05/08/2026
ದಶಕಗಳ ಹೋರಾಟದ ಫಲವಾಗಿ ದಿನಾಂಕ 22.05.2026 ರಂದು ಕಾರ್ಮಿಕ ಇಲಾಖೆಯಿಂದ ಕನಿಷ್ಠ ವೇತನ ಪರಿಷ್ಕರಣೆಯ ಅಧಿಕೃತ ಅಧಿಸೂಚನೆ (LD/411/LWA/2023) ಹೊರಬಿದ್ದಾಗ ನೌಕರರಲ್ಲಿ ಮೂಡಿದ್ದ ಭರವಸೆ, ಈಗಿನ ಗೊಂದಲಗಳಿಂದಾಗಿ ನಿರಾಶೆಯಾಗಿ ಬದಲಾಗಿದೆ.
(ಆರ್ಥಿಕ ಇಲಾಖೆಯ U.O Note ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಸುತ್ತೋಲೆ) ಯನ್ನು ತಾಲೂಕು ಪಂಚಾಯತಿ ಅಧಿಕಾರಿಗಳು ಈ ಆದೇಶಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ತಡೆಹಿಡಿಯುತ್ತಿರುವುದು ಸ್ಪಷ್ಟವಾಗುತ್ತದೆ:
1. ಹಣಕಾಸು ಇಲಾಖೆಯ U.O Note ನೈಜತೆ:
ವಿಷಯದ ವ್ಯಾಪ್ತಿ: ಹಣಕಾಸು ಇಲಾಖೆಯು (FD/367/EXP9/2026, ದಿನಾಂಕ: 15.07.2026) ನೀಡಿರುವ ಟಿಪ್ಪಣಿಯು ಮುಖ್ಯವಾಗಿ ಲೋಕೋಪಯೋಗಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಬೃಹತ್ ಕಾಮಗಾರಿಗಳ (Works Projects) ಮೇಲಾಗುವ ಆರ್ಥಿಕ ಹೊರೆಯನ್ನು ಕುರಿತಾಗಿದೆ.
ಅಂದಾಜು ವೆಚ್ಚ: ವಿವಿಧ ಇಲಾಖೆಗಳ ಕಾಮಗಾರಿಗಳು, ಗುತ್ತಿಗೆದಾರರ ಲಾಭ ಮತ್ತು ಹೊರಗುತ್ತಿಗೆ (Outsourcing) ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿಯಿಂದಾಗಿ ಸರ್ಕಾರಕ್ಕೆ ಒಟ್ಟಾರೆಯಾಗಿ ₹12,588 ಕೋಟಿಗಳ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ ಎಂದು ಲೆಕ್ಕಹಾಕಲಾಗಿದೆ.
ತಡೆಹಿಡಿಯಲು ಶಿಫಾರಸು: ಈ ಬೃಹತ್ ಆರ್ಥಿಕ ಹೊರೆಯನ್ನು ಭರಿಸಲು ಬಜೆಟ್‌ನಲ್ಲಿ ಅನುದಾನವಿಲ್ಲದ ಕಾರಣ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆಯದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಕಾರಣಕ್ಕೆ, ಇದನ್ನು "ಸದ್ಯಕ್ಕೆ ತಡೆಹಿಡಿಯಬಹುದು" (put in abeyance) ಎಂದು ಹಣಕಾಸು ಇಲಾಖೆಯು ಕಾರ್ಮಿಕ ಇಲಾಖೆಗೆ ಸಲಹೆ/ಅಭಿಪ್ರಾಯ ನೀಡಿದೆ.
2. ಲೆಕ್ಕಪರಿಶೋಧನಾ ಇಲಾಖೆಯ ಸುತ್ತೋಲೆ :
ವಿಷಯದ ವ್ಯಾಪ್ತಿ: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ದಿನಾಂಕ 29.07.2026 ರಂದು ಹೊರಡಿಸಿರುವ ಸುತ್ತೋಲೆಯು (ರಾಲೆಪ 11 ಪ್ರ.ಹೊ.ವೇ 2026-27) ಕೇವಲ ಆ ಇಲಾಖೆಯಲ್ಲಿ ಹೊರಗುಪ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಾತ್ರ ಸೀಮಿತವಾಗಿದೆ.
