CITU Karnataka

CITU Karnataka CITU Karnataka State Commitee official facebook Page

*ಬೆಂಗಳೂರು ಕಾರ್ಮಿಕ ಭವನ: ನಾಲ್ಕು ಲೇಬರ್ ಕೋಡ್ ಗಳ ಕರಡು ನಿಯಮಗಳಿಗೆ  ಸಾಮೂಹಿಕ ಆಕ್ಷೇಪಣೆ ಸಲ್ಲಿಕೆ ಮತ್ತು ಮತ ಪ್ರದರ್ಶನ - CITU*ಕಾರ್ಮಿಕ ವಿ...
05/03/2026

*ಬೆಂಗಳೂರು ಕಾರ್ಮಿಕ ಭವನ: ನಾಲ್ಕು ಲೇಬರ್ ಕೋಡ್ ಗಳ ಕರಡು ನಿಯಮಗಳಿಗೆ ಸಾಮೂಹಿಕ ಆಕ್ಷೇಪಣೆ ಸಲ್ಲಿಕೆ ಮತ್ತು ಮತ ಪ್ರದರ್ಶನ - CITU*

ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ಗಳಿಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ನಿಯಮಗಳಿಗೆ ರಾಜ್ಯ ವ್ಯಾಪಿ ಸಾಮೂಹಿಕವಾಗಿ ಎಲ್ಲಾ ಸಂಘಗಳಿಂದ ಆಕ್ಷೇಪಣೆ ಸಲ್ಲಿಸಲು ಸಿಐಟಿಯು ಕರೆ ನೀಡಿತ್ತು. ಜೊತೆಗೆ ರಾಜ್ಯ ಸರ್ಕಾರದ ಅಧಿಕಾರ ಬಳಿಸಿ ನಾಲ್ಕು ಲೇಬರ್ ಕೋಡ್ ಗಳಿಗೆ ಕರ್ನಾಟಕ ತಿದ್ದುಪಡಿಗಳನ್ನು ತರಬೇಕು ಮತ್ತು ಕರಡು ನಿಯಮಗಳನ್ನು ಕನ್ನಡದಲ್ಲಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು, ಕನಿಷ್ಟ ವೇತನದ ಜಾರಿಗೆ ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಸರ್ಕಾರವನ್ನು ಸಿಐಟಿಯು ಒತ್ತಾಯಿಸಿತ್ತು.

ಇದರ ಅಂಗವಾಗಿ ಮಾರ್ಚ್ 5 ರಂದು ಬೆಂಗಳೂರಿನ ಕಾರ್ಮಿಕ ಭವನದ ಎದುರು ಆಕ್ಷೇಪಣೆ ಸಲ್ಲಿಕೆ ಮತ್ತು ಮತ ಪ್ರದರ್ಶನದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

ಸಿಐಟಿಯು ರಾಜ್ಯಾಧ್ಯಕ್ಷರಾದ ಕಾಂ. ಮೀನಾಕ್ಷಿಸುಂದರಂ, ಪ್ರಧಾನ ಕಾರ್ಯದರ್ಶಿ ಕಾಂ. ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯ ಮುಖಂಡರಾದ ಕಾಂ. ಹೆಚ್.ಎನ್ ಗೋಪಾಲಗೌಡ, ಕಾಂ. ಕೆ.ಮಹಾಂತೇಶ್, ಕಾಂ.ಮಾಲೀನಿ ಮೆಸ್ತಾ, ಕಾಂ.ಎನ್.ಪ್ರತಾಪ್ ಸಿಂಹ, ಕಾಂ. ಬಿಎನ್.ಮಂಜುನಾಥ್, ಕಾಂ.ಲಿಂಗರಾಜು, ಕಾಂ.ಪಿ.ಮುನಿರಾಜು, ಕಾಂ.ಪಿ.ಎ.ವೆಂಕಟೇಶ್, ಕಾಂ.ಬಿಬಿ ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಅಪರ ಕಾರ್ಮಿಕ ಆಯುಕ್ತರಾದ ಡಾ.ಮಂಜುನಾಥ್, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀಯುತ ರವಿಕುಮಾರ್ ರವರು ನೂರಾರು ಕಾರ್ಮಿಕ ಸಂಘಗಳಿಂದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿದರು.

ಸಿಐಟಿಯು - ಎಐಟಿಯುಸಿ ಸಂಘಟನೆಗಳು ಒತ್ತಾಯ ಪತ್ರ ಸಲ್ಲಿಸಲಾಯಿತು.

ವಿವಿಧ ಸಂಘಗಳಿಂದ ಭಾಗವಹಿಸಿದ್ದ ಕಾರ್ಮಿಕರು ತಂಡೋಪ ತಂಡವಾಗಿ ಸಾಲಿನಲ್ಲಿ ನಿಂತು ಆಕ್ಷೇಪಣೆಗಳನ್ನು ಸಲ್ಲಿಸಿದರು.

