ವಿಜಯ ಸೇನೆ

ವಿಜಯ ಸೇನೆ ಕನ್ನಡ-ಕನ್ನಡಿಗ-ಕರ್ನಾಟಕ

ಕರುನಾಡ ವಿಜಯಸೇನೆ
(2)

**💧 ಕಾವೇರಿ ನಮ್ಮದು... ನಮ್ಮ ಹಕ್ಕು! 💪**ತಮಿಳುನಾಡಿಗೆ ಕಾವೇರಿ ನದಿಯ ನೀರು ಬಿಡಬಾರದು ಎಂದು ಆಗ್ರಹಿಸಿ ಇಂದು **ವಿಜಯ ಸೇನೆ** ವತಿಯಿಂದ ತುಮಕೂ...
03/08/2026

**💧 ಕಾವೇರಿ ನಮ್ಮದು... ನಮ್ಮ ಹಕ್ಕು! 💪**

ತಮಿಳುನಾಡಿಗೆ ಕಾವೇರಿ ನದಿಯ ನೀರು ಬಿಡಬಾರದು ಎಂದು ಆಗ್ರಹಿಸಿ ಇಂದು **ವಿಜಯ ಸೇನೆ** ವತಿಯಿಂದ ತುಮಕೂರಿನಲ್ಲಿ ಜಿಲ್ಲಾಧ್ಯಕ್ಷರಾದ **ಗಂಗಾಧರ್** ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಹೋರಾಟದಲ್ಲಿ ಪ್ರಧಾನ ಕಾರ್ಯದರ್ಶಿ **ಹರೀಶ್**, ಜಿಲ್ಲಾ ಉಪಾಧ್ಯಕ್ಷ **ನಯನ್ ಕುಮಾರ್**, ಪ್ರಚಾರ ಸಮಿತಿ ಅಧ್ಯಕ್ಷ **ರುದ್ರೇಶ್**, ಆಟೋ ವಿಭಾಗದ ಜಿಲ್ಲಾಧ್ಯಕ್ಷ **ರಾಕೇಶ್**, ಮಹಿಳಾ ಜಿಲ್ಲಾಧ್ಯಕ್ಷೆ **ಯಾಸ್ಮಿನ್ ತಾಜ್** ಸೇರಿದಂತೆ ವಿಜಯ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ಪ್ರತಿಭಟನೆಯ ಬಳಿಕ **ತುಮಕೂರು ಜಿಲ್ಲಾಧಿಕಾರಿಗಳಿಗೆ** ಮನವಿ ಪತ್ರ ಸಲ್ಲಿಸಿ, ಕರ್ನಾಟಕದ ರೈತರ ಹಿತ ಹಾಗೂ ರಾಜ್ಯದ ನೀರಿನ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

"ಕಾವೇರಿ ನಮ್ಮ ಜೀವನಾಡಿ... ಕರ್ನಾಟಕದ ಹಕ್ಕು ಎಂದಿಗೂ ಅಚಲ!"

27/04/2026

ತುಮಕೂರಿನಲ್ಲಿ ನಡೆದ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದ ಚಿತ್ರಣ.

ತುಮಕೂರು: ವಿಜಯಸೇನೆಯ ಮಹಿಳಾ ಘಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ೫೦ ಮಂದಿ ಸಾಧಕ ಮಹಿಳೆಯರಿಗೆ ಬೆಳವಾಡಿ ಮಲ್ಲಮ್ಮ ಪ್ರಶಸ್ತ...
26/04/2026

