Nithyananda Vivekavamshi

Nithyananda Vivekavamshi ವಿವೇಕ ಶಿಕ್ಷಣ ವಾಹಿನಿ

ದಯಮಾಡಿ ಎಲ್ಲೆಡೆ ಶೇರ್ ಮಾಡಿ. ಇನ್ನು‌ ಕೆಲವೇ ದಿನಗಳು‌ ಬಾಕಿ ಉಳಿದಿವೆ. 😊😄🙏🏻🙏🤝🤝
18/03/2026

ದಯಮಾಡಿ ಎಲ್ಲೆಡೆ ಶೇರ್ ಮಾಡಿ. ಇನ್ನು‌ ಕೆಲವೇ ದಿನಗಳು‌ ಬಾಕಿ ಉಳಿದಿವೆ. 😊😄🙏🏻🙏🤝🤝

18/06/2024

ಸಿನಿಮಾ ನಟರು ಹೀರೋಗಳೇ!????????

06/11/2023

*ಹುಟ್ಟಿದ ಹಬ್ಬದಂದು ಕ್ರಿಕೆಟ್ ದೇವರ ದಾಖಲೆ‌ ಸರಿಗಟ್ಟಿದರೂ ವಿರಾಟ್ ಸಂಭ್ರಮಿಸಲಿಲ್ಲ ಏಕೆ???*

ನೆನ್ನೆಯ ಪಂದ್ಯದಲ್ಲಿ ನನಗೆ ಬಹುವಾಗಿ ಗಮನ ಸೆಳೆದದ್ದು ವಿರಾಟ್ ಕೋಹ್ಲಿ 49 ನೆಯ ಏಕದಿನ ಶತಕವನ್ನು ಪೂರ್ಣಗೊಳಿಸಿದ ಕ್ಷಣಗಳು. ಸಾಮಾನ್ಯವಾಗಿ ಶತಕ ಬಾರಿಸಿದೊಡನೆ ಅಬ್ಬರಿಸಿ ಬೊಬ್ಬಿರಿದು ಅಗ್ರೆಸೀವ್ ಆಗಿ ಸೆಲೆಬ್ರೇಟ್ ಮಾಡುವ ಕೋಹ್ಲಿ ಅಲ್ಲಿರಲಿಲ್ಲ. ಬಹಳ ಕಾಮ್ ಆಗಿ ಬಹಳ ಹಂಬಲ್ ಆಗಿ ಆ ಕ್ಷಣದಲ್ಲಿ ಅಭಿಮಾನಿಗಳ ಅಭಿನಂದನೆಗಳನ್ನು ಮಾತ್ರ ಸ್ವೀಕರಿಸಿದ ಕೋಹ್ಲಿ ನಿರೀಕ್ಷೆಯಂತೆ ಹಾರಿ ಕುಣಿದು ಕುಪ್ಪಳಿಸುವ ಯಾವುದೇ ಆಚರಣೆಯಲ್ಲಿ ತೊಡಗಲಿಲ್ಲ. ಸತ್ಯ ಹೇಳಬೇಕೆಂದರೆ ಮುಖದ ಮೇಲೆ ನಗುವೂ ಇರಲಿಲ್ಲ. ಯಾಕೆ??? ಈ ಪ್ರಶ್ನೆಗೆ ಉತ್ತರ ಕೊಡಲು ನಾನೇನು ಸೈಕಾಲಜಿಸ್ಟ್ ಅಲ್ಲ. ಆದರೂ ನನಗೆ ಆ ಕ್ಷಣದಲ್ಲಿ ಮೂಡಿದ ಭಾವನೆಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ. .

ಕೋಹ್ಲಿ ಬಾರಿಸಿದ ಈ ಏಕದಿನ ಶತಕ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ರ 49 ಏಕದಿನ ಶತಕದ ದಾಖಲೆಯನ್ನು ಸರಿಗಟ್ಟಿತು. ಹಾಗೆಯೇ ಸಚಿನ್ ಗಿಂತಾ ಅತಿ‌ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಕೋಹ್ಲಿ ಈ ಸಾಧನೆ ಮಾಡಿದ್ದರಿಂದ ಸಹಜವಾಗಿಯೇ ಪಟ್ಟಿಯಲ್ಲಿ ಸಚಿನ್ ರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದರು. ಯಾವುದೇ ಆಟಗಾರನೊಬ್ಬನ ಜೀವನಶ್ರೇಷ್ಠ ಸಾಧನೆ ಇದು. ಇದೇ ಪಂದ್ಯಾವಳಿಯಲ್ಲಿ ಎರಡು ಶತಕ ವಂಚಿತ ಆಟಗಳ ನಂತರ (95 vs ನ್ಯೂಜಿಲೆಂಡ್, 88 vs ಶ್ರೀಲಂಕಾ ) ಬಂದ ಸೆಂಚುರಿ ಇದು. ಸೆಲೆಬ್ರೇಷನ್ ಇರಲೇಬೇಕಿತ್ತು ತಾನೆ?! ಅದರಲ್ಲೂ ಅಗ್ರೆಸಿವ್ ಸೆಲೆಬ್ರೇಶನ್ ಅನ್ನು ಸ್ವಲ್ಪ ಹೆಚ್ಚಾಗಿಯೇ ಇಷ್ಟಪಡುವ ಕೋಹ್ಲಿ ಅಭಿಮಾನಿಗಳ ನಿರೀಕ್ಷೆಯಂತೆ ಇಲ್ಲಿ ಸಂಭ್ರಮಿಸಲೇ ಇಲ್ಲ! ಕಾರಣವೇನು???

ಬಹುಶಃ ಸಚಿನ್ ಅಲ್ಲದೇ ಇನ್ನಾರ ದಾಖಲೆಯನ್ನು ಮುರಿದಿದ್ದರೂ ನೆನ್ನೆ ಕೋಹ್ಲಿಯ ಸೆಲಬ್ರೇಶನ್ ರೀತಿ ಬೇರೆಯದೇ ಆಗಿರುತ್ತಿತ್ತು. ಆದರೆ ಇಲ್ಲಿ ಕೋಹ್ಲಿ ಮುರಿದದ್ದು ಸಚಿನ್ ರ ದಾಖಲೆಯನ್ನು. ಹೀಗಾಗಿ ಕೋಹ್ಲಿ ಪ್ರಜ್ಞಾಪೂರ್ವಕವಾಗಿ ಸೆಲಬ್ರೇಶನ್ ನಿಂದ ದೂರ ಉಳಿದರು ಅನಿಸಿತು. ಕ್ರಿಕೆಟ್ ದೇವರು ಸಚಿನ್ ಅಂತರಾಷ್ಟ್ರೀಯ ಕ್ರಿಕೇಟ್ ಆಡಲು ಆರಂಭಿಸಿದಾಗ ಕೋಹ್ಲಿ ಒಂದು ವರ್ಷದ ತೊಟ್ಟಿಲ ಕಂದ. ಸಚಿನ್ ರ ಆಟವನ್ನು ಟೆಲಿವಿಷನ್ ನಲ್ಲಿ ನೋಡಿ ಬೆಳೆದ ಕೋಹ್ಲಿ ಸಚಿನ್ ಜೊತೆಗೆ ಏಕದಿನ ವರ್ಲ್ಡ್ ಕಪ್ (2011) ಗೆಲ್ಲುವಷ್ಟು ಎತ್ತರ ಬೆಳೆದ. ಆದರೆ ಕೋಹ್ಲಿ ಪಾಲಿಗೆ ಸಚಿನ್ ಎಂದಿಗೂ ಆಕಾಶದಷ್ಟೇ ಎತ್ತರ. ಕ್ರಿಕೆಟ್ ಜಗತ್ತಿನ ಲೆಜೆಂಡ್ ಸಚಿನ್ ಯಾರೂ ಮುರಿಯಲಾಗದ ಅಸಂಖ್ಯ ದಾಖಲೆಗಳನ್ನು ನಿರ್ಮಿಸಿ ದಾಖಲೆಗಳ ಪುಸ್ತಕವನ್ನೇ ಕ್ರಿಯೇಟ್ ಮಾಡಿ ಹೋದಾಗ ಕೋಹ್ಲಿಯಂಥಾ ಅನೇಕ ಯುವ ಕ್ರಿಕೇಟಿಗರು ದಾಖಲೆ ಪುಸ್ತಕದಲ್ಲಿ ಆಗ ತಮ್ಮ ಹೆಸರುಗಳನ್ನು ಬರೆಯಲು ಆರಂಭಿಸಿದ್ದರು. ಇಂತಿರುವಾಗ ಖಾಸಗಿ ಸಮಾರಂಭವೊಂದರಲ್ಲಿ ಸಚಿನ್ ರನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ಸಲ್ಮಾನ್ ಖಾನ್, ನಿಮ್ಮ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವೇ? ಎಂದಾಗ ಸಚಿನ್ ಹೇಳಿದ್ದರು.. "ನನ್ನ ದಾಖಲೆ ಮುರಿಯಬಲ್ಲವರು ಇದೇ ಸಭಾಂಗಣದಲ್ಲಿ ಇದ್ದಾರೆ. ಅವರೇ ವಿರಾಟ್ ಮತ್ತು ರೋಹಿತ್." ಅಂದೇ ಸಚಿನ್ ಭವಿಷ್ಯ ನುಡಿದಿದ್ದರು. ಅಂದು ಕೋಹ್ಲಿಯೇ ಆ ಮಾತನ್ನು ನಂಬಿದ್ದರೋ ಇಲ್ಲವೋ. ಆದರೆ ಇಂದು ಆ ಮಾತು ನಿಜವಾಗಿ ಹೋಯಿತು.

