AIMDF IT Cell

AIMDF IT Cell The Organization AIMDF works for the social development and integration of underprivileged individua Official Page Of AIMDF IT Cell

  - We work for Nation.The Organization   works for the Education,Health,Food, Shulter community social development and ...
13/09/2026

- We work for Nation.
The Organization works for the Education,Health,Food, Shulter community social development and integration of underprivileged individuals ,groups and communities in India.


 #ಶಾಂತಿ ಮತ್ತು  #ಸೌಹಾರ್ದತಯುತ ಕರ್ನಾಟಕ ರಾಜ್ಯದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಮುಸ್ಲಿಂ ನಡುವೆ ವಿಷಬೀಜ ಬಿತ್ತುವ ಮೂಲಕ ಸದ...
26/07/2026

#ಶಾಂತಿ ಮತ್ತು #ಸೌಹಾರ್ದತಯುತ ಕರ್ನಾಟಕ ರಾಜ್ಯದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಮುಸ್ಲಿಂ ನಡುವೆ ವಿಷಬೀಜ ಬಿತ್ತುವ ಮೂಲಕ ಸದಾ ಮುಸ್ಲೀಮರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುವ ದ್ವೇಷ ಭಾಷಣ ಮಾಡುವ ಸಿ.ಟಿ.ರವಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸುತ್ತದೆ.



ಪ್ರವಾದಿ ನಿಂದನೆ ಯಾರು ಸಹಿಸಲಾರರು.....ಆದರೇ ಇದರ ಅರಿವಿರಲಿ.. 👇👇ಮುಸಲ್ಮಾನರು ಸಂಯಮದಿಂದ ವರ್ತಿಸಬೇಕು ವಂದತಿಗಳಿಗೆ ಕಿವಿಗೊಡದೇ... ಮುಸಲ್ಮಾನರ...
22/06/2026

ಪ್ರವಾದಿ ನಿಂದನೆ ಯಾರು ಸಹಿಸಲಾರರು.....
ಆದರೇ ಇದರ ಅರಿವಿರಲಿ.. 👇👇
ಮುಸಲ್ಮಾನರು ಸಂಯಮದಿಂದ ವರ್ತಿಸಬೇಕು ವಂದತಿಗಳಿಗೆ ಕಿವಿಗೊಡದೇ... ಮುಸಲ್ಮಾನರು ತಪ್ಪು ಹೆಜ್ಜೆ ಇಡಬಾರದು.ಯಾವುದೇ ಪ್ರತಿಭಟನೆ ಹಮ್ಮಿಕೊಂಡರು ಅದು ಸಂವಿಧಾನಬದ್ಧ ಕಾನೂನು ರೀತಿಯ ಶಾಂತಿಯುತ ಹೋರಾಟ ಮಾಡಿ.ಇಲ್ಲವೆಂದರೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಇದರ ಲಾಭ ಪಡೆಯಲು ಕಾಯುತ್ತಿದ್ದಾರೆ...

ಪ್ರವಾದಿ ಮೊಹಮ್ಮದ್ [ﷺ] ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ದೇಶದಲ್ಲಿ ಶಾಂತಿ ಕದಡಲು ಹಿಂದೂ ಮುಸ್ಲಿಂ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲು ಹೊರಟಿರುವ #ನಾಜಿಯ_ಇಲಾಹಿ ಎಂಬ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಸರ್ವ ಜನಾಂಗದ ಶಾಂತಿಯ ತೋಟ,,, ಸೌಹಾರ್ದಯುತ,,ಜಾತ್ಯತೀತ,,ಧರ್ಮಾತೀತ ದೇಶ ನಮ್ಮ ಭಾರತ,ಈ ದೇಶದಲ್ಲಿ ಯಾವುದೇ ಧರ್ಮ ಮತ್ತು ಧಾರ್ಮಿಕ ಗ್ರಂಥಗಳು,ಪ್ರವಾದಿಗಳು,ಧಾರ್ಮಿಕ ದಾರ್ಶನಿಕರು ಹಾಗೂ ನಂಬಿಕೆಗಳ ಮೇಲೆ ಅವಹೇಳನಕಾರಿ ಹೇಳಿಕೆ ಮತ್ತು ಶಾಂತಿ ಕದಡಲು ಮತ್ತು ಹಿಂದೂ ಮುಸ್ಲಿಂ ಸಿಖ್ ಕ್ರೈಸ್ತ,ಬುದ್ಧ,ಜೈನ ಇವರ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲು ಯಾರೇ ಪ್ರಯತ್ನ ಮಾಡಿದರು ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.ಇದಕ್ಕೆ ಒಂದು ಕಾನೂನು ತಂದು ಕಠಿಣ ಶಿಕ್ಷೆಗೆ ಗುರಿಯಾಗುವ ಹಾಗೆ ಮಾಡಬೇಕು.

