Taulava Foundation

Taulava Foundation Dedicated for Tulunad, Tulu People, Culture & Tradition

06/11/2025
15/10/2025
12/10/2025

ಅರದಾಲ - ಬಣ್ಣಗಾರಿಕೆ

ದೈವಾರಾಧನೆ ಬಗ್ಗೆ ನಾನು ಬರೆಯಲು ನಿಲ್ಲಿಸಿ ವರ್ಷಗಳೇ ಕಳೆದವು. ಕಾರಣ‌ ಬೇರೆನೂ ಅಲ್ಲ. ವರ್ಷದಿಂದ ವರ್ಷಕ್ಕೆ ಬದಲಾವಣೆಗಳು ಆಗುತ್ತಲೇ ಇವೆ‌ ಮತ್ತು ದೈವಾರಾಧನೆಗೆ ಇರುವ ಗಾಂಭೀರ್ಯತೆನ್ನು ದೈವಾರಾಧಕರಾದ ನಾವೇ ಹಾಳು‌ ಮಾಡಿ ಅಬ್ಬರ ಕಾಣಬೇಕು, ಚಾಪೆ ಹರಿದು ಉಗ್ರದಿಂದ ಬರಬೇಕು ಬಣ್ಣದಲ್ಲಿ ರೌದ್ರತೆ‌ ಇರಬೇಕೆಂದು ಹೇಳಿ ಸಾಂಪ್ರದಾಯಿಕ ಸೊಗಡನ್ನು ಬಿಟ್ಟು ಬಹಳ‌ ದೂರ ಬಂದಿದ್ದೇವೆ. ಯಾರೂ ಎಷ್ಟೇ ಭಾಷಣ ಮಾಡಿದರೂ‌, ಲೇಖನ ಬರೆದರೂ, ತಿಳಿ ಹೇಳಿದರೂ ನೂರಲ್ಲಿ ಒಂದು ಶೇಕಡಾ ಜನರು ಅದನ್ನು ಅನುಸರಿಸಬಹುದು ಆದರೆ ಅದು‌ ಮುಂದಿನ ನಾಲ್ಕೈದು ವರ್ಷಕ್ಕೆ ಮತ್ತೆ ಬದಲಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳು‌ ಸಹಜ ಅಂದುಕೊಂಡು ನಮ್ಮ ನಮ್ಮ ಮನೆಗಳಲ್ಲಿ ದೈವಾರಾಧನೆಯ ಹಿಂದಿನ ಸೊಗಡನ್ನು ನಮ್ಮ ಕಾಲಕ್ಕೆ ಕಾಯ್ದಿಟ್ಟುಕೊಳ್ಳುವುದೇ ಸೂಕ್ತವಾಗಿದೆ. ಅದರಂತೆ ನಾನಿಂದೂ ಬರೆಯಿತ್ತಿರುವ ವಿಷಯ ಯಾರನ್ನೂ ತಿದ್ದುವುದಕ್ಕೂ ಅಲ್ಲ. ಈಗ ಏನೇ ಬರೆದರೂ ವಿವಾದ ವಾಗುವ ಕಾಲ. ನನಗೆ ದೈವಾರಾಧನೆಯಲ್ಲಿ ದೈವ ನರ್ತಕರು ಮುಖಕ್ಕೆ ಹಚ್ಚುವ ಬಣ್ಣದ ಬಗ್ಗೆ ಬಹಳ‌ ಆಸಕ್ತಿ. ಇತ್ತೀಚಿನ ಬಣ್ಣಗಾರಿಯಂತೂ ಬಹಳ ಬದಲಾಗಿದೆ. ಆದರಲ್ಲೂ ಪಿಲಿಚಾಮುಂಡಿಯ ಬಣ್ಣವಂತೂ ನನಗೆ ಅತ್ತ ಹುಲಿಯ ಮುಖವೂ ಅಲ್ಲಾ ಇತ್ತ ರಾಜನ್ ದೈವದ ಮಾನವ ರೂಪವೂ ಅಲ್ಲವೆಂಬಂತೆ ಕಾಣುತ್ತಿದೆ. ಹಿಂದೆ ಪ್ರಾಣಿ ಸಂಭಂದಿ ರಾಜನ್ ದೈವಗಳನ್ನು ಪ್ರಾಣಿ ರೂಪದಲ್ಲಿ ಚಿತ್ರಿಸದೆ ಅವುಗಳನ್ನು ಅರಸು ದೈವಗಳ ಸ್ವರೂಪದಲ್ಲೇ ಬಿಂಬಿಸಿದವರು ನಮ್ಮ ಹಿರಿಯರು‌ ಮತ್ತು ಹಿರಿಯ ದೈವ ನರ್ತಕರು. ಆದರೆ ಈಗ ಅದು ಬದಲಾಗುತ್ತಿದೆ. ಹೊರ ಜಗತ್ತಿಗೆ ಇದು ಹಾಸ್ಯಾಸ್ಪದವಾಗಿ ಕಾಣದಿರಲಿಯೆಂಬುದೇ ನನ್ನ ಪ್ರಾರ್ಥನೆ. ಅದಿರಲಿ, ಇತ್ತೀಚಿಗೆ ನಾನು ನನ್ನ ಕೆಲವೊಂದು ಬಾಲ್ಯದ ಪೋಟೊಗಳನ್ನು ಹೊಸದಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಒಂದು ಸಾಂಪ್ರದಾಯಿಕ ಅರದಾಲ(ದೈವಗಳ ಮುಖಕ್ಕೆ ಬಳಿಯುವ ಹಳದಿ ಬಣ್ಣ) ಮತ್ತು ವೇಷ ಭೂಷಣದ ದೈವದ ಚಿತ್ರವನ್ನ ಪರಿವರ್ತಿಸಲು ಪ್ರಯತ್ನ ಪಟ್ಟೆ. ಕೆಳಗೆ‌ ಹಾಕಿರುವ ಪೋಟೋ ಅದುವೇ‌. ಅದೇನು ಬಣ್ಣಗಾರಿಗೆ ಅದೇನು ಗಾಂಭೀರ್ಯತೆ. ಸಂಪೂರ್ಣ ದೈವಿಕ ಕಳೆ ಈ ಚಿತ್ರದಲ್ಲಿ ಗೋಚರಿಸುತ್ತದೆ. ಇದರ ಮೂಲ ಪ್ರತಿಯೂ‌ ಹೀಗೆ ಇದೆ ಅದರೂ‌ ಈ ಪರಿವರ್ತಿಸಲಾದ ಪೋಟೋ ನನ್ನ ಕಣ್ಣೆದುರು ಪದೇ ಪದೇ ಬರುತ್ತಿದೆ‌. ಅದರಲ್ಲಿರುವ ಅರದಲ ಅಂದರೆ ಮುಖದ ಬಣ್ಣ ಮತ್ತು ಆ‌ ಹಣೆಯಲ್ಲಿರುವ ಸರಳ‌ ಮತ್ತು ಸುಂದರವಾದ ಚುಕ್ಕೆಯಿಂದ ಕೂಡಿದ‌ ರಚನೆ ರಾಜನ್ ದೈವಗಳ ರಾಜ ಗಾಂಭೀರ್ಯವನ್ನು ಎತ್ತಿ ತೋರಿಸಿತ್ತಿದೆ. ಅದೆಷ್ಟು ಕಲಾ‌ ನಿಪುಣರಾಗಿದ್ದರು ಈ ದೈವ ನರ್ತಕರು. ಇದು ಒಬ್ಬ ಪ್ರಸಿದ್ಧ ದೈವ ನರ್ತಕರ ಸಾಂಪ್ರದಾಯಿಕ ಬಣ್ಣಗಾರಿಕೆ. ಈಗ ತುಸು ವ್ಯತ್ಯಾಸವಾದರೂ ಇದೇ ರೀತಿಯ ಬಣ್ಣಗಾರಿಕೆ ಅವರದ್ದು. ಪ್ರತಿ ದೈವಕ್ಕೂ ಅದರದೇ ಆದ ಬಣ್ಣಗಾರಿಗೆ ಇದೆ ಎಂಬ ಮಾತು ಇದ್ದರೂ ಇದು ಸಂಪೂರ್ಣ ಸರಿಯಲ್ಲ. ಮನೆಯಲ್ಲಿ ನಂಬುವಂತಹ ಮತ್ತು ರಾಜನ್ ದೈವಗಳಿಗೆ ಹೊರತಾದ ದೈವಗಳಲ್ಲಿ ಮಾತ್ರ ಬಣ್ಣಗಾರಿಕೆಯಲ್ಲಿ ಹೆಚ್ಚು ವ್ಯತ್ಯಾಸ ಇರುತ್ತದೆ‌ ಹೊರತು ರಾಜನ್ ದೈವಗಳ ಬಣ್ಣಗಾರಿಗೆ ಬಹಳಷ್ಟು ಒಂದೇ‌‌ ರೀತಿ.

