Dubai Vokkaligara Sangha

Dubai Vokkaligara Sangha Contact information, map and directions, contact form, opening hours, services, ratings, photos, videos and announcements from Dubai Vokkaligara Sangha, Community Organization, Dubai.

Celebrate the spirit of harvest and heritage! 🌾✨The Dubai Vokkaligara Sangha cordially invites you to Sankranthi Sadagar...
07/01/2026

Celebrate the spirit of harvest and heritage! 🌾✨

The Dubai Vokkaligara Sangha cordially invites you to Sankranthi Sadagara 2026. Join us for a day filled with traditional games, cultural programs, and a delicious feast as we celebrate the Jayanthi of Sri Sri Sri Balagangadharanatha Swamiji.

📅 Date: January 18, 2026 (Sunday)
📍 Location: Yacoob Farm House, Ajman
👗 Dress Code: Traditional Wear
🍱 Food: Veg & Non-Veg provided (Free Entry!)

Let’s come together to keep our traditions alive in a home away from home. See you there!

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಯತೀಶ್ ಬಿ.ಎನ್. ಗೌಡರು ಹಾಗೂ ಉಪಾಧ್ಯಕ್ಷರಾದ ಶ್ರೀ ಸತೀಶ್ ಗ್ಯಾರಹಳ್ಳಿ ಅವರು ನಂಜಾವಧೂತ ಸ್ವಾಮೀಜಿಗಳನ...
21/12/2025

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಯತೀಶ್ ಬಿ.ಎನ್. ಗೌಡರು ಹಾಗೂ ಉಪಾಧ್ಯಕ್ಷರಾದ ಶ್ರೀ ಸತೀಶ್ ಗ್ಯಾರಹಳ್ಳಿ ಅವರು ನಂಜಾವಧೂತ ಸ್ವಾಮೀಜಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ದುಬೈಯ ವಿವಿಧ ಪ್ರವಾಸಿ ತಾಣಗಳನ್ನು ಒಟ್ಟಾಗಿ ಭೇಟಿ ನೀಡಿದ ಸುಂದರ ಕ್ಷಣಗಳು.
ಈ ಸಂದರ್ಭದಲ್ಲಿ ಸ್ವಾಮೀಜಿಗಳು ಸಂಘದ ಕಾರ್ಯವೈಖರಿ ಹಾಗೂ ಸಾಮಾಜಿಕ ಸೇವೆಗಳ ಕುರಿತು ಮಾರ್ಗದರ್ಶನ ನೀಡಿದರು.
ಸಂಘದ ನಿರ್ದೇಶಕರುಗಳಾದ ಶ್ರೀ ಗೋಕೂಲ್ ಗೌಡರು, ಶ್ರೀ ಪ್ರದೀಪ್ ಗೌಡರು, ಶ್ರೀ ಚೇತನ್ ಗೌಡರು, ಶ್ರೀ ದೀಪಕ್ ಗೌಡರು ಹಾಗೂ ಶ್ರೀ ವೆಂಕಟೇಶ್ ಗೌಡರು ಉಪಸ್ಥಿತ

|| ಜೈ ಶ್ರೀ ಗುರುದೇವ್ || 01-12-2025, ಸೋಮವಾರ  ಸಂಜೆ 5:00 ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಿ.ಜಿ. ನಗರ ದಲ್ಲಿ ...
04/12/2025

|| ಜೈ ಶ್ರೀ ಗುರುದೇವ್ ||

01-12-2025, ಸೋಮವಾರ ಸಂಜೆ 5:00 ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಿ.ಜಿ. ನಗರ ದಲ್ಲಿ ನೆಡೆದ ಸಂಕಲ್ಪ – 2025 ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರು ಶ್ರೀ ಯತೀಶ್ ಗೌಡ ರವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮತ್ತು ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರ ಆಶೀರ್ವಾದ ಪಡೆದು ಮತ್ತು ದುಬೈ ಒಕ್ಕಲಿಗರ ಸಂಘದ ಮುಂದಿನ ಕಾರ್ಯಕ್ರಮ ಗಳ ಬಗ್ಗೆ ಚರ್ಚಿಸಿದ್ದಾರೆ,,