ತುಮಕೂರು: ವಿಜಯಸೇನೆಯ ಮಹಿಳಾ ಘಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ೫೦ ಮಂದಿ ಸಾಧಕ ಮಹಿಳೆಯರಿಗೆ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ ನೀಡಿ ಗೌರಿವಿಸಲಾಯಿತು.
ನಗರದ ಕನ್ನಡ ಭವನದಲ್ಲಿ ಭಾನುವಾರ ಮಹಿಳಾ ದಿನಾಚರಣೆ ಅಂಗವಾಗಿ ವಿಜಯಸೇನೆಯ ಜಿಲ್ಲಾ ಮಹಿಳಾ ಘಟಕ ಏರ್ಪಡಿಸಿದ್ದ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕಿಯರು, ವೈದ್ಯರು, ಪೊಲೀಸರು, ಸಮಾಜ ಸೇವಕರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಾಸ್ತಾವಿಕ ನುಡಿಗಳಾನ್ನಾಡಿದ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್. ದೀಪಕ್, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಗೌರವವಿದೆ. ಮಹಿಳೆಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು, ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿ, ಹೆತ್ತ ತಾಯಿ, ಹೊತ್ತ ಭೂಮಿಯನ್ನು ಹೆಣ್ಣಿನ ರೂಪದ ದೇವರೆಂದು ಪೂಜಿಸಿ ಗೌರವಿಸುವ ಸಂಸ್ಕೃತಿ ನಮ್ಮದು. ಇಂತಹ ವಿಶೇಷ ಆಚಾರ ವಿಚಾರಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ಪರಿಚಯಿಸುವ ಮೂಲಕ ಉಳಿಸಿ, ಬೆಳೆಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಮಹಿಳೆಯರನ್ನು ಗೌರವಿಸುವ ಕೆಲಸವನ್ನು ವಿಜಯಸೇನೆ ಮಾಡುತ್ತಾ ಬಂದಿದೆ. ೨೦೦ ಮಹಿಳಾ ಸೈನಿಕರ ಪಡೆ ಕಟ್ಟಿ ಮರಾಠರ ವಿರುದ್ಧ ಹೋರಾಟ ಮಾಡಿದ ಬೆಳವಾಡಿ ಮಲ್ಲಮ್ಮನ ಶೌರ್ಯದ ಪ್ರತೀಕವಾಗಿ ವಿಜಯಸೇನೆ ೫ ವರ್ಷದಿಂದ ಅವರ ಹೆಸರಿನಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ನೀಡಿ ಉತ್ಸಾಹ ತುಂಬುವ ಕಾರ್ಯ ಮಾಡುತ್ತಿದೆ ಎಂದು ಹೆಚ್.ಎನ್. ದೀಪಕ್ ತಿಳಿಸಿದರು.
ಕರುನಾಡು ವಿಜಯಸೇನೆಯು ಹೋರಾಟದ ಜೊತೆಗೆ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ರಾಜ್ಯದ ೫೦೦ ಕನ್ನಡ ಶಾಲೆಗಳಿಗೆ ಬಣ್ಣ ಹೊಡೆಸುವ ಕೆಲಸ ಆರಂಭಿಸಿ ಈಗ ೧೩೦ ಶಾಲೆಗಳನ್ನು ಪೂರ್ಣಗೊಳಿಸಲಾಗಿದೆ. ಸರಳ ಸಾಮೂಹಿಕ ವಿವಾಹ, ಉದ್ಯೋಗ ಮೇಳ, ಆರೋಗ್ಯ ಶಿಬಿರ, ಉತ್ತಮ ಶಿಕ್ಷಕರಿಗೆ ಗೌರವಾರ್ಪಣೆಯಂತಹ ಕಾರ್ಯಕ್ರಮಗಳನ್ನು ವಿಜಯಸೇನೆಯಿಂದ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಟಿ.ಎಸ್. ಸಿದ್ಧಗಂಗಾ ರುದ್ರೇಶ್ ಕಾರ್ಯಕ್ರಮ ಉದ್ಘಾಟಿಸಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಿ ಯಶಸ್ವಿಯಾಗುತ್ತಿದ್ದಾರೆ. ಇತರೆ ಮಹಿಳೆಯರಿಗೆ ಅವರು ಪ್ರೇರಣೆ ಆಗಬೇಕು. ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಛಲ ಬೆಳೆಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ವಿಜಯಸೇನೆ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಗಂಗರಾಜಮ್ಮ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಮೂಲಕ ವಿಜಯಸೇನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ, ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಿಳೆಯರು ತಮ್ಮ ಶಕ್ತಿ ಏನೆಂಬುದನ್ನು ಮೊದಲು ತಿಳಿದು ತಕ್ಕಂತೆ ಸಾಧನೆ ಮಾಡಿ ಯಶಸ್ಸು ಕಾಣಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಟಿ.ಆರ್. ಲೀಲಾವತಿ ಅವರು ಬೆಳವಾಡಿ ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿ ಮರಾಠರ ವಿರುದ್ಧ ಸಮರ ಸಾರಿದ ಇತಿಹಾಸ, ಆಕೆಯ ಶೈರ್ಯ, ಪರಾಕ್ರಮ ಪರಿಚಯಿಸಿದರು. ಮಲ್ಲಮ್ಮ, ಒನಕೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮ ಅಂತಹ ಸಾಹಸಿ ಮಹಿಳೆಯರು ನಮಗೆಲ್ಲಾ ಸ್ಫೂರ್ತಿ ಆಗಬೇಕು ಎಂದು ಹೇಳಿದರು.
ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ಮೈತ್ರಿ ಸಂಘದ ಅಧ್ಯಕ್ಷೆ ಗಂಗಾ ಪರಮೇಶ್, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್, ಡಾ. ಪ್ರಿಯದರ್ಶಿನಿ, ವತ್ಸಲಾ, ಲತಾ, ಮೀನಾ, ಕಾವ್ಯ, ವಿಜಯಸೇನೆ ಜಿಲ್ಲಾಧ್ಯಕ್ಷ ಗಂಗಾಧರ್, ರಾಜ್ಯ ಕಾರ್ಯದರ್ಶಿ ರಂಜನ್, ಹರೀಶ್ ಸೇರಿದಂತೆ ಮಹಿಳಾ ಘಟಕದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ವಿಜಯಸೇನೆ ಪದಾಧಿಕಾರಿಗಳು ಬಳೆ, ಅರಿಷಿಣ, ಕುಂಕುಮ ಕೊಟ್ಟು ಬರಮಾಡಿಕೊಂಡರು.