ಒಂದು ಮಾಗಣೆಯ ಅಥವಾ ಸೀಮೆಯಲ್ಲಿ ಇರುವ ಎಲ್ಲಾ ಗ್ರಾಮಗಳ ರಾಜನ್ ದೈವಕ್ಕೆ ಅದೇ ಮಾಗಣೆಯ ಅಜಲಿನ ನೇಮ ಕಟ್ಟುವ ಪರಂಪರೆಯ ಕುಟುಂಬ‌ ಇರುತ್ತದೆ. ಅವರು ಒಂದೇ ರೀತಿಯ ಬಣ್ಣಗಾರಿಯನ್ನು ಪರಂಪರೆಯಿಂದ ಪಾಲಿಸಿಕೊಂಡು ಬಂದಿರುತ್ತಾರೆ. ಅವರು ಕಟ್ಟುವ ಎಲ್ಲಾ ರಾಜನ್ ದೈವಕ್ಕೂ ಅದೇ‌ ಬಣ್ಣಗಾರಿಗೆ. ಸ್ವಲ್ಪ ವ್ಯತ್ಯಾಸಗಳಿರಬಹುದು ಅಷ್ಟೇ. ಆದ್ದರಿಂದ ಆಗಿನ ಕಾಲದಲ್ಲಿ ನೇಮ ಕಟ್ಟುವವರ ಪರಂಪರೆಯಂತೆ‌ ಬಣ್ಣಗಾರಿಕೆ‌ ಇತ್ತು. ಆದರೆ ಈಗ ಕಾಲ ಬದಲಾಗಿಲ್ಲ, ನಾವು ಬದಲಾಗಿದ್ದೇವೆ. ಜನ ಚೇಂಜ್ ಕೇಳುತ್ತಿದ್ದಾರೆ. ಈಗ ಒಂದೊಂದು ರಾಜನ್ ದೈವದ ಬಣ್ಣ ಒಂದೊಂದು ರೀತಿಯಾಗಿ ಬದಲಾಗಿದೆ‌. ಇಲ್ಲಿ ಯಾರದೂ‌ ತಪ್ಪಿಲ್ಲ.

ದೈವ ನರ್ತಕರು ಈಗಿನ‌ ವ್ಯವಸ್ಥೆಗೆ ಅನುಗುಣವಾಗಿ ಬದಲಾಗುವ ಪರಿಸ್ಥಿತಿ ತುಂಬಾ ಇದೆ. ಇದು ಎಲ್ಲಾ ಕ್ಷೇತ್ರದಲ್ಲೂ ಸಾಮಾನ್ಯ. ಎಲ್ಲವೂ ಕಾಲಕ್ಕೆ ತಕ್ಕಂತೆ ನಡೆಯುತ್ತಿದೆ. ಈ ಇತ್ತೀಚಿನ ಬದಲಾವಣೆಗಳನ್ನು ಇಷ್ಟ ಪಡುವವರು‌ ಅನೇಕರು, ಆದರೆ ಅವರಿಗೆ ಈ ಪೋಟೋದಲ್ಲಿ ಇರುವ ದೈವಿಕ ರೂಪದ ಗಾಂಭೀರ್ಯತೆನ್ನು ಹೊಂದಿರುವ ಬಣ್ಣಗಾರಿಕೆ ಯಾಕೆ ಇಷ್ಟವಾಗುತ್ತಿಲ್ಲವೆಂಬುದು ನನಗೆ‌ ಈಗಲೂ ಕಾಡುವ ಪ್ರಶ್ನೆ. ಉತ್ತರ ಬಹುಶಃ ಅವರೆಲ್ಲಾ ಈಗಿನ‌ ಪೀಳಿಗೆಯವರು,‌‌ ನಾವು ತೊಂಬತ್ತರ ದಶಕದವರು. ನಾವು ವ್ಯವಸ್ಥೆ ಬದಲಾಗುವುದನ್ನು‌ ಕಣ್ಣಾರೆ ಕಂಡವರು.‌ ಅಷ್ಟೇ.