ನಮ್ಮ ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ದೇಶದ ಎಲ್ಲಾ ಧರ್ಮದ ಜನಗಳಿಗೆ ನಂಬಿಕೆ ಇದೆ.ನಮ್ಮ ದೇಶದ ಸಂವಿಧಾನ ಎಲ್ಲರಿಗೂ ಅವರವರ ಧರ್ಮ ಮತ್ತು ನಂಬಿಕೆಗಳು,,ಆಚರಣೆ ಮಾಡಲು ಎಲ್ಲಾ ಧರ್ಮದವರಿಗೂ ಯಾವುದೇ ಅಡೆತಡೆ ಇಲ್ಲದೆ ಸಮಾನವಾದ ಅವಕಾಶ ಮತ್ತು ಹಕ್ಕುಗಳನ್ನು ಕೊಟ್ಟಿದೆ.




ಅಸ್ಸಲಾಮು ಅಲೈಕುಮ್ಬಹಳ ಸಂತೋಷದ ವಿಷಯ ನಿಮ್ಮೆಲ್ಲರಲ್ಲಿ ಹಂಚಿ ಕೊಳ್ಳಲು ಬಯಸುತ್ತೇವೆ.ಎಲ್ಲರ ಸಹಕಾರದಿಂದ ನಮ್ಮ ನಿಮ್ಮೆಲ್ಲರ ಸಮುದಾಯದ ಸಂಘಟನೆಯಾದ...
09/06/2026

ಅಸ್ಸಲಾಮು ಅಲೈಕುಮ್
ಬಹಳ ಸಂತೋಷದ ವಿಷಯ ನಿಮ್ಮೆಲ್ಲರಲ್ಲಿ ಹಂಚಿ ಕೊಳ್ಳಲು ಬಯಸುತ್ತೇವೆ.

ಎಲ್ಲರ ಸಹಕಾರದಿಂದ ನಮ್ಮ ನಿಮ್ಮೆಲ್ಲರ ಸಮುದಾಯದ ಸಂಘಟನೆಯಾದ
ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ(ರಿ) #6ನೇ ವರ್ಷ ಪೂರೈಸಿ #7ನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ...ಬಹಳ ಸಂತೋಷದ ವಿಷಯವಾಗಿದೆ.
ಇದು ಯಾರೊಬ್ಬರ ಸ್ವತ್ತಲ್ಲ ಇದು ಸಮುದಾಯದ ಸ್ವತ್ತು.ನೀವು ನಾವೆಲ್ಲರು ಸೇರಿ ಕಟ್ಟಿ ಬೆಳೆಸಿದ ಸಂಘಟನೆ.
ನಿಮ್ಮ ಸಹಕಾರ,ಪ್ರೀತಿ,ನಂಬಿಕೆ,ಯಾವತ್ತೂ ಸಂಘಟನೆಯ ಮೇಲೆ ಹೀಗೆ ಇರಲಿ.

ಅಲ್ಲಾಹನಲ್ಲಿ ಪ್ರಾರ್ಥನೆ ನ ಸಾಮಾಜಿಕ ಸೇವೆಗಳು ಹೀಗೆ ಮುಂದುವರಿಯಲಿ.ಆಮೀನ್🤲

ಬನ್ನಿ ಸಮುದಾಯಕ್ಕೋಸ್ಕರ ಕೈಜೋಡಿಸಿ ✊


ALL INDIA MUSLIM DEVELOPMENT FORUM (R)

✊ ✊

*SUPPORT US FOR YOUR GROWTH*
*WE ARE HERE TO SERVE YOU*

ಹುಟ್ಟು ಹಬ್ಬದ ಶುಭಾಶಯಗಳು 💐💐💐💐ನಮ್ಮೆಲ್ಲರ ಮಾರ್ಗದರ್ಶಕರೂ ಹಿರಿಯ ನಾಯಕರೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ(ರಿ)ನ   ರಾಜ್ಯಾಧ್ಯಕ್ಷರು...
04/06/2026