ಆದರೆ ಸಚಿನ್ ರ ಎಷ್ಟೇ ದಾಖಲೆಯನ್ನು ಕೋಹ್ಲಿ ಮುರಿಯಲಿ, ಹೋಲಿಕೆ ಮಾಡುವಾಗ ಸಚಿನ್ ಆಕಾಶದೆತ್ತರ ಕಾಣುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಚಿನ್ ಆಡುವಾಗ ಅವರಿಗೆ ಇದ್ದ ಪರಿಸ್ಥಿತಿಗಳು, ಅನಾನುಕೂಲಗಳು, ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಸ್ಥಾನ ಮಾನ, ವಿಷಮ ಪರಿಸ್ಥಿತಿಗಳು, ಪ್ರಯಾಣ, ಆರೋಗ್ಯ, ವಯಸ್ಸು, ವೈದ್ಯಕೀಯ ಮತ್ತು ತಾಂತ್ರಿಕ‌ ಬೆಂಬಲ ಇತ್ಯಾದಿ ಇತ್ಯಾದಿ ನೂರೆಂಟು ವಿಷಯಗಳ‌ ಕಡೆ ಗಮನ ಕೊಟ್ಟು ನೋಡಿದಾಗ, ನಿರಂತರವಾಗಿ ಆ ಕಾಲದಲ್ಲಿ 200 ಟೆಸ್ಟ್ ಪಂದ್ಯ 400+ ಏಕದಿನ ಪಂದ್ಯಗಳಲ್ಲಿ ಆಡಿದ ಸಚಿನ್ ರ 25 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ನಿಜಕ್ಕೂ ಒಂದು ತಪಸ್ಸು. ಅದರಾಚೆಗೆ ಅವರು ಕಾಪಾಡಿಕೊಂಡ ಶಿಸ್ತು, ವೃತ್ತಿಗೌರವ, ದೇಶಪ್ರೇಮ, ಕಳಂಕ ರಹಿತ ವ್ಯಕ್ತಿತ್ವ, ಹಿರಿತನ, ಇತ್ಯಾದಿಗಳು ಸಚಿನ್ ರ ಜನಪ್ರಿಯತೆಯನ್ನೂ ಮೀರಿ ಕ್ರಿಕೆಟ್ ದೇವರನ್ನಾಗಿ ಮಾಡಿತು. ಪ್ರಪಂಚವೇ ಅವರನ್ನು ಕ್ರಿಕೆಟ್ ದೇವರೆಂದು ಒಪ್ಪಿಕೊಂಡಿತು. ಸ್ವತಃ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಸಚಿನ್ ನನಗಿಂತಲೂ ಚೆನ್ನಾಗಿ ಆಡುತ್ತಾರೆ ಎಂದುಬಿಟ್ಟರು. ಸಮಕಾಲೀನ ಕ್ರಿಕೆಟರ್ ಗಳೇ ಸಚಿನ್ ರನ್ನು ಹಿರಿಯಣ್ಣನಂತೆ, ಮಾರ್ಗದರ್ಶಕನಂತೆ, ರೋಲ್ ಮಾಡೆಲ್ ನಂತೆ ಕಾಣಲು ಆರಂಭಿಸಿದಾಗಲೂ ಸಚಿನ್ ರ ವಿನಯವಂತಿಕೆ ಒಂದಿನಿತೂ ಕಡಿಮೆಯಾಗಲಿಲ್ಲ. ವಯಸ್ಸಾದಂತೆ ಮತ್ತೂ ಮಾಗಿದ ಅವರ ವ್ಯಕ್ತಿತ್ವ ಜೆಂಟಲ್ ಮ್ಯಾನ್ ಗಳ ಆಟ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಾಯಿತು. 1999 ರ ವಿಶ್ವಕಪ್ ಸಮಯದಲ್ಲಿ ವಿದೇಶದಲ್ಲಿದ್ದಾಗ ತಂದೆ ತೀರಿಹೋದಾಗಲೂ ಅಂತ್ಯಕ್ರಿಯೆ ಮುಗಿಸಿ ವಾಪಾಸ್ ಬಂದು ಕೀನ್ಯಾ ವಿರುದ್ಧ ಶತಕ (140) ಗಳಿಸಿದ ನಂತರ ಆಕಾಶ ನೋಡಿ, ಆ ಶತಕವನ್ನು ತಂದೆಗೆ ಅರ್ಪಿಸಿದ ಅವರ ಬದ್ಧತೆ ಕ್ರಿಕೆಟ್ ಜಗತ್ತಿನ ಆದರ್ಶವಾಗಿಹೋಯಿತು. ಅನೇಕ ಕ್ರಿಕೇಟಿಗರು ಶತಕ ಹೊಡೆದು ಆಕಾಶ ನೋಡುವ ಮ್ಯಾನರಿಸಂ ಆರಂಭವಾಗಿದ್ದು ಈ ಇನ್ನಿಂಗ್ಸ್ ನಂತರವೇ(?!) ಜನಪ್ರಿಯತೆಯ ತುತ್ತತುದಿಯಲ್ಲಿ ಅನೇಕ ವರ್ಷಗಳ ಕಾಲ ಕುಳಿತಿದ್ದರೂ ಯಾವುದೇ ವಿವಾದಕ್ಕೆ ಸಿಲುಕದಂತೆ ಜೋಪಾನವಾಗಿ ತಮ್ಮ ವೃತ್ತಿಗೌರವವನ್ನು ಕಾಪಾಡಿಕೊಂಡು ಬಂದರು ಸಚಿನ್. ಮೈದಾನದಿಂದ ಹೊರಡುವ ಸಮಯ ಬಂದಾಗ ದೇಶಕ್ಕೆ ವಿಶ್ವಕಪ್ ಅನ್ನೇ ಎತ್ತಿಕೊಟ್ಟರು (2011). ಸಚಿನ್ ಎಂದರೆ ಕ್ರಿಕೆಟ್. ಕ್ರಿಕೆಟ್ ಎಂದರೆ ಸಚಿನ್. ಎಂಬಂತಾಗಿದ್ದ ಭಾರತೀಯರಿಗೆ 2012 ರ ಸಚಿನ್ ನಿವೃತ್ತಿ‌ ತಡೆದುಕೊಳ್ಳಲಾಗದ ಆಘಾತ. ಅವರ ಜಾಗದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಆಗದ ಸ್ಥಿತಿ. ಏಕೆಂದರೆ ಅಂದು ಅವರಷ್ಟು ದೀರ್ಘಕಾಲ ಕ್ರಿಕೆಟ್ ಆಡಿದ, ಅವರಷ್ಟು ದಾಖಲೆಗಳನ್ನು ಸ್ಥಾಪಿಸಿದ, ಅವರಷ್ಟು ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿ‌ ಕ್ರಿಕೆಟ್ ಜಗತ್ತಿನಲ್ಲಿ ಇರಲಿಲ್ಲ. ಸಚಿನ್ ರ ದಾಖಲೆ ಮುರಿಯುವುದಿರಲಿ, ಅವರ ದಾಖಲೆಗಳ ಸಮೀಪದಲ್ಲೂ ಯಾರಿಗೂ ಬರಲಾಗಲಿಲ್ಲ. ಭಾರತೀಯ ಕ್ರಿಕೆಟ್ ಏಕೆ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲೇ ಇದು ಒಂದು ನಿರ್ವಾತವನ್ನು ಸೃಷ್ಟಿಸಿಬಿಟ್ಟಿತು. ಹೀಗಾಗಿ ಸ್ವತಃ ಸಚಿನ್ ಮುರಿಯಲಾಗದ ದಾಖಲೆಯಾಗಿ ಉಳಿದುಬಿಟ್ಟರು.

ಆಗ ಬಂದದ್ದೇ ಈ ವಿರಾಟ್ ಕೋಹ್ಲಿ. ಅಬ್ಬರದ ಟಿ20 ಆರಂಭವಾದಾಗಲೂ ಕೌಶಲಯುತ ಕ್ರಿಕೆಟ್ ಅನ್ನು‌ ಮರೆಯದೇ, ಬದಲಾದ ಸನ್ನಿವೇಶದಲ್ಲೂ ಕನ್ಸಿಸ್ಟೆನ್ಸಿ ಕಾಪಾಡಿಕೊಂಡು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ, ಭಾರತೀಯ ಕ್ರಿಕೇಟ್ ಗೆ ಸೌರವ್ ಗಂಗೂಲಿ ಹಾಕಿಕೊಟ್ಟ ಅಗ್ರೆಸಿವ್ ನೇಚರ್ ನ ಮಾದರಿಯಲ್ಲೇ ಸಿಡಿಯುತ್ತಾ, ಗುಡುಗುತ್ತಾ, ನಡುನಡುವೆ ಹುಡುಗಾಟಿಕೆ ಮಾಡಿಕೊಂಡೇ ಬೆಳೆದ ಈ ಹುಡುಗ ನೋಡನೋಡುತ್ತಲೇ ದಾಖಲೆಗಳ ಬೆಟ್ಟವನ್ನೇ ನಿರ್ಮಿಸಿಬಿಟ್ಟ. ಎಲ್ಲಿಯವರೆಗೆ ಎಂದರೆ, ಕ್ರಿಕೆಟ್ ದೇವರ ಸಮೀಪಕ್ಕೇ ಬರುವಷ್ಟು! ವಿಶೇಷವಾಗಿ ನಿರಂತರವಾಗಿ ಶತಕಗಳನ್ನು ಬಾರಿಸುವ ಇವನ ಕೌಶಲ ಸಮಕಾಲೀನ ಆಟಗಾರರ್ಯಾರಲ್ಲೂ ಇರಲಿಲ್ಲ. ಪಿಫ್ಟಿಯನ್ನು ಸಲೀಸಾಗಿ ನೂರಾಗಿ ಕನ್ವರ್ಟ್ ಮಾಡಬಲ್ಲ ಇವನ ಸ್ಕಿಲ್ ನಿಜಕ್ಕೂ ಅದ್ಭುತವೇ ಸರಿ. ಸಾಲದ್ದಕ್ಕೆ ಚೇಸಿಂಗ್ ನಲ್ಲಿ ಎತ್ತಿದ ಕೈ. ಚೇಸಿಂಗ್ ಮಾಡುತ್ತಾ ಪಂದ್ಯ ಗೆಲ್ಲುವವರೆಗೂ ನಾಟ್ ಔಟ್ ಆಗಿ ಕ್ರೀಸ್ ನಲ್ಲಿ ಉಳಿದು ಮ್ಯಾಚ್ ಫಿನಿಷರ್ ಆಗುವ ಇವನ ಸಾಮರ್ಥ್ಯ ಸ್ವತಃ ಸಚಿನ್ ರಲ್ಲೂ ಇರಲಿಲ್ಲ ಎನ್ನುವುದು ಅರಗಿಸಿಕೊಳ್ಳಲೇಬೇಕಾದ ಸತ್ಯ. ಅದಕ್ಕೇ ಇವನನ್ನು ಜನ ಚೇಸಿಂಗ್ ಮಾಸ್ಟರ್ ಎಂದರು. ಟಿ20 ಗೂ ಸೈ, ಒನ್ ಡೇ ಗೂ ಸೈ. ಟೆಸ್ಟ್ ಗೂ ಸೈ ಎನ್ನಬಲ್ಲ ಬ್ಯಾಟಿಂಗ್ ಇವನದು. ಕ್ರಿಕೆಟ್ ನ ಎಲ್ಲ ಮಾದರಿಯಲ್ಲೂ‌ ಮಿಂಚಿದ ವಿರಾಟ್ ಜತೆಗಾರ ರೋಹಿತ್ ನನ್ನೂ ಮೀರಿ ಬೆಳೆದ. (ರೋಹಿತ್ ಒನ್ ಡೇ ಹಾಗೂ T20 ಯಲ್ಲಿ ಮಿಂಚಿದಷ್ಟು ಟೆಸ್ಟ್ ನಲ್ಲಿ ಗಮನ ಸೆಳೆಯಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು‌.)

