Sahyadri Sangha (R) Bangalore

Sahyadri Sangha (R) Bangalore Social & cultural organisation for malnadiga's who resided in bangalore city

22/04/2025
17/12/2024
10/05/2022

ಸಹ್ಯಾದ್ರಿ ಸಂಘ ಬೆಂಗಳೂರು. ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪ್ರಮುಖರಾಗಿ ದೀರ್ಘಕಾಲ ಸೇವೆ ಮಾಡಿರುವ ಸಾವಿರಾರು ಜನರಿಗೆ ಅಣ್ಣನಾಗಿ, ಗೆಳೆಯನಾಗಿ, ಹಿತೈಶಿಯಾಗಿ ಮಾರ್ಗದರ್ಶಕರಾಗಿ ಈ ನೆಲದಲ್ಲಿ 72 ವರ್ಷಗಳ ಕಾಲ ಬಾಳಿ ಬದುಕಿದ ಕೆ.ವಿ.ಆರ್ ಟಾಗೋರ್ ಸ್ವರ್ಗಸ್ಥರಾಗಿ ಮೇ 12 ಕ್ಕೇ 01 ವರ್ಷ ವಾಗುತ್ತಿದೆ. ದೈಹಿಕವಾಗಿ ಮಾನಸಿಕವಾಗಿ ಗಟ್ಟಿಯಾಗಿದ್ದ ಮತ್ತು ಎಲ್ಲರಿಗೂ ಆದರ್ಶಪ್ರಾಯ ರಾಗಿದ್ದ ಟ್ಯಾಗೋರ್ ಕಾಲನ ಕರೆಗೆ ಓಗೊಟ್ಟು ಇಷ್ಟು ಬೇಗ ನಮ್ಮಿಂದ ಕಾಣದ ಲೋಕಕ್ಕೆ ಹೋಗುತ್ತಾರೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಟ್ಯಾಗೋರ್ ನಮ್ಮಿಂದ ದೂರವಾಗಿ ರಬಹುದು, ಆದರೆ ಅವರು ಬಿಟ್ಟು ಹೋದ ನೆನಪುಗಳು ಮೌಲ್ಯಗಳು ಮತ್ತು ಒಡನಾಟಗಳು ನಮ್ಮನ್ನು ಇನ್ನು ಕಾಡುತ್ತಿವೆ. ಇದಕ್ಕಾಗಿಯೇ, ಮೇ 12 ರಂದು ಗುರುವಾರ ಸಂಜೆ 6 ಗಂಟೆಗೆ Race Course ರಸ್ತೆ ಯಲ್ಲಿರುವ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ " ನೆನಪಿನಂಗಳದಲ್ಲಿ.. ಕೆ.ವಿ.ಆರ್ ಟಾಗೋರ್," ಎಂಬ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ, ತಾವು ಒಂದೆರಡು ತಾಸು ಬಿಡುವು ಮಾಡಿಕೊಂಡು ಆಗಮಿಸಲು ತಮ್ಮನ್ನು ಈ ಮೂಲಕ ಕೋರುತ್ತೇನೆ. ಮಳೆ ಬಂದರೂ ಮಲೆನಾಡಿಗರಾದ ತಾವು ಬರಹುದಾದ ಮಳೆಯನ್ನು ಲೆಕ್ಕಿಸದೆ ಮಳೆ ಬರುವ ಸೂಚನೆಗಿಂತ ಮೊದಲೇ ಸಭಾಂಗಣದಲ್ಲಿ ಇದ್ದು ಕಾಫಿ ಹೀರುತ್ತಾ ಕಿರಣಕೆರಿ ಗೋಪಾಲ ಕೃಷ್ಣ ರವರ ಸುಗಮ ಸಂಗೀತ ಕೇಳುತ್ತಾ ಟ್ಯಾಗೋರ್ ರವರನ್ನು ನೆನಸಿಕೊಳ್ಳೋಣ. ಅಲ್ಲದೇ ಆದಷ್ಟು ತಾವುಗಳು ಸ್ವಂತ ವಾಹನಗಳಲ್ಲಿ ಬರುವುದನ್ನು avoid ಮಾಡಿ ಸಾಮೂಹಿಕ ಸಾರಿಗೆ, ಮೆಟ್ರೋ ಅಥವಾ ola ಇತ್ಯಾದಿ ಸಾರಿಗೆ ಸಂಪರ್ಕ ಬಳಸಿದರೆ parking ಸಮಸ್ಯೆಯಿಂದ ಪಾರಾಗಬಹುದು ಮತ್ತು ತಾವು ಸಹ ಪೊಲೀಸ್ ಕಿರಿ ಕಿರಿ ಯಿಂದ ತಪ್ಪಿಸಿಕೊಳ್ಳಬಹುದು. ಇಷ್ಟು ವಿಚಾರಗಳನ್ನು ತಮ್ಮ ಮುಂದೆ ಹೇಳಿ, ಈ ಕಾರ್ಯಕ್ರಮಕ್ಕೆ ತಾವು ಬರುವುರೆಂದು ನಿರೀಕ್ಷೆಯಲ್ಲಿರುತ್ತೇನೆ. ತಮ್ಮ ನಂಬುಗೆಯ. H.C.jayaprakash Secretary

K

Address

1723/d Ist Floor Mahakavi Kuvempu Road 2nd Stage Rajajinagar Drive Rajkumar Road 2nd Stage D Block Rajajinagar
Bangalore
560010

Telephone

+919448465018

Website

Alerts

Be the first to know and let us send you an email when Sahyadri Sangha (R) Bangalore posts news and promotions. Your email address will not be used for any other purpose, and you can unsubscribe at any time.

Shortcuts

Share