Adamya Chetana

Adamya Chetana Adamya Chetana is a voluntary organisation working in the field of social development. Registered in 1998, it has been set up in the memory of Smt.

Adamya Chetana is a voluntary organization working in the field of social development. Girija Shastry, mother of Shri AnanthKumar, MP Bangalore South, who dedicated her life to serving the poor and the underprivileged. Starting in a small way with conducting ‘tailoring classes’ for poor girls (1998), computer training for girls (1999), innovative web portal for blood donation (www.raktadan.org) and Aata-Paatha (2001), Adamya Chetana has touched the lives of thousands through its various projects. Annapoorna, the midday meal programme of Adamya Chetana reaches over 2 Lakh children in thousands of schools across Bangalore, Hubli, Gulbarga and Jodhpur. The nutritious tasty meals are hygienically prepared at well-equipped kitchens set up specially for this project with the help of government and donors. Recent initiatives of Adamya Chetana have yielded exciting results making Annapoorna, a Zero-garbage kitchen. Our search for alternate fuels has enabled us to effectively use bio-Fuels derived from waste saving the otherwise used fossil based fuels - 60 LPG cylinders or 300 liters of Diesel per day. Shri Ananthkumar, Member of Parliament from Bangalore South is the chief patron of Adamya Chetana, a 17 year old organization that has worked in various areas to bring about societal development.

ಅನಂತಕುಮಾರ್ ಜನ್ಮದಿನ — ನೆನಪುಗಳೊಂದಿಗೆ ಒಂದಾಗೋಣ, ಆದರ್ಶಗಳೊಂದಿಗೆ ಮುನ್ನಡೆಯೋಣ! 🙏ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಅವರ ನೆನಪು, ಸೇವೆ ಮ...
18/09/2026

ಅನಂತಕುಮಾರ್ ಜನ್ಮದಿನ — ನೆನಪುಗಳೊಂದಿಗೆ ಒಂದಾಗೋಣ, ಆದರ್ಶಗಳೊಂದಿಗೆ ಮುನ್ನಡೆಯೋಣ! 🙏

ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಅವರ ನೆನಪು, ಸೇವೆ ಮತ್ತು ಸಂಕಲ್ಪವನ್ನು ಸಂಭ್ರಮಿಸಲು ಅದಮ್ಯ ಚೇತನ ಹಾಗೂ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಆತ್ಮೀಯ ಆಹ್ವಾನ.

ವಿಶೇಷ ಪ್ರದರ್ಶನಗಳು, ಸಂಗೀತ ಹಾಗೂ ನೆನಪುಗಳ ಹಂಚಿಕೆಯ ಈ ಆತ್ಮೀಯ ಕಾರ್ಯಕ್ರಮಕ್ಕೆ ಬನ್ನಿ, ಶ್ರೀ ಅನಂತಕುಮಾರ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳಿ.
🗓️ 21 ಸೆಪ್ಟೆಂಬರ್ 2026, ಸೋಮವಾರ, ಸಾಯಂಕಾಲ 4:00 ಗಂಟೆಗೆ - ಪ್ರದರ್ಶಿನಿ ಉದ್ಘಾಟನೆ
🗓️ 22 ಸೆಪ್ಟೆಂಬರ್ 2026, ಮಂಗಳವಾರ, ಬೆಳಿಗ್ಗೆ 11:00 ಗಂಟೆಗೆ - ಜನ್ಮದಿನಾಚರಣೆ ಕಾರ್ಯಕ್ರಮ

📍 ಮಗಜಿ ಧೋಂಡೂಸಾ ಸಭಾಂಗಣ, ಅದಮ್ಯ ಚೇತನ ಎದುರು, ಗವಿಪುರಂ, ಬೆಂಗಳೂರು

17/09/2026

ಅದಮ್ಯ ಚೇತನದ ನಿತ್ಯ ಅನ್ನದಾನದ ಈ ಒಂದು ಸೇವೆಯ ಹಿಂದೆ ಎಷ್ಟು ಕೈಗಳಿವೆ ಗೊತ್ತೇ?

