04/09/2023
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ.
ಸ್ಥಳೀಯ ಸಂಸ್ಥೆ ಶ್ರೀನಿವಾಸಪುರ, ಕೋಲಾರ ಜಿಲ್ಲೆ.
ಜನಪದ ಚಿಂತಕರು, ಮಾರ್ಗದರ್ಶಕರಾದ ಶ್ರೀ ನಾಡೋಜ ಗೊ.ರು.ಚನ್ನಬಸಪ್ಪ ರವರಿಗೆ ಸಮರ್ಪಣೆ
ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಕಬ್, ಬುಲ್-ಬುಲ್ಸ್, ಸ್ಕೌಟ್ಸ್, ಗೈಡ್ಸ್ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ಮತ್ತು ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳ ಜಾನಪದ ಗೀತಾ ಗಾಯನ ಸ್ಪರ್ಧೆಗಳ ಕಾರ್ಯಕ್ರಮ 2023
ದಿನಾಂಕ:-04.09.2023 ರಂದು ಕೋಲಾರ ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಕಬ್, ಬುಲ್ -ಬುಲ್ಸ್, ಸ್ಕೌಟ್ಸ್ ,ಗೈಡ್ಸ್ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ಮತ್ತು ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳ ಜಾನಪದ ಗೀತಾ ಗಾಯನ ಸ್ಪರ್ಧೆಯನ್ನು ಬಿ.ಆರ್.ಸಿ ಕಛೇರಿ ಶ್ರೀನಿವಾಸಪುರ ಇಲ್ಲಿ ಆಯೋಜಿಸಲಾಗಿತ್ತು.
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತು, ಸಂಯಮ, ದೇಶಭಕ್ತಿ, ನಾಯಕತ್ವ ಗುಣಗಳನ್ನು ಬೆಳೆಸಲು ಮತ್ತು ಉತ್ತಮ ಪ್ರಜೆಗಳಾಗಿ ನಿರ್ಮಾಣದಲ್ಲಿ ತೊಡಗಿದ್ದಾರೆ ಹಾಗೂ ನಾವೆಲ್ಲರೂ ಸಹ ಪ್ರೋತ್ಸಾಹಿಸಿ ಮಾರ್ಗದರ್ಶನ ಮತ್ತು ಸಹಕಾರ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿ.ಅರ್.ಸಿ ಸಂಯೋಜಕರಾದ. ಶ್ರೀಮತಿ ವಸಂತಮ್ಮರವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ. ದೇಶ ಸೇವೆಗೆ ಸಹಕಾರಿಯಾಗಿದೆ ಎಂದು ಮಾತನಾಡಿದರು ಮತ್ತು ಸಂಸ್ಥೆಯ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಉದ್ಘಾಟನಾ ಸಮಾರಂಭ ಅಧ್ಯಕ್ಷತೆಯನ್ನು ಡಯಟ್ ನೋಡಲ್ ಅಧಿಕಾರಿಗಳು ಮತ್ತು ಉಪಾಧ್ಯಕ್ಷರಾದ ಶ್ರೀ ಜಿ.ಎಂ.ಗಂಗಪ್ಪ ರವರು ವಹಿಸಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳು ದೇಶದಲ್ಲಿ ಕರ್ನಾಟಕ ರಾಜ್ಯ ಉತ್ತಮ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ದೇಶಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸೇವೆ ಸಲ್ಲಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೂ ಎಲ್ಲಾ ಶಾಲೆಗಳಲ್ಲಿ ಹೆಚ್ಚಿನ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಶ್ರೀ ವಿ ಎಂ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಶ್ರೀಮತಿ ಎನ್ ಉಮಾದೇವಿ, ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಮತಿ ಎಸ್ ಗೌರಬಾಯಿ, ಜಿಲ್ಲಾ ಸಂಘಟಕ ಶ್ರೀ ವಿಶ್ವನಾಥ ವಿ ಕೋಲಾರ, ರಾಜ್ಯ ಪ್ರತಿನಿಧಿ ಶ್ರೀಮತಿ ಬಿ.ವಿ.ಚಿಕ್ಕರೆಡ್ಡಮ್ಮ, ಉಪಾಧ್ಯಕ್ಷರಾದ ಶ್ರೀ ಮಂಜುಳ ಪಿ.ಎಸ್, ಜಿ.ಕೆ.ನಾರಾಯಣಸ್ವಾಮಿ, ನಾಗರತ್ನಮ್ಮ,ಕಲಾ ಶಂಕರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ರಾಮಕೃಷ್ಣೇಗೌಡ, ಖಂಚಾಚಿ ಜಿ.ವಿ.ಚಂದ್ರಪ್ಪ, ಜಿಲ್ಲಾ ಪ್ರತಿನಿಧಿ ಶ್ರೀ ರವೀಂದ್ರ, ಯಶೋದಮ್ಮ, ಬಿ.ಎನ್.ವಿನಯ್,ಅನುಷಾ,ಕಿಪಾಯತ್,ಅರುಣಕುಮಾರಿ, ಮುಂತಾದವರು ಉಪಸ್ಥಿತರಿದ್ದರು.
