14/07/2026
ಕವಿತಾ ಕಲಾ ತಂಡ, ಮೈಸೂರು ಹಾಗೂ ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಹೆಮ್ಮೆಯ ಕನ್ನಡ ಬಳಗದ ಸಹಯೋಗದೊಂದಿಗೆ ಶ್ರೀ ಗಣೇಶ ಅಮೀನಗಡ ಅವರ “ಕೌದಿ” ನಾಟಕ ಪ್ರದರ್ಶನ ದಿನಾಂಕ ೧೪.೦೭.೨೦೨೬ ರಂದು ಜರುಗಿತು. ಶ್ರೀಮತಿ ಭಾಗ್ಯಶ್ರೀ ಪಾಳಾ ಅವರ ಅಭಿನಯ ಎಲ್ಲರ ಮನ ಮುಟ್ಟುವಂತಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಕೌದಿ ತಯಾರಿಸುವವರ ಬದುಕು ಬವಣೆಯ ಬಗ್ಗೆ ಸುಂದರವಾಗಿ ನಾಟಕ ಮೂಡಿ ಬಂದಿತು. ಕಾರ್ಯಕ್ರಮದಲ್ಲಿ ನಗರದ ಖ್ಯಾತ ಸಾಹಿತಿಗಳಾದ ಪ್ರೊ. ಚಂದ್ರಶೇಖರ ವಸ್ತ್ರದ ಸರ್, ನಮ್ಮ ಸಂಸ್ಥೆಯ ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ಸರ್, ವೈದ್ಯಕೀಯ ಅಧೀಕ್ಷಕರಾದ ಡಾ. ವಿನಾಯಕ ಪಂಚಗಾರ ಸರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಬಿ. ಸಿ. ಕರಿಗೌಡರ ಸರ್, ಪ್ರಭಾರ ಪ್ರಾಂಶುಪಾಲರಾದ ಡಾ. ಅರವಿಂದ ಕೆ. ಸರ್, ಕನ್ನಡ ಬಳಗದ ಅಧ್ಯಕ್ಷರಾದ ಡಾ. ಶಂಭು ಪುರದ ಸರ್, ಉಪಾಧ್ಯಕ್ಷರಾದ ಡಾ. ಶಕುಂತಲಾ ಅರಮನಿ ಮೇಡಂ ಹಾಗೂ ಕಾರ್ಯದರ್ಶಿಗಳಾದ ಕು. ಪ್ರಮೋದ, ಕು. ಅರ್ಚನಾ ಸೇರಿದಂತೆ ಅನೇಕ ವೈದ್ಯರುಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.