ಬೆಳಗಿನ ಜಾವ ಆರಂಭವಾಗುವ ಸಿದ್ಧತೆ, ಸ್ವಚ್ಛವಾಗಿ ತೊಳೆದು ಸಿದ್ಧವಾಗುವ ತರಕಾರಿಗಳು, ಪ್ರೀತಿಯಿಂದ ತಯಾರಾಗುವ ಪೌಷ್ಟಿಕ ಆಹಾರ ಮತ್ತು ಸಮಯಕ್ಕೆ ತಲುಪುವ ಬಿಸಿ ಊಟ.

ಇದು ಕೇವಲ ಅಡುಗೆ ಅಲ್ಲ, ಇದು ಕಾಳಜಿಯ ಪ್ರಯಾಣ..

ಈ ಪಯಣದಲ್ಲಿ ನೀವೂ ಜೊತೆಯಾಗಿರಿ: www.adamyachetana.org

ನಮ್ಮ ಭೂಮಿಗೆ ಓಝೋನ್ ಎನ್ನುವುದು ಪ್ರಕೃತಿ ಕೊಟ್ಟಿರುವ ಅಭಯ ಹಸ್ತ! ಆದರೆ, ಅತಿಯಾದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಈ ಅಭಯ ಹಸ್ತವೇ ಇಂದ...
16/09/2026

ನಮ್ಮ ಭೂಮಿಗೆ ಓಝೋನ್ ಎನ್ನುವುದು ಪ್ರಕೃತಿ ಕೊಟ್ಟಿರುವ ಅಭಯ ಹಸ್ತ!

ಆದರೆ, ಅತಿಯಾದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಈ ಅಭಯ ಹಸ್ತವೇ ಇಂದು ಕ್ಷೀಣಿಸುತ್ತಿದೆ. ಇದನ್ನು ರಕ್ಷಿಸಲು 'ಅದಮ್ಯ ಚೇತನ'ದ 3 ಹಸಿರು ಸೂತ್ರಗಳು:

ಹಸಿರು ಭಾನುವಾರ:
ಪ್ರತಿ ಭಾನುವಾರವೂ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವ ನಿರಂತರ ಅಭಿಯಾನ.

ಪ್ಲೇಟ್ ಬ್ಯಾಂಕ್:
ಶುಭ ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ತಟ್ಟೆಗಳನ್ನು ತಪ್ಪಿಸಿ, ಮರುಬಳಕೆ ಮಾಡಬಹುದಾದ ಸ್ಟೀಲ್ ಪಾತ್ರೆಗಳನ್ನು ಒದಗಿಸುವ ಮೂಲಕ ಪ್ಲಾಸ್ಟಿಕ್ ಬಳಕೆಗೆ ಪರಿಸರ ಸ್ನೇಹಿ ಪರ್ಯಾಯ.

ಶೂನ್ಯ ತ್ಯಾಜ್ಯ:
ನಿತ್ಯ ಅನ್ನದಾನ ಅಡುಗೆಮನೆಯಲ್ಲಿ ಜೀರೋ-ವೇಸ್ಟ್ ಹಾಗೂ ಜೀರೋ-ಪ್ಲಾಸ್ಟಿಕ್ ಕ್ರಮಗಳನ್ನು ಅಳವಡಿಸಿಕೊಂಡು, ಸುಸ್ಥಿರ ಬದುಕಿಗೆ ಮಾದರಿಯಾಗುವ ಪ್ರಯತ್ನ.

ಭೂಮಿಯ ಒಳಿತಿನಲ್ಲೇ ನಮ್ಮೆಲ್ಲರ ಭವಿಷ್ಯ ಅಡಗಿದೆ. ಪ್ರಕೃತಿಯನ್ನು ರಕ್ಷಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಯುವ ಹಸಿರು ರಾಯಭಾರಿಗಳಾಗೋಣ.

