Swagraam Foundation

Swagraam Foundation Swagraam is to connect people to their native place and its heritage with pride.

“ನೋಡು ನೋಡು ಆಕೆ ನಾಗವಲ್ಲಿಯಾಗಿ ಬದಲಾಗೋದನ್ನ ನೋಡು, ತಮ್ಮ ಕುಟುಂಬದವರು ಬಳಸುತ್ತಿದ್ದ ಹಳೆ ವಸ್ತುಗಳನ್ನ ಗುಜರಿಗೆ ಹಾಕ್ತೀವಿ ಅಂದಾಗ ಆಕೆಯ ಕಣ್ಣ...
05/10/2026

“ನೋಡು ನೋಡು ಆಕೆ ನಾಗವಲ್ಲಿಯಾಗಿ ಬದಲಾಗೋದನ್ನ ನೋಡು, ತಮ್ಮ ಕುಟುಂಬದವರು ಬಳಸುತ್ತಿದ್ದ ಹಳೆ ವಸ್ತುಗಳನ್ನ ಗುಜರಿಗೆ ಹಾಕ್ತೀವಿ ಅಂದಾಗ ಆಕೆಯ ಕಣ್ಣಲ್ಲಿ ಕಾಣೋ ಕೋಪ ನೋಡು..” ಅಣ್ಣ ಕುಳಿತಲ್ಲೇ ಕಾಮೆಂಟ್ ಕೊಡ್ತಾ, ಮೊದಲೇ ಸಿಟ್ಟಾಗಿದ್ದ ಅಮ್ಮನ್ನ ಇನ್ನಷ್ಟು ರೇಗಿಸ್ತಾ ಇದ್ದ. ಗುಜರಿಯವನೋ, ನಿಧಿ ಹುಡ್ಕೋ ರೇಂಜ್ ಗೆ ಮನೆ ಸುತ್ತ ಮೂಲೆ ಮೂಲೆಯಲ್ಲೂ ಹುಡುಕಿ ಕಬ್ಬಿಣ, ಪ್ಲಾಸ್ಟಿಕ್, ಮರದ ವಸ್ತುಗಳನ್ನು ಹೆಕ್ಕಿ ತಂದು ರಾಶಿ ಹಾಕ್ತಿದ್ದ. ಅಪ್ಪ ಮಾತ್ರ ತನಗೆ ಯಾವು ಸಂಬಂಧವೂ ಇಲ್ಲ ಎಂಬಂತೆ ಕುಳಿತಿದ್ರೂ, ಅಟ್ಟದಿಂದ ಅಮ್ಮ ಕೆಳಗಿಳಿಸ್ತಿದ್ದ ಹಳೆಯ ವಸ್ತುಗಳನ್ನ ನೋಡಿ ಒಳಗೊಳಗೇ ಭಾವುಕನಾಗ್ತಿದ್ದ. ಇದನ್ನೆಲ್ಲಾ ನೋಡ್ತಿದ್ ನನಗೆ ಮನಸಲ್ಲಿ ನೂರಾರು ಯೋಚ್ನೆಗಳು ಸುಳಿದಾಡೋದಕ್ಕೆ ಶುರುವಾದ್ವು.
’ಅಲ್ಲ, ಇಷ್ಟೇಲ್ಲಾ ಹಿಂದಿನ ಕಾಲದ ವಸ್ತುಗಳ ಮೇಲೆ ಪ್ರೀತಿ ಇಟ್ಕೊಂಡಿರೋ ಅಪ್ಪ ಅಮ್ಮ ಅವನ್ನೆಲ್ಲಾ ಅಟ್ಟದ ಮೂಲೆಗ್ ಸೇರ್ಸಿದ್ಯಾಕೆ? ಈಗ್ಲೂ ಮೊರ, ಮರಿಗೆ, ಬಿಸುಕಲ್ಲು ಮೊದಲಾದ ವಸ್ತುಗಳು ಬಳಕೆಯೋಗ್ಯವಾಗಿಯೇ ಇವೆ ಅಲ್ವಾ? ಬಳಸಬಹುದಿತ್ತಲ್ಲಾ. ಅದ್ ಬಿಟ್ಟು ಅದನ್ನ ಗುಜರಿಗೂ ಹಾಕದೆ ಬಳಕೆನೂ ಮಾಡ್ದೆ ನಿಧಿ ಇಟ್ಕೊಂಡ್ ಹಾಗೆ ಇಟ್ಕೊಂಡಿದ್ಯಾಕೆ?’ ಅಂತ. ಪ್ರಶ್ನೆ ತಲೆಯಲ್ಲಿ ಬಂದಿದ್ದೇ ತಡ, ಬಾಯಿ ಸುಮ್ನಾಗದೇ ಅಪ್ಪನ್ ಪ್ರಶ್ನೆ ಮಾಡೇ ಬಿಡ್ತು.