ಹುಟ್ಟು ಹಬ್ಬದ ಶುಭಾಶಯಗಳು 💐💐💐💐

ನಮ್ಮೆಲ್ಲರ ಮಾರ್ಗದರ್ಶಕರೂ ಹಿರಿಯ ನಾಯಕರೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ(ರಿ)ನ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸಮಿತಿಯ ಸದಸ್ಯರಾದ ಜನಾಬ್ ಶಹನವಾಜ್.ಎನ್.ಮುಲ್ಲ Shahanawaz Mulla ಸಾಹೇಬರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐

ಇನ್ನಷ್ಟು ಸಮಾಜದ ಸೇವೆಯನ್ನು ಮಾಡಲು ಅಲ್ಲಾಹನು ತಮಗೆ ಸಂಪೂರ್ಣ ಆರೋಗ್ಯ ಹಾಗೂ ದೀರ್ಘಾಯುಷ್ಯವನ್ನು ನೀಡಿ ಕರುಣಿಸಲಿ.
ಆಮೀನ್.🤲



ಅಸ್ಸಲಾಮು ಅಲೈಕುಮ್. ನಾಡಿನ ಸಮಸ್ತ ಜನತೆಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ (ರಿ)   ಇದರ ವತಿಯಿಂದ  #ಈದ್_ಉಲ್_ಅಧಾ 2026 ರ ಶುಭಾಶಯಗ...
28/05/2026

ಅಸ್ಸಲಾಮು ಅಲೈಕುಮ್.
ನಾಡಿನ ಸಮಸ್ತ ಜನತೆಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ (ರಿ) ಇದರ ವತಿಯಿಂದ #ಈದ್_ಉಲ್_ಅಧಾ 2026 ರ ಶುಭಾಶಯಗಳು.💐💐
ಈ ಶುಭ ಸಂದರ್ಭದಲ್ಲಿ ಅಲ್ಲಾಹನು ನಮ್ಮ ಉಪವಾಸ, ತ್ಯಾಗ, ದುಆ, ದಾನ ಮತ್ತು ಇತರ ಎಲ್ಲಾ ರೀತಿಯ ಇಬಾದತ್‌ಗಳನ್ನು ಸ್ವೀಕರಿಸಲಿ. ☪️
ಹಾಗೂ ಬ್ರಾತೃತ್ವವನ್ನು ಸಾರುವ ಪವಿತ್ರ #ಬಕ್ರೀದ್ ಹಬ್ಬವು ನಾಡಿನೆಲ್ಲೆಡೆ ಶಾಂತಿ,ನೆಮ್ಮದಿ,ಸ್ನೇಹ ಸೌಹಾರ್ಧತೆ ಬೆಳೆಸಲು ಪ್ರೇರಣೆ ನೀಡಲಿ.🤲
ಅಲ್ಲಾಹನು ಎಲ್ಲರಿಗೂ ಆರೋಗ್ಯ ಮತ್ತು ಆಯುಷ್ಯ ಕೊಟ್ಟು ಸದಾ ಕಾಪಾಡಲಿ ಆಮೀನ್ 🤲






ಜಗತ್ತಿನ ವಿವಿಧ ದೇಶಗಳಿಂದ ಆಗಮಿಸಿರುವ ಸುಮಾರು 1.8 ಮಿಲಿಯನ್  #ಮುಸ್ಲಿಮರು  #ಹಜ್  #ಯಾತ್ರೆಗಾಗಿ  #ಮೆಕ್ಕಾದಲ್ಲಿ ಸೇರಿದ್ದಾರೆ. ಜಗತ್ತಿನ ಅತ್...
27/05/2026

ಜಗತ್ತಿನ ವಿವಿಧ ದೇಶಗಳಿಂದ ಆಗಮಿಸಿರುವ ಸುಮಾರು 1.8 ಮಿಲಿಯನ್ #ಮುಸ್ಲಿಮರು #ಹಜ್ #ಯಾತ್ರೆಗಾಗಿ #ಮೆಕ್ಕಾದಲ್ಲಿ ಸೇರಿದ್ದಾರೆ. ಜಗತ್ತಿನ ಅತ್ಯಂತ ಪುರಾತನ ಪ್ರಾರ್ಥನಾಲಯವಾದ #ಕಾಬಾದ ಸುತ್ತ ಪ್ರದಕ್ಷಿಣೆ ಹಾಕುತ್ತಾ ದೇವ ಸ್ಮರಣೆ ಮಾಡುವುದು ಹಜ್ ಯಾತ್ರೆಯ ಒಂದು ವಿಧಿ. ಅದರ ಚಿತ್ರ ಮತ್ತು ವಿಡಿಯೋಗಳು ಹೆಚ್ಚು ಕಾಣಲು ಸಿಗುತ್ತವೆ.