ಇಷ್ಟಾದರೂ ಸಹಾ ಕೋಹ್ಲಿಯನ್ನು ಲಿಟಲ್ ಮಾಸ್ಟರ್ ನೊಂದಿಗೆ ಹೋಲಿಸಬಹುದಾದ ಯಾವ ಸಂದರ್ಭವೂ ಈ ಹಿಂದೆ ಬಂದಿರಲಿಲ್ಲ. ಏಕದಿನದಲ್ಲಿ ಅತಿ ವೇಗದ 8,9,10,11,12,13 ಸಾವಿರ ರನ್ ಗಳಿಕೆಯಲ್ಲಿ ಸಚಿನ್ ರನ್ನು ಮೀರಿಸಿದ್ದರೂ ಅದು ಗಣನೀಯ ಎನಿಸಿರಲಿಲ್ಲ. ಆದರೆ ಶತಕಗಳ ಪೈಪೋಟಿಯಲ್ಲಿ ಸಚಿನ್ ರನ್ನು ಮೀರಿಸಿದ್ದು ಸಚಿನ್ ರೊಂದಿಗೆ ಹೋಲಿಕೆ ಆರಂಭಿಸುವಂತೆ ಮಾಡಿಬಿಟ್ಟಿದೆ. ಕ್ರಿಕೆಟ್ ನ ಎಲ್ಲ ಮಾದರಿಯೂ ಸೇರಿಸಿ ಸಚಿನ್ ರಂತೆ ಶತಕಗಳ ಶತಕ ಬಾರಿಸಲು ಕೋಹ್ಲಿಗೆ ಇನ್ನೂ ಸಾಕಷ್ಟು ವರ್ಷಗಳು ಬೇಕಾಗಿದ್ದರೂ, ಹೋಲಿಕೆ ಇಲ್ಲಿಂದ ಸಿರಿಯಸ್ ಆಗಿ ಆರಂಭವಾಗಿ ಬಿಡುತ್ತದೆ. ಅದು ಕೋಹ್ಲಿ ಮೇಲೆ ಗಮನಾರ್ಹ ಒತ್ತಡ ತರುವುದು‌ ನಿಶ್ಚಿತ. ಇಷ್ಟು ದಿನ ಅಭಿಮಾನಿಗಳಿಂದ ಮಾತ್ರ ಕಿಂಗ್ ಎಂದು ಕರೆಸಿಕೊಳ್ಳುತ್ತಿದ್ದ ಕೋಹ್ಲಿ, ಇನ್ನು ಮುಂದೆ ಕ್ರಿಕೆಟ್ ಪಂಡಿತರ ಬಾಯಲ್ಲೂ ಕಿಂಗ್ ಎಂದು ಕರೆಸಿಕೊಳ್ಳಲಾರಂಭಿಸುತ್ತಾರೆ. ಇದೇ ಕಾರಣಕ್ಕೆ ಕೋಹ್ಲಿ ಈ ಶತಕವನ್ನು ಸಂಭ್ರಮಿಸಲಿಲ್ಲ. ಮ್ಯಾಚ್ ಮುಗಿದ ಮೇಲೆ ಎಬಿ ಡಿವಿಲಿಯರ್ಸ್ ಮುಖ ನೋಡಿದಾಗ ಕೊಟ್ಟ 2 ಸೆಕೆಂಡ್ ಗಳ ಸ್ಮೈಲ್ ಬಿಟ್ಟರೆ ಕೊಹ್ಲಿ ಮುಖದಲ್ಲಿ ನಗುವೇ ಕಾಣಲಿಲ್ಲ.

ಆ ಕ್ಷಣದಲ್ಲಿ ತಾನು ಸಚಿನ್ ರ ದಾಖಲೆ ಮುರಿಯುತ್ತಾ ಮುಟ್ಟಬಾರದ ಏನನ್ನೋ ಮುಟ್ಟುತ್ತಾ ಮಾಡಬಾರದ ಏನೋ ತಪ್ಪು ಮಾಡುತ್ತಿದ್ದೀನಾ ಎನ್ನುವಂಥಾ ಭಾವನೆ ಅವರದಾಗಿತ್ತು. ಪವಿತ್ರವಾದ ದೇವರ ವಿಗ್ರಹವನ್ನು ಮುಟ್ಟಿ ಪೂಜೆ ಮಾಡಲು ಕೊಟ್ಟಾಗ ನಮ್ಮ‌ ಮನಸ್ಸಿನಲ್ಲಿ ಯಾವ ಭಾವನೆಗಳಿರಬಹುದೋ ಅದೇ ಭಾವನೆಗಳು ಕೋಹ್ಲಿ ಮನಸ್ಸಿನಲ್ಲಿತ್ತು ಅಂತ ನಾನು ಭಾವಿಸುತ್ತೇನೆ. ನಾನು ಆದರ್ಶವೆಂದು ಭಾವಿಸಿದ್ದವರ, ಅತಿಯಾಗಿ ಗೌರವಿಸುವವರ, ಅವರ ಮುಂದೆ ಎಂದೂ ದೊಡ್ಡವನಾಗಲು ಸಾಧ್ಯವೇ ಇಲ್ಲ. ಅಂತವರ ದಾಖಲೆಯನ್ನೇ ನಾನು ಮುರಿಯುತ್ತಿದ್ದೀನಾ? ಎನ್ನುವ ವಿಚಾರ ಕೋಹ್ಲಿಯನ್ನು ಶಾಕ್ ಗೆ ನೂಕಿರಲಿಕ್ಕೂ ಸಾಕು!

ಪಂದ್ಯದ ನಂತರ ನಡೆದ ಮಾತುಕತೆಯಲ್ಲಿ ಈ ಮಾತನ್ನು ಸ್ವತಃ ಕೋಹ್ಲಿಯೇ ಸ್ಪಷ್ಟಪಡಿಸಿದರು. "ಕ್ರಿಕೆಟ್ ದೇವರಾದ ಸಚಿನ್ ದಾಖಲೆ ಸರಿಗಟ್ಟಿದ್ದು ನನ್ನನ್ನು ಕ್ಷಣ ಕಾಲ ತಬ್ಬಿಬ್ಬಾಗಿಸಿದೆ. ಅರಗಿಸಿಕೊಳ್ಳಲು ಸ್ವಲ್ಪ ಸಮಯ ಬೇಕು." ಎಂದು ಹೇಳಿದ್ದಲ್ಲದೇ, "ತಾನು ಸಚಿನ್ ರ ಮೇಲಿಟ್ಟಿರುವ ಗೌರವ ಅವರ್ಣನೀಯ!" ಎಂಬುದನ್ನು ಪುನರುಚ್ಚರಿಸಿದರು. ಹೀಗಾಗಿ ಕೋಹ್ಲಿ ಶತಕ ಗಳಿಸಿದಾಗ ಮೈದಾನದಲ್ಲಿ ನಡೆದುಕೊಂಡ ರೀತಿ, ಕೋಹ್ಲಿಯ ಮೇಲಿನ ಗೌರವವನ್ನೇ ಜಾಸ್ತಿ ಮಾಡಿತು. ಕ್ರಿಕೆಟ್ ಗಾಡ್ ಸಚಿನ್ ರ ಅಭಿಮಾನಿಗಳು ಕೋಹ್ಲಿಯ ಮೇಲೆ ಬೇಸರ ಮಾಡಿಕೊಳ್ಳುವ ಯಾವುದೇ ಅವಕಾಶವನ್ನೂ ನೀಡದೇ ಅವರನ್ನೆಲ್ಲಾ ತನ್ನವರನ್ನಾಗಿಸಿಕೊಂಡುಬಿಟ್ಟರು. ಒಂದು ವೇಳೆ ಇವರ ಸೆಲೆಬ್ರೇಶನ್ ಅತಿಯಾಗಿದ್ದಿದ್ದರೆ ಸಚಿನ್ ರ ಅಭಿಮಾನಿಗಳ ಮನಸ್ಸಿನಲ್ಲಿ ಕೋಹ್ಲಿ ಕುರಿತಾದ ಭಾವನೆ ಹೇಗಿರುತ್ತಿತ್ತೋ ಊಹಿಸಿ ನೋಡಿ! ಅದಕ್ಕೆ ಪೂರಕವಾಗಿ ಹತ್ತು ವರ್ಷಗಳ ಹಿಂದೆಯೇ ಸಚಿನ್ ಸಹಾ "ಎಲ್ಲಿಯವರೆಗೆ ಭಾರತೀಯನೊಬ್ಬ ನನ್ನ ದಾಖಲೆಯನ್ನು ಮುರಿಯುತ್ತಾನೋ ಅಲ್ಲಿಯವರೆಗೂ ನನಗ್ಯಾವ ಬೇಸರವೂ ಇಲ್ಲ." ಎನ್ನುವಂಥಾ ದೊಡ್ಡ ಮಾತನ್ನಾಡಿದ್ದಾಗ ಅದಕ್ಕೆ ಸರಿಹೊಂದುವಂತೆ ಕೋಹ್ಲಿ ಸಂಯಮ ತೋರಿದ್ದು ಕ್ರೀಡೆಯ ಘನತೆಗೇ ಭೂಷಣವೆನಿಸಿತು. ಹಿರಿಯರನ್ನು ಗೌರವಿಸುವ ಭಾರತೀಯ ಸಂಸ್ಕೃತಿಗೆ ಬಹಳ ಹತ್ತಿರವೆನಿಸಿತು.

ಇತ್ತೀಚಿನ ದಿನಗಳಲ್ಲಿ ಕೋಹ್ಲಿ ಬಹಳ‌ ಮಾಗಿದಂತೆ ಕಂಡುಬರುತ್ತಾರೆ. ಪಾಕ್ ಆಟಗಾರರ ಜೊತೆ ಟಿ ಶರ್ಟ್‌ ಕೊಟ್ಟು ನಡೆದುಕೊಂಡ ರೀತಿಯಾಗಿರಬಹುದು. ತಂಡದ ಕಿರಿಯ ಆಟಗಾರರೊಂದಿಗೆ ನಡೆದುಕೊಳ್ಳುವ ರೀತಿ ಇರಬಹುದು. ಕಿರಿಯರನ್ನು ಬೆಳೆಸುವ‌ ಮನೋಭಾವ, ತಂಡದಿಂದ ಕೈಬಿಟ್ಟಾಗ ನೀರಿನ ಹುಡುಗನಾಗಿ ಮಾಡಿದ ತಮಾಷಿಯಿರಬಹುದು, ಎಲ್ಲದ್ದರಲ್ಲೂ ಮಾಗಿ ಪಕ್ವವಾದ ಛಾಯೆ ಕಾಣುತ್ತಿದೆ. ಹೌದು ಕೋಹ್ಲಿ ಪ್ರಬುದ್ಧತೆಯಲ್ಲಿ ಹಿರಿಯರಾಗುತ್ತಿದ್ದಾರೆ. ಆಟದಲ್ಲಿ ಮಾತ್ರವಲ್ಲದೇ ವ್ಯಕ್ತಿತ್ವದಲ್ಲೂ ಸಚಿನ್ ರನ್ನು ಮೀರಿಸಲು ತಯಾರಾಗುತ್ತಿದ್ದಾರೆ. ಆ ಸಮಯ ಬರಲಿ. ಸಚಿನ್ ರ ಶತಕಗಳ ಶತಕದ ದಾಖಲೆಯನ್ನು ಮುರಿಯುವ ಹೊತ್ತಿಗೆ ನಿಜ ಅರ್ಥದಲ್ಲಿ ಕ್ರಿಕೇಟ್ ದೇವರ ಸಮ ನಿಲ್ಲಲಿ. ತಾನೂ ದೇವರೇ ಆಗಲಿ. ಅನ್ನುವ ಶುಭಹಾರೈಕೆಯೊಂದಿಗೆ..