-Dubai Vokkaligara Sangha

ಗೌರವಾನ್ವಿತ ಡಾ. ರೋನಾಲ್ಡ್ ಕೊಲಾಸೋ ಸರ್ ಅವರಿಗೆ,ನಿಮ್ಮ ದೈವಸ್ವರೂಪ ತಾಯಿ ಶ್ರೀಮತಿ ಆಲಿಸ್ ಕೊಲಾಸೋ ಅವರ ವಿಯೋಗ ನಮ್ಮೆಲ್ಲರ ಹೃದಯವನ್ನು ತೀವ್ರ ...
30/11/2025

ಗೌರವಾನ್ವಿತ ಡಾ. ರೋನಾಲ್ಡ್ ಕೊಲಾಸೋ ಸರ್ ಅವರಿಗೆ,

ನಿಮ್ಮ ದೈವಸ್ವರೂಪ ತಾಯಿ ಶ್ರೀಮತಿ ಆಲಿಸ್ ಕೊಲಾಸೋ ಅವರ ವಿಯೋಗ ನಮ್ಮೆಲ್ಲರ ಹೃದಯವನ್ನು ತೀವ್ರ ದುಃಖದಿಂದ ತುಂಬಿಸಿದೆ. 97 ವರ್ಷಗಳ ದೀರ್ಘ, ದಿವ್ಯ ಮತ್ತು ಧರ್ಮನಿಷ್ಠ ಜೀವನ ನಡೆಸಿ, ಸಮಾಜಕ್ಕೆ ನಿಜವಾದ ಮಹಾನ್ ಪುತ್ರನನ್ನು ನೀಡಿದ ಆದರ್ಶ ಮಹಾತಾಯಿ ಅವರ ಅಗಲಿಕೆ ತುಂಬಲಾರದ ನಷ್ಟ.

ಅವರ ಸೌಮ್ಯತೆ, ಮನುಜ ಪ್ರೇಮ, ಮೌಲ್ಯಪೂರ್ಣ ಬದುಕಿನ ದಾರಿ ಹಾಗೂ ನಿಮ್ಮಂತಹ ದಾನಶೀಲ, ಜನೋದ್ದಾರಕ, ಸಮಾಜಮುಖಿ ಮನುಷ್ಯನನ್ನು ರೂಪಿಸಿದ ಅವರ ಸಂಸ್ಕಾರಗಳು ಸದಾ ಸ್ಮರಣೀಯ.

ಈ ದುಃಖದ ಸಂದರ್ಭದಲ್ಲಿ ನಮ್ಮ ಹೃತ್ಪೂರ್ವಕ ಸಂತಾಪಗಳು.
ಪರಮಾತ್ಮನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.

ಶ್ರೀಮತಿ ಆಲಿಸ್ ಕೊಲಾಸೋ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.
🙏🙏

23/11/2025

ಶೀರ್ಷಿಕೆ: ದುಬೈ ಒಕ್ಕಲಿಗರ ಸಂಘದ ಸದಸ್ಯರಿಗೆ ಪ್ರಮುಖ ಪ್ರಕಟಣೆ 📢

ಜೈ ಶ್ರೀ ಗುರುದೇವ್ 🙏

ನಮ್ಮ ಸಂಘದ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಲು ಈ ಸ್ಪಷ್ಟನೆ:

