Uniwef karnataka

Uniwef karnataka UNIWEF aims at Social, religious, economical, political and educational reformation of the entire community

AIMS:
1> IMPROVING THE MUSLIM COMMUNITY
2> REMOVING MISCONCEPTIONS ABOUT ISLAM
3> EDUCATING THE COMMUNITY
4> SOCIAL SERVICE
5> REFRESHING THE HISTORY OF OUR MUSLIM LEADERS

ಸ್ವಾತಂತ್ರ್ಯ ದಿನಾಚರಣೆ – UNIWEF ಕರ್ನಾಟಕ🇮🇳 ಸಾಮರಸ್ಯ, ಸಮಾನತೆ ಮತ್ತು ಸಹಬಾಳ್ವೆಗಾಗಿ ಸ್ವಾತಂತ್ರ್ಯ 🇮🇳ಯುನಿವೆಫ್ ಕರ್ನಾಟಕದ ವತಿಯಿಂದ ಮಂಗಳೂ...
16/08/2026

ಸ್ವಾತಂತ್ರ್ಯ ದಿನಾಚರಣೆ – UNIWEF ಕರ್ನಾಟಕ

🇮🇳 ಸಾಮರಸ್ಯ, ಸಮಾನತೆ ಮತ್ತು ಸಹಬಾಳ್ವೆಗಾಗಿ ಸ್ವಾತಂತ್ರ್ಯ 🇮🇳

ಯುನಿವೆಫ್ ಕರ್ನಾಟಕದ ವತಿಯಿಂದ ಮಂಗಳೂರಿನ ಫಳ್ನೀರ್‌ನಲ್ಲಿರುವ ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ದೇಶಭಕ್ತಿ, ಸಾಮರಸ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಸಾರುವ ಮೂಲಕ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಮಾಜಿ ಪಿಎಸ್‌ ಟು ಡಿಸಿ ಶ್ರೀ ಇಬ್ರಾಹಿಂ ನಝೀರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸ್ವಾತಂತ್ರ್ಯದ ಮಹತ್ವ ಹಾಗೂ ಸಮಾಜದಲ್ಲಿ ಪರಸ್ಪರ ಸೌಹಾರ್ದತೆ ಮತ್ತು ಸಹಬಾಳ್ವೆಯ ಅಗತ್ಯತೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನಿವೆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ರಫೀಉದ್ದೀನ್ ಕುಡ್ರೋಳಿ ಅವರು ವಹಿಸಿದ್ದರು.

ವೇದಿಕೆಯಲ್ಲಿ
🔹 ಶ್ರೀ ಉಬೈದುಲ್ಲಾ – ಯುನಿವೆಫ್ ಕರ್ನಾಟಕ, ಮಂಗಳೂರು ಘಟಕದ ಅಧ್ಯಕ್ಷರು
🔹 ಶ್ರೀ ಫಝಲ್ ಮುಹಮ್ಮದ್ – ಯುನಿವೆಫ್ ಕರ್ನಾಟಕ, ಉಳ್ಳಾಲ ಘಟಕದ ಅಧ್ಯಕ್ಷರು

ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ನಬೀಲ್ ಶಬಾನ್, ಯುನಿವೆಫ್ ಕರ್ನಾಟಕ, ಕುಡ್ರೋಳಿ ಘಟಕದ ಅಧ್ಯಕ್ಷರು, ನಡೆಸಿಕೊಟ್ಟರು.