ಶಹಬ್ಬಾಸ್ ಕೋಹ್ಲಿ!

ಅಭಿನಂದನೆಗಳು!

✍🏻 *ನಿತ್ಯಾನಂದ ವಿವೇಕವಂಶಿ*

ಸ್ವರ್ಗ ಸುಖ ಬಯಸಿದ ಹೆಣ್ಣುಮಕ್ಕಳಿಗೆ ಇಲ್ಲಿ ಸಿಗುವುದು ರೌರವ ನರಕ! - ಇದು ಕೇರಳದ ಸ್ಟೋರಿ!ಸಿನಿಮಾ ನೋಡಿ ಮುಗಿದ ಮೇಲೂ ಸೀಟಿನಿಂದ ಮೇಲೇಳಲು ಮನಸ್...
01/05/2023

ಸ್ವರ್ಗ ಸುಖ ಬಯಸಿದ ಹೆಣ್ಣುಮಕ್ಕಳಿಗೆ ಇಲ್ಲಿ ಸಿಗುವುದು ರೌರವ ನರಕ! - ಇದು ಕೇರಳದ ಸ್ಟೋರಿ!

ಸಿನಿಮಾ ನೋಡಿ ಮುಗಿದ ಮೇಲೂ ಸೀಟಿನಿಂದ ಮೇಲೇಳಲು ಮನಸ್ಸಾಗಲಿಲ್ಲ! ಹತ್ತು ಹನ್ನೆರಡು ನಿಮಿಷ ಸುಮ್ಮನೆ ನನ್ನದೇ ಉಸಿರಾಟದ ಶಬ್ದವನ್ನು ಕೇಳಿಸಿಕೊಳ್ಳುತ್ತಾ ಮೌನವಾಗಿಬಿಟ್ಟಿದ್ದೆ. ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರನ್ನು ಬಲವಂತವಾಗಿ ತಡೆದಿದ್ದಕ್ಕೆ ಗಂಟಲು ಉಬ್ಬಿತ್ತು. ನನ್ನದೇ ಹೃದಯ ಬಡಿತ ಕೇಳಿಸುತ್ತಿತ್ತು. ಕೈಗಳಲ್ಲಿ ಸಣ್ಣಗಿನ ನಡುಕ. ಇಡೀ ದೇಹ ಬೆಚ್ಚಗಾದ ಅನುಭವ. ದಿಗ್ಮೂಢನಾಗಿ ಕುಳಿತುಬಿಟ್ಟಿದ್ದೆ. ಇಡೀ ಥಿಯೇಟರ್ ಖಾಲಿಯಾದ ಮೇಲೆಯೇ, ನಿರ್ದೇಶಕರೊಡನೆ ಮಾತನಾಡುತ್ತಿದ್ದ ಹದಿನೈದು ಇಪ್ಪತ್ತು ಜನರೊಡನೆ ಹೊರಬಂದಿದ್ದೆ. ನಿರ್ದೇಶಕರ ಕೈ ಹಿಡಿದು "ಅದ್ಭುತವನ್ನು ಮಾಡಿದ್ದೀರಿ. ಸತ್ಯವನ್ನು ಬೆತ್ತಲೆಯಾಗಿ ತೋರಿಸಿ ಅಕ್ಷರಶಃ ಅಳುವಂತೆ ಮಾಡಿದ್ದೀರಿ." ಎಂದೆ. ಅವರದನ್ನು ಶ್ಲಾಘನೆ ಎಂದು ತೆಗೆದುಕೊಂಡರೋ ಅಥವಾ ತಮ್ಮದೇ ಹೃದಯದ ಭಾವನೆಯ ಪ್ರತಿರೂಪವನ್ನು ನನ್ನಲ್ಲೂ ಕಂಡರೋ ಗೊತ್ತಿಲ್ಲ. ಆದರೆ ನನ್ನಷ್ಟೇ ಅವರೂ ಭಾವುಕರಾಗಿದ್ದರೆಂಬುದು ಬೆಚ್ಚಗಾಗಿದ್ದ ಅವರ ಕೈನ ಸ್ಪರ್ಶದಿಂದ ತಿಳಿಯುತ್ತಿತ್ತು.

ಹೌದು! ಇದು ಕೇವಲ ಒಂದು ಸಿನಿಮಾವಲ್ಲ. ಕೇರಳದ 30,000 ಕ್ಕೂ ಹೆಚ್ಚು ನಿಷ್ಪಾಪಿ ಹೆಣ್ಣುಮಕ್ಕಳ, ಅವರಷ್ಟೇ ಸಂಖ್ಯೆಯ ಕುಟುಂಬಗಳ ದುರದೃಷ್ಟದ ಸತ್ಯ ಕಥೆ. ಇಡೀ ಕೇರಳವನ್ನು ಇಸ್ಲಾಮಿನ ತೆಕ್ಕೆಗೆ ತರಲು ಬಳಸುತ್ತಿರುವ ಮೋಸ್ಟ್ ಡೇಂಜರಸ್ ಅಂಡ್ ಸೈಲೆಂಟ್ ವೆಪನ್ "ಲವ್ ಜಿಹಾದ್" ನ ಆಳ ಅಗಲಗಳನ್ನು ಶೋಧಿಸಿ ಇಂಚಿಂಚನ್ನೂ ಜನರ ಮುಂದೆ ತೆರೆದಿಟ್ಟಿರುವ ಮಹಾ ಸತ್ಯಶೋಧನೆ. ಜಿಹಾದಿಗಳ ವಂಚನೆಗೆ ಬಲಿಯಾದ ನತದೃಷ್ಟ ಹಿಂದೂ ಮತ್ತು ಕ್ರಿಶ್ಚಿಯನ್ನರ ಕಣ್ಣೀರಿನ ಕಥೆ. ಐದು ವರ್ಷಗಳ ಹಿಂದೆ ಲವ್ ಜಿಹಾದ್ ನ ಕೇಸೊಂದಕ್ಕೆ ಕೈ ಹಾಕಿ ಮೂರು ಬಾರಿ ಕೇರಳಕ್ಕೆ ಹೋಗಿ ಬಂದಿದ್ದ ನನಗೆ, ಸಿನಿಮಾ ನೋಡುವಾಗ, ನಾನು ನೋಡಿದ್ದೇ, ಅನುಭವಿಸಿದ್ದೇ, ತೆರೆಯ ಮೇಲೆ ಪುನರಾವರ್ತನೆಯಾಗಿ, ಭೂತ ಮತ್ತು ವರ್ತಮಾನಗಳೆರಡರ ಸಂಯೋಗವಾಗಿಬಿಟ್ಟಿತೇನೋ ಎನಿಸುತ್ತಿತ್ತು. ಸಿನಿಮಾ ಮುಗಿಯುವ ವೇಳೆಗೆ ನಮ್ಮದೇ ದೇಶದ ಮುಗ್ಧ ಹೆಣ್ಣುಮಕ್ಕಳನ್ನು ರಕ್ಷಿಸಲಾಗದ ನಮ್ಮ ಸಮಾಜದ ಹೇಡಿತನದ ಬಗ್ಗೆ, ಅಸಹಾಯಕತೆಯ ಬಗ್ಗೆ ಹಿಂದಿಗಿಂತಲೂ ಸ್ವಲ್ಪ ಹೆಚ್ಚೇ ಅಸಹ್ಯವಾಗಿತ್ತು.

ಒಂದು ಸಮಾಜ ಸಂಘಟಿತವಲ್ಲದಿದ್ದರೆ, ಒಗ್ಗಟ್ಟು, ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸಕಾಲದಲ್ಲಿ ಪ್ರದರ್ಶಿಸದಿದ್ದರೆ, ಹೇಗೆ ನಲುಗಿಹೋಗುತ್ತದೆ ಎಂಬುದನ್ನು ಈ ಚಿತ್ರ ನೋಡಿ ಅರಿಯಬೇಕು. ಸ್ವರ್ಗ ಬಯಸಿದ ಮುಗ್ಧ ಹೆಣ್ಣುಮಕ್ಕಳನ್ನು ರೌರವ ನರಕಕ್ಕೆ ಸೇರಿಸುವ ಈ ಪ್ರೇಮಾಸ್ತ್ರವನ್ನು, ಹಿಂದುಗಳ ಮೇಲೆ ಮುಸಲ್ಮಾನರು ಪ್ರಯೋಗಿಸಿದ ಇತಿಹಾಸಕ್ಕೆ ಸಾವಿರ ವರ್ಷಗಳು ಕಳೆದರೂ, ಹಿಂದು ಜನಾಂಗದಲ್ಲಿ ಅದರ ಬಗ್ಗೆ ಅರಿವಿಲ್ಲದಿರುವುದು, ಎಚ್ವರವಿಲ್ಲದಿರುವುದು ನಿಜಕ್ಕೂ ಆತ್ಮಹತ್ಯಾಕಾರಕವಲ್ಲದೇ ಮತ್ತೇನು? ಇಂತಹಾ ಆತ್ಮಘಾತುಕ‌ ಜಡ ನಿದ್ರೆಯ ಮಧ್ಯೆ, ನಿರ್ವೀರ್ಯತೆಯ ಮಧ್ಯೆ, ಈ ಸಿನಿಮಾ ಬಂದಿರುವುದು ನಿಜಕ್ಕೂ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಇಂಥಾ ಸಿನಿಮಾದ ಪ್ರೀಮಿಯರ್ ಶೋ ಅನ್ನು ಮಿತ್ರರ ಅಪೇಕ್ಷೆಯ ಮೇರೆಗೆ ನೆನ್ನೆಯಷ್ಟೇ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ನಾನು ನೋಡಿದ್ದನ್ನು ನಿಮಗೆ ಹೇಳಬೇಕೆನ್ನುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ. ಸಿನಿಮಾ ಬಿಡುಗಡೆಯಾಗೋದು ಮೇ 5 ಆದ್ದರಿಂದ ಟ್ರೈಲರ್ ನಲ್ಲಿ ಹೇಳುವಷ್ಟು ಕಥೆಯನ್ನಷ್ಟೇ ಹೇಳಬಲ್ಲೆ. ಉಳಿದದ್ದನ್ನು ಸಿನಿಮಾ ಮಂದಿರದಲ್ಲೇ ನೋಡುವಿರಂತೆ‌. ಬನ್ನಿ ಈಗ ಕೇರಳದ ಕಥೆ ಕೇಳುವಿರಂತೆ!