ಇದು ನನ್ನ ವಯಕ್ತಿಕ ಅಭಿಪ್ರಾಯ.

ಬರಹ: ಸಂಕೇತ್ ಪೂಜಾರಿ.

10/10/2025

ತುಳು ಸತ್ಯ ಅನಾವರಣದ ಮಹಾಶಕ್ತಿ ಡಾ. ವೆಂಕಟರಾಜ ಪುಣಿಂಚಿತ್ತಾಯ!

ತುಳುವರಿಗೆ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ಇಂತಹ ಕನ್ನಡ ಕವಿಗಳ ಹೆಸರು ಚಿರಪರಿಚಿತ. ಆಗಾಗ ಅವರ ಕವಿತೆಗಳನ್ನು, ಸಾಹಿತ್ಯಗಳನ್ನು ಓದಿ ಖುಷಿ ಪಡುತ್ತೇವೆ. ಅದರೆ ತುಳು ಕವಿಗಳ ಬಗ್ಗೆ ಕೇಳಿದರೆ ಮಾತ್ರ ಯಾಕೋ ಮುಖ ಮುಖ ನೋಡುತ್ತೇವೆ. ಯಾರೊಬ್ಬರ ಪರಿಚಯವೂ ನಮಗಿಲ್ಲ. ಅವರ ಬರಹಗಳು ಕವಿತೆಗಳನ್ನಂತೂ ನೋಡಿಯೇ ಇರಲಿಕ್ಕಿಲ್ಲ. ಅನೇಕ ಕವಿಗಳು ಅಥವಾ ಸಾಹಿತಿಗಳು ತುಳು ಭಾಷೆಯಲ್ಲಿ ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ. ಅಂಥವರಲ್ಲೇ ಒಬ್ಬರು ಡಾ. ವೆಂಕಟರಾಜ ಪುಣಿಚಿತ್ತಾಯ!

ಪುಣಿಚಿತ್ತಾಯರು ಸಾಹಿತಿ ಮಾತ್ರವಲ್ಲ ಸಂಶೋಧಕರು. ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿರುವ ಪುಣಿಂಚಿತ್ತಾಯರು ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇರಲಿಲ್ಲ ಎಂಬ ವಾದವನ್ನು ಅಲ್ಲಗಳೆದು 4 ಅತಿ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥ ಕೋಶಗಳೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ 20 ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಹೊಂದಿದ್ದಾರೆ. ಶ್ರೀ ಭಾಗವತೊ, ಕಾವೇರಿ, ದೇವಿ ಮಹಾತ್ಮೆ, ತುಳು ಮಹಾಭಾರತೋ ಈ ಪ್ರಾಚೀನ ತುಳು ಗ್ರಂಥಗಳಾಗಿವೆ. ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳ ಬೆನ್ನು ಹತ್ತಿ ಹೋಗಿ ತುಳುವಿಗೂ ಲಿಪಿ ಇದೆ ಎಂದು ತೋರಿಸಿದ ಡಾ. ವೆಂಕಟರಾಜ ಪುಣಿಂಚಿತ್ತಾಯರ ಸಾಧನೆ ತುಳುನಾಡು ಯಾವತ್ತೂ ಮರೆಯಲಾಗದ್ದು.

ಎಲ್ಲ ದ್ರಾವಿಡ ಭಾಷೆಗಳಂತೆ ಸಂಶೋಧನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ತುಳುವಿನ ಬಗ್ಗೆ ಮೊದಲು ಆಸಕ್ತಿ ತೋರಿಸಿದ್ದು ಇಂಗ್ಲಿಷರು. ಆದರೆ, ತುಳುವಿನ ಮೂಲದ ಜಾಡು ಹುಡುಕಿ ಹೊರಟವರು ಪುಣಿಂಚಿತ್ತಾಯರು.

ಅವರನ್ನು ಸಂಶೋಧಕರನ್ನಾಗಿಸಿದ್ದು ಹೊರಗಿನದ್ದಲ್ಲ, ಒಳಗಿನ ಒತ್ತಡ. ಗದ್ದೆಯಲ್ಲಿ ಕಾಯಕ ನಡೆಸುತ್ತಿದ್ದ ಹತ್ತಾರು ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳು ಅವರಲ್ಲಿ ಮೂಡಿಸಿದ ಆಸಕ್ತಿ 'ಶ್ರೀ ಭಾಗವತೋ'ದಂಥ ಪ್ರಾಚೀನ ತುಳು ಕಾವ್ಯದ ಹುಡುಕಾಟ ಸತತ ಸಂಶೋಧನ ಕಾಯಕದ ವರೆಗೆ ತಂದು ನಿಲ್ಲಿಸಿತು.

ಸಂಶೋಧನೆ ಸ್ವಭಾವವನ್ನು ಮೂಲಭೂತವಾಗಿಯೇ ಹೊಂದಿದ್ದ ಪುಣಿಂಚಿತ್ತಾಯರನ್ನು ಪಂಚ ದ್ರಾವಿಡ ಭಾಷೆಗಳ ಪೆಕಿ ತುಳುವನ್ನು ಉಳಿದು ಮಿಕ್ಕ 4ಕ್ಕೂ ಲಿಪಿಯಿದೆ. ಹಾಗಿದ್ದರೆ ತುಳುವಿಗೂ ಲಿಪಿ ಇದ್ದಿರಲೇಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಪುಣಿಂಚಿತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಸರಳಾಯ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಮಾತಿನ ನಡುವೆ ಸರಳಾಯರು ತಂದು ತೋರಿದ ತಾಡವಾಲೆ ಗ್ರಂಥವೇ ಹೊಸ ಅಧ್ಯಾಯ ಬರೆಯಿತು. ಆ ಕೃತಿ ತುಳು ಮಹಾಕಾವ್ಯ 'ಶ್ರೀಭಾಗವತೋ'.

