25/09/2026
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರನ್ನಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಸೆಪ್ಟೆಂಬರ್ 24) ವಿಧಾನಸೌಧದಲ್ಲಿ ಘೋಷಣೆ ಮಾಡಿದರು.
ಈ ಈ ಮೂಲಕ ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡಲಿದ್ದಾರೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಗ್ಗೆ ಒಂದಿಷ್ಟು ತಿಳಿಯಿರಿ
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠದ 18ನೇ ಪೀಠಾಧಿಪತಿಗಳಾಗಿದ್ದು, ಸಮಾಜದಲ್ಲಿ ತಮ್ಮ ಅಭೂತಪೂರ್ವ ಸಾಮಾಜಿಕ ಕಳಕಳಿ, ಸರಳತೆ ಮತ್ತು ದಾಸೋಹ ಪರಂಪರೆಯಿಂದಾಗಿ ನಾಡಿನಾದ್ಯಂತ 'ನಡೆದಾಡುವ ದೇವರು' ಹಾಗೂ 'ಜಲಋಷಿ' ಎಂದೇ ಹೆಸರು ವಾಸಿಯಾಗಿದ್ದಾರೆ.
ಡಿಸೆಂಬರ್ 13, 2002 ರಂದು ತಮ್ಮ ಪೂರ್ವಾಧಿಕಾರಿಗಳಾದ ಶ್ರೀ ಶಿವಶಾಂತವೀರ ಸ್ವಾಮಿಗಳ ಆಶೀರ್ವಾದದೊಂದಿಗೆ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರ ಇವರು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರವಾಗಿದ್ದ ನೀರಿನ ಅಭಾವವನ್ನು ನೀಗಿಸಲು ಇವರು 'ಜಲ ದೀಕ್ಷೆ' ಅಭಿಯಾನದ ಮೂಲಕ ನೂರಾರು ಕೆರೆಗಳ ಹೂಳೆತ್ತುವಿಕೆ ಮತ್ತು ಜಲ ಸಂರಕ್ಷಣಾ ಕ್ರಾಂತಿಯನ್ನು ಮಾಡಿ ಜಲಋಷಿ ಎನಿಸಿಕೊಂಡಿದ್ದಾರೆ. ಇನ್ನು ಇವರ ನೇತೃತ್ವದಲ್ಲಿ ಮಠದಲ್ಲಿ ಅನ್ನ, ಅರಿವು (ಶಿಕ್ಷಣ) ಮತ್ತು ಆಧ್ಯಾತ್ಮದ ತ್ರಿವಿಧ ದಾಸೋಹ ನಿರಂತರವಾಗಿ ಸಾಗುತ್ತಿದ್ದು, ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಿದ್ದಾರೆ.
ಕೊಪ್ಪಳ ಗವಿಸಿದ್ದೇಶ್ವರ ಮಠದ ಬಗ್ಗೆ
ಕೊಪ್ಪಳದ ಗವಿಸಿದ್ದೇಶ್ವರ ಮಠ ಇದನ್ನು ಗವಿಮಠ ಎಂದೂ ಕರೆಯುತ್ತಾರೆ. ಇದು ಉತ್ತರ ಕರ್ನಾಟಕದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಗವಿಮಠವು ಕನಿಷ್ಠ 800 ವರ್ಷ ಹಳೆಯದಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅಗತ್ಯವಿರುವವರಿಗೆ ಆಹಾರವನ್ನು ಒದಗಿಸುವುದು ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡುವುದು ಮುಂತಾದ ವಿವಿಧ ಚಟುವಟಿಕೆಗಳಿಂದ ಸಮಾಜವನ್ನು ಉನ್ನತೀಕರಿಸುವಲ್ಲಿ ಗವಿಮಠ ತೊಡಗಿಸಿಕೊಂಡಿದೆ.
ರೇಸ್ನಲ್ಲಿದ್ದವು ಹಲವರ ಹೆಸರುಗಳು
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಆಹ್ವಾನಿಸುವಂತೆ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಷ್ಟ್ರದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿರುವ ಇವರು ಸಮಸ್ತ ಮಹಿಳೆಯರ ಪ್ರೇರಣಾ ಶಕ್ತಿ ಎಂದಿದ್ದರು. ಅಲ್ಲದೇ ನಾಗರತ್ನ ಅವರ ಜೊತೆಗೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರುಗಳ ಸಹ ಕೇಳಿಬಂದಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿದ್ದವು. ಜೊತೆಗೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿಂದ ಉದ್ಘಾಟಿಸಬೇಂಕೆಂದು ಚರ್ಚೆಗಳು ನಡೆದಿದ್ದವು. ಹೀಗಾಗಿ ದಸರಾ ಸಮಿತಿಯು ಉದ್ಘಾಟಕರ ಆಯ್ಕೆಯನ್ನು ಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರಕ್ಕೆ
#ಮೈಸೂರುದಸರಾ #ದಸರಾ #ಕೊಪ್ಪಳಗವಿಸಿದ್ಧೇಶ್ವರಸ್ವಾಮೀಜಿ #ಗವಿಸಿದ್ಧೇಶ್ವರಸ್ವಾಮೀಜಿ #ಕರ್ನಾಟಕ #ಕನ್ನಡಸುದ್ದಿ #ಮೈಸೂರು #ದಸರಾ2026