ದೇವರ ಸ್ವಂತ ನಾಡು ಎಂದು ಹೆಸರುವಾಸಿಯಾದ ಕೇರಳದಲ್ಲಿ ವಾಸಿಸುವ ಮೂರು ನಾಲ್ಕು ಹೆಣ್ಣು ಮಕ್ಕಳ ಕಥೆ ಇದು. ಇಬ್ಬರು ಹಿಂದು, ಒಬ್ಬಳು ಮುಸ್ಲಿಂ, ಇನ್ನೊಬ್ಬಳು ಕ್ರಿಶ್ಚಿಯನ್. ನಾಲ್ವರೂ ನರ್ಸಿಂಗ್ ಕಾಲೇಜೊಂದಕ್ಕೆ ಸೇರಿಕೊಂಡು ಹಾಸ್ಟೆಲ್ ನ ರೂಮ್ ಮೆಟ್ ಗಳಾಗಿ ವಾಸಿಸಲು ಆರಂಭಿಸುತ್ತಾರೆ. ಮುಸ್ಲಿಂ ಹುಡುಗಿ ಕೇವಲ ಓದಲು ಮಾತ್ರವಲ್ಲದೇ ಇಡೀ ಪ್ರಪಂಚವನ್ನು ಇಸ್ಲಾಂ ಮಯ ಮಾಡುವ ಅಂತರಾಷ್ಟ್ರೀಯ ಷಢ್ಯಂತ್ರದ ಭಾಗವಾಗಿ ಬಂದಿರುತ್ತಾಳೆ‌. ಸ್ಥಳೀಯ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಪ್ರಮುಖರ ಜೊತೆ ಸಂಪರ್ಕ ಹೊಂದಿರುವ ಈಕೆ ತನ್ನ ಮೂರು ಜನ ಸಹಪಾಠಿಗಳನ್ನು ಪ್ರತಿ ದಿನ ಬ್ರೇನ್ ವಾಷ್ ಮಾಡುತ್ತಾ ಮತಾಂತರ ಮಾಡಲು ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಆಕೆ ಹಿಡಿಯುವ ಮಾರ್ಗಗಳು, ಬಳಸುವ ಉಪಾಯಗಳು, ಮೋಸದ ತಂತ್ರಗಳು, ಪ್ರೇಮದ ನಾಟಕಗಳು, ನಿರ್ದಯ ನಡೆಗಳು ಭಯಾನಕವಾಗಿರುತ್ತವೆ. ಇದೆಲ್ಲದರ ಬಲೆಗೆ ಬೀಳುವ ಆ ಮೂವರು ಹೆಣ್ಣು ಮಕ್ಕಳ ಮುಂದಿನ ಕಥೆ ಏನಾಗುತ್ತದೆ ಎಂಬುದೇ ಟ್ರೈಲರ್ ನಲ್ಲಿ ಹೇಳಿರುವ ಸಿನಿಮಾದ ಕಥೆ.

ಲವ್ ಜಿಹಾದ್ ಅನ್ನು ಬಲ್ಲವರಿಗೆಲ್ಲಾ ಇದು ಗೊತ್ತಿರುವ ಕಥೆಯೇ. ಆದರೆ ಈ ಕಥೆಗೆ ನಮಗೆ ಅಷ್ಟಾಗಿ ಗೊತ್ತಿರದ ಐಎಸ್ ಐ ಎಸ್ ನಂಟು ಬೆಳೆದ ನಂತರ ಆಗುವ ತಿರುವು ರಣಭೀಕರ‌ ಮತ್ತು ಭಯಾನಕ. ಲವ್ ಜಿಹಾದ್ ಬಗ್ಗೆ ಗೊತ್ತೇ ಇರದ ಜನರಿಗಂತೂ ಇದು ಭಯಾನಕ ಶಾಕ್ ಕೊಡುವುದರಲ್ಲಿ ಅನುಮಾನವಿಲ್ಲ. ಧರ್ಮದ ಬಗ್ಗೆ ಅರಿವಿಲ್ಲದ ಮತ್ತು ಬೇರೆ ಧರ್ಮದವರ ಷಢ್ಯಂತ್ರಗಳ ಬಗ್ಗೆ ಗೊತ್ತಿಲ್ಲದ ಅಮಾಯಕ ಹುಡುಗಿಯರನ್ನು ಭಯೋತ್ಪಾದಕ ಸಂಘಟನೆಯ ಸೂಸೈಡ್ ಬಾಂಬರ್ ಗಳನ್ನಾಗಿ ತಯಾರು ಮಾಡುವ ನಿರ್ದಯ ಪ್ರಕ್ರಿಯೆ ಸ್ವತಂತ್ರ ಭಾರತದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದು ಭಾರತೀಯರಾದ ನಾವೆಲ್ಲಾ ತಲೆ ತಗ್ಗಿಸಬೇಕಾದ ಸಂಗತಿ. ಸತ್ಯ ಏನೆಂದು ಗೊತ್ತಿದ್ದರೂ ಅದನ್ನು ಸಾಬೀತು ಮಾಡಲಾಗದ ಅಸಹಾಯಕ ಸ್ಥಿತಿಗೆ ಸಮಾಜ ಬಂದು ನಿಂತಿರುವುದು ಇನ್ನೊಂದು ಘೋರ ವ್ಯಥೆ. ಅದಕ್ಕಾಗಿ ನಮ್ಮವರ ಷಂಡತನವನ್ನು ಹಳಿಯಬೇಕೋ ಅಥವಾ ಶತ್ರುಗಳ ಬುದ್ಧಿವಂತಿಕೆಯನ್ನು ಶ್ಲಾಘಿಸಬೇಕೋ ಅರ್ಥವಾಗುವುದಿಲ್ಲ. ಕಡೇ ಪಕ್ಷ ಈ ಸಿನಿಮಾ ಬಿಡುಗಡೆಯಾದ ನಂತರವಾದರೂ ಜನರಿಗೆ ಸಂಘಟಿತರಾಗಬೇಕೆನ್ನುವ ಮನಸ್ಥಿತಿ ನಿರ್ಮಾಣವಾದರೆ ಸಂತೋಷ.

ಕೇರಳದಲ್ಲಿ ವ್ಯಾಪಕವಾಗಿ ನಡೆದಿರುವ ಲವ್ ಜಿಹಾದ್ ದಂಧೆ ನಡೆಯುವ ಪ್ರಕ್ರಿಯೆ ಹೀಗಿರುತ್ತದೆ. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದೆ ಜಗತ್ತನ್ನೇ ಮುಸ್ಲಿಂ ಮಯ ಮಾಡುವ ಮತಾಂಧತೆಯನ್ನು ತುಂಬಿಕೊಂಡ ಕೆಲವು ಮುಸ್ಲಿಂ ಜಿಹಾದಿ ನಾಯಕರುಗಳು, ಧೂರ್ತ ಬುದ್ಧಿಯ ಆದರೆ ಸುಂದರವಾಗಿರುವ ಸ್ಥಳೀಯ ಮುಸ್ಲಿಂ ಯುವಕರನ್ನು ದುಡ್ಡು ಕೊಟ್ಟು ಕೊಂಡುಕೊಂಡು, ಅವರಿಗೆ ಮುಗ್ಧ ಹಿಂದು ಮತ್ತು ಕ್ರಿಶ್ಚಿಯನ್ ಹೆಣ್ಣು ಮಕ್ಕಳ ಮೇಲೆ ಪ್ರೇಮದ ಹೆಸರಲ್ಲಿ ಕಾಮದ ಅಸ್ತ್ರ ಎಸೆದು, ಅವರನ್ನು ಪಾಪ ಪ್ರಜ್ಞೆಗೆ ನೂಕಿ. ಮಿದುಳಿನ ಶಕ್ತಿ ಕುಗ್ಗಿಸಿ ದುರ್ಬಲರನ್ನಾಗಿ ಮಾಡುವ ಮಾತ್ರೆಗಳನ್ನು ಕೊಟ್ಟು, ಬ್ರೇನ್ ವಾಶ್ ಮಾಡಿ, ಒಪ್ಪಿಗೆಯಿಂದ, ಬಲವಂತದಿಂದ ಅಥವಾ ಮತ್ತು ಬರುವ ಔಷಧ ನೀಡಿ ಮೋಸದಿಂದ ರೇಪ್ ಮಾಡಿ (ಕೆಲವೊಮ್ಮೆ ಸಾಮೂಹಿಕ ಅತ್ಯಾಚಾರ ಮಾಡಿ), ಗರ್ಭಿಣಿಯರನ್ನಾಗಿಸಿ, ಮದುವೆಯಾಗಬೇಕೆಂದರೆ ಮತಾಂತರವಾಗಲೇಬೇಕೆಂಬ ಅನಿವಾರ್ಯತೆ ಸೃಷ್ಟಿಸಿ, ನಂತರ ಅವರನ್ನು ಮದುವೆಯಾಗಿ ಹನಿಮೂನ್ ಅಥವಾ ಕೆಲಸದ ನೆಪದಲ್ಲಿ ಪರದೇಶಕ್ಕೆ ಕರೆದೊಯ್ಯುವಂಥಾ ಕೆಲಸ ಕೊಡುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಲಾಗುತ್ತದೆ. ಇವರ ಬಲೆಗೆ ಬಿದ್ದ ಹೆಣ್ಣುಮಕ್ಕಳನ್ನು ಅಲ್ಲಿಂದ ಸಿರಿಯಾದ ಐಸ್ ಎಸ್ ಐ ಎಸ್ ಗೆ ಮಾರಾಟ ಮಾಡಿ, ಅಲ್ಲಿ ಅವರನ್ನು ಸೆಕ್ಸ್ ಸ್ಲೇವ್ ಗಳನ್ನಾಗಿಸಿ, ಅವರ ದೇಹ ಇನ್ನು ಉಪಯೋಗಕ್ಕೆ ಬಾರದಾದಾಗ ಹ್ಯೂಮನ್ ಸೂಸೈಡ್ ಬಾಂಬರ್ ಗಳಂತೆ ಅವರನ್ನು ಬಳಸಿ ಅವರ ಕಥೆಯನ್ನು ಮುಗಿಸಿಬಿಡಲಾಗುತ್ತದೆ. ಈ ಕಷ್ಟಕರವಾದ ಮತ್ತು ಬಹುದೀರ್ಘವಾದ ಪ್ರಕ್ರಿಯೆಯನ್ನು ಅದೆಷ್ಟು ವ್ಯವಸ್ಥಿತವಾಗಿ ಮತ್ತು ಅಷ್ಟೇ ನಿಶ್ಯಬ್ದವಾಗಿ ಮಾಡುತ್ತಾರೆಂಬುದೇ ಹಾಗೆ ಮಾಡುವವರ ಮನದೊಳಗಿನ ತಣ್ಣಗಿನ ಕ್ರೌರ್ಯವನ್ನು ಸಾಬೀತುಪಡಿಸುತ್ತದೆ. ಮೇಲೆ ಮೇಲೆ ತೋರುವ ಮುಗ್ಧತೆಯ, ಬಡತನದ ಮುಖಗಳ ಹಿಂದೆ ಶುದ್ಧ ಕಪಟದ ಮೋಸದ ಸೇಡಿನ ಮತಾಂಥತೆಯ ಕಾಳ ಸರ್ಪ ಅವಿತಿರುವುದು ಮುಗ್ಧರ ಅನುಭವಕ್ಕೆ ನಿಲುಕದ ಸಂಗತಿಯಾಗಿದೆ. ಇಡೀ ಪ್ರಕ್ರಿಯೆಯನ್ನು ಸಾಬೀತುಪಡಿಸಲು ಸಣ್ಣದೊಂದು‌ ಸಾಕ್ಷ್ಯ ಸಿಗದಂತೆ ಮಾಡುವ ಅವರ ಚಾಣಾಕ್ಷತನ ಶಕುನಿಯನ್ನು ನಾಚಿಸುತ್ತದೆ.