ಸಮಾಜದಲ್ಲಿ ಸಾಮರಸ್ಯ, ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

🇮🇳 ಸ್ವಾತಂತ್ರ್ಯವನ್ನು ಆಚರಿಸುವುದರ ಜೊತೆಗೆ, ಸ್ವಾತಂತ್ರ್ಯದ ಮೌಲ್ಯಗಳನ್ನು ಸಮಾಜದಲ್ಲಿ ಬದುಕೋಣ. 🇮🇳

#ಸ್ವಾತಂತ್ರ್ಯ_ದಿನಾಚರಣೆ #ಸಾಮರಸ್ಯ #ಸಮಾನತೆ #ಸಹಬಾಳ್ವೆ

🏆 ಮೌಲಾನಾ ಹಬೀಬುರ್ರಹ್ಮಾನ್ ಲುಧ್ಯಯಾನ್ವೀ ಪ್ರಶಸ್ತಿ – 2026SSLC / PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭಯುನಿವೆಫ್ ...
09/08/2026

🏆 ಮೌಲಾನಾ ಹಬೀಬುರ್ರಹ್ಮಾನ್ ಲುಧ್ಯಯಾನ್ವೀ ಪ್ರಶಸ್ತಿ – 2026

SSLC / PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಯುನಿವೆಫ್ ಕರ್ನಾಟಕದ ದೇರಳಕಟ್ಟೆ ಘಟಕದ ವತಿಯಿಂದ ಮೌಲಾನಾ ಹಬೀಬುರ್ರಹ್ಮಾನ್ ಲುಧ್ಯಯಾನ್ವೀ ಪ್ರಶಸ್ತಿ – 2026ರ ಅಂಗವಾಗಿ SSLC ಹಾಗೂ PUC ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ 55ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ರಫೀಉದ್ದೀನ್ ಕುದ್ರೋಳಿ ವಹಿಸಿದ್ದರು. ವೇದಿಕೆಯಲ್ಲಿ ಜನಾಬ್ ಅಮೀರ್, ಜನಾಬ್ ಉಮ್ಮರ್ ಕುಂಞಿ ಹಾಗೂ ಜನಾಬ್ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಯುನಿವೆಫ್ ಕರ್ನಾಟಕ, ದೇರಳಕಟ್ಟೆ ಘಟಕದ ಸಂಚಾಲಕರಾದ ಮುಹಮ್ಮದ್ ಸೈಫುದ್ದೀನ್ Saifuddeen Kudroli ಅವರು ಕಾರ್ಯಕ್ರಮವನ್ನು ನಿರೂಪಸಿದರು

ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ, ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯದ ಯಶಸ್ಸಿಗೆ ಶುಭ ಹಾರೈಸಲಾಯಿತು.

55ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸಿದ ಈ ಕಾರ್ಯಕ್ರಮವು ಶಿಕ್ಷಣದ ಮಹತ್ವವನ್ನು ಸಾರುವ ಹಾಗೂ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

🌟 ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳು!
📚 ಶಿಕ್ಷಣವೇ ಪ್ರಗತಿಯ ದಾರಿ — ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ.

UNIWEF Karnataka – Derlakatte Unit

🔥🔥🔥🔥🔥🔥🔥🔥🔥🔥🔥*BREAKING NEWS*➖➖➖➖➖➖*S.S.L.C ಹಾಗೂ PUC ಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳ ಗಮನಕ್ಕೆ*➖➖➖➖➖➖➖➖➖➖➖  ...
08/07/2026

🔥🔥🔥🔥🔥🔥🔥🔥🔥🔥🔥
*BREAKING NEWS*
➖➖➖➖➖➖

*S.S.L.C ಹಾಗೂ PUC ಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳ ಗಮನಕ್ಕೆ*
➖➖➖➖➖➖➖➖➖➖➖

*2025/26 ಸಾಲಿನ S.S.L.C ಹಾಗೂ PUC ಯಲ್ಲಿ 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿರುವ ಕುದ್ರೋಳಿ , ಬಂದರ್, ಬೆಂಗರೆ, ಕಂದುಕ, ಪಾಂಡೇಶ್ವರ , ಸುಭಾಶ್ ನಗರ, ಬೋಳಾರ ,ಜೆಪ್ಪು ಹಾಗು ಮಹಾಕಾಳಿ ಪಡ್ಪು ಪರಿಸರದ ಮುಸ್ಲಿಮ್ ವಿದ್ಯಾರ್ಥಿ/ವಿಧ್ಯಾರ್ಥಿನಿಯರು, ತುರ್ತಾಗಿ ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ಶೈಕ್ಷಣಿಕ ವಿಭಾಗವನ್ನು ಸಂಪರ್ಕಿಸಬೇಕಾಗಿ ವಿನಂತಿ*