16ನೇ ಶತಮಾನದ ಅಂದಾಜಿನಲ್ಲಿ ಕವಿ ವಿಷ್ಣುತುಂಗ ಈ ಕತಿ ರಚಿಸಿದ್ದರು. ಇದರ ಜಾಡು ಹಿಡಿದು ಹೋದ ವರು ಕೋಯಿಕೋಡ್ ವಿವಿ ಸಂಸ್ಕೃತ ಗ್ರಂಥಾಲಯದಲ್ಲಿ ಅನಾಥವಾಗಿದ್ದ ತುಳು ಕಾವ್ಯ 'ಕಾವೇರಿ'ಯನ್ನು ಪತ್ತೆ ಹಚ್ಚಿದರು. ನಂತರ ದೇವಿ ಮಹಾತ್ಮೆ, ನಾಟಿ ವೆದ್ಯ ಪದ್ಧತಿಯ ಚರ್ಚೆಗಳಿರುವ ಗ್ರಂಥವೊಂದನ್ನೂ ಹುಡುಕಿದರು.

ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು ತುಳು ಜಾನಪದ ಲೋಕದಲ್ಲಿ ಅಜರಾಮರರನ್ನಾಗಿಸಿದೆ.
..spb...

25/09/2025
22/09/2025

"ಕಾಡಿನಲ್ಲಿ ಹಂದಿ - ನಾಡಿನಲ್ಲಿ ದೈವವಾದ ತುಳುವರ ಇಹಪರ ಜೀವನದ ಕಾರಣೀಭೂತ ಮೋಕ್ಷಕಾರಕ ದೈವ ಪಂಜುರ್ಲಿ..." (ಈ ಲೇಖನವನ್ನು ಮೂವರು ವರ್ಷಗಳ ಹಿಂದೆ ಬರೆಯಲಾಗಿದೆ)

ಮೊದಲಿಗೆ ಹೇಳುತ್ತೇನೆ ನಾನು ಚಿತ್ರ ವಿಮರ್ಶಕನಲ್ಲ ಆದರೆ ಕಾಂತಾರ ಚಲನಚಿತ್ರದ ಸಫಲತೆ ಎಂದರೆ ಬೌದ್ಧಿಕ ಮಟ್ಟದ ಅಧಃಪತನದ ಕಾರಣದಿಂದ ತಮ್ಮ ಮೂಲ ಮರೆತ ಯುವ ತುಳುವ ಜನಾಂಗಕ್ಕೆ ಕಾಂತಾರ ಚಲನಚಿತ್ರ ಅವರ ಮೂಲವನ್ನು ನೆನಪಿಸಿತು.

ಕುಟುಂಬದ ಮೂಲಮನೆಯ ಕಡೆಗೆ ತಲೆಹಾಕಿ ಮಲಗದ ಎಷ್ಟೋ ತುಳುವ ಯುವಜನರನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ.ಆದೂ ಅಲ್ಲದೆ ತನ್ನ ಮೂಲದ ಶಕ್ತಿಯ ಮೇಲಿನ ನಂಬಿಕೆಯನ್ನು ಬಿಟ್ಟು ಇನ್ಯಾವುದೋ ಶಕ್ತಿಯ ಮೇಲಿನ ಭಕ್ತಿಯ ಪರಾಕಾಷ್ಠೆಗೆ ಹೋದವರನ್ನು ಕಂಡಿದ್ದೇನೆ. ಈ ಎಲ್ಲಾ ಏರಿಳಿತಗಳ ನಡುವೆ ಕಾಂತಾರ ಸಿನಿಮಾ ಕತ್ತಲೆಯ ಕಾಡಿನಲ್ಲಿ ದಾರಿ ತಪ್ಪಿದ ತುಳುವರಿಗೆ ಸತ್ಯ ಜೀಟಿಗೆಯಾಗಿ ಮರೆತು ಹೋದ ಮೂಲದ ಮನೆಯ ದಾರಿ ತೋರಿಸಿದ್ದಂತು ಸತ್ಯ.

ತುಳುವರ ಕುಟುಂಬದ ತರವಾಡು ಮನೆಯು ಐದು ಸಮೂಹ ಶಕ್ತಿಗಳ ಆರಾಧನಾ ಕೇಂದ್ರ. ಆ ಶಕ್ತಿಗಳೇ ಕುಟುಂಬದ ಸದಸ್ಯರ ಆಗುಹೋಗುಗಳ ಕಾರಣೀಕರ್ತರು ಎಂದು ತೌಳವ ಸಂಪ್ರದಾಯದ ಅನನ್ಯ ನಂಬಿಕೆ. ಆ ಐದು ಶಕ್ತಿಗಳೇ ನಾಗ, ಮುಡಿಪು, ಪಂಜುರ್ಲಿ, ಗತಿಸಿ ಹೋದ ಗುರು ಹಿರಿಯರು ( ೧೬ ಇರೆ), ಹಾಗೂ ರಾಹು...ಈ ಐದು ಶಕ್ತಿಗಳಿಗೆ ಕಾಲ ಕಾಲಕ್ಕೆ ೧೨ ಸಂಕ್ರಾಂತಿ ವಾರ್ಷಿಕ ಪಂಚಪರ್ವಗಳ ಆರಾಧನೆ ಕ್ರಮಬದ್ಧವಾಗಿ ಸೌಹಾರ್ದತೆಯಿಂದ ಎಲ್ಲಿ ನಡೆಯುತ್ತಾ ಇದೆಯೋ ಆ ಕುಟುಂಬದಲ್ಲಿ ಯಾವುದೇ ದೈವ ಪ್ರಕೋಪಗಳು,ಸಂತಾನ ಕ್ಷಯ ಸೂಚನೆಗಳು, ವರ್ಣ ಸಂಕರಣ ಸಮಸ್ಯೆಗಳು, ಮಾನಸಿಕ ದೈಹಿಕ ಸಮಸ್ಯೆಗಳು ಕಡಿಮೆ ಎಂದೇ ಹೇಳಬಹುದು.

