Campus Front Of India Koppal

Campus Front Of India Koppal Contact information, map and directions, contact form, opening hours, services, ratings, photos, videos and announcements from Campus Front Of India Koppal, Non-Governmental Organization (NGO), Koppal.

ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜು ಆವರಣದಲ್ಲಿ ಪ್ರತಿಭಟನೆ>>ಕೊಪ್ಪಳದ ಪ್...
14/09/2022

ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜು ಆವರಣದಲ್ಲಿ ಪ್ರತಿಭಟನೆ

>>ಕೊಪ್ಪಳದ ಪ್ರಥಮ ದರ್ಜೆ ಪದವಿ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿ ಒಕ್ಕೂಟ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಭಾಗಿ

ಕೊಪ್ಪಳ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗಂಗಾವತಿಯ ಶ್ರೀ ಕೊಲ್ಲಿನಗೇಶ್ವರ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವು ಹೆಚ್ಚುಗೊಳಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮನವಿಯನ್ನು ನೀಡಲಾಯಿತು.

ಪರೀಕ್ಷಾ ಶುಲ್ಕವನ್ನು ಮೊದಲು ವಿಶ್ವವಿದ್ಯಾಲಯ 1300 ರೂ. ಕ್ಕೆ ಹೆಚ್ಚಿಸಿದ್ದು ಈಗ ವಿದ್ಯಾರ್ಥಿಗಳು ಪ್ರತಿಭಟಿಸಿದಕ್ಕೆ 100 ರೂ. ಕಡಿತಗೊಳಿಸಿ 1200 ರೂ. ಕಟ್ಟುವಂತೆ ಹೇಳಿದ್ದು ಇರುತ್ತದೆ, ಆದರೆ ಕಳೆದ ಬಾರಿ ಪಡೆದ ಪರೀಕ್ಷಾ ಶುಲ್ಕ 150-200 ರೂ. ರಂತೆಯೇ ಈ ಬಾರಿಯೂ ನಿಗದಿಪಡಿಸಲು ಕೋರಿ ಒತ್ತಾಯಿಸಲಾಯಿತು.
ನಂತರ ಪ್ರಾಂಶುಪಾಲರು ಪ್ರತಿಕ್ರಿಯಿಸಿ ಇಂದು ವಿಶ್ವವಿದ್ಯಾಲಯದಲ್ಲಿ ಸಭೆವಿದ್ದು ಅಲ್ಲಿ ಮಾತನಾಡಿ ಕಡಿಮೆಗೊಳಿಸುವುದರ ಬಗ್ಗೆ ಹೇಳುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯರಾದ ಫೈಸಲ್, ಖದರ್, ಅಷ್ಫಾಕ್, ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಿ.ಎಸ್.ಐ ಹಗರಣದ ಸತ್ಯಾಂಶವನ್ನು ಬಯಲಿಗೆಳೆಯಲು ಶಾಸಕ ಬಸವರಾಜ್ ಧಡೆಸುಗೂರ್ ಬಂಧನ ಅನಿವಾರ್ಯ : ಕ್ಯಾಂಪಸ್ ಫ್ರಂಟ್ಕೊಪ್ಪಳ : ರಾಜ್ಯದಲ್ಲಿ ಪ್ರತಿಯ...
13/09/2022

ಪಿ.ಎಸ್.ಐ ಹಗರಣದ ಸತ್ಯಾಂಶವನ್ನು ಬಯಲಿಗೆಳೆಯಲು ಶಾಸಕ ಬಸವರಾಜ್ ಧಡೆಸುಗೂರ್ ಬಂಧನ ಅನಿವಾರ್ಯ : ಕ್ಯಾಂಪಸ್ ಫ್ರಂಟ್

