ರ ಕಛೇರಿಯಲ್ಲಿ ರಾಜ್ಯ ಮಟ್ಟದ ಸಂಘಟಕರ ಸಭೆಯನ್ನು ಆಯೋಜಿಸಲಾಯಿತು.
ಸದರಿ ಸಭೆಯು ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಡಾ. ಪಿ.ಜಿ.ಆರ್. ಸಿಂಧ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ರಾಜ್ಯ ಸಂಸ್ಥೆಯ 2026–27ನೇ ಸಾಲಿನ ಕಾರ್ಯಕ್ರಮಗಳು, ಸಂಘಟನಾ ಚಟುವಟಿಕೆಗಳು, ತರಬೇತಿ, ಪರೀಕ್ಷಾ ವಿಭಾಗ, ರೋವರ್–ರೇಂಜರ್ ಚಟುವಟಿಕೆಗಳು ಹಾಗೂ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀ ಕೆ. ಗಂಗಪ್ಪ ಗೌಡ, ರಾಜ್ಯ ಸಂಘಟನಾ ಆಯುಕ್ತರಾದ ಶ್ರೀ ಎಂ. ಪ್ರಭಾಕರ್ ಭಟ್, ಶ್ರೀಮತಿ ಮಂಜುಳಾ ಸಿ., ರಾಜ್ಯ ತರಬೇತಿ ಆಯುಕ್ತರಾದ ಶ್ರೀ ನಾಗೇಶ್ ಶಿವಪುರ, ಶ್ರೀಮತಿ ಶಾಮಲಾ, ರೋವರ್–ರೇಂಜರ್ ಉಸ್ತುವಾರಿ ಶ್ರೀಮತಿ ಮಲ್ಲೇಶ್ವರಿ ಜೂಜಾರಿ, ಪರೀಕ್ಷಾ ವಿಭಾಗದ ಉಸ್ತುವಾರಿ ಕುಮಾರಿ ಹೊನ್ನಮ್ಮ ಸೇರಿದಂತೆ ರಾಜ್ಯದ ಎಲ್ಲಾ ಸಂಘಟಕರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ರಾಜ್ಯದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಲಾಯಿತು.
⚜️ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ ⚜️