ಅಪ್ಪನ ಉತ್ತರ ಬಹಳ ಸರಳವಾಗಿತ್ತು. “ಕಾಲ ಬದಲಾಗಿದ್ಯಲ್ಲಮ್ಮಾ, ಈಗಿನ ಕಾಲದಲ್ಲಿ ಅದನ್ನೆಲ್ಲಾ ಬಳ್ಸಿದ್ರೆ ಯಾರಿಗೂ ಇಷ್ಟ ಆಗಲ್ಲ. ’ಅಯ್ಯೋ ಇನ್ನೂ ಯಾವ್ ಕಾಲ್ದಲ್ಲಿದೀರಾ?’ ಅಂತ ಆಡ್ಕೋತಾರೆ. ಈ ಪಾತ್ರೆಗಳೆಲ್ಲಾ ಮರದ್ದು, ಮಣ್ಣಿದು. ಹಾಳಾದ್ರೆ ರಿಪೇರಿ ಮಾಡ್ಸೋದ್ ಕಷ್ಟ. ಆದ್ರೂ ನಾನು ನಿನ್ನಮ್ಮ, ನಿನ್ ಅಜ್ಜಿ ಟಾತ ಹೋದ್ಮೇಲೂ ಸುಮಾರ್ ವರ್ಷ ಇವನ್ನೆಲ್ಲಾ ಬಳ್ಸಿದ್ವಿ, ಆದ್ರೆ ಒಂದ್ ಸಲ ಮರಿಗೆ ಬಿರುಕು ಬಿಟ್ಟಿದೆ ಅಂತ ಸರಿ ಮಾಡ್ಸೋದಕ್ ನೋಡಿದ್ರೆ, ’ಅಯ್ಯೋ ಆ ಶತಮಾನದಷ್ಟ್ ಹಳೆ ವಸ್ತುನೆಲ್ಲಾ ನಾನ್ ರಿಪೇರಿ ಮಾಡಲ್ವಪ್ಪಾ, ಅದ್ರ ಬದ್ಲು ಹೊಸ್ದೇ ಮಾಡ್ಕೋಡ್ತೀನಿ’ ಅಂದ ಮೇಸ್ತ್ರಿ. ಹಾಗೆ ಅದ್ಯಾವ್ ರಿಪೇರಿನೂ ಇಲ್ದೆ ಅಟ್ಟ ಹತ್ತಿದ್ದು”.
ಅಪ್ಪ ಹೇಳಿ ಬಾಯ್ ಮುಚ್ಚೊವಷ್ಟ್ರಲ್ಲಿ ದಡ ದಡ ಅಂತ ಏಣಿ ಮೆಟ್ಟಿಲು ಇಳಿದು ಕೆಳಗ್ ಬಂದ ಅಮ್ಮಾ, “ಸಾಕ್ ಸುಮ್ನಿರ್ರಿ, ಹಿಸೆ (ಆಸ್ತಿ ವಿಭಜನೆ) ಆದ್ಮೇಲೆ ನಿಮ್ಮ ಅಕ್ಕ ತಂಗಿ ಈ ವಸ್ತುಗಳನ್ನೆಲ್ಲಾ ನಮಿಗ್ ಎಲ್ ಸರ್ಯಾಗ್ ಬಳ್ಸಕ್ ಕೊಟ್ಟಿದ್ರು ಹೇಳಿ? ಅಲ್ಲ ಈ ಮರಿಗೆ ಮುರ್ದಿದ್ದೇ ನಿಮ್ ಎರಡನೇ ತಂಗಿ. ವರ್ಷಾನ್ ಗಟ್ಲೆ, ಅವಳ್ ಮಗ್ನನ್ನ ಇದೇ ಮರಿಗೆಯಲ್ಲಿ ತಾನೆ ಆಕೆ ಸ್ನಾನ ಮಾಡ್ಸಿದ್ದು. ತನ್ ಕೆಲ್ಸ ಆದ್ಮೇಲೆ ಸೋರ್ಕಾಲ್ ನಲ್ಲಿ (ಮಳೆ ನೀರು ಬೀಳೋ ಜಾಗ) ಇಟ್ರೆ ಹಾಳಾಗದೇ ಇರತ್ತಾ?”.
ಅಪ್ಪನ ಬಾಯಲ್ಲಿ ಉತ್ತರ ಬರ್ಲಿಲ್ಲ, ಆದ್ರೆ ನಾನ್ ಪ್ರಶ್ನೆ ಕೇಳೋಕ್ ರೆಡಿಯಾದೆ. “ಅಂದ್ರೆ ಅಮ್ಮಾ, ಇದು ಆಗಿನ ಕಾಲದ ಬಾತ್ ಟಬ್ ಆಗಿತ್ತಾ? ಇದನ್ ನೋಡ್ಕೊಂಡೆ ಈಗಿನವರು ಡಿಸೈನ್ ಮಾಡ್ತಾರೆ ಅನ್ಸತ್ತೆ”. ಎನ್ನುತ್ತಾ ಮರಿಗೆಯನ್ನ ಕೈಯಿಂದ ಸವರಿ ಆಶ್ಚರ್ಯವಾಗಿ ನೋಡ್ತಾ ಇದ್ದೆ. ನನ್ ಹತ್ತಿರ ಬಂದ ಅಮ್ಮಾ, ಮರಿಗೆ ಅಂಟಿದ್ದ ಧೂಳನ್ನ ತನ್ನ ಸೆರಗಿನಿಂದ ಒರೆಸುತ್ತಾ ಕಣ್ಣೀರು ಹಾಕೋದಕ್ಕೆ ಶುರು ಮಾಡಿದ್ಲು..
ಯಾಕೆ ಗೊತ್ತಾ? ಮುಂದಿನ ಲೇಖನದಲ್ಲಿ ಉಳಿದ ಕಥೆ!
#ಕನ್ನಡ

