13/12/2022
ಶ್ರೀಯುತ ಸಂತೋಷ ಮಾರುತಿ ಅರಭಾವಿ ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ಮೋಸ ಸುಲಿಗೆ ಅತ್ಯಾಚಾರ, ವಂಚನೆ, ದಬ್ಬಾಳಿಕೆ, ವರದಕ್ಷಿಣೆ ಕಿರುಕುಳ, ಮೂಢನಂಬಿಕೆ, ಜಾತಿ ನಿಂದನೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ಅನ್ಯಾಯ, ಸರಕಾರಿ ಸೌಲಭ್ಯಗಳು ಸಿಗದೆ ವಂಚಿತರಾಗುವುದು. ಇನ್ನೂ ಅತಿ ಹೆಚ್ಚು ಸಮಸ್ಯೆಗಳಿಂದ ನಮ್ಮ ರಾಜ್ಯದ ಜನ ಬಳಲುತ್ತಿದ್ದಾರೆ ಹಾಗೂ ಕೆಲ ಸಮಸ್ಯೆಗಳನ್ನು ಎದುರಿಸಲಾಗದೆ ಕೆಲ ಕುಟುಂಬಗಳು ಬೀದಿಗೆ ಬಂದಿದ್ದು ಇವೆ. ಈ ಭ್ರಷ್ಟಾಚಾರದಿಂದ ನೊಂದ ಜನರ ಮತ್ತು ಸಮಾಜದ ಅಶಕ್ತ ಜನರಿಗೆ ಧ್ವನಿಯಾಗಿ ಸೇವೆ ಸಲ್ಲಿಸಲು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಚಿನ್ನಪ್ಪ ಕುಂದರಗಿ ಯವರ ಆದೇಶದ ಮೇರೆಗೆ
ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುತ್ತೇವೆ. ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕಲಾಪಗಳ ವಿವರವನ್ನು ತಿಂಗಳಿಗೊಮ್ಮೆ ಕೇಂದ್ರ ಕಛೇರಿಗೆ ತಲುಪಿಸಬೇಕು.
ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲಿ ಅಥವಾ ನಮ್ಮ ಸಂಘಟನೆಯ ತತ್ವ ಸಿದ್ಧಾತಂಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ತಕ್ಷಣದಿಂದಲೇ ನಿಮ್ಮನ್ನು ಈ ಸ್ಥಾನದಿಂದ ತೆರವುಗೊಳಿಸುವ ಅಥವಾ ಅಮಾನತು ಮಾಡುವ ಸಂಸ್ಥಾಪಕ ಅಧ್ಯಕ್ಷರು ಜವಾಬ್ದಾರಿ ಹೊಂದಿರುತ್ತಾರೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ....
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ
State Rural Development Committee (R) Karnataka
ಎಲ್ಲರಿಗೂ ಸಾಮಾಜಿಕ ನ್ಯಾಯ
Social Justice for All
ದಿನಾಂಕ:- 13-12-2022