ಬನವಾಸಿ ಕನ್ನಡಿಗರು

ಬನವಾಸಿ ಕನ್ನಡಿಗರು ಉತ್ತಮವಾದ ಸಮಾಜ ನಿರ್ಮಾಣ ಕೇವಲ ಚರ್ಚೆಯಿಂದ ಸಾಧ್ಯವಿಲ್ಲ.. ಬದಲಾಗುವುದು ಸಮಾಜ ನೀ ಮೊದಲಾದರೆ

ಕನ್ನಡಮಯ ಟ್ರಸ್ಟ್ (ನೋಂ)

ನಮಸ್ಕಾರ ಸ್ನೇಹಿತರೇ..
ಕೆಲವು ಒಳ್ಳೆಯ ಉದ್ದೇಶದಿಂದ ನಾವು ಕೆಲವು ಸ್ನೇಹಿತರು ಸೇರಿ ಈ ಪುಟ ಪ್ರಾರಂಭಿಸಿದ್ದೇವೆ..
ನಮ್ಮ ಪುಟದ ಹೆಸರು "ಬನವಾಸಿ ಕನ್ನಡಿಗರು".. "ಬನವಾಸಿ ಕನ್ನಡಿಗರು" ಅಂದ ತಕ್ಷಣ ನಾವು ವಾಸಿಸುವ ಸ್ಥಳ ಬನವಾಸಿ ಅಂತಲೋ.. ನಿಮ್ಮ ಊರು ಬನವಾಸಿ ಅಂತಲೋ ಅಲ್ಲ..
ಬನವಾಸಿ ನಮ್ಮ ಕನ್ನಡದ (ಕದಂಬರ) ಮೊದಲ ರಾಜಧಾನಿಯಾಗಿತ್ತು..
ಆದ್ದರಿಂದ ನಮ್ಮ ಪುಟವನ್ನು
"ಬನವಾಸಿ ಕನ್ನಡಿಗರು" ಎಂದು ಹೆಸರಿಸಲಾಗಿದೆ...
ನಮ್ಮ ಕನ್ನಡ ನಾಡಿನ ಘತ ವೈಭವಕ್ಕೆ ಇಂದಿಗೂ

ಸಾಕ್ಷಿಯಾಗಿ ಉಳಿದಿರುವ ನಮ್ಮ ಬನವಾಸಿಯ ವಿವರ ಕೆಳಗಿನಂತಿದೆ...

ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.

ಕನ್ನಡ ಸಾಹಿತ್ಯದಲ್ಲಿ:
ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ.

ಪ್ರೇಕ್ಷಣೀಯ:ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.

ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.

11/04/2025
11/04/2025
11/04/2025
30/03/2025

ಟ್ರಕ್ ಮೇಲೆ ಕನ್ನಡ ಬಾವುಟ, ಕನ್ನಡ ಭಾಷೆ ಕಂಡ್ರೆ ತಮಿಳುನಾಡಲ್ಲಿ ಉರಿ..

ಬಸ್ ಲ್ಲಿ ಕನ್ನಡ ಮಾತಾಡಿದ್ರೆ ಮಹಾರಾಷ್ಟ್ರದಲ್ಲಿ ಉರಿ..

ಕರ್ನಾಟಕದಲ್ಲಿ ಕನ್ನಡ ಮಾತಾಡ್ರೋ ಅಂದ್ರೆ
ಕನ್ನಡಿಗರಿಗೇ ಉರಿ..


30/03/2025

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
ಹೊಸ ವರುಷ ಎಲ್ಲರ ಬಾಳಲ್ಲಿ ಹರುಷ ತರಲಿ..

ಬನವಾಸಿ ಕನ್ನಡಿಗರು
ಕನ್ನಡಮಯ ಟ್ರಸ್ಟ್ (ನೋಂ)

30/03/2025

ಏನಿದು ವಿಶ್ವಾವಸು ಸಂವತ್ಸರ??
ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...
ನಮ್ಮ ಕನ್ನಡ ಸಂಪಾದದಲ್ಲಿ ಪ್ರಕಟವಾದದ್ದು ಹೀಗೇ..