ಆದರೆ ಹಜ್ ಯಾತ್ರೆಯ ಅವಿಭಾಜ್ಯ ಆಚರಣೆಗಳಲ್ಲಿ ಮಕ್ಕಾದಿಂದ ಅರಫಾ, ಮುಜ್ದಲಿಫಾ ಮತ್ತು ಮಿನಾದೆಡೆಗೆ ಪಯಣ ಮತ್ತು ಅಲ್ಲಿನ ವಾಸ್ತವ್ಯ ಕೂಡಾ ಸೇರಿದೆ. ಕಾಬಾದ ಪ್ರದಕ್ಷಿಣೆಗೆ ಹೋಲಿಸಿದರೆ, ಇದರ ಚಿತ್ರಗಳು/ ವಿಡಿಯೊಗಳು ಪ್ರಸಾರ ಆಗುವುದು ಕಡಿಮೆ.

ಮಿನಾದಲ್ಲಿ ಹಜ್ ಯಾತ್ರಿಕರು 3-4 ದಿನಗಳ ಕಾಲ ತಂಗುತ್ತಾರೆ. ಮುಜ್ದಲಿಫಾದಲ್ಲಿ ಒಂದು ರಾತ್ರಿ ತಂಗುತ್ತಾರೆ.

ಮಿನಾದಲ್ಲಿ ಲಕ್ಷಾಂತರ ಅಗ್ನಿನಿರೋಧಕ ಟೆಂಟ್ ಗಳಿವೆ. ಆದರೆ ಮುಜ್ದಲಿಫಾದಲ್ಲಿ ಯಾವ ಟೆಂಟ್ ಗಳೂ ಇಲ್ಲ. ಉಟ್ಟ ಎರಡು ತುಂಡು ಬಟ್ಟೆಯಲ್ಲೇ ಆಕಾಶದ ಕೆಳಗೆ ಭೂಮಿಯ ಮೇಲೆ ಮಲಗುವುದು ಕಡ್ಡಾಯ ಆಚರಣೆ. ಒಂದು ರಾತ್ರಿಯ ಈ ನಿದ್ದೆ ಪ್ರತಿಯೊಬ್ಬ ಹಜ್ ಯಾತ್ರಿಕನ ಜೀವನದ ಅವಿಸ್ಮರಣೀಯ ನೆನಪುಗಳಲ್ಲಿ ಒಂದಾಗಿರುತ್ತದೆ.

ಬಡವ, ಬಲ್ಲಿದನೆಂಬ ಬೇಧವಿಲ್ಲದೆ, ದೇಶ ಭಾಷೆಗಳ ಹಂಗಿಲ್ಲದೆ ಜಗತ್ತಿನ ಎಲ್ಲ ದೇಶಗಳ 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಮುಜ್ದಲಿಫಾದ ಮೈದಾನದಲ್ಲಿ ಒಂದು ರಾತ್ರಿ ಮೈಚೆಲ್ಲಿ ನಿದ್ದೆ ಮಾಡುತ್ತಾರೆ. ಸೌದಿ ಸರಕಾರ ದೀಪದ ಮತ್ತು ಶೌಚಾಲಯದ ಕನಿಷ್ಠ ಸೌಲಭ್ಯ ಒದಗಿಸುತ್ತದೆ.

ಇಲ್ಲಿ ದೊರೆಯೂ, ಕೋಟ್ಯಾಧೀಶ್ವರರೂ, ಭಿಕಾರಿಯೂ ಸರಿಸಮಾನರು. ಜಗತ್ತಿನ ಎಲ್ಲ ಮನುಷ್ಯರೂ ಒಂದೇ ಎಂದು ಸಾರುವ ಇಸ್ಲಾಮಿನ ಸಮಾನತೆಯ ಪಾಠ ಮುಜ್ದಲಿಫಾದಲ್ಲಿ ಮತ್ತೆ ಮತ್ತೆ ದೃಢೀಕರಣಗೊಳ್ಳುತ್ತದೆ.

ಈ ಸಲ ಮಕ್ಕಾ ಮತ್ತು ಸುತ್ತಮುತ್ತ ವಿಪರೀತ ಬಿಸಿಲಿದೆ. ಹಗಲಲ್ಲಿ ತಾಪಮಾನ 39 ಡಿಗ್ರಿಯಿಂದ 44 ಡಿಗ್ರಿ ಸಿ.ವರೆಗೆ ದಾಖಲಾಗಿದೆ. ರಾತ್ರಿಯೂ 29 ಡಿಗ್ರಿವರೆಗಿದೆ.