ಕೊಪ್ಪಳ : ರಾಜ್ಯದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಾ ಇದ್ದು, ಇದರ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪಿ.ಎಸ್.ಐ ಹಗರಣ ನಡೆದಿದ್ದು ಬಯಲಿಗೆ ಬಂದಿದೆ, ಈ ಹಗರಣದ ತನಿಖೆಯನ್ನು ಸಿ.ಐ.ಡಿ ಅಧಿಕಾರಿಗಳು ನಡೆಸುತ್ತಿದ್ದು ಇದರಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಬಂಧನ ಕೂಡ ಆಗಿದೆ, ಇನ್ನಷ್ಟು ಅಧಿಕಾರಿಗಳು, ಶಾಸಕರು, ಸಚಿವರುಗಳ ಪಾತ್ರ ಇದರಲ್ಲಿ ಇದೆ ಎಂಬ ಅನುಮಾನವೂ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕನಕಗಿರಿಯ ಶಾಸಕರ ಫೋನ್ ಸಂಭಾಷಣೆಯಿಂದ ಗೋಚರಿಸುತ್ತದೆ. ನೇರವಾಗಿ ಖುದ್ದು ಸರ್ಕಾರವೇ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ತಿಳಿಯಬಹುದು ಆದ್ದರಿಂದ ಸಿ.ಐ.ಡಿ ಕೂಡಲೇ ಅತೀ ಶೀಘ್ರವಾಗಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರ್ ರನ್ನು ಬಂಧಿಸಿ ತನಿಖೆಗೊಳ್ಳಪಡಿಸಿದರೆ ಇಡೀ ಹಗರಣದ ಸತ್ಯಾಂಶವನ್ನು ಬಯಲಿಗೊಳ್ಳಪಡಿಸಬಹುದು. ಆದ್ದರಿಂದ ಶಾಸಕರ ಬಂಧನ ಅನಿವಾರ್ಯವಾಗಿದೆ.
ಒಂದು ವೇಳೆ ಬಂಧಿಸದೇ ಭ್ರಷ್ಟ ಸರ್ಕಾರ ಮತ್ತು ಶಾಸಕರ ಪರವಾಗಿ ಸಿ.ಐ.ಡಿ ಕಾರ್ಯನಿರ್ವಹಿಸಿದರೆ ಜಿಲ್ಲಾಧ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅತಿಕುರಹ್ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆರೆವಾಸದಲ್ಲಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಜೀವ ಉಳಿಸಿ; ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನಗಂಗಾವತಿ : ಹತ್ರಾಸ್ ನಲ್ಲಿ ನಡೆ...
12/09/2022

ಸೆರೆವಾಸದಲ್ಲಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಜೀವ ಉಳಿಸಿ; ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನ

ಗಂಗಾವತಿ : ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಮನೆಯವರಿಗೆ ಸಾಂತ್ವನ ನೀಡಲು ತೆರಳಿದ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ನನ್ನು ಪೋಲಿಸರು ಅನ್ಯಾಯವಾಗಿ ಬಂಧಿಸಿ ಯುಎಪಿಎ ಕೇಸು ದಾಖಲಿಸಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ, ಆದರೆ ಅವರಿಗೆ ಹೃದಯ ಸಂಭಂದಿತ ಅನಾರೋಗ್ಯದಿಂದ ಹಲವಾರು ವರ್ಷಗಳಿಂದ ಪರದಾಡುತ್ತಿದ್ದರು, ಜೈಲಿನಲ್ಲಿರುವಾಗಲೇ ಅವರ ಶಸ್ತ್ರಚಿಕಿತ್ಸೆ ಕೂಡ ನಡೆದಿದ್ದು ಇದೀಗ ಸರಿಯಾದ ಆರೈಕೆ ಸಿಗದ ಕಾರಣ ದೇಹದ ಎಡಭಾಗ ಬಲಹೀನವಾಗಿದ್ದು ಅವರ ಜೀವವೇ ಅಪಾಯದಲ್ಲಿದೆ, ಅನ್ಯಾಯವಾಗಿ ಬಂಧಿಸಲ್ಪಟ್ಟು ಇದೀಗ ಜೈಲಿನಲ್ಲಿಯೇ ಸಾಂಸ್ಥಿಕ ಹತ್ಯೆ ನಡೆಸಲು ಯುಪಿ ಸರ್ಕಾರ ಪ್ರಯತ್ನ ಪಡುತ್ತಿದೆ ಎಂದು ಆರೋಪಿಸಿ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಇಂದು ಭಿತ್ತಿಪತ್ರ ಪ್ರದರ್ಶಿಸಲಾಯಿತು.

ಪಿ.ಎಸ್.ಐ ಹಗರಣ; ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆಕೊಪ್ಪಳ : ಪಿ.ಎಸ್.ಐ ಹಗರಣದ...
06/09/2022

