KalaBandhu Foundation

KalaBandhu Foundation To empower children through knowledge, training, and the power of collective action to change their communities from the ground up.

15/07/2023
ಅರ್ಥ ಪೂರ್ಣ ವಿಶ್ವ ಪರಿಸರ ದಿನಾಚರಣೆ -  2023  ಸರ್ಕಾರಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಣೆ...          ಕಲಾಬಂಧು ಫೌಂಡೇಶ...
02/07/2023

ಅರ್ಥ ಪೂರ್ಣ ವಿಶ್ವ ಪರಿಸರ ದಿನಾಚರಣೆ - 2023 ಸರ್ಕಾರಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಣೆ...

ಕಲಾಬಂಧು ಫೌಂಡೇಶನ್ ವತಿಯಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ದಿನಾಂಕ 30.06.2023 ರಂದು ಆಚರಿಸಲಾಯಿತು. ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕಿಂತ ಮೊದಲು ತಾಲೂಕಿನ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಾಗಡಿ ತಾಲೂಕು ಮಟ್ಟದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿ ವಿಜೇತರಿಗೆ ರೂ. 2000 , 1500, 1000 ಗಳ ನಗದು ಪ್ರತಿಭಾ ಪುರಸ್ಕಾರ ಪ್ರಶಸ್ತಿ‌ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಇದೆ ಸಂದರ್ಭದಲ್ಲಿ 2022-23 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಗಳು ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಉತ್ತೇಜನಕ್ಕೆ ಅನುಕೂಲವಾಗುವಂತೆ ನೋಟ್ ಪುಸ್ತಕಗಳು ಸೇರಿದಂತೆ ಪಾಠೋಪಕರಣ ಗಳನ್ನು ವಿತರಿಸಲಾಯಿತು. ಕಲಾಬಂಧು ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಶ್ರೀ ನರಸಿಂಹರಾಜು, ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷರಾದ ಶಂಕರ್ , ಹಿರಿಯ ಸಾಹಿತಿ ಡಾ.ಪಾನ್ಯಂ ನಟರಾಜ್, ಪತ್ರಕರ್ತರಾದ ಆಲ್ಬೂರು ಶಿವರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ ಮಂಜುಳಾ, ಸ್ನೇಹ ಪ್ರಿಂಟರ್ಸ್ ಮಾಲೀಕರಾದ ರಂಗಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಲಾಬಂಧು ಫೌಂಡೇಶನ್ ಕಾರ್ಯ ಚಟುವಟಿಕೆಗಳು ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ‌ಸಂಸ್ಥೆಯ ಅಧ್ಯಕ್ಷರಾದ ‌ಹೆಚ್. ನರಸಿಂಹರಾಜು ರವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಗಣ್ಯರು, ಶಾಲಾ ಶಿಕ್ಷಕರುಗಳನ್ನು ಹಾಗೂ ಸ್ಥಳೀಯ ಪತ್ರಕರ್ತರನ್ನೂ ಸನ್ಮಾನಿಸಿತು.

21/06/2023

ಕಲಾಬಂಧು _ಫೌಂಡೇಶನ್_* : *ಉನ್ನತ ಶಿಕ್ಷಣ ಉತ್ತೇಜನಕ್ಕೆ ನಿಖಿತಾ ವಿದ್ಯಾರ್ಥಿನಿಗೆ ಆರ್ಥಿಕ ನೆರವು _ಮೈಸೂರು* ,_ 21 : ಇಂದು ಮೈಸೂರಿನ ಪತ್ರಿಕಾ ವಿತರಕ ಸುರೇಶ್ ರಾವತ್ ರವರ ಮಗಳಾದ *ನಿಖಿತಾ ಬಹುಮುಖ ಪ್ರತಿಭೆ ಯಾಗಿದ್ದಾಳೆ.* 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿನಿಯಾಗಿದ್ದು , ಕಲಾಬಂಧು ಫೌಂಡೇಶನ್ ವತಿಯಿಂದ ಉನ್ನತ ಶಿಕ್ಷಣ ಉತ್ತೇಜನಕ್ಕೆ ರೂ.5000/-ಗಳನ್ನು ಚೆಕ್ ಮೂಲಕ ವಿತರಿಸಲಾಯಿತು. ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು, ಟ್ರಸ್ಟಿ ಗಳಾದ ಲೋಹಿತ್, ಪೋಷಕರಾದ ಸುರೇಶ್ ರಾವತ್ ಹಾಗೂ ಸಮಾಜ ಸೇವಕರಾದ ವನಸಿರಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.

ಕಲಾಬಂಧು ಫೌಂಡೇಶನ್ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಬೆಳಗ್ಗೆ ಸದಾಶಿವನಗರದ ಪಾರ್ಕ್ ನಲ್...
18/06/2023

ಕಲಾಬಂಧು ಫೌಂಡೇಶನ್ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಬೆಳಗ್ಗೆ ಸದಾಶಿವನಗರದ ಪಾರ್ಕ್ ನಲ್ಲಿ world no To***co Day- 2023 ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಕಲಾಬಂಧು ಫೌಂಡೇಶನ್ ತಂಡ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಫೌಂಡೇಶನ್ ವತಿಯಿಂದ*ವೈದ್ಯಕೀಯ ವೆಚ್ಚಕ್ಕೆ* *ಆರ್ಥಿಕ* *ನೆರವು*  ಚಿಕ್ಕಬಳ್ಳಾಪುರ,18 : ಚಿಕ್ಕಬಳ್ಳಾಪುರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂ...
19/04/2023