*ಅರ್ಜಿ ಹಾಕಲು ಕೆಳಗಿನ ಲಿಂಕ್ ಒತ್ತಿ ಪೂರ್ತಿಗೊಳಿಸಿ*

👉https://bit.ly/4vMOL0A

*ಸಂಪರ್ಕಿಸ ಬೇಕಾದ ಸಂಖ್ಯೆ*:

*ಸಂಚಾಲಕರು- 9964129116*
*ಶಾಖಾ ಕಾರ್ಯದರ್ಶಿ- 99800 01717*

*ವಿಶೇಷ ಸೂಚನೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/07/2026 ಶನಿವಾರ.*

*ಹುಝೈಫ್ ಕುದ್ರೋಳಿ*
*ಕಾರ್ಯಕ್ರಮ ಸಂಚಾಲಕರು*
*ಯುನಿವೆಫ್ ಕರ್ನಾಟಕ, ಕುದ್ರೋಳಿ ಶಾಖೆ*

🔥🔥🔥🔥🔥🔥🔥🔥🔥🔥🔥

*ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ*ಯುನಿವೆಫ್ ಕರ್ನಾಟಕ ಇದರ ದ.ಕ. ಜಿಲ್ಲಾ ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರ ಕಂಕನಾಡಿಯ ಜಮೀಯತು...
15/04/2026

*ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ*

ಯುನಿವೆಫ್ ಕರ್ನಾಟಕ ಇದರ ದ.ಕ. ಜಿಲ್ಲಾ ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರ ಕಂಕನಾಡಿಯ ಜಮೀಯತುಲ್ ಫ಼ಲಾಹ್ ಹಾಲ್ ನಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ಜನಾಬ್ ರಫೀಉದ್ದೀನ್ ಕುದ್ರೋಳಿಯವರು ಹಜ್ ಮತ್ತು ಉಮ್ರಾಃ ದ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ಸವಿಸ್ತಾರವಾಗಿ ಹಾಜಿಗಳಿಗೆ ವಿವರಿಸಿದರು. ಕಾರ್ಯದರ್ಶಿ ಸೈಫುದ್ದೀನ್ ಕುದ್ರೋಳಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಹೀಮ್ ಕಿರಾ ಅತ್ ಪಠಿಸಿದರು. ನಬೀಲ್ ಶಾಬಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಜ್ ಕರ್ಮದ ಬಗ್ಗೆ ಹಾಜಿಗಳ ಸಮಸ್ಯೆಗಳಿಗೆ ಅಂತರ್‍ರಾಷ್ಟ್ರೀಯ ವಿಧ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಪರಿಹಾರ ಸೂಚಿಸಿದರು. ಈ ಸಂದರ್ಭದಲ್ಲಿ ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಕಡೆಗಳಿಂದ ಹಾಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಯುನಿವೆಫ್ ಕರ್ನಾಟಕ ಹಜ್ಜ್ ತರಬೇತಿ ಶಿಬಿರ 2026ಯುನಿವೆಫ್ ಕರ್ನಾಟಕವು ಪ್ರತೀ ವರ್ಷದಂತೆ ಈ ವರ್ಷವು ಪ್ರಾಯೋಗಿಕ ಹಜ್ಜ್ ತರಬೇತಿ ಬ್ಯಾರಿ ಹಾಗೂ ಉರ...
31/03/2026