ಹಸಿವು ನೀಗಿಸುವ ಕೈಂಕರ್ಯ: ಅದಮ್ಯ ಚೇತನದ ಅಪರೂಪದ ಸೇವೆಅನ್ನದಾನಕ್ಕಿಂತ ಮಹಾದಾನವಿಲ್ಲ. ಪ್ರತಿ ದಿನ ಸಾವಿರಾರು ಹಸಿವುನೀಗಿಸುವ ಅದಮ್ಯ ಚೇತನದ 'ನಿ...
15/09/2026

ಹಸಿವು ನೀಗಿಸುವ ಕೈಂಕರ್ಯ: ಅದಮ್ಯ ಚೇತನದ ಅಪರೂಪದ ಸೇವೆ

ಅನ್ನದಾನಕ್ಕಿಂತ ಮಹಾದಾನವಿಲ್ಲ. ಪ್ರತಿ ದಿನ ಸಾವಿರಾರು ಹಸಿವುನೀಗಿಸುವ ಅದಮ್ಯ ಚೇತನದ 'ನಿತ್ಯ ಅನ್ನದಾನ' ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾಗಿದೆ.
ನಿಮ್ಮ ಒಂದು ಸಣ್ಣ ಸಹಕಾರವು ಯಾರೋ ಒಬ್ಬರ ಬದುಕಿಗೆ ಆಸರೆಯಾಗಬಲ್ಲದು.

ಈ ಸತ್ಕಾರ್ಯದಲ್ಲಿ ನೀವೂ ಕೈಜೋಡಿಸಿ: www.adamyachetana.org

15/09/2026

ಬದಲಾವಣೆ ಮೊದಲು ನಮ್ಮಿಂದಲೇ ಶುರುವಾಗಲಿ!

ತಾಪಮಾನ ಏರುತ್ತಿದೆ, ಬಿಸಿಲು ಹೆಚ್ಚುತ್ತಿದೆ. ಇದಕ್ಕೆ ಒಂದೇ ಮದ್ದು - ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು.
ಒಂದು ಗಿಡ ನೆಡುವುದರಿಂದ ಆರಂಭಿಸಿ, ಅದು ಹೆಮ್ಮೆಯ ಮರವಾಗಿ ಬೆಳೆದು ನಿಲ್ಲುವವರೆಗೂ ಪ್ರೀತಿಯಿಂದ ಕಾಳಜಿ ವಹಿಸೋಣ. ನಮ್ಮ ಪ್ರತಿಯೊಂದು ಸಣ್ಣ ಹಸಿರು ಹೆಜ್ಜೆಯೂ ಸುಸ್ಥಿರ ಮತ್ತು ಹಸಿರು ಭವಿಷ್ಯದತ್ತ ಒಂದು ದೊಡ್ಡ ಹೆಜ್ಜೆಯಾಗುತ್ತದೆ.
ಬನ್ನಿ, ಒಟ್ಟಾಗಿ ನಮ್ಮ ಭೂಮಿಯನ್ನು ಮತ್ತಷ್ಟು ಹಸಿರಾಗಿಸೋಣ!

ಅದಮ್ಯ ಚೇತನದಲ್ಲಿ ವಿಘ್ನ ವಿನಾಯಕ ಶ್ರೀ ಗಣೇಶನನ್ನು ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾಯಿತು. ಶ್ರೀ ಗಣೇಶನ ಆಶೀರ್ವಾದ ಎಲ್ಲರ ಜೀವನದಲ್ಲಿ ಸುಖ, ಶಾ...
14/09/2026

ಅದಮ್ಯ ಚೇತನದಲ್ಲಿ ವಿಘ್ನ ವಿನಾಯಕ ಶ್ರೀ ಗಣೇಶನನ್ನು ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾಯಿತು.

ಶ್ರೀ ಗಣೇಶನ ಆಶೀರ್ವಾದ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.

#ಅದಮ್ಯಚೇತನ #ಗಣೇಶಚತುರ್ಥಿ #ಗಣಪತಿಬಪ್ಪಾಮೋರಿಯಾ

ಭಾನುವಾರಕ್ಕೆ ರಜೆ ಇರಬಹುದು; ಪರಿಸರದ ಮೇಲಿನ ಕಾಳಜಿಗಲ್ಲ! 🌿ನಿನ್ನೆ ಅದಮ್ಯ ಚೇತನದಲ್ಲಿ ನಡೆದ 559ನೇ ಹಸಿರು ಭಾನುವಾರಕ್ಕೆ ಕೈಜೋಡಿಸಿದ ಎಲ್ಲರಿಗೂ...
14/09/2026