ಪಿ.ಎಸ್.ಐ ಹಗರಣ; ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಕೊಪ್ಪಳ : ಪಿ.ಎಸ್.ಐ ಹಗರಣದಲ್ಲಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರರ ಪಾತ್ರಧಾರಿಕೆ ಕಾಣುತ್ತಿದ್ದು ಅವರನ್ನು ಶೀಘ್ರ ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ಗಂಜ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್ ಮಾತನಾಡಿ ಪ್ರಸ್ತುತ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ, ಪ್ರತಿ ಹಂತದಲ್ಲೂ ಪ್ರತಿ ಯೋಜನೆಯಲ್ಲೂ ಹಗರಣ ಮಾಡುವುದೇ ಈ ಸರ್ಕಾರದ ಸಾಧನೆಯಾಗಿದೆ ಪಿ.ಎಸ್.ಐ ಹಗರಣದ ಕುರಿತು ಶಾಸಕ ಬಸವರಾಜ್ ಧಡೆಸುಗೂರ ಫೋನ್ನಲ್ಲಿ ಮಾತನಾಡಿದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು ಈ ಹಗರಣದಲ್ಲಿ ಕನಕಗಿರಿಯ ಶಾಸಕರ ಪಾತ್ರ ಎದ್ದು ಕಾಣುತ್ತಿದೆ ಆದ ಕಾರಣ ಶಾಸಕರನ್ನು ಬಂಧಿಸಿ ತನಿಖೆಗೊಳಪಡಿಸಿದರೆ ಪಿಎಸ್ಐ ಹಗರಣದ ಕುರಿತಾದ ಇನ್ನಷ್ಟು ದಾಖಲೆಗಳು ಲಭ್ಯವಾಗಲಿದ್ದು, ಆದ ಕಾರಣ ಶೀಘ್ರವಾಗಿ ಶಾಸಕರನ್ನು ಬಂಧಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅತಿಕೂರ್ ರೇಹೇಮನ್, ಜಿಲ್ಲಾ ಸಮಿತಿ ಸದಸ್ಯರಾದ ಖದರ್ ಭಾಷಾ, ಸಾಹಿಲ್, ಫೈಸಲ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಿ.ಎಸ್.ಐ ಹಗರಣದ ಕುರಿತು ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ                      ಪ್ರತಿಭಟನೆದಿನಾಂಕ : 06...
06/09/2022

ಪಿ.ಎಸ್.ಐ ಹಗರಣದ ಕುರಿತು ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ

ಪ್ರತಿಭಟನೆ

ದಿನಾಂಕ : 06/09/22
ಸಮಯ : ಸಂಜೆ 5:15 ಕ್ಕೆ
ಸ್ಥಳ : ಗಂಜ್ ಸರ್ಕಲ್ ಕೊಪ್ಪಳ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ
ಕೊಪ್ಪಳ ಜಿಲ್ಲೆ

ಕೊಪ್ಪಳ : ಸೆಪ್ಟೆಂಬರ್ 5 ಇಂದು ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾದ ಗೌರಿ ಲಂಕೇಶ್ ರನ್ನು ಹಿಂದುತ್ವ ಫ್ಯಾಸಿಸ್ಟ್ ಶಕ್ತಿಗಳು ಗುಂಡಿಕ್ಕಿ ಹತ್ಯೆಗ...
05/09/2022

ಕೊಪ್ಪಳ : ಸೆಪ್ಟೆಂಬರ್ 5 ಇಂದು ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾದ ಗೌರಿ ಲಂಕೇಶ್ ರನ್ನು ಹಿಂದುತ್ವ ಫ್ಯಾಸಿಸ್ಟ್ ಶಕ್ತಿಗಳು ಗುಂಡಿಕ್ಕಿ ಹತ್ಯೆಗೈದ ದಿನವನ್ನು ನೆನಪಿಸುತ್ತಾ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ವತಿಯಿಂದ ಕೊಪ್ಪಳ ಜಿಲ್ಲಾದ್ಯಂತ ಕಾಲೇಜುಗಳಲ್ಲಿ ಬಿತ್ತಿಪತ್ರ ಪ್ರದರ್ಶನ ಮಾಡುವುದರ ಮೂಲಕ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪ್ರತಿಭಟಿಸಲಾಯಿತು.


OUR EDUCATIONOUR RIGHTOUR RESISTANCEOn behalf of National Membership Campaign - 2022, Campus Front Koppal  district held...
28/07/2022

OUR EDUCATION
OUR RIGHT
OUR RESISTANCE

On behalf of National Membership Campaign - 2022, Campus Front Koppal district held Membership at moulana azad High school

Campus Front Of India | Koppal district



OUR EDUCATIONOUR RIGHTOUR RESISTANCEOn behalf of National Membership Campaign - 2022, Campus Front Koppal  district held...
28/07/2022

OUR EDUCATION
OUR RIGHT
OUR RESISTANCE

On behalf of National Membership Campaign - 2022, Campus Front Koppal district held Membership at PU Govt boys junior College

Campus Front Of India | Koppal district



26/07/2022
25/07/2022

Address

Koppal
583231

Website

Alerts

Be the first to know and let us send you an email when Campus Front Of India Koppal posts news and promotions. Your email address will not be used for any other purpose, and you can unsubscribe at any time.

Share