Sri jpn pratistana

Sri jpn pratistana serving society

14/09/2026
ಸೋಲೂರಿನ ಬ್ರಿಲಿಯಂಟ್ಸ್ ವ್ಯಾಲಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!ಮಾಗಡಿ ತಾಲ್ಲೂಕಿನ ಬ್ರಿಲಿಯಂಟ್ಸ್ ವ್ಯಾಲಿ ಇಂಟರ್ನ್ಯ...
04/09/2026

ಸೋಲೂರಿನ ಬ್ರಿಲಿಯಂಟ್ಸ್ ವ್ಯಾಲಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!

ಮಾಗಡಿ ತಾಲ್ಲೂಕಿನ ಬ್ರಿಲಿಯಂಟ್ಸ್ ವ್ಯಾಲಿ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ (Solur) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ಗೌರವಾನ್ವಿತ ಮಹಾಪೋಷಕರಾದ ಶ್ರೀಮತಿ ಲತಾ ಸುಧಾಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷಣ.

✨ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಮಹೋತ್ಸವ ✨"ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು" ಹಾಗೂ "ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂ...
29/08/2026

✨ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಮಹೋತ್ಸವ ✨

"ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು" ಹಾಗೂ "ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ" ಎಂಬ ವಿಶ್ವಮಾನವ ಸಂದೇಶದ ಮೂಲಕ ಸಮಾಜಕ್ಕೆ ದಾರಿ ತೋರಿಸಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು 28-08-2026ರಂದು ಸಂಜೆ 5:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಶುಭ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಸಚಿವರು, ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

 🌿ಬ್ರಹ್ಮಶ್ರೀ ನಾರಾಯಣಗುರು ಅವರ 172ನೇ ಜಯಂತಿ ಆಚರಣೆ – 2026🌿*ಶ್ರೀ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಆತ್ಮೀಯ ಬಂಧುಗಳಿಗೆ* ನಮಸ್ಕಾರ, ...
27/08/2026

 🌿ಬ್ರಹ್ಮಶ್ರೀ ನಾರಾಯಣಗುರು ಅವರ 172ನೇ ಜಯಂತಿ ಆಚರಣೆ – 2026🌿

*ಶ್ರೀ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಆತ್ಮೀಯ ಬಂಧುಗಳಿಗೆ* ನಮಸ್ಕಾರ, 🙏

*ನಾಳೆ, ದಿನಾಂಕ: 28 ಆಗಸ್ಟ್ 2026, ಶುಕ್ರವಾರ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು* ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ *ಜಿಲ್ಲೆ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮಗಳಲ್ಲಿ ನಮ್ಮ ಪ್ರತಿಷ್ಠಾನದ ಎಲ್ಲಾ ಸಂಚಾಲಕರು ಸಕ್ರಿಯವಾಗಿ ಭಾಗವಹಿಸಬೇಕಾಗಿ* ವಿನಂತಿಸುತ್ತೇವೆ.

📸 *ಕಾರ್ಯಕ್ರಮದಲ್ಲಿ ಭಾಗವಹಿಸಿದ ಛಾಯಾಚಿತ್ರಗಳು ಹಾಗೂ ಸಂಕ್ಷಿಪ್ತ ಮಾಹಿತಿಯನ್ನು ಜೆ.ಪಿ.ಎನ್‌ ಪ್ರತಿಷ್ಠಾನದ ವಾಟ್ಸಪ್ ಗ್ರೂಪ್‌ನಲ್ಲಿ* ಹಂಚಿಕೊಳ್ಳಿ.

🤝 *ನಮ್ಮ ಒಗ್ಗಟ್ಟು, ಸಂಘಟನೆ ಮತ್ತು ಸೇವಾ ಮನೋಭಾವವೇ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವವಾಗಲಿ.*

*“ಒಗ್ಗಟ್ಟಿನ ಸಮಾಜವೇ ಗುರುಗಳಿಗೆ ನಿಜವಾದ ಗೌರವ.”*

ಧನ್ಯವಾದಗಳೊಂದಿಗೆ
– ಕೇಂದ್ರ ಕಾರ್ಯಕಾರಿ ಸಮಿತಿ, ಜೆಪಿಎನ್ ಪ್ರತಿಷ್ಠಾನ, ಬೆಂಗಳೂರು

Address

Bangalore

Alerts

Be the first to know and let us send you an email when Sri jpn pratistana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri jpn pratistana:

Shortcuts

Share