ವಿಜಯ ಸೇನೆಯ ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರ ಕೆ. ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐ನಾಡು, ನುಡಿ, ಜಲ, ಭಾಷೆಯ ಹಿತಕ್ಕಾಗಿ ನ...
17/04/2026

ವಿಜಯ ಸೇನೆಯ ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರ ಕೆ. ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
ನಾಡು, ನುಡಿ, ಜಲ, ಭಾಷೆಯ ಹಿತಕ್ಕಾಗಿ ನಿಮ್ಮ ನಾಯಕತ್ವದಲ್ಲಿ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಎಂಬ ಹಾರೈಕೆಗಳು.

ಇದೇ ಸಂದರ್ಭದಲ್ಲಿ ನೂತನವಾಗಿ ಸೇರ್ಪಡೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು 🎉
ನಿಮ್ಮ ಸೇವೆ ಮತ್ತು ಸಮರ್ಪಣೆಯಿಂದ ವಿಜಯ ಸೇನೆ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿ.

**ಜೈ ವಿಜಯ ಸೇನೆ!** ✊
ದೀಪಕ್ ಹ ನೀ Deepak H N

ವಿಜಯ ಸೇನೆ ಸಂಘಟನೆಯ ವತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ತುಮಕೂರು ಜಿಲ್ಲಾಧ್ಯಕ್ಷರಾಗಿ ಗಂಗಾಧರ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾ...
16/04/2026