ನೂತನ ನಾಯಕತ್ವ: ಮಾಜಿ ಅಧ್ಯಕ್ಷರ ರಾಜೀನಾಮೆಯ ನಂತರ, ಬೋರ್ಡ್ ಆಫ್ ಡೈರೆಕ್ಟರ್ಸ್ ಸರ್ವಾನುಮತದಿಂದ ಶ್ರೀ ಯತೀಶ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶ್ರೀ ಸತೀಶ್ ಗೌಡ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ವಿಲೀನದ (Merger) ಬಗ್ಗೆ ಸ್ಪಷ್ಟನೆ: "ಸಂಘ ಮರ್ಜ್ ಆಗಿದೆ" ಎಂಬ ಸುದ್ದಿ ಸಂಪೂರ್ಣ ಸುಳ್ಳು. ನಮ್ಮ ಬೋರ್ಡ್ ಯಾವುದೇ ವಿಲೀನಕ್ಕೆ ಒಪ್ಪಿಗೆ ನೀಡಿಲ್ಲ.

ದುಬೈ ಒಕ್ಕಲಿಗರ ಸಂಘವು ಎಂದಿನಂತೆ ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸಲಿದೆ. ಸಮಾಜದ ಒಳಿತಿಗಾಗಿ ನಮ್ಮ ಸೇವೆ ಮುಂದುವರಿಯಲಿದ್ದು, ನಿಮ್ಮೆಲ್ಲರ ಬೆಂಬಲ ನಮ್ಮ ತಂಡಕ್ಕೆ ಇರಲಿ.

ಧನ್ಯವಾದಗಳು ದುಬೈ ಒಕ್ಕಲಿಗರ ಸಂಘ.

17/11/2025

ದುಬೈ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾದ ಶ್ರೀ ಯತೀಶ್ ಗೌಡ ಹಾಗೂ ಉಪಾಧ್ಯಕ್ಷರಾದ ಶ್ರೀ ಸತೀಶ್ ಗೌಡರಿಗೆ
ಸ್ಯಾಂಡಲ್‌ವುಡ್‌ನ ಗಣ್ಯ ನಟರಾದ ಶ್ರೀ ನಗರ ಶ್ರೀ ಕಿಟ್ಟಿ ಅವರು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ನಿಮ್ಮಿಬ್ಬರಿಗೂ ಭವಿಷ್ಯದ ನೇತೃತ್ವಕ್ಕಾಗಿ ಹಾರ್ದಿಕ ಯಶಸ್ಸಿನ ಶುಭಾಶಯಗಳು! 🙏✨

ದುಬೈ ಒಕ್ಕಲಿಗರ ಸಂಘ2025–2026 ನೇ ಸಾಲಿನ ನೂತನವಾಗಿ ಆಯ್ಕೆಯಾದಅಧ್ಯಕ್ಷರಾದ ಶ್ರೀ ಯತೀಶ್ ಬಿ.ಎನ್. ಗೌಡ ಹಾಗೂಉಪಾಧ್ಯಕ್ಷರಾದ ಶ್ರೀ ಸತೀಶ್ ಗೌಡ ಅ...
15/11/2025

ದುಬೈ ಒಕ್ಕಲಿಗರ ಸಂಘ
2025–2026 ನೇ ಸಾಲಿನ ನೂತನವಾಗಿ ಆಯ್ಕೆಯಾದ
ಅಧ್ಯಕ್ಷರಾದ ಶ್ರೀ ಯತೀಶ್ ಬಿ.ಎನ್. ಗೌಡ ಹಾಗೂ
ಉಪಾಧ್ಯಕ್ಷರಾದ ಶ್ರೀ ಸತೀಶ್ ಗೌಡ ಅವರಿಗೆ
ನಮ್ಮ ಹೃತ್ಪೂರ್ವಕ ಅಭಿನಂದನೆಗಳು. 🙏✨

ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆ ನಮ್ಮದು.
ಹೊಸ ಅವಧಿಗೆ ಶುಭಾಶಯಗಳು. 🌺🙏

— ದುಬೈ ಒಕ್ಕಲಿಗರ ಸಂಘ

Address

Dubai

Website

Alerts

Be the first to know and let us send you an email when Dubai Vokkaligara Sangha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dubai Vokkaligara Sangha:

Share