ಫೌಂಡೇಶನ್ ವತಿಯಿಂದ*ವೈದ್ಯಕೀಯ ವೆಚ್ಚಕ್ಕೆ* *ಆರ್ಥಿಕ* *ನೆರವು*
ಚಿಕ್ಕಬಳ್ಳಾಪುರ,18 : ಚಿಕ್ಕಬಳ್ಳಾಪುರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ
ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನರಸಿಂಹಯ್ಯ ಅವರು ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ
ನೆರವು ಕೋರಿದ್ದರು,ಕಲಾ ಬಂಧು ಫೌಂಡೇಶನ್ ವತಿಯಿಂದ ಅಧ್ಯಕ್ಷ ಹೆಚ್.ನರಸಿಂಹರಾಜು
ಅವರು 5 ಸಾವಿರ ರೂ ಗಳ ಚೆಕ್ ಅನ್ನು ನರಸಿಂಹಯ್ಯ ರವರಿಗೆ ನೀಡಿ ಶೀಘ್ರ ಗುಣಮುಖಲಾಗಲೆಂದು ಹಾರೈಸಿದರು.

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ...
02/04/2023

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಭವನ ಶಿವಾನಂದ ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ" karnataka's BEST LEGEND WOMEN AWARD 2023 " ಅನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 2021-22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಗದು (ಚೆಕ್ ಮೂಲಕ ) ನ್ನು ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು, ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋತ್ , ಹಿರಿಯ ಪತ್ರಕರ್ತರಾದ ಶ್ರೀಮತಿ ಸುಶೀಲಾ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಬೆಂಗಳೂರು ವಿಭಾಗದ ಮುಖ್ಯಸ್ಥ ರವಿ ನಾಯ್ಡು ಸೇರಿದಂತೆ ವೇದಿಕೆ ಮೇಲೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ...
02/04/2023

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಭವನ ಶಿವಾನಂದ ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ" karnataka's BEST LEGEND WOMEN AWARD 2023 " ಅನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ರಂಗ ನಿರ್ದೇಶಕ, ವಯೋಲಿನ್ ವಾದಕ ರಾಮಲಿಂಗಾಚಾರಿ ರವರಿಗೆ ರೂ.10000/- ಚೆಕ್ ನ್ನು ಫೌಂಡೇಶನ್ ವತಿಯಿಂದ ನೀಡಲಾಯಿತು. ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು, ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋತ್ , ಹಿರಿಯ ಪತ್ರಕರ್ತರಾದ ಶ್ರೀಮತಿ ಸುಶೀಲಾ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಬೆಂಗಳೂರು ವಿಭಾಗದ ಮುಖ್ಯಸ್ಥ ರವಿ ನಾಯ್ಡು ಸೇರಿದಂತೆ ವೇದಿಕೆ ಮೇಲೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ...
02/04/2023

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಭವನ ಶಿವಾನಂದ ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ" karnataka's BEST LEGEND WOMEN AWARD 2023 " ಅನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪಾರ್ಶ್ವವಾಯು (strock)ವಿನಿಂದ ಬಳಲುತ್ತಿದ್ದ ರಂಗಭೂಮಿ ಕಲಾವಿದ, ಕಾರ್ಯಕ್ರಮಗಳ ನಿರೂಪಕ ರಾಜ್ ಸಂಪಾಜೆ ರವರಿಗೆ ರೂ.5000/- ಚೆಕ್ ನ್ನು ಫೌಂಡೇಶನ್ ವತಿಯಿಂದ ನೀಡಲಾಯಿತು. ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು, ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋತ್ , ಹಿರಿಯ ಪತ್ರಕರ್ತರಾದ ಶ್ರೀಮತಿ ಸುಶೀಲಾ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಬೆಂಗಳೂರು ವಿಭಾಗದ ಮುಖ್ಯಸ್ಥ ರವಿ ನಾಯ್ಡು ಸೇರಿದಂತೆ ವೇದಿಕೆ ಮೇಲೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ...
02/04/2023

ಕಲಾಬಂಧು ಫೌಂಡೇಶನ್ ವತಿಯಿಂದ ದಿನಾಂಕ: 26/03/2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಭವನ ಶಿವಾನಂದ ಸರ್ಕಲ್, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ" karnataka's BEST LEGEND WOMEN AWARD 2023 " ಅನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಎರಡು ಕಿಡ್ನಿ ವೈಫಲ್ಯ ರಿಂದ ಬಳಲುತ್ತಿದ್ದ T, Shivraj ಎಂಬುವವರಿಗೆ ವೈದ್ಯಕೀಯ ನೆರವಿಗಾಗಿ ರೂ.10000/- ಚೆಕ್ ನ್ನು ಫೌಂಡೇಶನ್ ವತಿಯಿಂದ ನೀಡಲಾಯಿತು. ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು, ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋತ್ , ಹಿರಿಯ ಪತ್ರಕರ್ತರಾದ ಶ್ರೀಮತಿ ಸುಶೀಲಾ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಬೆಂಗಳೂರು ವಿಭಾಗದ ಮುಖ್ಯಸ್ಥ ರವಿ ನಾಯ್ಡು ಸೇರಿದಂತೆ ವೇದಿಕೆ ಮೇಲೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Address

3Rd Main
Bangalore

Alerts

Be the first to know and let us send you an email when KalaBandhu Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to KalaBandhu Foundation:

Share