ಇಂದು ವಿಶ್ವಾವಸು ಸಂವತ್ಸರದ ಯುಗಾದಿ. ಹೀಗಾಗಿ ವಿಶ್ವಾವಸು ವಿಳಾಸ ಹುಡುಕಿಕೊಂಡು ಹೋಗಿದ್ದೆ😊. ಸಿಕ್ಕ ವಿವರ ಇಷ್ಟು!

ವಿಶ್ವಾವಸು ಚಾಂದ್ರಮಾನ ಪಂಚಾಗದಲ್ಲಿರುವ 39ನೇ ಸಂವತ್ಸರದ ಹೆಸರು.

ವಿಶ್ವಾವಸು ಒಬ್ಬ ಗಂಧರ್ವ. ಗಂಧರ್ವರು ಇತಿಹಾಸ ಪುರಾಣಗಳಲ್ಲಿ ಕಿನ್ನರರು, ಕಿಂಪುರುಷರಂತೆ ಪ್ರಸಿದ್ಧರಾದ ಒಂದು ಬಗೆಯ ಜನ. ಇವರನ್ನು ದೇವಯೋನಿಗಳು, ದೇವಗಾಯಕರು, ದೇವೀಮೂಲವುಳ್ಳವರು ಎಂದು ಕರೆಯುತ್ತಾರೆ. ಗಂಧರ್ವ ಶಬ್ದ ಋಗ್ವೇದದಲ್ಲಿ ಹಲವೆಡೆಗಳಲ್ಲಿ ಬರುತ್ತದೆ. ಅದರ ಪ್ರಕಾರ ವಿಶ್ವಾವಸು ಅಲ್ಲಿನ ಗಂಧರ್ವ. ಈತನಿಗೆ ವಾಯುಕೇಶನೆಂತಲೂ ಹೆಸರು. ಆಕಾಶ, ಈತನ ನೆಲೆ. ಸ್ವರ್ಗಲೋಕದ ಸೋಮರಸದ ರಕ್ಷಣೆಯ ಭಾರ ಈತನದು. ಕೆಲವು ಕಡೆ ಸ್ವರ್ಗದ ಗಂಧರ್ವ ಚಂದ್ರನೇ (ಸೋಮ) ಎಂಬ ಭಾವನೆಯೂ ಬರುತ್ತದೆ.

ವೇದಗಳಲ್ಲಿ ವರುಣ ಗಂಧರ್ವರಾಜ. ಸೋಮ ಅಪ್ಸರೆಯರು ಇವನ ಅಧೀನ. ಗಂಧರ್ವರು ಅನೇಕ ದೈವಿಕರಹಸ್ಯಗಳನ್ನು ಬಲ್ಲವರೆಂದೂ ಬ್ರಹ್ಮಾಂಡವನ್ನು ಅಳತೆಮಾಡಿ ದೇವತೆಗಳ ಸಂಚಾರಕ್ಕೆ ದಾರಿಮಾಡಿದವರೆಂದೂ ಹೇಳಲಾಗಿದೆ. ಅಥರ್ವವೇದದಲ್ಲಿ ಗಂಧರ್ವರೂ ಅಪ್ಸರೆಯರೂ ಹೆಸರಿಸಲ್ಪಟ್ಟಿದ್ದಾರೆ. ಅಥರ್ವವೇದದ ಪ್ರಕಾರ ಇವರು ಅನೇಕ ಔಷಧಿಗಳನ್ನು ಬಲ್ಲವರು. ತಪಃಶಕ್ತಿಯ ಮಾರ್ಗದರ್ಶಕರು. ಕನ್ಯೆಯರನ್ನು ಹಿಂಬಾಲಿಸುವುದು ಇವರ ಚಟ.

