Anegundi Mutt

Anegundi Mutt Jagadguru Peetha and Kulaguru Peetha of Vishwabrahmin Community - Shreemath Jagadguru Anegundi Mahasamthana Saraswathi Peetham Katapady Padukutyru Udupi.

14/08/2026
10/08/2026
ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಅಲೋಕ್ ಕುಮಾರ್ ಜೀ ಅವರು 2026 ಅಗಸ್ಟ್ 6ರಂದು ಉಡುಪಿ ಜಿಲ್ಲೆಯ ಪಡುಕುತ್...
07/08/2026

ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಅಲೋಕ್ ಕುಮಾರ್ ಜೀ ಅವರು 2026 ಅಗಸ್ಟ್ 6ರಂದು ಉಡುಪಿ ಜಿಲ್ಲೆಯ ಪಡುಕುತ್ಯಾರು-ಕಟಪಾಡಿಯಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಆಗಮಿಸಿದರು.

ಆಗಸ್ಟ್ 7ರ ಮುಂಜಾನೆ ಪರಮಪೂಜ್ಯ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಪಟ್ಟದ ದೇವರ ಶ್ರೀಕರ ಅರ್ಚಿತ ಪೂಜಾ ಸೇವೆ ನಡೆಯುವ ಸಂದರ್ಭದಲ್ಲಿ ಅವರು ಭಕ್ತಿಭಾವದಿಂದ ಪಾಲ್ಗೊಂಡರು. ಬಳಿಕ ಜಗದ್ಗುರುಗಳವರೊಂದಿಗೆ ಹಿಂದೂ ಸಮಾಜದ ಸಮಕಾಲೀನ ವಿಚಾರಗಳು, ಸಂಘಟನೆ ಹಾಗೂ ಧಾರ್ಮಿಕ-ಸಾಮಾಜಿಕ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶ್ರೀ ಶರಣ್ ಪಂಪ್‌ವೆಲ್, ಮಂಗಳೂರು ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀ ಮನೋಹರ್ ಸುವರ್ಣ, ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀ ಸುನಿಲ್ ಕೆ.ಆರ್., ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀ ವಿಷ್ಣುಮೂರ್ತಿ ಆಚಾರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಶ್ರೀ ದಿನೇಶ್ ಮೆಂಡನ್, ಚಿಕ್ಕಮಗಳೂರಿನ ಶ್ರೀ ಶ್ಯಾಮ್ ಸೇರಿದಂತೆ ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೊಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಹಾಗೂ ವಿಶ್ವಸ್ಥರಾದ ಸುಂದರ ಆಚಾರ್ಯ ಬೆಳುವಾಯಿ, ದಿನೇಶ್ ಆಚಾರ್ಯ ಪಡುಬಿದ್ರಿ, ದಯಾನಂದ ಆಚಾರ್ಯ ತೆಂಕನಿಡಿಯೂರು, ರಾಘವೇಂದ್ರ ಆಚಾರ್ಯ ಉಡುಪಿ, ಗಂಗಾಧರ ಆಚಾರ್ಯ ಕೊಂಡೆಯೂರು, ಸುರೇಶ್ ಆಚಾರ್ಯ ಇರಂದಾಡಿ, ಭರತ್ ಆರ್. ಆಚಾರ್ಯ ಕಾಸರಗೋಡು, ಲೋಲಾಕ್ಷ ಶರ್ಮ, ಕೇಶವ ಶರ್ಮ, ನವೀನ್ ಆಚಾರ್ಯ ಪಣಿಯೂರು, ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಜಗದೀಶ್ ಆಚಾರ್ಯ ಕಪೆಟ್ಟು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

🌺 ಹೃತ್ಪೂರ್ವಕ ಅಭಿನಂದನೆಗಳು 🌺ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಮ್ಮ...
04/08/2026

🌺 ಹೃತ್ಪೂರ್ವಕ ಅಭಿನಂದನೆಗಳು 🌺

ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಸಮಾಜದ ಹೆಮ್ಮೆಯ ಪುತ್ರರಾದ ಡಾ. ಬಿ. ಶ್ರೀಕಂಠಾಚಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಶ್ರೀಯುತರು ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ವತಿಯಿಂದ ಪ್ರತಿವರ್ಷ ಪ್ರದಾನ ಮಾಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸಂಚಾಲಕರಾಗಿ ನಿಷ್ಠೆ, ಪಾಂಡಿತ್ಯ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಅಪಾರ ಅನುಭವ, ಸಂಶೋಧನಾ ಮನೋಭಾವ ಹಾಗೂ ದೂರದೃಷ್ಟಿಯ ನಾಯಕತ್ವವು ಈ ನೂತನ ಜವಾಬ್ದಾರಿಯಲ್ಲಿ ಇನ್ನಷ್ಟು ಎತ್ತರದ ಸಾಧನೆಗಳಿಗೆ ದಾರಿಯಾಗಲಿ ಎಂದು ಹಾರೈಸುತ್ತೇವೆ.

ಶ್ರೀ ಜಗದ್ಗುರುಗಳವರ ಪರಮಾನುಗ್ರಹವು ಸದಾ ಅವರ ಮೇಲೆ ಇರಲಿ; ಅವರು ಶಿಕ್ಷಣ, ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಇನ್ನಷ್ಟು ಉಜ್ವಲ ಸೇವೆ ಸಲ್ಲಿಸಿ ರಾಷ್ಟ್ರಕ್ಕೆ ಕೀರ್ತಿ ತಂದುಕೊಡಲಿ ಎಂದು ಪ್ರಾರ್ಥಿಸುತ್ತಾ,

ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅನಂತ ಶುಭಾಶಯಗಳು.

ANEGUNDISHREE CHATHURMASYA 2026
25/07/2026

ANEGUNDISHREE CHATHURMASYA 2026

Address

ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ (ರಿ)
Udupi
574105

Alerts

Be the first to know and let us send you an email when Anegundi Mutt posts news and promotions. Your email address will not be used for any other purpose, and you can unsubscribe at any time.

Contact The Organization

Send a message to Anegundi Mutt:

Shortcuts

Share