Hindu Jagarana Vedike Udupi Jille

Hindu Jagarana Vedike Udupi Jille ಉಡುಪಿ ಜಿಲ್ಲೆಯ ಹಿಂದು ಜಾಗರಣ ವೇದಿಕೆಯ ಕಾರ್ಯಚಟುವಟಿಕೆಗಳ ಪ್ರಚಾರ ಈ ಪೇಜ್ ಮುಖ್ಯ ಉದ್ದೇಶ.

ಜುಲೈ 1987 ರಲ್ಲಿ ಕೊಡಗು ಬಂದ್ ಆಚರಿಸುವ ಮೂಲಕ ಕರ್ನಾಟಕದಲ್ಲಿ ಆರಂಭವಾದ ಹಿಂದು ಸ್ವಾಭಿಮಾನ, ಹಿಂದು ಜಾಗೃತಿಯ ಆಂದೋಲನ ಹಿಂದು ಜಾಗರಣ ವೇದಿಕೆ. ಇಂದು ಕರ್ನಾಟಕದಲ್ಲಿ ಹಿಂದು ಜಾಗರಣ ವೇದಿಕೆ ಒಂದು ಪ್ರಬಲ ಸಾಮಾಜಿಕ ಶಕ್ತಿ . ರಾಜ್ಯದ 30 ಜಿಲ್ಲೆಗಳ ಎಲ್ಲಾ ತಾಲೂಕುಗಳನ್ನು ತಲುಪಿರುವ ವೇದಿಕೆ ಹಳ್ಳಿಗಳತ್ತ ದಾಪುಗಾಲು ಇಡುತ್ತಿದೆ.
ಹಿಂದು ಸಮಾಜ ಜಾಗೃತಗೊಳ್ಳಬೇಕು, ಜಾಗೃತ ಸಮಾಜ ಸಂಘಟಿತವಾಗಬೇಕು, ಜಾಗೃತ,ಸಂಘಟಿತ ಸಮಾಜ ದೇಶ ,ಧರ್ಮ , ಸಮಾಜವನ್ನು ಸಂರಕ್ಷಿಸಬೇಕು ಎಂಬ ತತ್ವದಡಿ

ಬೆಳೆದು ಬಂದ ವೇದಿಕೆಯು ಸಾವಿರಾರು ಹೋರಾಟ, ನೂರಾರು ಆಂದೋಲನ, ಹತ್ತಾರು ಸಂಘರ್ಷಗಳ ಮೂಲಕ ಕರ್ನಾಟಕದ ಹಿಂದುಗಳಲ್ಲಿ ಹೊಸ ಭರವಸೆ, ವಿಶ್ವಾಸವನ್ನು ಹುಟ್ಟು ಹಾಕಿದೆ.
ಸುಮಾರು 22 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ತನ್ನ ಕಾರ್ಯಾರಂಭ ಮಾಡಿದ ವೇದಿಕೆ ಇದೀಗ ಜಿಲ್ಲೆಯ ಎಲ್ಲ್ಲಾ ತಾಲೂಕುಗಳನ್ನು ತಲುಪಿ ನೂರಕ್ಕೂ ಹೆಚ್ಚು ಘಟಕಗಳ ಮೂಲಕ ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ತನ್ನ ಚಟುವಟಿಕೆಗಳ ಮೂಲಕ ಹಿಂದುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

Address

Udupi
576101

Website

Alerts

Be the first to know and let us send you an email when Hindu Jagarana Vedike Udupi Jille posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hindu Jagarana Vedike Udupi Jille:

Share