28/01/2025
ಆತ್ಮೀಯರೇ,
23/02/1923 ರಲ್ಲಿ ಸ್ಥಾಪನೆಯಾದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪುತ್ತೂರು ಪ್ರಸ್ತುತ ಶತಮಾನೋತ್ಸವದ ಸಂಭ್ರಮದಲ್ಲಿದ್ದು,ಈಗಾಗಲೇ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಮಠ ಕೈವಲ್ಯ ಗುರುವರ್ಯರಾದ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮೀ ಮಹರಾಜ್ ರವರ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಾದದೊಂದಿಗೆ ಪ್ರಾರಂಭವಾದ ಶತಸಂಭ್ರಮ ಕಾರ್ಯಕ್ರಮವು,ಮುಂದೆ ಹಲವಾರು ದೇವಳ,ಸಂಘಸಂಸ್ಥೆಗಳಲ್ಲಿ,ಸಮಾಜದ ಆಸಕ್ತರ ಮನೆಗಳಲ್ಲಿ ಕಾರ್ಯಕ್ರಮಗಳು ನಡೆದಿರುವುದು ತಮಗೆಲ್ಲ ತಿಳಿದಿರುವ ವಿಷಯ.
ದಿನಾಂಕ 23/02/2023 ರಂದು ಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿತ್ತು.ಈ ಸಂದರ್ಭದಲ್ಲಿ ಸಂಘದ ಹಳೆಯ ಕಟ್ಟಡವನ್ನು ಹವಾನಿಯಂತ್ರಿತ ಕಟ್ಟಡವನ್ನಾಗಿ ನವೀಕರಿಸಿ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಗಿತ್ತು.
ಹಿಂದಿನಿಂದಲೂ ಪ್ರಮುಖ ಬೇಡಿಕೆಯಾದ ಸಂಘಕ್ಕೆ ಖಾಯಂ ನಿವೇಶನಕ್ಕಾಗಿ ದಿನಾಂಕ 09/12/2024 ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ 0.48 ಎಕ್ರೆ ಜಾಗವನ್ನು ಖರೀದಿಸಲಾಯಿತು.ಈ ದಿನದಂದು ಜಾಗ ಖರೀದಿಗೆ ಕಾರಣಕರ್ತರಾದ ಎಲ್ಲರೊಂದಿಗೆ ಸಂಭ್ರಮ ಸಮಾರಂಭವನ್ನು ಆಚರಿಸಲಾಯಿತು.ಸದ್ರಿ ಜಾಗದ ಪಕ್ಕದಲ್ಲಿ 0.27 ಎಕ್ರೆ ಜಾಗವು ಸಹಸಂಸ್ಥೆ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು ಹೆಸರಿನಲ್ಲಿ ಲಭ್ಯವಿದ್ದು ಒಟ್ಟು 0.75 ಎಕ್ರೆ ಜಾಗವು ಸಮಾಜಕ್ಕೆ ಲಭ್ಯವಾದಂತಾಗಿದೆ.
ಪ್ರಸ್ತುತ ದಿನಾಂಕ 23/02/2025 ರಂದು ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ (ರಿ.) ಪುತ್ತೂರು ಇದರ ಕಟ್ಟಡವನ್ನು ಅನಾವರಣಗೊಳಿಸುವ ಸಮಾರಂಭವನ್ನು ಆಚರಿಸುವುದೆಂದು ಎರಡೂ ಸಂಸ್ಥೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಈ ಸಂದರ್ಬದಲ್ಲಿ ಪುತ್ತೂರು ಸಂಘದ ವತಿಯಿಂದ ಸ್ಮರಣ ಸಂಚಿಕೆಯೊಂದನ್ನು ಹೊರತರಲು ಉದ್ದೇಶಿಸಿದ್ದು ಆ ಪ್ರಯುಕ್ತ ಸ್ಮರಣ ಸಂಚಿಕೆಗೆ ಜಾಹಿರಾತು ಒದಗಿಸಿಕೊಟ್ಟು
ಸಹಕಾರಿಸಬೇಕಾಗಿ ಬಯಸುತ್ತಿದ್ದೇವೆ.