ಈ ಸಿನಿಮಾದಲ್ಲಿ ಮುಖ್ಯ ಪಾತ್ರವಾಗಿರುವ ಶಾಲಿನಿ ಉನ್ನಿಕೃಷ್ಣನ್, ದೀಪಾಂಜಲಿ ಥರದ ಅದೆಷ್ಟೋ ಹೆಣ್ಣುಮಕ್ಕಳು ಈ ಜಾಲಕ್ಕೆ ಸಿಲುಕಿ ಬಲಿಪಶುಗಳಾಗಿದ್ದಾರೆ. ಅಧಿಕೃತವಾಗಿ 30,000 ಕ್ಕೂ ಹೆಚ್ಚು ಹೆಣ್ಣುಮಕ್ಕಳು. ಅನಧಿಕೃತವಾಗಿ 50,000 ಕ್ಕೂ ಹೆಚ್ಚು ಹಿಂದೂ ಮತ್ತು ಕ್ರಿಶ್ಚಿಯನ್ ಹೆಣ್ಣುಮಕ್ಕಳು ಈ ಕೂಪಕ್ಕೆ ಬಿದ್ದು ಜೀವ ಮತ್ತು ಭವಿಷ್ಯ ಎರಡನ್ನೂ ಹಾಳು ಮಾಡಿಕೊಂಡಿದ್ದಾರೆ. ಜೊತೆಗೆ ದೇಶದ ರಾಷ್ಟ್ರೀಯ ಸುರಕ್ಷತೆಯನ್ನು ಹಾಳು ಮಾಡಿದ್ದಾರೆ‌. ಇಷ್ಟಾದರೂ ಎಲ್ಲೂ ಕೇಸುಗಳು ದಾಖಲಾಗುವುದಿಲ್ಲ, ಸಾಕ್ಷಿ ಸಿಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದಿಲ್ಲ. ಅದರ ಬದಲಾಗಿ ತೊಂದರೆಗೊಳಗಾದವರೇ ಮತ್ತಷ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ದುಷ್ಟರು ತಮ್ಮ ಕೆಲಸವನ್ನು‌ ಇನ್ನೂ ಪ್ರಭಾವಶಾಲಿಯಾಗಿ ಮುಂದುವರೆಸುತ್ತಾರೆ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಸಾರ್ವಭೌಮ ಸ್ವತಂತ್ರ ರಾಷ್ಟ್ರದ ಭಾಗವೊಂದರಲ್ಲಿ‌ ಇಂಥದೊಂದು ದಂಧೆ ನಡೆಯುತ್ತಿರುವುದನ್ನು ನಾವೆಲ್ಲರೂ ಸಹಿಸಿಕೊಂಡಿದ್ದೇವೆಂಬುದೇ ನಾಚಿಕೆಗೇಡಿನ ಸಂಗತಿಯಾಗಿದೆ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಈ ದೇಶಕ್ಕೆ ಒಡ್ಡಿರುವ ಭೀಕರ ಸಮಸ್ಯೆಗಳಲ್ಲಿ ಇದೂ ಒಂದು.

ಇಂಥಾ ಕಥೆಯನ್ನು ಹೇಳಬೇಕಾದರೂ ಇಡೀ ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ. ಅದಕ್ಕೆ ಬದಲಾಗಿ ವೇಗವಾಗಿ ಸಾಗುವ ಈ ಸಿನಿಮಾ ಇಡೀ ಕಥೆ ಮತ್ತು ಅದರೊಳಗಿನ ವಿಷಯವನ್ನು ಪ್ರೇಕ್ಷಕನಿಗೆ ಸಂಪೂರ್ಣವಾಗಿ‌ ಮನವರಿಕೆ ಮಾಡಿಕೊಡುತ್ತದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಭೀಕರ ದೌರ್ಜನ್ಯ ಹಾಗೂ ಅತ್ಯಾಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳ ದೃಷ್ಟಿಯಿಂದ ಸಿನಿಮಾವನ್ನು ನೋಡಲು ಸಾಧ್ಯವಾದರೆ ಸಿನಿಮಾ ಮುಗಿಯುವುದರೊಳಗೆ ನೀವೂ ಆ ಪಾತ್ರಗಳಲ್ಲಿ ಒಂದಾಗಿಬಿಟ್ಟಿರುತ್ತೀರಿ. ಯೌವನದ ಉತ್ಸಾಹದಲ್ಲಿ, ಹುಡುಗಾಟಿಕೆಯ ವಯಸ್ಸಿನಲ್ಲಿ ಮಾಡುವ ಸಣ್ಣದೊಂದು ತಪ್ಪು ಇಡೀ ಜೀವನವನ್ನು ಹೇಗೆ ಆಪೋಶನ ತೆಗೆದುಕೊಳ್ಳಬಹುದು ಎಂಬುದರ ಸ್ಪಷ್ಟ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಬೆಳೆಸಬೇಕಾದರೆ ಇಡುವ ಸಣ್ಣ ಸಣ್ಣ ತಪ್ಪು ಹೆಜ್ಜೆಗಳು ಹೇಗೆ ಅವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತದೆಂಬುದರ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಲವ್ ಜಿಹಾದ್ ಯಶಸ್ವಿಯಾಗಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಪಾದರಕ್ಷೆಗೆ ಶಾಲು ಸುತ್ತಿ ಹೊಡೆದಿರುವ ನಿರ್ದೇಶಕರು ಇಡೀ ಸಿನಿಮಾದಲ್ಲಿ ಹೇಳಬೇಕೆಂದಿರುವ ಎಲ್ಲ‌ ವಿಷಯಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ‌. ಕಥೆಗಾರ್ತಿ ಪ್ರತಿಯೊಂದು ಸೂಕ್ಷ್ಮ ಸಂಗತಿಗಳನ್ನು ಬಿಟ್ಟುಹೋಗದಂತೆ ಅಚ್ಚುಕಟ್ಟಾಗಿ ಪೋಣಿಸಿದ್ದಾರೆ. ಕೇರಳದ ಸಂತ್ರಸ್ತ ಯುವತಿಯರ ಜೊತೆ ತಿಂಗಳುಗಳಗಟ್ಟಲೆ ಉಳಿದು ಅವರ ಕಥೆಯನ್ನು ಕೇಳಿ ಸಂಶೋಧನೆ ಮಾಡಿ ಬರೆದಿರುವ ಸತ್ಯ ಕಥೆ ಇದು. ಈ ನರಕದ ಕೇಳುವಾಗ ಅವರದೆಷ್ಟು ಯಾತನೆಪಟ್ಟಿದ್ದಾರೋ ದೇವರೇ ಬಲ್ಲ‌.

ಕಾಶ್ಮೀರ ಫೈಲ್ಸ್ ನ ನಂತರ ಭಾರತದ ಜನಮಾನಸದಲ್ಲಿ ಅದ್ಭುತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೊಂದು ಮಹಾನ್ ಪ್ರಯತ್ನ. ಲವ್ ಜಿಹಾದ್ ನ ಕುರಿತಂತೆ ಸಾವಿರ ಪುಸ್ತಕ, ಹತ್ತು ಸಾವಿರ ಭಾಷಣಗಳು ಮಾಡಬಹುದಾದ ಕೆಲಸವನ್ನು‌ ಈ ಸಿನಿಮಾ ಒಂದೇ ಮಾಡಿದೆ ಎಂದರೆ ತಪ್ಪಾಗಲಾರದು. ಸಿನಿಮಾದಂತ ಪ್ರಭಾವಶಾಲಿ ಮಾದ್ಯಮಗಳು ಬಳಕೆಯಾಗಬೇಕಿರುವುದೇ ಇಂಥಾ ಉದ್ದೇಶಕ್ಕೆ. ಹೀಗಾಗಿ ಈ ಸಿನಿಮಾ ಖಂಡಿತಾ ಗೆಲ್ಲಬೇಕು. ಕೋಟ್ಯಾಂತರ ಜನರಿಂದ ವೀಕ್ಷಣೆಗೊಳಪಡಬೇಕು‌. ಸತ್ತಂತಿರುವ ಸಮಾಜ ಮೈಕೊಡವಿ ಮೇಲೇಳಬೇಕು‌. ಹಾಗಾಗಬೇಕೆಂದರೆ ಈ ಸಿನಿಮಾಕ್ಕೆ ವ್ಯಾಪಕ ಪ್ರಚಾರ ಸಿಗಬೇಕು. ವಿಶೇಷವಾಗಿ ಹೆಣ್ಣುಮಕ್ಕಳು ಈ ಸಿನಿಮಾ ನೋಡಬೇಕು. ಮೈ ಲೈಫ್ ಮೈ ರೂಲ್ಸ್ ಥರದ ಹುಡುಗಾಟಿಕೆಯ ಅಹಂಕಾರದ ಚೈಲ್ಡ್ ಫಿಲಾಸಫಿಗಳು ಮಾರಣಾಂತಿಕವಾಗುವ ಬಗೆಯನ್ನು ಅರಿಯಬೇಕು. ಲವ್ ಜಿಹಾದ್ ನಡೆಸುವ ವಿಷಕ್ರಿಮಿಗಳನ್ನು ತಾವೇ ಹೊಸಕಿಹಾಕುವಂತಾಗಬೇಕು. ಸತ್ಯವಾಗಿ ಹೇಳಬೇಕೆಂದರೆ ಆಸ್ಕರ್ ಪ್ರಶಸ್ತಿ ತೆಗೆದುಕೊಳ್ಳಬೇಕಾದ ಎಲ್ಲ ಅರ್ಹತೆ ಈ ಚಿತ್ರಕ್ಕಿದೆ. ಆದರೆ ಸತ್ಯ ಹೇಳಲು ದಮ್ಮಿಲ್ಲದ ಈ ಪ್ರಪಂಚದಲ್ಲಿ ಕನಿಷ್ಠ ಚಿತ್ರಮಂದಿರಗಳಲ್ಲಾದರೂ ಈ ಚಿತ್ರ ಯಶಸ್ಸನ್ನು ಪಡೆಯಲಿ ಎಂಬ ಆಶಯದೊಂದಿಗೆ, ಸಿನಿಮಾ ನೋಡಿ ಎನ್ನುವ ಕೋರಿಕೆಯೊಂದಿಗೆ ಸರ್ವರಿಗೂ ನಮಸ್ಕಾರ‌‌.