3 ಕಬ್ ತಂಡಗಳು, 3 ಬುಲ್ ಬುಲ್ ತಂಡಗಳು, 5 ಸ್ಕೌಟ್ ತಂಡಗಳು, 6 ಗೈಡ್ ತಂಡಗಳು, 4 ರೇಂಜರ್ಸ್ ತಂಡಗಳು ಸೇರಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು.
*ಪ್ರಥಮ ಸ್ಥಾನ*
1.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಸ್ತೇನಹಳ್ಳಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ.( ಕಬ್ ವಿಭಾಗ)
2.ಶ್ರೀ ಪ್ರೀತಿ ವಿದ್ಯಾಮಂದಿರ, ಯಲ್ದೂರು ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ (ಬುಲ್ ಬುಲ್ ವಿಭಾಗ)
3.ಕೆ.ಪಿ.ಎಸ್ ಸೋಮಾಯಾಜಲಹಳ್ಳಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ.(ಸ್ಕೌಟ್ ವಿಭಾಗ)
4.ಕೆ.ಪಿ.ಎಸ್ ಸೋಮಾಯಾಜಲಹಳ್ಳಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ.(ಸ್ಕೌಟ್ ವಿಭಾಗ)
5. ಸರ್ಕಾರಿ ಬಾಲಕಿಯರ ಕಾಲೇಜು ಶ್ರೀನಿವಾಸಪುರ (ರೇಂಜರ್ಸ್ ತಂಡ)
*ದ್ವಿತೀಯ ಬಹುಮಾನ*
1.ಶ್ರೀ ಪ್ರೀತಿ ವಿದ್ಯಾಮಂದಿರ ಯಲ್ದೂರು, ಶ್ರೀನಿವಾಸಪುರ.(ಕಬ್ ತಂಡ)
2. ಜಿ.ಜಿ.ವೇಣು ವಿದ್ಯಾ ಸಂಸ್ಥೆ ಶ್ರೀನಿವಾಸಪುರ (ಬುಲ್ ಬುಲ್ ತಂಡ)
3. ಶ್ರೀ ಪ್ರೀತಿ ವಿದ್ಯಾಮಂದಿರ ಯಲ್ದೂರು, ಶ್ರೀನಿವಾಸಪುರ.(ಸ್ಕೌಟ್ ತಂಡ)
4.ಜಿ.ಜಿ.ವೇಣು ವಿದ್ಯಾ ಸಂಸ್ಥೆ ಶ್ರೀನಿವಾಸಪುರ (ಗೈಡ್ ವಿಭಾಗ)
5.ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರೀನಿವಾಸಪುರ( ರೇಂಜರ್ ತಂಡ)
*ತೃತೀಯ ಬಹುಮಾನ.*
1.ಜಿ.ಜಿ.ವೇಣು ವಿದ್ಯಾ ಸಂಸ್ಥೆ ಶ್ರೀನಿವಾಸಪುರ (ಕಬ್ ವಿಭಾಗ)
2.ಶ್ರೀ ವಿದ್ಯಾ ದಿಪ್ತೀ ಶಾಲೆ ಯಲ್ದೂರು ಶ್ರೀನಿವಾಸಪುರ (ಬುಲ್ ಬುಲ್ಸ್ ವಿಭಾಗ)
3.ಶ್ರೀ ಜಿ.ಜಿ.ವೇಣು ವಿದ್ಯಾ ಸಂಸ್ಥೆ ಶ್ರೀನಿವಾಸಪುರ (ಸ್ಕೌಟ್ಸ್ ವಿಭಾಗ)
4.ಶ್ರೀ ದೀಪ್ತಿ ವಿದ್ಯಾ ಸಂಸ್ಥೆ ಯಲ್ದೂರು ಶ್ರೀನಿವಾಸಪುರ (ಗೈಡ್ ವಿಭಾಗ)
5.ಸರ್ಕಾರಿ ಬಾಲಕಿಯರ ಕಾಲೇಜು ಶ್ರೀನಿವಾಸಪುರ (ರೇಂಜರ್ಸ್ ವಿಭಾಗ)
ಈ ಮೇಲ್ಕಂಡ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಜಾನಪದ ಕಲಾವಿದರು ಮತ್ತು ಕಲಾವಿದರಾದ ಶ್ರೀಮತಿ ನಾಗರತ್ನಮ್ಮ , ಶ್ರೀ ಕಲಾ ಶಂಕರ್ , ಶ್ರೀಮತಿ ಉಮಾದೇವಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರಿಸಿದ ಜಿಲ್ಲಾ ಸಂಸ್ಥೆ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಹಾಗೂ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಪೋಷಕರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಶ್ರೀನಿವಾಸಪುರ ಸ್ಥಳೀಯ ಸಂಸ್ಥೆ ಪರವಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.
ಗೀತಾ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಶುಭಾಶಯಗಳೊಂದಿಗೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಶ್ರೀನಿವಾಸಪುರ.