ಭಾನುವಾರಕ್ಕೆ ರಜೆ ಇರಬಹುದು; ಪರಿಸರದ ಮೇಲಿನ ಕಾಳಜಿಗಲ್ಲ! 🌿

ನಿನ್ನೆ ಅದಮ್ಯ ಚೇತನದಲ್ಲಿ ನಡೆದ 559ನೇ ಹಸಿರು ಭಾನುವಾರಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು.
559 ಭಾನುವಾರಗಳು. ಒಂದೇ ಆಶಯ — ಹಸಿರು ಉಳಿಯಲಿ, ಬದುಕು ಅರಳಲಿ. 💚

Sunday is a day off. Caring for nature isn’t. 🌿
Thank you to everyone who joined our 559th Green Sunday at Adamya Chetana yesterday.
559 Sundays. One shared hope—a greener world for those who come after us. 💚


#ಅದಮ್ಯಚೇತನ #ಹಸಿರುಭಾನುವಾರ

ಏಕದಂತಂ ಮಹಾಕಾಯಂ ಲಂಬೋದರ ಗಜಾನನಂ |ವಿಘ್ನನಾಶಕಂ ದೇವಂ ಹೇರಂಬಂ ಪ್ರಣಮಾಮ್ಯಹಂ ||ಸರ್ವರಿಗೂ ಶ್ರೀ ವಿನಾಯಕ ಚತುರ್ಥಿಯ ಹಾರ್ದಿಕ ಶುಭಾಶಯಗಳು.ನಮ್ಮ ...
14/09/2026

ಏಕದಂತಂ ಮಹಾಕಾಯಂ ಲಂಬೋದರ ಗಜಾನನಂ |
ವಿಘ್ನನಾಶಕಂ ದೇವಂ ಹೇರಂಬಂ ಪ್ರಣಮಾಮ್ಯಹಂ ||

ಸರ್ವರಿಗೂ ಶ್ರೀ ವಿನಾಯಕ ಚತುರ್ಥಿಯ ಹಾರ್ದಿಕ ಶುಭಾಶಯಗಳು.

ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಸಂಕೇತವಾಗಿರುವ ಶ್ರೀ ಗಣೇಶನ ಆರಾಧನೆಯೊಂದಿಗೆ, ನಮ್ಮ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ.

೨೦೦೨ರಿಂದಲೇ ತಮ್ಮ ಮನೆಯಲ್ಲಿ ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಿದ್ದ ಶ್ರೀ ಅನಂತಕುಮಾರ್ ಅವರು, ೨೦೦೮ರ ವೇಳೆಗೆ ಇದನ್ನು ಜನಪ್ರಿಯ ಚಳವಳಿಯನ್ನಾಗಿ ರೂಪಿಸಿದರು. ಸ್ಥಳೀಯ ಕುಶಲಕರ್ಮಿಗಳಿಗೆ ಬೆಂಬಲ ನೀಡಿ, ಪ್ರತಿಯೊಬ್ಬರ ಮನೆಗೂ ಮಣ್ಣಿನ ಮೂರ್ತಿ ತಲುಪಿಸುವ ವ್ಯವಸ್ಥೆ ಮಾಡಿ ಪರಿಸರ ರಕ್ಷಣೆಗೆ ಹೊಸ ದಾರಿ ತೋರಿದರು.
PoP ತ್ಯಜಿಸಿ, ನಮ್ಮ ಜಲಮೂಲಗಳನ್ನು ಕಾಯುವ ಅವರ ಪರಿಸರ ಕಾಳಜಿಯನ್ನು ಈ ಗಣೇಶ ಚತುರ್ಥಿಯಂದು ನಾವೂ ಮುಂದುವರಿಸೋಣ.

ಪ್ರತಿಯೊಂದು ಮನೆಯಲ್ಲೂ, ಸಾರ್ವಜನಿಕ ಮಂಟಪಗಳಲ್ಲೂ ಪ್ರಕೃತಿ ಸ್ನೇಹಿ ಮಣ್ಣಿನ ಗಣೇಶನನ್ನು ಪೂಜಿಸುವುದೇ ನಾವು ಪರಿಸರಕ್ಕೆ ನೀಡುವ ನಿಜವಾದ ಗೌರವ.