ನಿತ್ಯಾನಂದ ಎಸ್ ಬಿ

ಮೈಸೂರಿನಲ್ಲಿ ವಿವೇಕ ಶಿಬಿರ ನಾಡಿದ್ದು ಆರಂಭ. ನೀವು ಮಾಡಬೇಕಿರುವ ಸಹಾಯ ಇಷ್ಟೇ! ಈ ಪೋಸ್ಟನ್ನು  #ಶೇರ್‌‌_ಮಾಡಿ. ಈ ಯೋಜನೆಗೆ ದೊಡ್ಡ‌ ಸಹಕಾರ ನಿಮ...
19/04/2023

ಮೈಸೂರಿನಲ್ಲಿ ವಿವೇಕ ಶಿಬಿರ ನಾಡಿದ್ದು ಆರಂಭ. ನೀವು ಮಾಡಬೇಕಿರುವ ಸಹಾಯ ಇಷ್ಟೇ! ಈ ಪೋಸ್ಟನ್ನು #ಶೇರ್‌‌_ಮಾಡಿ. ಈ ಯೋಜನೆಗೆ ದೊಡ್ಡ‌ ಸಹಕಾರ ನಿಮ್ಮಿಂದ ಆದಂತಾಗುತ್ತದೆ. ದಯಮಾಡಿ ನಿಮ್ಮ ಪರಿಚಯದವರೊಡನೆ ಈ ಸಂದೇಶವನ್ನು ಹಂಚಿಕೊಳ್ಳಿ. ಧನ್ಯವಾದಗಳು.
🙏🙏🙏🙏🙏🙏🙏🙏🙏🙏🙏🙏🙏🙏🙏🙏

ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ (ರಿ), ಮೈಸೂರು.

ಮೌಲ್ಯ ಶಿಕ್ಷಣ ವಿಷಯದಲ್ಲಿ ರಾಜ್ಯದಾದ್ಯಂತ ಸದ್ದಿಲ್ಲದೇ ಮೌನಕ್ರಾಂತಿ ಮಾಡುತ್ತಿರುವ ವಿವೇಕ ವಿದ್ಯಾ ವಾಹಿನಿ ಸಂಸ್ಥೆಯಿಂದ ಈ ಬಾರಿ ಮೈಸೂರಿನಲ್ಲಿ....

ವಿವೇಕ ಶಿಬಿರ - 2023

ಎಂಟು, ಒಂಭತ್ತು ಮತ್ತು‌ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಸಾಂಸ್ಕೃತಿಕ, ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರ

ದಿನಾಂಕ :
ಏಪ್ರಿಲ್ 21 ರ ಶುಕ್ರವಾರ
ಏಪ್ರಿಲ್ 22 ರ ಶನಿವಾರ
ಏಪ್ರಿಲ್ 23 ರ ಭಾನುವಾರ

ಸಮಯ : ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ

ಸ್ಥಳ : ನಂದನ ಉದ್ಯಾನವನದ ರಾಮಕೃಷ್ಣ ಸಭಾ ಮಂಟಪ, ಐ ಬ್ಲಾಕ್, ರಾಮಕೃಷ್ಣ ನಗರ, ಮೈಸೂರು.

ಪರಿಚಯಿಸಬೇಕೆಂದುಕೊಂಡಿರುವ ವಿಷಯಗಳು : ಯೋಗ, ಪ್ರಾಣಾಯಾಮ, ಆಯುರ್ವೇದ, ವಿಷ್ಣು ಸಹಸ್ರನಾಮ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಸಂಸ್ಕೃತ ಶ್ಲೋಕಗಳು, ಆಹಾರ ಪದ್ಧತಿ, ಚಿತ್ರ ಕಲೆ, ಸಂಗೀತ, ನೃತ್ಯ, ಅರಣ್ಯ, ಪರಿಸರ, ವನ್ಯ ಜೀವಿಗಳು, ಸಾಮಾಜಿಕ ಜವಾಬ್ದಾರಿ, ಪುಸ್ತಕಗಳು, ಭಾಷಣ, ಬರವಣಿಗೆ, ನೀತಿ ಕಥೆ, ಜೀವನ ಚರಿತ್ರೆ, ಸೈನ್ಯ, ಸ್ವಾತಂತ್ರ್ಯ ಹೋರಾಟ, ಆಟಗಳು, ಹವ್ಯಾಸಗಳು, ನಕ್ಷೆಗಳು, ಪ್ರವಾಸ, ಗಾದೆಗಳು, ಒಗಟುಗಳು. ಇವೆಲ್ಲವುಗಳ ಬಗ್ಗೆ ಮೂಲಭೂತ ಹಾಗೂ ಸಂಕ್ಷಿಪ್ತ ಪರಿಚಯ.

ಮೊದಲು ನೋಂದಾಯಿಸಿದ 30 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಮಾಹಿತಿ ತಿಳಿದ ಕೂಡಲೇ 9880649290, 7019796153, 7259369893 ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ನೋಂದಾಯಿಸಿಕೊಳ್ಳತಕ್ಕದ್ದು‌.

ಸೂಚನೆ : ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

ಶುಲ್ಕ : ಸಂಪೂರ್ಣ ಉಚಿತ.

ಪೋಷಕರು ಮತ್ತು ಹಿತೈಷಿಗಳು ಸ್ವಯಂ ಪ್ರೇರಿತರಾಗಿ ನೀಡುವ ದಾನವನ್ನು ಟ್ರಸ್ಟ್ ನ ವತಿಯಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

ಇಂತಿ ತಮ್ಮ ವಿಶ್ವಾಸಿ,

ದಿವ್ಯತ್ರಯರ ಸೇವೆಯಲ್ಲಿ

ಪ್ರಭಂಜನ
ಅಧ್ಯಕ್ಷರು
ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ (ರಿ)
ಮೈಸೂರು
ದೂರವಾಣಿ : 7019796153

 #ಪ್ರದಕ್ಷಿಣಂ - ವಿವೇಕ ರಾಜ್ಯ ಪರಿಕ್ರಮ ಮಾರ್ಗಸೂಚಿ :ದಿನಾಂಕ : 12 ಫೆಬ್ರವರಿ 2023 ರಂದು ಮಂಡ್ಯದ ಅಂಬೇಡ್ಕರ್ ಭವನದಿಂದ ಆರಂಭಫೆ 12 - ಮಂಡ್ಯಫ...
03/02/2023

#ಪ್ರದಕ್ಷಿಣಂ - ವಿವೇಕ ರಾಜ್ಯ ಪರಿಕ್ರಮ ಮಾರ್ಗಸೂಚಿ :

ದಿನಾಂಕ : 12 ಫೆಬ್ರವರಿ 2023 ರಂದು ಮಂಡ್ಯದ ಅಂಬೇಡ್ಕರ್ ಭವನದಿಂದ ಆರಂಭ

ಫೆ 12 - ಮಂಡ್ಯ
ಫೆ 13 - ಮೈಸೂರು
ಫೆ 13 - ಮಡಿಕೇರಿ
ಫೆ 14 - ದಕ್ಷಿಣ ಕನ್ನಡ
ಫೆ 14 - ಉಡುಪಿ
ಫೆ 15 - ಉತ್ತರ ಕನ್ನಡ
ಫೆ 15 - ಧಾರವಾಡ
ಫೆ 16 - ಬೆಳಗಾವಿ
ಫೆ 16 - ಬಾಗಲಕೋಟ
ಫೆ 17 - ವಿಜಯಪುರ
ಫೆ 17 - ಕಲ್ಬುರ್ಗಿ
ಫೆ 18 - ಬೀದರ್
ಫೆ 18 - ಯಾದಗಿರ
ಫೆ 19 - ರಾಯಚೂರು
ಫೆ 19 - ಬಳ್ಳಾರಿ
ಫೆ 20 - ಹೊಸಪೇಟೆ
ಫೆ 20 - ಕೊಪ್ಪಳ
ಫೆ 21 - ಗದಗ
ಫೆ 21 - ಹಾವೇರಿ
ಫೆ 22 - ದಾವಣಗೆರೆ
ಫೆ 22 - ಚಿತ್ರದುರ್ಗ
ಫೆ 23 - ಶಿವಮೊಗ್ಗ
ಫೆ 23 - ಚಿಕ್ಕಮಗಳೂರು
ಫೆ 24 - ಹಾಸನ
ಫೆ‌ 24 - ತುಮಕೂರು
ಫೆ 25 - ಚಿಕ್ಕಬಳ್ಳಾಪುರ
ಫೆ 25 - ಕೋಲಾರ
ಫೆ‌ 26 - ಬೆಂಗಳೂರು ಗ್ರಾಮಾಂತರ
ಫೆ 26 - ಬೆಂಗಳೂರು
ಫೆ 27 - ರಾಮನಗರ
ಫೆ‌ 27 - ಚಾಮರಾಜನಗರ
ಫೆ 28 - ಮೈಸೂರು

ದಿನಾಂಕ : 28 ಫೆಬ್ರವರಿ 2023 ರಂದು ಮೈಸೂರಿನ ರಾಮಕೃಷ್ಣ ಆಶ್ರಮದ ಬಳಿಯ ವಿವೇಕಾನಂದ ಪ್ರತಿಮೆಯ ಬಳಿಯಲ್ಲಿ ಸಂಪನ್ನವಾಗುವುದು.