ವಿಜಯ ಸೇನೆ ಸಂಘಟನೆಯ ವತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ತುಮಕೂರು ಜಿಲ್ಲಾಧ್ಯಕ್ಷರಾಗಿ ಗಂಗಾಧರ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ನಾಡು, ನುಡಿ, ಜಲ ಮತ್ತು ಭಾಷೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ವಿಜಯ ಸೇನೆ ತನ್ನ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಗಂಗಾಧರ್ ಅವರ ನೇಮಕ ಸಂಘಟನೆಯ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದೆ. ಅವರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯಲ್ಲಿ ವಿಜಯ ಸೇನೆ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಿ, ಕನ್ನಡದ ಹಿತಾಸಕ್ತಿಗಾಗಿ ಶ್ರಮಿಸಲಿದೆ.

ನಾಡು – ನುಡಿ – ಜಲ – ಭಾಷೆಗಾಗಿ ವಿಜಯ ಸೇನೆ ಸದಾ ಮುಂಚೂಣಿಯಲ್ಲಿ! 💛❤️

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದು ಹೋದ ಮಹಾನ್ ಪಾದಯಾತ್ರೆ…ಸತ್ಯ ಮತ್ತು ಅಹಿಂಸೆಯ ಶಕ್ತಿಯಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಇತಿಹಾಸದ ಮಹತ್ವದ ಅಧ...
12/03/2026

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದು ಹೋದ ಮಹಾನ್ ಪಾದಯಾತ್ರೆ…
ಸತ್ಯ ಮತ್ತು ಅಹಿಂಸೆಯ ಶಕ್ತಿಯಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಇತಿಹಾಸದ ಮಹತ್ವದ ಅಧ್ಯಾಯ.
ದಂಡಿ ಉಪ್ಪಿನ ಸತ್ಯಾಗ್ರಹದ ದಿನದ ಸ್ಮರಣೆ. 🇮🇳

#ದಾಂಡಿಯಾತ್ರೆ #ಉಪ್ಪಿನಸತ್ಯಾಗ್ರಹ

ಕನ್ನಡದ ಬೆಳವಣಿಗೆಗೆ ಹೋರಾಡಿದ ಮಹಾನ್ ನಾಯಕನಿಗೆ ಗೌರವ ನಮನಗಳು 🙏ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಸಂಸ್ಕೃತಿಗಾಗಿ ತಮ್ಮ ಜೀವನವನ್ನು ಅರ್ಪಿಸಿದ ...
11/03/2026

ಕನ್ನಡದ ಬೆಳವಣಿಗೆಗೆ ಹೋರಾಡಿದ ಮಹಾನ್ ನಾಯಕನಿಗೆ ಗೌರವ ನಮನಗಳು 🙏
ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಸಂಸ್ಕೃತಿಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಅವರ ಆದರ್ಶಗಳು ಸದಾ ನಮ್ಮೆಲ್ಲರಿಗೂ ಪ್ರೇರಣೆ.
ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟವನ್ನು ಸ್ಮರಿಸುತ್ತಾ ಗೌರವಪೂರ್ವಕವಾಗಿ ವಂದನೆಗಳು. 💛❤️

#ಕನ್ನಡ #ಕನ್ನಡಿಗ #ಕನ್ನಡನಾಡು #ಕನ್ನಡಅಭಿಮಾನ #ಕನ್ನಡರಾಜ್ಯ #ಕನ್ನಡಭಾಷೆ #ಕನ್ನಡಸಂಸ್ಕೃತಿ #ಕನ್ನಡಹೋರಾಟ #ಕನ್ನಡಿಗರಹೆಮ್ಮೆ

Address

18/2, 3ನೇ ಮಹಡಿ ಗಾಂಧಿನಗರ ಎಸ್ ಜೆ ಎಂ ಟವರ ಹಿಂಭಾಗ , ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಬೆಂಗಳೂರು
Bangalore
560009

Alerts

Be the first to know and let us send you an email when ವಿಜಯ ಸೇನೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ವಿಜಯ ಸೇನೆ:

Shortcuts

Share