ಈ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ವಿಘ್ನಹರ್ತ ಶ್ರೀ ಮಹಾಗಣಪತಿಯು ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ, ಸಂತೋಷ, ಸಮೃದ್ಧಿ ಹಾಗೂ ಒಗ್ಗಟ್ಟನ್ನು ಕರುಣಿಸಲಿ.

#ವಿನಾಯಕಚತುರ್ಥಿ #ಅದಮ್ಯಚೇತನ #ಮಣ್ಣಿನಗಣಪತಿ #ಹಸಿರುಶುಭಾಶಯ

ಹಿಮಾಚಲೇಂದ್ರ ತನಯಾಂ ಸೌಮಾಂಗಲ್ಯ ಪ್ರದಾಯಿನೀಂ । ಗಣೇಶ ಸ್ಕಂದ ಜನನೀಂ ಪಾರ್ವತೀಂ ಪ್ರಣಮಾಮ್ಯಹಂ||ಸರ್ವರಿಗೂ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶ...
14/09/2026

ಹಿಮಾಚಲೇಂದ್ರ ತನಯಾಂ ಸೌಮಾಂಗಲ್ಯ ಪ್ರದಾಯಿನೀಂ ।
ಗಣೇಶ ಸ್ಕಂದ ಜನನೀಂ ಪಾರ್ವತೀಂ ಪ್ರಣಮಾಮ್ಯಹಂ||

ಸರ್ವರಿಗೂ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಅದಮ್ಯ ಚೇತನದ ಸೇವಾ ಸಂಕಲ್ಪದಂತೆ, ನಿತ್ಯ ಅನ್ನದಾನ ಸೇವೆ, ಪರಿಸರ ಕಾಳಜಿ ಹಾಗೂ ಸಮಾಜ ಸೇವೆಯ ಪ್ರತಿಯೊಂದು ಪ್ರಯತ್ನವೂ ಗೌರಿಯ ಆರಾಧನೆಯಾಗಲಿ.
ಶ್ರೀ ಗೌರಿದೇವಿಯ ಮಾತೃಶಕ್ತಿ ನಮಗೆ ಪ್ರೀತಿಯಿಂದ ಪೋಷಿಸುವ, ಕಾಳಜಿಯಿಂದ ಕೈಹಿಡಿಯುವ ಹಾಗೂ ಸೇವೆಯಿಂದ ಸಮಾಜವನ್ನು ಕಟ್ಟುವ ಸ್ಫೂರ್ತಿ ನೀಡಲಿ.

ಗೌರಿದೇವಿಯ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲೂ ಸೌಭಾಗ್ಯ ಮತ್ತು ಯಶಸ್ಸು ನೆಲೆಸಲಿ.

11/09/2026

ಸೇವಾ ಕಾರ್ಯಕ್ಕೆ ಗಡಿಗಳ ಹಂಗಿದೆಯೇ? ಖಂಡಿತ ಇಲ್ಲ!

ಅದಕ್ಕೇ ಆದಮ್ಯ ಚೇತನದ 'ನಿತ್ಯ ಅನ್ನದಾನ' ಸೇವೆಯೇ ಉದಾಹರಣೆ. ಇಂದು ಕರ್ನಾಟಕ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಮೂಲೆಮೂಲೆಗಳಿಗೂ ನಿತ್ಯ ಅನ್ನದಾನ ಸೇವೆ ವಿಸ್ತರಿಸಿದೆ. ಪ್ರತಿಯೊಬ್ಬರಿಗೂ ನಿತ್ಯ ಆಹಾರ ಸಿಗಬೇಕು ಮತ್ತು ಹಸಿವುಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬುದೇ ನಮ್ಮ ಆಶಯ.

ನಮ್ಮ ಈ ಕಾರ್ಯಕ್ಕೆ ಬೆಂಬಲ ನೀಡಿ: www.adamyachetana.org

#ಅನ್ನದಾಸೋಹ #ಅದಮ್ಯಚೇತನ #ಸೇವಾಕಾರ್ಯ

Address

Lakshmipura Main Road, 4E Block, Gavipura, Kempegowda Nagar
Bangalore
560019

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

08026620404

Alerts

Be the first to know and let us send you an email when Adamya Chetana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Adamya Chetana:

Shortcuts

Share