ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ನಾಗೂರು ಎಂಬಲ್ಲಿಂದ 2 ಕಿ.ಮೀ ದೂರದಲ್ಲಿ ಸಾಗಿದರೆ ಹಚ್ಚ ಹಸುರಿನ ಪ್ರಶಾಂತ ಪ್ರದೇಶದಲ್ಲಿ ನಮ್ಮ ದೇವಸ್ಥಾನವು ಇರುತ್ತದೆ. ಇದಕ್ಕೆ ಅರೆಹೊಳೆ ಕ್ರಾಸಿನ ಮೂಲಕ ಸಾಧಾರಣ 5 ಕಿ.ಮೀ. ಬಳಸಿ ಕೂಡ ಬರಬಹುದು. ಇದು ವಿಶ್ವಕರ್ಮರ ಆದಾಧನಾ ಕ್ಷೇತ್ರ ಶ್ರೀ ಕಾಳಿಕಾಂಬೆ, ವಿಶ್ವಕರ್ಮ ಹಾಗೂ ನಾಗಲಿಂಗ ಸ್ವಾಮಿಯವರನ್ನು ಆರಾಧಿಸಿಕೊಂಡು ಬಂದದ್ದಾಗಿರುತ್ತದೆ.
ಇತಿಹಾಸಗಳ ಆಧಾರದಂತೆ ಸಾಧಾರಣ 300 ರಿಂದ 400 ವರ್ಷಗಳಷ್ಟು ಹಿಂದೆಯೇ ಸ್ಥಾಪಿಸಲ
್ಪಟ್ಟಿದ್ದಾಗಿರುತ್ತದೆ. ಈ ದೇವಸ್ಥಾನವು ಪುರಾತನವಾಗಿದ್ದು, ಪವಾಡ ಪುರುಷರಾದ ಶ್ರೀ ಕರಸ್ಥಳ ನಾಗಲಿಂಗ ಸ್ವಾಮಿಯವರು ಲೋಕ ಸಂಚಾರ ಮಾಡುತ್ತಾಈ ಪರಿಸರಕ್ಕೆ ಬಂದು ವಿಭೂತಿ ಉಂಡೆಯನ್ನು ಬಿಟ್ಟು ಹೋದರೆಂದು ಪ್ರತೀತಿ ಇದೆ. ದೊಡ್ಡ ವಿಭೂತಿ ಉಂಡೆಯನ್ನು ನಾಗಲಿಂಗ ಸ್ವಾಮಿಯ ಸ್ವರೂಪದಿಂದಲೂ (ಈ ಉಂಡೆಯು ಬೆಳೆಯುತ್ತ ಇರುವುದು ವಿಶೇಷ) ಇನ್ನು 5 ಚಿಕ್ಕ ಉಂಡೆಯನ್ನು ವಿಶ್ವಕರ್ಮನ ಸ್ವರೂಪದಿಂದಲೂ, ಲಿಂಗರೂಪದಿಂದಿರುವ ಇನ್ನೊಂದನ್ನು ಕಾಳಿಕಾಂಬೆಯ ಸ್ವರೂಪದಿಂದಲೂ ಒಂದೇ ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡಿಕೊಂಡು ಬರುತ್ತಾ ಇದ್ದೇವೆ. 3 ರೂಪಗಳ ಮೇಲೂ ಹಿಂಗಾರವನ್ನು ಇಟ್ಟು ಮಂಗಳಾರತಿ ಮಾಡಿ ಪ್ರಸಾದ ನೋಡುವುದಕ್ಕೆ ಹೆಸರುವಾಸಿಯಾದ ಕ್ಷೇತ್ರ. ಅಲ್ಲದೇ ನಂಬಿದವರ ಇಷ್ಟಾರ್ಥ ಶೀಘ್ರ ಸಿದ್ದಿಯಾದ ಘಟನೆಗಳು ಪವಾಡದಂತೆ ನಡೆದಿರುತ್ತದೆ.