# # # # # # # # # # # # # # # # # # # # # # # # # # #

#ಪ್ರದಕ್ಷಿಣಂ ಪೂರ್ಣ ವಿವರ

ವಿವೇಕ ವಿದ್ಯಾ ವಾಹಿನಿ

ಪ್ರದಕ್ಷಿಣಂ - ವಿವೇಕ ರಾಜ್ಯ ಪರಿಕ್ರಮ!

ಮೌಲ್ಯ ಶಿಕ್ಷಣದ ಅಗತ್ಯ ಹಾಗೂ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ ಸಂಪೂರ್ಣ ಕರ್ನಾಟಕ ರಾಜ್ಯ ಏಕಾಂಗಿ ಬೈಕ್ ಯಾತ್ರೆ.

17 ದಿನಗಳ ಅವಧಿ

3000 ಕಿಲೋಮೀಟರ್ ಗಳ ಪ್ರಯಾಣ.

ಕರ್ನಾಟಕ ರಾಜ್ಯದ ಎಲ್ಲ 31 ಜಿಲ್ಲೆಗಳ 75 ಕ್ಕೂ ಹೆಚ್ಚು ಪ್ರೌಢಶಾಲೆಗಳ ಭೇಟಿ ಮತ್ತು ಉಪನ್ಯಾಸ.

10,000 ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ.

ಮೌಲ್ಯ ಶಿಕ್ಷಣ ಕುರಿತಾಗಿ ಜನಾಭಿಪ್ರಾಯ ಮೂಡಿಸಲು ಸಹಕಾರ ಕೋರಿ ರಾಜ್ಯಾದ್ಯಂತ ಶಿಕ್ಷಣ ಪ್ರೇಮಿಗಳ, ಶಿಕ್ಷಣ ತಜ್ಞರ ಭೇಟಿ, ಮಾತುಕತೆ.

ದಿನಾಂಕ : 12 ಫೆಬ್ರವರಿ 2023 ರಿಂದ 28 ಫೆಬ್ರವರಿ 2023 ರವರೆಗೆ.

ಯಾತ್ರಿ : ನಿತ್ಯಾನಂದ ಎಸ್ ಬಿ. ಸ್ಥಾಪಕರು, ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ (ರಿ) ಮೈಸೂರು.

# # # # # # # # # # # # # # # # # # # # # # # # # #

#ಪ್ರದಕ್ಷಿಣಂ ಯಾತ್ರೆಗೆ ನೀವು ಯಾವ ರೀತಿ ಸಹಕಾರ‌ ನೀಡಬಹುದು?

1. ಉಪನ್ಯಾಸ ಕಾರ್ಯಕ್ರಮಕ್ಕೆ ಶಾಲೆಗಳನ್ನು ಜೋಡಿಸುವುದು.

2. ಆ ಕಾರ್ಯಕ್ರಮ ತಯಾರಿಗೆ ಆಯೋಜಕರಾಗಿ ಮತ್ತು ಸ್ವಯಂ ಸೇವಕರಾಗಿ ತೊಡಗಿಕೊಳ್ಳುವುದು.

3. ಬೈಕ್ ಯಾತ್ರೆಯಲ್ಲಿ ನಮ್ಮೊಂದಿಗೆ ನೀವೂ ಕೆಲವೊಂದಷ್ಟು ದೂರ ಬೈಕ್ ನಲ್ಲಿ ಪಾಲ್ಗೊಳ್ಳುವುದು.

4. ಮೌಲ್ಯ ಶಿಕ್ಷಣ ವಿಚಾರವನ್ನು ಪ್ರಚಾರ ಮಾಡಲು ಪತ್ರಿಕಾ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ವರದಿಗಾರರ ಸಂಪರ್ಕವನ್ನು ಏರ್ಪಡಿಸುವುದು.

5. ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಮಕ್ಕಳ ಪುಸ್ತಕಗಳನ್ನು ದಾನವಾಗಿ ನೀಡುವುದು.

6. ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೋಡಿಕೊಳ್ಳುವುದು.

7. ಯಾತ್ರೆಯ ಇತರೆ ವೆಚ್ಚದ ಪೈಕಿ ಒಂದಷ್ಟು ಖರ್ಚನ್ನು ವಹಿಸಿಕೊಳ್ಳುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9880649290

#ಪ್ರದಕ್ಷಿಣಂ

ಪ್ರದಕ್ಷಿಣಂ ಮಾರ್ಗದಲ್ಲಿ ಬರುವ ಪ್ರಮುಖ ಊರುಗಳು.

ಮಂಡ್ಯ -> ಶ್ರೀರಂಗಪಟ್ಟಣ -> ಮೈಸೂರು -> ಹುಣಸೂರು -> ಪಿರಿಯಾಪಟ್ಟಣ -> ಕುಶಾಲನಗರ -> ಮಡಿಕೇರಿ -> ಸುಳ್ಯ -> ಪುತ್ತೂರು -> ಬಂಟ್ವಾಳ -> ಮಂಗಳೂರು -> ಪಡುಬಿದ್ರಿ -> ಉಡುಪಿ -> ಬ್ರಹ್ಮಾವರ -> ಕುಂದಾಪುರ -> ಬೈಂದೂರು -> ಭಟ್ಕಳ -> ಮುರುಡೇಶ್ವರ -> ಹೊನ್ನಾವರ -> ಕುಮಟಾ -> ಅಂಕೋಲಾ -> ಜೋಯ್ಡಾ -> ದಾಂಡೇಲಿ -> ಹಳಿಯಾಳ -> ಧಾರವಾಡ -> ಕಿತ್ತೂರು -> ಎಂ ಕೆ ಹುಬ್ಬಳ್ಳಿ -> ಬೆಳಗಾವಿ -> ಯರಗಟ್ಟಿ -> ಬಾಗಲಕೋಟೆ -> ಬೀಳಗಿ -> ವಿಜಯಪುರ -> ಸಿಂಧಗಿ -> ಜೇವರ್ಗಿ -> ಕಲಬುರ್ಗಿ -> ಕಮಲಾಪುರ -> ಹುಮ್ನಾಬಾದ್ -> ಬೀದರ್ -> ಸೇಡಂ -> ಯಾದಗಿರಿ -> ದೇವಸಗೂರು -> ರಾಯಚೂರು -> ಮಾನ್ವಿ -> ಸಿಂಧನೂರು -> ಸಿರಗುಪ್ಪ -> ಬಳ್ಳಾರಿ -> ಕುಡತಿನಿ -> ತೋರಣಗಲ್ಲು -> ಹೊಸಪೇಟೆ -> ಗಿಣಿಗೆರ -> ಕೊಪ್ಪಳ -> ಬನ್ನೊಕೊಪ್ಪ -> ಗದಗ -> ಲಕ್ಷ್ಮೇಶ್ವರ -> ಸವಣೂರು -> ಬಂಕಾಪುರ -> ಹಾವೇರಿ -> ರಾಣೆಬೆನ್ನೂರು -> ಹರಿಹರ -> ದಾವಣಗೆರೆ -> ಹಾನಗೋಡು -> ಭರಮಸಾಗರ -> ಚಿತ್ರದುರ್ಗ -> ಹೊಳಲ್ಕೆರೆ -> ಚನ್ನಗಿರಿ -> ಶಿವಮೊಗ್ಗ -> ಭದ್ರಾವತಿ -> ತರೀಕೆರೆ -> ಬೀರೂರು -> ಕಡೂರು -> ಸಖರಾಯಪಟ್ಟಣ -> ಚಿಕ್ಕಮಗಳೂರು -> ಬೇಲೂರು -> ಹಾಸನ -> ಗಂಡಸಿ -> ತಿಪಟೂರು -> ಕೆ ಬಿ ಕ್ರಾಸ್ -> ಗುಬ್ಬಿ -> ತುಮಕೂರು -> ಡಾಬಸ್ ಪೇಟೆ -> ದೊಡ್ಡಬಳ್ಳಾಪುರ -> ಚಿಕ್ಕಬಳ್ಳಾಪುರ -> ಶಿಢ್ಲಘಟ್ಟ -> ಚಿಂತಾಮಣಿ -> ಕೋಲಾರ -> ಹೊಸಕೋಟೆ -> ಬೆಂಗಳೂರು -> ಬಿಡದಿ -> ರಾಮನಗರ -> ಚನ್ನಪಟ್ಟಣ -> ಮದ್ದೂರು -> ಮಂಡ್ಯ -> ಮಳವಳ್ಳಿ -> ಕೊಳ್ಳೇಗಾಲ -> ಯಳಂದೂರು -> ಚಾಮರಾಜನಗರ -> ನಂಜನಗೂಡು -> ಮೈಸೂರು.

31/12/2022

ಬಿಜೆಪಿಗೆ ರಾತ್ರೋ ರಾತ್ರಿ ಮಂಡ್ಯದ ಮೇಲೆ ಲವ್ ಶುರುವಾಗಿದೆ! ಆದರೆ ಬಿಜೆಪಿ ಮಂಡ್ಯ ಜನರಿಗೆ ಅಪಾಲಜಿ ಬರೆದುಕೊಟ್ಟು ವೋಟು ಕೇಳಲು ಬರಬೇಕು ಅನ್ನೋದು ನನ್ನ ಅಭಿಪ್ರಾಯ. ನೀವು ಏನಂತೀರಿ??? ನೆನ್ನೆಯ ವಿಸ್ತಾರ ನ್ಯೂಸ್ ಡಿಬೆಟ್ ನಲ್ಲಿ ನನ್ನ ವಾದ. ಇದು ನಿಮಗೆಲ್ಲ ಅನಿರೀಕ್ಷಿತ ಎಂದು ನನಗೆ ಗೊತ್ತು. ಆದರೆ ಸತ್ಯ ಇದೇ ಅಂತ ಮಾತ್ರ ಖಡಾಖಂಡಿತವಾಗಿ ಹೇಳಬಲ್ಲೆ. ಮಂಡ್ಯದವನಾಗಿ ಗ್ರೌಂಡ್ ರಿಯಾಲಿಟಿಯನ್ನು ಆಧರಿಸಿ ಈ ಮಾತುಗಳನ್ನು ಹೇಳಿದ್ದೇನೆ. ಪರಿಶೀಲಿಸಿ. ಸರಿ ಅನ್ನಿಸಿದರೆ ಖಂಡಿತಾ ಶೇರ್ ಮಾಡಿ. 😊

ಪೂರ್ಣ ಡಿಬೆಟ್ ಲಿಂಕ್ ಇಲ್ಲಿದೆ : https://youtu.be/kgqYevI6RMw

ವೀಡಿಯೋ ಕೃಪೆ : ವಿಸ್ತಾರ ನ್ಯೂಸ್

#ಎಲೆಕ್ಷನ್
#ಮಂಡ್ಯ

Address

Mysore

Website

Alerts

Be the first to know and let us send you an email when Nithyananda Vivekavamshi posts news and promotions. Your email address will not be used for any other purpose, and you can unsubscribe at any time.

Share