ಬಿಸಿಲು, ಮಳೆ, ಚಳಿಗಾಲವೆಂಬ ಬೇಧ ಹಜ್ ಯಾತ್ರೆಗಿಲ್ಲ. ಚಳಿಗಾಲದಲ್ಲಿ ಕೆಲವೊಮ್ಮೆ ತಾಪಮಾನ 13- 15 ಡಿಗ್ರಿಗೆ ಇಳಿಯುವುದೂ ಇದೆ. ಚಾಂದ್ರಮಾನ ಕ್ಯಾಲೆಂಡರ್ ಆಗಿರುವುದರಿಂದ ಹಜ್ ಯಾತ್ರೆ ವರ್ಷದ ಎಲ್ಲ ಋತುಗಳಲ್ಲೂ ನಡೆಯುತ್ತದೆ. ಈ ಕೆಳಗಿರುವುದು ಮುಜ್ದಲಿಫಾದ ರಾತ್ರಿಯ ಒಂದು ದೃಶ್ಯ.

#ಅಲ್ಲಾಹನು ಪ್ರತಿಯೊಬ್ಬ ಯಾತ್ರಿಕರ ದುಆವನ್ನು ಸ್ವೀಕರಿಸಲಿ ಮತ್ತು ಒಂದು ದಿನ ನಮ್ಮ ಹೆಸರುಗಳನ್ನು ಅವನ ಅತಿಥಿಗಳ ನಡುವೆ ಬರೆಯಲಿ. ಆಮಿನ್ 🤲

ಶಬ್-ಎ-ಬರಾತ್ ಶುಭಾಶಯಗಳುಈ ಕ್ಷಮೆಯ ರಾತ್ರಿಯಲ್ಲಿ, ನಾವು ಒಟ್ಟಾಗಿ ಸೇರಿ ಸರ್ವಶಕ್ತ ಅಲ್ಲಾಹನ ಆಶೀರ್ವಾದವನ್ನು ಪಡೆಯಲು ಮತ್ತು ಸುಂದರವಾದ ಜೀವನವನ...
03/02/2026

ಶಬ್-ಎ-ಬರಾತ್ ಶುಭಾಶಯಗಳು

ಈ ಕ್ಷಮೆಯ ರಾತ್ರಿಯಲ್ಲಿ, ನಾವು ಒಟ್ಟಾಗಿ ಸೇರಿ ಸರ್ವಶಕ್ತ ಅಲ್ಲಾಹನ ಆಶೀರ್ವಾದವನ್ನು ಪಡೆಯಲು ಮತ್ತು ಸುಂದರವಾದ ಜೀವನವನ್ನು ಹೊಂದಲು ಪ್ರಾರ್ಥಿಸೋಣ.

ನನ್ನ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೇ, ನನ್ನ ಜೀವನದಲ್ಲಿ ನಾನು ನೇರವಾಗಿ ಅಥವಾ ಪರೋಕ್ಷವಾಗಿ ನಿಮ್ಮನ್ನು ನೋಯಿಸಿದರೆ ದಯವಿಟ್ಟು ನನ್ನನ್ನು ಕ್ಷಮಿಸಿ.

ಅಲ್ಲಾಹು ಸರ್ವ ವಿಪತ್ತುಗಳಿಂದ ಮನುಕುಲವನ್ನು ರಕ್ಷಿಸಲಿ....ಆಮಿನ್ 🤲




 #ರಾಯಚೂರು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ(ರಿ)    ವತಿಯಿಂದ ಮಹಿಳಾ ಟೈಲರಿಂಗ್ ತರಗತಿಗಳ ಎರಡನೆಯ ಶಾಖೆ ಆರಂಭ.    #ರಾಯಚೂರು ಜಿಲ್ಲಾ...
01/12/2025

#ರಾಯಚೂರು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ(ರಿ) ವತಿಯಿಂದ ಮಹಿಳಾ ಟೈಲರಿಂಗ್ ತರಗತಿಗಳ ಎರಡನೆಯ ಶಾಖೆ ಆರಂಭ.


