25/05/2026
ಪುಣ್ಯಭೂಮಿ ನಿಲಯ ಗೃಹ ಪ್ರವೇಶದ ಪ್ರಯುಕ್ತ ನಡೆದ ಅರ್ಥ ಪೂರ್ಣ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸರ್ವರಿಗೂ ಮನದಾಳದ ವಂದನೆಗಳೊಂದಿಗೆ.
ತಾಯಿಯೋರ್ವಳ ಅನೇಕ ವರ್ಷದ ಕನಸು ನನಸಾಗುವ ಜೊತೆಗೆ ಆಡಂಬರ ಎನ್ನುವ ಚಿಂತನೆಗೆ ಕಡಿವಾಣವಿಟ್ಟು ಆತ್ಮಸಂತೃಪ್ತಿಯೊಳು ಲೀನವಾಗಿ ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್(ರಿ.),ಶ್ರೀ ರಾಮ ಭಜನಾ ಮಂಡಳಿ (ರಿ.) ಕರುವೇಲು,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರ್ವೆಲ್
ಹಾಗೂ,ಕೆ.ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆ ಇವರ ಜಂಟಿ ಸಹಯೋಗದೊಂದಿಗೆ 17.04 2026 ರಂದು ಯಶಸ್ವಿಯಾದ
ದಾನಗಳಲ್ಲಿ ಮಹಾದಾನ ವಾದ ರಕ್ತದಾನ ಶಿಬಿರ ಹಾಗೂ 18.04.2026 ರಂದು ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯ ರಿಗೆ ಪೂಜೆ.
ಅದೇ ದಿನ 18.04.2026 ರಂದು ಸರಿ ಸುಮಾರು 1 ಲಕ್ಷ ರೂ ವೆಚ್ಚದಲ್ಲಿ ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್(ರಿ.), ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ.),ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.) ಸಹಭಾಗಿತ್ವ ದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ವೆಲ್ ಸರಿ ಸುಮಾರು 60 ಮಕ್ಕಳಿರುವ ಈ ಶಾಲೆಗೆ ಮಳೆಗಾಲದಲ್ಲಿ ಸರಿಯಾಗಿ ಊಟ ಮಾಡಲು ಪರತಪಿಸುವ ಈ ಪುಟ್ಟ ಮಕ್ಕಳಿಗೆ ಬೆಚ್ಚನೆಯ ಕೊಠಡಿ ಅವಶ್ಯಕತೆ ಬಿದ್ದಾಗ ಸಭಾಂಗಣ ವಾಗಿ ಉಪಯೋಗಿಸಲ್ಪಸುವ ಸಭಾಂಗಣ ಲೋಕಾರ್ಪಣೆ.
ಅದೇ ದಿನ 18.04.2026 ರಂದು ಪುಣ್ಯಭೂಮಿ ನಿಲಯ ಗೃಹ ಪ್ರವೇಶದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಗಳಾಗಿ
ದಯಾನಂದ್ ಕತ್ತಲ್ಸಾರ್
ಅರ್ಜುನ್ ಭಂಡಾರ್ಕರ್
ರೋಷನ್ ಹ್ಯೂಮನಿಟಿ
ಮನೋಜ್ ಕಟ್ಟೆಮಾರ್
ತನಿಯಪ್ಪ ಪೂಜಾರಿ
ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್ (ರಿ.) ಹಾಗೂ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಹಭಾಗಿತ್ವ ದಲ್ಲಿ ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ.
ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್(ರಿ.) ವತಿಯಿಂದ ಶ್ರೀ ರಾಮ ಭಜನಾ ಮಂದಿರ ಕರುವೇಲು ಇಲ್ಲಿನ ಸರಿ ಸುಮಾರು 46 ಮಕ್ಕಳಿಗೆ ಸಮವಸ್ತ್ರ ವಿತರಣೆ,ಬಿಳಿಯೂರು ಭಜನಾ ಮಂದಿರಕ್ಕೆ ಶೀಟ್ ಅಳವಡಿಕೆ,ವೈದ್ಯಕೀಯ ನೆರವು ಹಾಗೂ ಬಡ ಶಾಲಾ ಮಕ್ಕಳಿಗೆ ಸ್ಕೂಲ್ ಫೀಸ್ ವಿತರಣೆ,ಮೂಕ ಪ್ರಾಣಿಗಳ ಆಹಾರ ವಿತರಣೆ,ಸಾಧಕರಿಗೆ ಸನ್ಮಾನ,ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ.
ಅದೇ ದಿನ ಸಂಜೆ ಭಜನಾ ಕಾರ್ಯಕ್ರಮ
ಹಾಗೂ ಕಲ್ಲುರ್ಟಿ ಹಾಗೂ ಮಂತ್ರದೇವತೆ ದೈವಗಳಿಗೆ ನೇಮೋತ್ಸವ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನದಾಳದಿ ಸಹಕರಿಸಿದ ಸರ್ವರಿಗೂ ನಾವು ನಂಬಿಕೊಂಡು ಬಂದಿರುವ ಅಪ್ಪೆ ಕಲ್ಲುರ್ಟಿ ಹಾಗೂ ಮಂತ್ರದೇವತೆ ಸರ್ವರಿಗೂ ಸಕಲೈಶ್ವರ ವನ್ನಿತ್ತು ಹರಸಲಿ.
🙏🏻🙏🏻🙏🏻🔥🔥🔥