ಆದರೆ ಪ್ರಸಕ್ತ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಮೂಲದ ಶಕ್ತಿಗಳನ್ನು ಮರೆತು ಕಾಲಪ್ರಭಾವದ ಆಕರ್ಷಣೀಯ ಹಾಗೂ ಸಮೂಹ ಸನ್ನಿಗೆ ಒಳಗಾದವರಂತೆ ಬೇರೆ ಎಲ್ಲೋ ಯಾವುದೋ ತಮಗೆ ಸಂಬಂಧಿಸದ ದೈವಗಳ ಸ್ವರೂಪಕ್ಕೆ ತುಳುವ ಯುವ ಜನತೆ ತಮ್ಮ ಭಕ್ತಿಯನ್ನು ತೋರ್ಪಡಿಸುವುದನ್ನು ಕಂಡಾಗ ಬೇಸರ ಹಾಗೂ ದುಃಖವಾಗುತ್ತಿತ್ತು. ಹಾಗೂ ಅದರ ನಡುವೆ ಅದನ್ನು ಬಂಡವಾಳ ಮಾಡಿಕೊಂಡು ತಮ್ಮ ವ್ಯಾಪಾರವಾಗಿ ದೈವಾರಾಧನೆಯನ್ನು ಬಳಸಿಕೊಂಡ ಒಂದು ವರ್ಗ.ಈ ಎಲ್ಲದರ ನಡುವೆ ತೌಳವ ಸಂಪ್ರದಾಯ ತನ್ನ ಮೂಲ ಮರೆತು ಸಾಂಸ್ಕೃತಿಕ ಧಾರ್ಮಿಕ ಅಧಃಪತನದತ್ತ ಹೊರಟಿರುವ ಈ ಮಧ್ಯಂತರ ಕಾಲಘಟ್ಟದಲ್ಲಿ ಕಾತುರದ ಕಾಂತಾರ ಎಂಬ ಹೊಸ ಹಣತೆಯ ಬೆಳಕೊಂದು ಆಶಾಜ್ಯೋತಿಯಾಗಿ ಬೆಳಗಿದೆ.

ನಾನು ನೋಡಿದ ನನ್ನ ಧಾರ್ಮಿಕ ಜೀವನದ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಸುಮಾರು ಐದು ವರ್ಷಗಳ ಹಿಂದೆ ಕುಟುಂಬದ ಪಂಜುರ್ಲಿ ದೈವ ದರ್ಶನದ ಸಮಯದಲ್ಲಿ ಒಬ್ಬ ಕುಟುಂಬದ ಹುಡುಗನಿಗೆ ಕುಟುಂಬದ ದೈವದ ಸೇವೆ ಮಾಡಲು ದೈವದ ಅಪ್ಪಣೆ ಆದಾಗ ಆತ ಒಂದು ಮಾತು ಹೇಳುತ್ತಾನೆ.ಅದನ್ನು ತುಳುವಿನಲ್ಲಿ ಹೇಳಿದರೆ ಉತ್ತಮ (ಎಂಕ್ ಕುಟುಂಬದ ಭೂತದ ಚಾಕಿರಿ ಮಲ್ಪೆರೆ ಆಪುಜಿ ಯಾನ್ ಇಲ್ಲಡ್ ಒಂಜಿ ದೈವ ನಂಬೊಂದು ಉಲ್ಲೆ ಯಾನ್ ಅಯಿರ್ದೆ ಜೀವನಡ್ ಎಡ್ಡೆ ಆತಿನಿ ಪಂದ್) ಇಲ್ಲಿ ಇರುವುದು ದೈವಗಳ ಶಕ್ತಿ ಪ್ರಾಬಲ್ಯದ ತೂಕವಲ್ಲ ಅಥವಾ ಬಲಾಬಲದ ಪ್ರಶ್ನೆಯಲ್ಲ.. ತುಳುವರ ಮಾತೃ ಪ್ರಧಾನ ವ್ಯವಸ್ಥೆಯ ಕುಟುಂಬ ವ್ಯವಸ್ಥೆಯ ಭವಿಷ್ಯದ ಪ್ರಶ್ನೆ... ( ಹಾಗಾಗಿ ನಾನು ಆತ ಹೇಳಿದ ಇನ್ನೊಂದು ಶಕ್ತಿಯ ಹೆಸರು ನಮೂದಿಸಿಲ್ಲ)...

ಆತ ಹೇಳಿದ ಎಲ್ಲಾ ಮಾತುಗಳನ್ನು ಕುಟುಂಬದ ಪಂಜುರ್ಲಿ ದೈವ ಶಾಂತಚಿತ್ತದಿಂದ ಕೇಳಿ ಕೊನೆಗೆ ಒಂದು ಕಟ್ಟುಗ್ರದ ನುಡಿ ನೀಡಿತು ( ಆವುಯಾ ನಿಕ್ಕ್ ಅವ್ವೇ ಮಲ್ಲ ಆಂಡ ಅವೆನೆ ನಂಬು ನನ ದುಂಬುಗು ನಿಕ್ಕ್ ಎನ್ನ ಒಂಜಿರೆ ಗಂಧ ಇಜ್ಜಿ... ನೆಂಪು ದೀಲ ಎಲ್ಲಂಜಿ ಕಡೆಗ್ ೧೬ ಸೇರ್ದ್ ಆಯಿ ಬೊಕ್ಕ ಯಾನ್ ಜುಂಬು ದಕ್ಕಿನ ಕೊಜಂಟಿನೆ ಈ ತಿನೊಡು ಈ ನಂಬಿನ ಶಕ್ತಿದ ಅಗೆಲ್ ಅತ್ತ್ ನೆನಪು ದೀಲ ಎಂದು ನುಡಿಯಿತು) ದೈವ ತನ್ನ ನುಡಿಯನ್ನು ಮುಂದುವರಿಸುತ್ತಾ "೧೨ ವರ್ಷ ಆಯುಷ್ಯ ಕೊರಿಯೆರ್ಲಾ ೧೨ ವರ್ಷ ಆಯುಷ್ಯ ಕರಿಪೆರ್ಲಾ ಬೆರ್ಮೆರೆಡ ವರತ ಸಂಜೀವಿನಿದ ಕಡ್ಡಿ ಜಪತ್ತ ಮಾಲೆ ಪತ್ತೊಂದು ಬೈದಿನಾಯೆ ಯಾನ್ ಆಯುಷ್ಯಗ್ ಪಟ್ಟ ಕಟ್ಟಿನಾಯೆ ಯಾನ್ ಕುಟುಂಬಗ್ ಪೆದ್ದ್ಂಡ ಅಪ್ಪೆ ತಾಂಕ್ಂಡ ತಮ್ಮಲೆ ತರೆಕ್ ತಮೆರಿ ಯಾನ್ ತೂಕ ಎನನ್ ದಟ್ಂದ್ ಏತ್ ಪೋಪ ಯಾನ್ಲ ತೂಪೆ ಎಂದು ದೈವ ಉಗ್ರವಾಗಿ ನುಡಿಯಾಡಿತು.