30/09/2026

Don’t Worship at a Temple If You Don’t Know This! ಈ ವಿಷಯ ತಿಳಿದುಕೊಳ್ಳದೆ ದೇವಸ್ಥಾನಕ್ಕೆ ಹೋಗಲೇಬೇಡಿ!
Heritage TempleStories CultureAndHeritage SwagraamFoundation SpeakerSeries Storytelling OurRoots

30/09/2026

Don’t Worship at a Temple If You Don’t Know This! ಈ ವಿಷಯ ತಿಳಿದುಕೊಳ್ಳದೆ ದೇವಸ್ಥಾನಕ್ಕೆ ಹೋಗಲೇಬೇಡಿ!

29/09/2026

Have You Ever Experienced Something Like This? | What Happens Inside This House?KARMAKHYA

17/09/2026

Swagraam Speaker Series | Beyond the Temple / Seeing Temples Differently/ ದೇವಾಲಯವನ್ನು ಹೀಗೂ ನೋಡಬಹುದೇ?
What if we look at a temple not just as a place of worship, but as a living story of our history, culture, art, traditions, architecture, people and community?

In this Swagraam Conversation, we explore how to see our temples through a different lens and discover the stories, knowledge and heritage hidden within them.

Join us for an insightful conversation and look at familiar temples with new eyes and a new perspective.

Come. Listen. Explore. See your roots differently.

14/09/2026

Happy ganesha chaturthi

14/09/2026

Address

75/76, Jnanagiri, 4th Cross, 2nd Main, Soudamini Layout, Konanakunte
Bangalore
560062

Alerts

Be the first to know and let us send you an email when Swagraam Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Swagraam Foundation:

Shortcuts

Share