ಯುನಿವೆಫ್ ಕರ್ನಾಟಕ ಹಜ್ಜ್ ತರಬೇತಿ ಶಿಬಿರ 2026

ಯುನಿವೆಫ್ ಕರ್ನಾಟಕವು ಪ್ರತೀ ವರ್ಷದಂತೆ ಈ ವರ್ಷವು ಪ್ರಾಯೋಗಿಕ ಹಜ್ಜ್ ತರಬೇತಿ ಬ್ಯಾರಿ ಹಾಗೂ ಉರ್ದು ಭಾಷೆಯಲ್ಲಿ ಮಂಗಳೂರು ನಗರ ಜಮೀಅತುಲ್ ಫಲಾಹ್ ಹಾಲ್, ಕಂಕನಾಡಿ ಯಲ್ಲಿ ತಾರೀಕು ಏಪ್ರಿಲ್ 15 ರಂದು ಜರುಗಲಿಕ್ಕಿದೆ.
ಎಲ್ಲಾ ಹಜ್ಜಾಜಿಗಳು ಹಾಗೂ ಆಸಕ್ತರು ಭಾಗವಹಿಸಬಹುದು

For Registration and Information contact
8105978369

Let them Celebrate Eid like usDonate generously towards Eid KitSend your contribution to SecretaryUniwef Karnataka 99459...
14/03/2026

Let them Celebrate Eid like us

Donate generously towards Eid Kit

Send your contribution to

Secretary
Uniwef Karnataka
9945913824

ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಉಳ್ಳಾಲ, ಕುಂಪಲ, ತೊಕ್ಕೊಟ್ಟು, ಕಲ್ಲಾಪು ಹಾಗೂ ಆಸುಪಾಸಿನ ಅರ್ಹ ಜನರ...
23/01/2026

ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಉಳ್ಳಾಲ, ಕುಂಪಲ, ತೊಕ್ಕೊಟ್ಟು, ಕಲ್ಲಾಪು ಹಾಗೂ ಆಸುಪಾಸಿನ ಅರ್ಹ ಜನರ ರಮದಾನ್‌ ಕಿಟ್ ವಿತರಿಸಲು ತೀರ್ಮಾನಿಸಿದೆ.

ಸಹೃದಯಿ ದಾನಿಗಳು ನಮ್ಮ ಈ ಪುನ್ಯ ಕಾರ್ಯದಲ್ಲಿ ಭಾಗವಹಿಸಿ ನಮಗೆ ಸಹಕರಿಸಿರಿ

ಹೆಚ್ಚಿನ ಮಾಹಿತಿಗಾಗಿ ಉಳ್ಳಾಲ ಶಾಖಾಧ್ಯಕ್ಷರಾದ ಅಸಿಫ್ ಕುದ್ರೋಳಿ ಅವರನ್ನು ಸಂಪರ್ಕಿಸಬಹುದು
9902326591

ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಕುದ್ರೋಳಿ, ಬಂದರ್, ಶುಭಾಷ್ ನಗರ, ಜೆಪ್ಪು ಹಾಗೂ ಆಸುಪಾಸಿನ ಅರ್ಹ ...
22/01/2026

ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಕುದ್ರೋಳಿ, ಬಂದರ್, ಶುಭಾಷ್ ನಗರ, ಜೆಪ್ಪು ಹಾಗೂ ಆಸುಪಾಸಿನ ಅರ್ಹ ಜನರ ರಮದಾನ್‌ ಕಿಟ್ ವಿತರಿಸಲು ತೀರ್ಮಾನಿಸಿದೆ.

ಸಹೃದಯಿ ದಾನಿಗಳು ನಮ್ಮ ಈ ಪುನ್ಯ ಕಾರ್ಯದಲ್ಲಿ ಭಾಗವಹಿಸಿ ನಮಗೆ ಸಹಕರಿಸಿರಿ

ಹೆಚ್ಚಿನ ಮಾಹಿತಿಗಾಗಿ ಕುದ್ರೋಳಿ ಶಾಖಾಧ್ಯಕ್ಷರಾದ Saifuddeen Kudroli ಅವರನ್ನು ಸಂಪರ್ಕಿಸಬಹುದು
9945913824

Address

Mangalore

Website

Alerts

Be the first to know and let us send you an email when Uniwef karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Uniwef karnataka:

Shortcuts

Share