#ರಾಯಚೂರು ಜಿಲ್ಲಾ ತಂಡದಿಂದ ರಾಯಚೂರಿನ ಸಲಾರ್ ಹಾಲ್‌ನಲ್ಲಿ ಮಹಿಳಾ ಟೈಲರಿಂಗ್ ತರಗತಿಗಳ ಎರಡನೇ ಶಾಖೆಯ ಉದ್ಘಾಟನಾ ಸಮಾರಂಭ.ಮಾಜಿ ZP ಸದಸ್ಯರು ಮತ್ತು ಸಮಾಜ ಸೇವಕರಾದ ಜನಾಬ್ ಅಸ್ಲಂ ಪಾಷಾ ರವರ ಬೆಂಬಲ ಹಾಗೂ ಸಹಕಾರ ಮತ್ತು ಸಹಯೋಗದಿಂದ ಚಾಲನೆ ನೀಡಲಾಯಿತು ಅವರಿಗೆ ಧನ್ಯವಾದಗಳು.

ಈ ಸಂದರ್ಭದಲ್ಲಿ ಹಾಜರಾಗಿದ್ದ ಎಲ್ಲಾ ರಾಯಚೂರು ಜಿಲ್ಲಾ ಸಮಿತಿ ಸದಸ್ಯರು ಹಾಗೂ ಇನ್ನೂ ಮುಂತಾದವರು ಉಪಸ್ಥಿತಿಯ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಇವರ ಸಾಮಾಜಿಕ ಸೇವೆ ಹೀಗೆ ಮುಂದುವರಿಯಲಿ,
ಅಲ್ಲಾಹನು ಇವರಿಗೆ ಆರೋಗ್ಯ ಮತ್ತು ಆಯುಷ್ಯ ಕೊಟ್ಟು ಸದಾ ಕಾಪಾಡಲಿ ಹಾಗೂ ಇವರ ದುಡಿಮೆಯಲ್ಲಿ ಬರ್ಕತ್ ನೀಡಲಿ ಆಮೀನ್ 🤲.

ಬನ್ನಿ ಸಮುದಾಯಕ್ಕೋಸ್ಕರ ಕೈಜೋಡಿಸಿ 🤝



✊ ✊








18/11/2025

ವತಿಯಿಂದ ಆಸ್ಪತ್ರೆ ಹಾಗೂ ಬೀದಿ ಬದಿಯಲ್ಲಿ ಚಳಿಯಲ್ಲಿ ಮಲಗುತಿದ್ದ ನಿರಾಶ್ರಿತರಿಗೆ ಸ್ವೆಟರ್,ಶಾಲು, ಶರ್ಟ್ ಮತ್ತು ಹೊದಿಕೆಗಳನ್ನು ವಿತರಿಸಲಾಯಿತು.

#ಗುಲ್ಬರ್ಗ ಜಿಲ್ಲೆಯ #ಚಿತ್ತಾಪುರ ತಾಲ್ಲೂಕಿನ ಸಮಿತಿ ವತಿಯಿಂದ ಬಸ್ ನಿಲ್ದಾಣ, ಆಸ್ಪತ್ರೆ ಆವರಣ,ಖಾಸಗಿ ಬಸ್ ನಿಲ್ದಾಣ, ಸೇರಿದಂತೆ ನಗರದ ಹಲವು ಸ್ಥಳಗಳಲ್ಲಿ ಬೀದಿ ಬದಿಯಲ್ಲಿ ಮಲಗಿರುವಂತಹ ವೃದ್ಧರು,ನಿರಾಶ್ರಿತರು ಹಾಗೂ ಪ್ರಯಾಣಿಕರಿಗೆ ಮತ್ತು ಮದರಸ ಮಕ್ಕಳಿಗೆ ಸ್ವೆಟರ್, ಶಾಲು,ಶರ್ಟ್ ಮತ್ತು ಹೊದಿಕೆಗಳನ್ನು ವಿತರಣೆ ಮಾಡಲಾಯಿತು.

ಇವರ ಸಮಾಜಮುಖಿ ಕೆಲಸಗಳು ಹೀಗೆ ಮುಂದುವರಿಯಲಿ.ಅಲ್ಲಾಹನು ಇವರಿಗೆ ಆರೋಗ್ಯ ಮತ್ತು ಆಯುಷ್ಯ ಕೊಟ್ಟು ಸದಾ ಕಾಪಾಡಲಿ ಹಾಗೂ ಇವರ ದುಡಿಮೆಯಲ್ಲಿ ಬರ್ಕತ್ ನೀಡಲಿ ಆಮೀನ್ 🤲



#

Address

Delhi

Alerts

Be the first to know and let us send you an email when AIMDF IT Cell posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIMDF IT Cell:

Shortcuts

Share