ದೈವ ಪ್ರಕೋಪವೋ,ಅವನ ಆಯುಷ್ಯದ ಅವಧಿ ಅಷ್ಟೇಯೋ ತಿಳಿಯದು ಒಂದು ಆಕಸ್ಮಿಕ ಅಪಘಾತದಲ್ಲಿ ಆ ಹುಡುಗನ ಮೃತ್ಯುವಾಯಿತು... ತುಳುವ ದೈವಾರಾಧನೆಯ ಜಗತ್ತಿನಲ್ಲಿ ಒಂದು ಮಾತಿದೆ "ಇಲ್ಲ್ ಇಲ್ಲ್ ಭೂತ - ಕಂಡ ಕಂಡ ಕಾಟ...ಕೊನೆಗೆ ಆತನ ಆತ್ಮ ಆತನ ಕುಟುಂಬದ ಮನೆ ಸೇರಿ ಸ್ವೀಕರಿಸಿದ್ದು ಪಂಜುರ್ಲಿ ದೈವದ ಕೊಜಂಟಿಯನ್ನು ( ದೈವಕ್ಕೆ ಬಲಿಕೊಟ್ಟ ಕೋಳಿಯ ಪಲ್ಯ)... ಇಲ್ಲಿ ಕಂಡಿದ್ದು ಒಂದೇ ತುಳುವ ಪೂರ್ವಿಕರು ಪಂಜುರ್ಲಿ ದೈವಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ಹಾಗೂ ಕುಟುಂಬಧಿಕಾರ ಯಜಮಾನ ಸ್ಥಾನವನ್ನು... ಪಂಜುರ್ಲಿ ದೈವದ ಆರಾಧನೆಗೆ ಸೋಕಾಲ್ಡ್ ಜಾನಪದ ಸಂಶೋಧಕರು ಹೇಳುವುದು ಕೃಷಿ ನಾಶ ಮಾಡಲು ಬಂದ ಹಂದಿಯನ್ನು ಆರಾಧಿಸಿದಂತೆ ಇವರ ಜ್ಞಾನದ ಮೌಢ್ಯತೆಗೆ ಯಾವ ಜ್ಞಾನಪೀಠ ಪ್ರಶಸ್ತಿ ಕೊಟ್ಟರೂ ಕಡಿಮೆಯೇ...( ಪಂಜುರ್ಲಿ ಆರಾಧನೆಯ ಮೂಲ ಸ್ವರೂಪದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ)

ಒಟ್ಟಾರೆ ಕಾಂತಾರ ತುಳು ಯುವ ಜನತೆಗೆ ಮೂಲ ನೆನಪಿಸಿತು... ಶಿವ ಚಿತ್ರದಲ್ಲಿ ಜಯಿಸಿದ... ವಾಸ್ತವದಲ್ಲಿ ತೌಳವ ಮೂಲ ಮಣ್ಣಿನ ಗಂಧದ ಪರಿಮಳ ಜಗದಗಲ ಪಸರಿಸಿತು...ಬೆರ್ಮರ ಸಾರಥ್ಯದ ಸಾವಿರಮಾನ್ಯ ದೈವಗಳ ರಥದ ಧ್ವಜದ ಲಾಂಛನ ಪಂಜುರ್ಲಿ ದೈವ ( ವರಾಹ ರೂಪ ) ವರಿಷ್ಠನೆಂದೂ...ಶಿವ (ಬೆರ್ಮ) ಸಂಭೂತನೆಂದೂ ಈ ತೌಳವ ಮಣ್ಣಿನ ಸಂಜಾತನೆಂದು...ಸಾವಿರಮಾನ್ಯ ದೈವಗಳಲ್ಲಿ ಕುಟುಂಬ ವ್ಯವಸ್ಥೆಯ ಯಜಮಾನನೆಂದು ( ಸಾರಮಾನ್ಯ ದೈವೊಲು ಸಾರ ನಾಯೆರ್'ಡ್ ದತ್ತ್ಂಡ ಒಂಜಿ ಪಲಾಯಿಡ್ ಮಾಜಾವುನಾಯೆ ) ಚಿತ್ರದ ಹಾಡಿನ ಮೂಲಕವಾಗಿಯೂ ತುಳುವ ಯುವ ಜನತೆ ಪರೋಕ್ಷವಾಗಿ ಸ್ತುತಿಸಿ ಅದರ ನಿಜಾರ್ಥವನ್ನು ಅರ್ಥೈಸುವಂತಾಯಿತು.

22/09/2025

ಮಣ್ಣಿನಿಂದ ಮಾಡಿದ ಈ ದೇವಿಯ ವಿಗ್ರಹದ ಪವಾಡ ಕೇಳಿದರೆ ಆಶ್ಚರ್ಯರಾಗ್ತೀರಾ, ಸಾವಿರ ವರ್ಷಗಳ ಇತಿಹಾಸವಿರುವ ಪೊಳಲಿ ರಾಜರಾಜೇಶ್ವರಿ ದೇವಿ ಮಹಿಮೆ ನೋಡಿ.

ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ.
ಈ ದೇವಿಯ ಮೂರ್ತಿ ಬಹಳ ವಿಶೇಷವಾದದ್ದು ಮಣ್ಣಿನಿಂದ ಮಾಡಿದ ಶ್ರೀ ರಾಜರಾಜೇಶ್ವರಿ ದೇವಿಯ ವಿಗ್ರಹದ ಇತಿಹಾಸ ರೋಚಕ ಕಥೆಯನ್ನು ತೆರೆಯುತ್ತದೆ. ಬನ್ನಿ ಕ್ಷೇತ್ರ ಮಹಿಮೆ ನೊಡೋಣ.