ಮೌಖಿಕ ಸೂಚನೆ: ಆರ್ಥಿಕ ಇಲಾಖೆಯಿಂದ ಬಂದ ಮೌಖಿಕ ಸೂಚನೆಯಂತೆ ತಮ್ಮ ಕಚೇರಿಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕು ಪಂಚಾಯತಿ ಅಧಿಕಾರಿಗಳ ಎಡವಟ್ಟು ಮತ್ತು RDPR ಧೋರಣೆ:
ಕಾರ್ಮಿಕ ಇಲಾಖೆಯ ಅಧಿಕೃತ ರದ್ದತಿ ಇಲ್ಲ: ಕಾರ್ಮಿಕ ಇಲಾಖೆಯು ಮೇ 22, 2026 ರಂದು ಹೊರಡಿಸಿದ ಅಧಿಸೂಚನೆಯನ್ನು ಕಾನೂನಾತ್ಮಕವಾಗಿ ಹಿಂಪಡೆದಿರುವುದಿಲ್ಲ , ರದ್ದುಪಡಿಸಿ ಅಧಿಕೃತ 'ಗೆಜೆಟ್ ಅಧಿಸೂಚನೆ' (Gazette Notification) ಹೊರಡಿಸುವವರೆಗೆ ದಿನಾಂಕ 22-05-2026 ರ ಅಧಿಸೂಚನೆಗೆ ಪೂರ್ಣ ಕಾನೂನು ಬಲವಿರುತ್ತದೆ.
ತಪ್ಪಾದ ಅನುಷ್ಠಾನ:
ಹಣಕಾಸು ಇಲಾಖೆಯು ಸರ್ಕಾರದ ಇಲಾಖೆಗಳ ನಡುವೆ ನಡೆಸಿದ ಆಂತರಿಕ ಪತ್ರ ವ್ಯವಹಾರ (U.O. Note) ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಒಂದು ನಿರ್ದಿಷ್ಟ ಕಚೇರಿಯ ಸುತ್ತೋಲೆಯನ್ನು ಆಧಾರವಾಗಿಟ್ಟುಕೊಂಡು, ತಾಲೂಕು ಪಂಚಾಯತಿ ಇಒಗಳು (EOs) ಗ್ರಾಮ ಪಂಚಾಯತಿ ನೌಕರರ ಮೂಲವೇತನ ಹೆಚ್ಚಳವನ್ನು ತಡೆಹಿಡಿಯುತ್ತಿರುವುದು ಆಡಳಿತಾತ್ಮಕ ಎಡವಟ್ಟು.
RDPR ಅಧಿಕಾರಶಾಹಿಯ ನಿರಾಸಕ್ತಿ:
ಗ್ರಾಮ ಪಂಚಾಯತಿ ನೌಕರರು ತಳಮಟ್ಟದಲ್ಲಿ ಸಾರ್ವಜನಿಕ ಸೇವೆ ನೀಡುವ ಶ್ರಮಿಕರು. ಬೃಹತ್ ಮೂಲಸೌಕರ್ಯ ಕಾಮಗಾರಿಗಳ ಆರ್ಥಿಕ ಲೆಕ್ಕಾಚಾರದ ನೆಪವನ್ನು ಗ್ರಾಮ ಪಂಚಾಯತಿ ನೌಕರರ ಕನಿಷ್ಠ ವೇತನಕ್ಕೂ ಜೋಡಿಸಿ, ಹಕ್ಕಿನ ವೇತನವನ್ನು ನೀಡಲು ಹಿಂಜರಿಯುತ್ತಿರುವುದು ಅಧಿಕಾರಿಗಳ ಸಂವೇದನಾ ರಹಿತ ಧೋರಣೆಯನ್ನು ಎತ್ತಿಹಿಡಿಯುತ್ತದೆ.
Chief Minister of Karnataka ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸಿ. Eshwar Khandre ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ. ಆರ್ ಡಿ ಪಿ ಆರ್. Rural Development and Panchayat Raj - Karnataka Panchayat Raj Karnataka UT Khader Santosh Lad Dr. Deviprasad Bolma