05/02/2022
ಶ್ರೀ ಸಿ.ಎ. ಶಿವಪ್ಪ ನವರ ಸಾಮಾಜಿಕ ಸೇವಾಕಾರ್ಯಗಳನ್ನು ಗುರುತಿಸಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಸಿದ್ಧಗಂಗಾ ಮಠ ಇವರಿಂದ ಗೌರವ ಸಮರ್ಪಣೆ
ದಿನಾಂಕ 30-04-2022ರ ಶನಿವಾರ ಮಾಕನಹಳ್ಳಿ, ಅಪ್ಪಾಜಪ್ಪನ ಪಾಳ್ಯದಲ್ಲಿ ಶ್ರೀ ಮುನೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮದಿನ ಪ್ರಯುಕ್ತ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮದ ಭಾಗವಾಗಿ ಮಹಾಮಹಿಮ ಶ್ರೀ ಮುನೀಶ್ವರಸ್ವಾಮಿ ಸುಕ್ಷೇತ್ರದ ಐತಿಹಾಸಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಪುರೋಭಿವೃದ್ಧಿಗಾಗಿ ಶ್ರಮಿಸಿದ ಸುಕ್ಷೇತ್ರ ಸಂಸ್ಥಾಪಕರಾದ ಶ್ರೀ ಸಿ.ಎ. ಶಿವಪ್ಪ ನವರಿಗೆ ತುಮಕೂರಿನ ಹೆಸರಾಂತ ಕಾಯಕಯೋಗಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಅಧ್ಯಕ್ಷರು ಸಿದ್ಧಗಂಗಾ ಸುಕ್ಷೇತ್ರ ಇವರ ಅಮೃತ ಹಸ್ತದಿಂದ ಗೌರವ ಸ್ವೀಕರಿಸಿದ ಕ್ಷಣಗಳನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವುಗಳೆಲ್ಲರೂ ಸಂತೋಷಿಸುತ್ತೇವೆ.