ದೇಗುಲ ದರ್ಶನ ಕರ್ನಾಟಕ-ಪೊಳಲಿ-ರಾಜರಾಜೇಶ್ವರಿ ದೇವಿಯ ಪಾದಕ್ಕೊಂದು ಭಕ್ತಿಪೂರ್ವಕ ನಮನ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಗ್ರಾಮದಲ್ಲಿ ನೆಲೆಸಿದ್ದಾಳೆ ಶ್ರೀ ರಾಜರಾಜೇಶ್ವರಿ. ಈ ಕ್ಷೇತ್ರ ಅತ್ಯಂತ ಪ್ರಾಚೀನವಾದದ್ದು ಸುರತ ಎಂಬ ಮಹಾರಾಜ ಈ ತಾಯಿಯನ್ನು ಪ್ರತಿಷ್ಠಾಪಣೆ ಮಾಡಿದ ಎಂಬ ಕಥೆಯಿದೆ. ಕ್ರಿ.ಶ ದ ಪ್ರಾರಂಭದಿಂದಲೂ ಈ ದೇವಸ್ಥಾನದ ಹೆಸರನ್ನು ಉಲ್ಲೇಖಿಸಲಾಗಿದೆ ಅಶೋಕನ ಶಾಸನದಲ್ಲಿ ವಿದೇಶಿ ಪ್ರವಾಸದ ಕಥನಗಳಲ್ಲಿ ಪೊಳಲಿ ರಾಜರಾಜೇಶ್ವರಿಯ ಉಲ್ಲೇಖ ಮಾಡಲಾಗಿದೆ. ಸುಮಾರು ೨೦೦೦ ವರ್ಷಗಳ ಹಿಂದೆ ಸುರತ ಮಹಾರಾಜ ರಾಜ್ಯವನ್ನು ಆಳುತ್ತದ್ದರು ವೈರಿಗಳ ಆಕ್ರಮಣದಿಂದ ರಾಜ್ಯವನ್ನು ಕಳೆದುಕೊಂಡು ರಾಜ್ಯಭ್ರಷ್ಠನಾಗಿ ಮೂರು ವರುಷ ತಪಸ್ಸನ್ನು ಮಾಡಿದರು ಆಮೇಲೆ ಅವರಿಗೆ ದೇವಿಯ ಸ್ವಪ್ನ ಬರುತ್ತದೆ. ಸುಬ್ರಮಣ್ಯ,ಮಹಾಗಣಪತಿ, ರಾಜರಾಜೇಶ್ವರಿ, ಭದ್ರಕಾಳಿ ಪ್ರದಾನ ವಿಗ್ರಹಗಳು ಮೃಣ್ಮಯ ಮೂರ್ತಿಗಳನ್ನು ಸುರತ ಮಹಾರಾಜರು ಪ್ರತಿಷ್ಠಾಪಿಸಿದರು. ಆರಾಧನೆ ಮಾಡುತ್ತಾ ಬಂದರು ಅವರು ಕಳಿದುಕೊಂಡ ರಾಜ್ಯವನ್ನೆಲ್ಲ ಮರಳಿ ಪಡೆದರು. (Follow Beauty of Tulunad page)

ರಾಜರಾಜೇಶ್ವರಿಯ ವಿಶೇಷತೆ ಬಗ್ಗೆ ಹೇಳಬೆಕೆಂದರೆ ಸಾಮಾನ್ಯವಾಗಿ ದೇವತಾ ಮೂರ್ತಿಗಳು ಕಲ್ಲಿನದ್ದಾಗಿರುತ್ತದೆ ಆದರೆ ಪೊಳಲಿ ಶ್ರೀ ರಾಜರಾಜೇಶ್ವರಿಯದ್ದು ವಿಶಿಷ್ಠವಾದ ಮಣ್ಣಿನ ವಿಗ್ರಹ ಸಾವಿರಾರು ವರ್ಷಗಳಿಗೂ ಇಲ್ಲಿ ಮಣ್ಣಿನ ಮೂರ್ತಿಯನ್ನೇ ಪೂಜಿಸುತ್ತಾ ಬರಲಾಗಿದೆ ಇದು ಅಂತಿಂಥ ಮಣ್ಣಿನ ಮೂರ್ತಿಯಲ್ಲ ಕಲ್ಲಿನಷ್ಟೇ ಗಟ್ಟಿಯಾದದ್ದು ಮಣ್ಣಿನ ಮೂರ್ತಿಯನ್ನು ಮರಗಳ ವಿಶಿಷ್ಠ ರಸಗಳನ್ನು ಬಳಸಿ ಮಣ್ಣಿಗೆ ಕಲ್ಲಿನ ಬಲ ಬರುವಂತೆ ಮಾಡಲಾಗಿದೆ. ಈ ವಿಧಾನವು ಬಹು ಪುರಾತನವಾದದ್ದು ಇಂದಿಗೂ ಬಹು ಹಿಂದೆಯೇ ಮಿಶ್ರಣ ಮಾಡಲಾದ ಮಣ್ಣಿನಿಂದ ತಾಯಿಯ ವಿಗ್ರಹ ನಿರ್ಮಾಣ ಮಾಡಲಾಗಿದೆ. (Follow Beauty of Tulunad page)

ಪೊಳಲಿಯ ಶ್ರೀ ರಾಜರಾಜೇಶ್ವರಿಯ ಮೂರ್ತಿಯು ಸುಮಾರು ೯ ಅಡಿಗಳಿಗೂ ಎತ್ತರವಿದೆ ಇಡೀ ಭಾರತದಲ್ಲಿ ಇಷ್ಟು ದೊಡ್ಡದಾದ ಮಣ್ಣಿನ ಮೂರ್ತಿ ಬೇರೆಲ್ಲೂ ಇಲ್ಲ ತಾಯಿಯ ವಿಗ್ರಹವು ತನ್ನ ಗಾತ್ರದಿಂದ ಅಷ್ಟೇ ಅಲ್ಲ ಕಲಾತ್ಮಕವಾಗಿಯೂ ಮೂರ್ತಿಯು ಅತ್ಯಾಕರ್ಷಕವಾದ ವಜ್ರದ ಕಿರೀಟವನ್ನು ಹೊಂದಿದೆ. ಈ ಕಿರೀಟವನ್ನು ಸುರತ ಮಹಾರಾಜರು ದೇವಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯ ಎದುರು ನಿಂತಾಗ ನಮ್ಮೆಲ್ಲಾ ದು:ಖ ನಾಶವಾಗಿ ಸುಖ ನೆಮ್ಮದಿ ಮನೆ ಮಾಡುತ್ತದೆ ಹಚ್ಚ ಹಸಿರಿನಂದ ಕೂಡಿದ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಾಕು ಮನಸ್ಸು ಉಲ್ಲಾಸವಾಗುತ್ತದೆ ಸರ್ವಾಲಂಕರಭೂಷಿತವಾದ ಮೃಣ್ಮಯ ವಿಗ್ರಹವನ್ನು ನೋಡಿದಾಗ ಪ್ರಶಾಂತ ಮನಸ್ಥಿತಿ ಪಡೆದು ರೋಮಾಂಚಿತರಾಗುತ್ತೇವೆ. ವಿಗ್ರಹದಲ್ಲಿ ನೆಟ್ಟ ದೃಷ್ಠಿಯನ್ನು ಹಿಂತೆಗೆಯಲಾರದ ಭಾವ ತನ್ಮಯತೆ ಹೊಂದುತ್ತೇವೆ. (Follow Beauty of Tulunad page)

ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಅತೀ ಪುರಾತನ ದೇವಾಲಯಗಳಲ್ಲಿ ಒಂದು. ಸುಮಾರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಪುರಾಣವಿದೆ. ಸುರಥ ಮಹಾರಾಜನು ವೈರಿಗಳ ಆಕ್ರಮನದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುತ್ತಿರಲು ಸುಮೇದಿ ಎಂಬ ವೈಶ್ಯನು ಸಿಕ್ಕಿದ್ದನು. ಇವರಿಬ್ಬರು ಒಟ್ಟಾಗಿ ಕಾಡದಾರಿಯಲ್ಲಿ ಹೋಗುತ್ತಿರಲು ಸುಮೇಧ ಮುನಿಯ ಆಶ್ರಮವನ್ನು ಕಂಡು ಮುನಿವರ್ಯರಲ್ಲಿ ತನ್ನ ಕಷ್ಟವೆಲ್ಲವನ್ನು, ಹೇಳಲಾಗಿ, ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನದಿಂದಿರಲು ಹೇಳಲಾಗಿ, ರಾಜನು ಶ್ರೀದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಂಡ ಅರಸ ವಿಷಯವನ್ನು ಮುನಿಗೆ ತಿಳಿಸಲಾಗಿ, ಸುಮೇಧ ಮುನಿಯು ಅರಸನಿಗೆ ತಾನು ಕಂಡಂತೇ ಮೂರ್ತಿಯನ್ನು ಸೃಷ್ಟಿಸಿ, ಪ್ರತಿಷ್ಟಾಪಿಸಿ ಪೂಜಿಸು ಎಂದು ಹೇಳಿದಂತೆ ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು, ಸೃಷ್ಟಿಸಿ, ಪೂಜಿಸುತ್ತಿರಲು ತಾನು ಕಳಕೊಂಡ ಸಮಸ್ತ ರಾಜ್ಯಗಳನ್ನು ಮರಳಿ ಪಡೆದನೆಂದು ಕಥೆಯಿದೆ.

ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ, “ಪೊಳಲಿ” ಎಂಬ ಹೆಸರು ಬಂತು. ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ.

ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು ಸುಮೇಧಮುನಿಯು ಪ್ರತಿಷ್ಟಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ. ಇದು ಇಲ್ಲಿಯ ವಿಶೇಷತೆ. (Follow Beauty of Tulunad page)

ಶ್ರೀ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರೀಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ. ದೈನಂದಿನ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಮಂಗಳವಾರ, ಗುರುವಾರ ಆದಿತ್ಯವಾರಗಳಲ್ಲಿ ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ವರ್ಷಂಪ್ರತಿ ನಡೆಯುವ ವಿಶೇಷ ಹಬ್ಬಗಳ ಆಚರಣೆ ಇಲ್ಲಿದೆ. ಇಲ್ಲಿಯ ಜಾತ್ರೋತ್ಸವ ಲೋಕಪ್ರಸಿದ್ಡವಾದುದು, ಹದಿನಾರು ಮಾಗಣೆ ಒಳಪಟ್ಟ್ತ ಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಡಿ ಪಡೆದಿದೆ. ಪವಿತ್ರವಾದ ಪಲ್ಗುಣಿ ನದಿಯ ಎಡದಂಡೆಯಲ್ಲಿ ಹೊಲ, ಗುಡ್ಡೆ ಬೆಟ್ಟಗಳ ಮದ್ಯದಲ್ಲಿ ಶ್ರೀ ದೇವಳವು ರಾರಾಜಿಸುತ್ತದೆ. ಈ ಕ್ಷೇತ್ರ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಳಾದ ಶ್ರೀ ಮಾತೆ, ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಇಷ್ಟಪ್ರದಾಯಕಿಯಾಗಿ ಇಲ್ಲಿ ಮೆರೆಯುತ್ತಿದ್ದಾಳೆ. ಈ ಕಾರಣದಿಂದಾಗಿ ಇಲ್ಲಿಗೆ ಭಕ್ತಮಾಹಾಸಾಗರವೇ ಹರಿದು ಬರುವುದು ವಿಶೇಷ. ಪ್ರದಾನ ದೇವತೆ ಶ್ರೀ ರಾಜರಾಜೇಶ್ವರೀ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಆಳೆತ್ತರದ ಕುಳಿತ ಭಂಗಿಯ ವಿಗ್ರಹಗಳಾಗಿದ್ದು ಇದು ಭಾರತದಲ್ಲೇ ಪ್ರಥಮ ಎಂದು ಹೇಳಿದರೂ ತಪ್ಪಗಲಾರದು. ಶ್ರೀದೇವಿಗೆ ತೊಡಲು ಹದಿನೆಂಟು ಮೊಳದ ಸೀರೆ ವಿಶೇಷ. ಇಲ್ಲಿ ಸಾನಿಧ್ಯವೃದ್ಧಿಗಾಗಿ ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ.(Follow Beauty of Tulunad page)

30/08/2024
From Mangala stadium to Paris Olympics 😍♥️🧿Mijo Chacko Kurian, 29 from Panumbur, Mangalore will be representing the Indi...
29/07/2024

From Mangala stadium to Paris Olympics 😍♥️🧿

Mijo Chacko Kurian, 29 from Panumbur, Mangalore will be representing the India 4*400m relay at the Paris Olympics.

1×Asian games winner 🥇
1×Asian Championship Silver medalist 🥈
1×National champion

originally from Kerala descent was raised in Panumbur. He completed his schooling at St. Aloysius, Urwa & PU from Sharadha Vidyalaya and then joined the Indian Air Force.

The whole of Kudla & India 🇮🇳 will be backing you.. all the best 🙏👏




13/11/2023

Address

Mangalore

Alerts

Be the first to know and let us send you an email when Taulava Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Taulava Foundation:

Share