*ಎಐಟಿಯುಸಿ ಭಾಗಿ:*
ಕನಿಷ್ಠ ವೇತನ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟಸಲು ಬಂದಿದ್ದ AITUC ಬೆಂಗಳೂರು ಜಿಲ್ಲೆಯ ಕಾರ್ಯಕರ್ತರು ಸೇರಿ ಜಂಟಿಯಾಗಿ ಕಾರ್ಮಿಕರ ಮತ ಪ್ರದರ್ಶನ ನಡೆಸಲಾಯಿತು. AITUC ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ವಿಜಯಭಾಸ್ಕರ್, ರಾಜ್ಯ ಮುಖಂಡರಾದ ಕಾಂ.ಅಮ್ಜದ್, ಕಾಂ.ಸತ್ಯಾನಂದ‌ ಹಾಗು ಇತರ ಮುಖಂಡರು ಭಾಗವಹಿಸಿದ್ದರು.

ಪೊಲೀಸರಿಂದ ಅಡಚಣೆ:
ಕಾರ್ಮಿಕರು ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಲು ಮುಂದಾದಾಗ ಪೊಲೀಸರು ಅಡಚಣೆ ವ್ಯಕ್ತಪಡಿಸಿದರು. ಇದರ ವಿರುದ್ಧ ನೆರದಿದ್ದ ಕಾರ್ಮಿಕರು ಘೋಷಣೆಗಳನ್ನು ಕೂಗಿ ಪ್ರತಿರೋಧಿಸಿದರು.

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ...
01/03/2026

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು.

ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಘೋರ ನಿಯಮಗಳನ್ನು ಬದಲಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿಯು ಕಾರ್ಮಿಕರಿಗೆ ಮಾರಕವಾದ ಅಂಶಗಳನ್ನು ತಿದ್ದುಪಡಿಗಳ ಮೂಲಕ ಬದಲಿಸಬೇಕು. ಅದರ ನಂತರ ಸಂಹಿತೆಗಳ ಜಾರಿಗೆ ಅಗತ್ಯವಾದ ನಿಯಮಾವಳಿಗಳನ್ನು ರೂಪಿಸಬೇಕು.

ಕೇಂದ್ರ ಸರ್ಕಾರ ಹಿಂದಿ ಹಾಗು ಆಂಗ್ಲ ಭಾಷೆಯಲ್ಲಿ ಸಂಹಿತೆ ಹಾಗು ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಹಿಂದಿ ಭಾಷಿಕರಲ್ಲದ ದೇಶದ ಕಾರ್ಮಿಕರಿಗೆ ಈ ಕಾನೂನು ಹಾಗು ನಿಯಮಾವಳಿಗಳನ್ನು ಅವರವರ ಮಾತೃಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕಿದೆ. ಅದನ್ನು ನಿರಾಕರಿಸಬಾರದು.

ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ಪ್ರಕಟಿಸ ಬೇಕು. ಕಾನೂನು ಹಾಗು ನಿಯಮಾವಳಿಗಳನ್ನು ಕಾರ್ಮಿಕರಿಗೆ ಓದಲು ಹಾಗು ಅರ್ಥಮಾಡಿಕೊಳ್ಳಲು ಮುಕ್ತ ಅವಕಾಶವನ್ನು ಖಾತರಿ ಪಡಿಸಬೇಕು. ಕನ್ನಡ ಅಭಿಮಾನ ತುಟಿಯಮೇಲಿನ ಪದಗಳಲ್ಲ ಕಾರ್ಯಾಚರಣೆಯ ಬದ್ಧತೆ ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮರೆಯಬಾರದು.

ಕನ್ನಡದಲ್ಲಿ ಸಂಹಿತೆಗಳು ಹಾಗು ನಿಯಮಾವಳಿಗಳನ್ನು ಪ್ರಕಟಿಸಿದ ನಂತರ ಕನಿಷ್ಟ ಎರಡು ತಿಂಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡ ಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ಒತ್ತಾಯವಾಗಿದೆ.

ಈ ಬೇಡಿಕೆಗಳಿಗೆ ಪ್ರಗತಿಪರ ಹಾಗು ಪ್ರಜಾಸತಾತ್ಮಕ ಮನಸ್ಸುಗಳು ಬೆಂಬಲ ನೀಡಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ವಿನಂತಿ.

ಮಾರ್ಚ್ 3 ರಿಂದ 5, 2026 ರಾಜ್ಯಾದ್ಯಂತ "ರಾಜ್ಯದ ಗೌರವ ಹಾಗು ಆಭಿಮಾನ" ಉಳಿಸಲು ನಮ್ಮ ಸಂಘಟನೆ ನಡೆಸುವ ಕಾರ್ಯಾಚರಣೆಗೆ ಬೆಂಬಲ ನೀಡಲು ವಿನಂತಿಸುತ್ತೇವೆ.

-ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ

07/02/2026

Address

SooriBhavana Sampangiramanagara
Bangalore

Website

Alerts

Be the first to know and let us send you an email when CITU Karnataka posts news and promotions. Your email address will not be used for any other purpose, and you can unsubscribe at any time.

Share

Category