ಇತಿಹಾಸ, ಪುರಾಣಗಳಲ್ಲಿ ಬರುವ ಗಂಧರ್ವರು ಸ್ವರ್ಗದ ಗಾಯಕರು. ಇಂದ್ರನ ಸಭೆಯಲ್ಲಿನ ವಾದ್ಯಗೋಷ್ಠಿ ಇವರದು. ಇವರ ಕಲೆ ಸಂಗೀತ. ಇದೇ ಗಾಂಧರ್ವವೆಂಬ ಉಪವೇದವೆನಿಸಿದೆ. ಚಿತ್ರರಥ ಇವರ ಪ್ರಭು. ಜೈನಾಗಮಗಳ ಅಷ್ಟಗಣಗಳಲ್ಲಿ ಗಂಧರ್ವರೂ ಒಂದು ಗಣ. ಹದಿನೇಳನೆಯ ತೀರ್ಥಂಕರನ ಕಿಂಕರ ಒಬ್ಬ ಗಂಧರ್ವ. ಕೆಲವು ಪುರಾಣಗಳು ಇವರನ್ನು ಕಶ್ಯಪಮುನಿಯ ಮಕ್ಕಳೆನ್ನುತ್ತವೆ.
ಗಂಧರ್ವರು ಸರಸಿಗಳು, ಇವರ ಸ್ತ್ರೀಯರು ಅಪ್ಸರೆಯರು. ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆ, ಘೃತಾಚೀ ಮುಂತಾದ ಸಪ್ತಕನ್ನಿಕೆಯರು ಗಂಧರ್ವಸ್ತ್ರೀಯರಲ್ಲಿ ಪ್ರಸಿದ್ಧರು. ಇಂದ್ರ ಇವರನ್ನು ಹಲವು ವೇಳೆ ವಿಶ್ವಾಮಿತ್ರನೇ ಮುಂತಾದ ಉಗ್ರತಪಸ್ವಿಗಳ ತಪೋಭಂಗಕ್ಕೆ ಉಪಯೋಗಿಸಿಕೊಂಡನೆಂದೂ ಐತಿಹ್ಯ. ಇವರ ಪ್ರೇಮಸಂಬಂಧ ಗಾಂಧರ್ವವೆಂದು ಪ್ರಸಿದ್ಧವಾಗಿದೆ. ಆದ್ದರಿಂದಲೆ ತಾಯಿ ತಂದೆಯರ ಅಥವಾ ನೆಂಟರಿಷ್ಟರ ಮಧ್ಯಸ್ತಿಕೆ ಇಲ್ಲದೆ ಪ್ರೇಮವೇ ಬುನಾದಿಯಾಗಿ ಆಗುವ ವಿವಾಹ ಸಂಬಂಧವನ್ನು ಗಾಂಧರ್ವ ಎಂದು ಮನುಸ್ಮತ್ಯಾದಿಗಳು ವಿವರಿಸುತ್ತವೆ.

ರಾಮಾಯಣದಲ್ಲಿ ವಿಶ್ವಾವಸು ಹೀಗೆ ಪ್ರಕಟಗೊಳ್ಳುತ್ತಾನೆ. ಶ್ರೀರಾಮ ಸುವರ್ಣಮೃಗ ರೂಪವನ್ನು ಧರಿಸಿದ ಮಾರೀಚನನ್ನು ಕೊಂದು ಹಿಂತಿರುಗಿ ಸೀತಾಶೂನ್ಯವಾದ ಆಶ್ರಮವನ್ನು ಕಂಡು, ನೊಂದು, ಸೀತೆಯನ್ನು ಹುಡುಕುತ್ತ ಮುಂದೆ ಸಾಗುತ್ತಿರಲಾಗಿ ದಂಡಕಾರಣ್ಯದ ದಕ್ಷಿಣ ಭಾಗದಲ್ಲಿ ಮೇಘಾಕೃತಿಯ ಮಹಾಪರ್ವತದಂತೆಯೂ ಸಾಲವೃಕ್ಷದಂತೆ ಹೆಗಲುಳ್ಳವನಾಗಿಯೂ ದೊಡ್ಡದಾದ ಭುಜಗಳುಳ್ಳವನಾಗಿಯೂ ಎದೆಯ ಭಾಗದಲ್ಲಿ ವಿಸ್ತಾರವಾದ ಕಣ್ಣುಳ್ಳವನಾಗಿಯೂ ಇದ್ದ, ಬೃಹದಾಕಾರವಾದ ಹೊಟ್ಟೆಯೆಂಬ ಮುಖವುಳ್ಳ, ಘೋರಾಕೃತಿಯ ಪುರುಷನೊಬ್ಬನನ್ನು ಕಂಡ. ಕೂಡಲೆ ರಾಮ ಅವನ ಎಡಭುಜವನ್ನೂ ಲಕ್ಷ್ಮಣಬಲಭುಜವನ್ನೂ ಕತ್ತರಿಸಿದರು. ಕಬಂಧ ಅಸು ನೀಗಿದ. ಒಡನೆಯೆ ಅವನ ದೇಹದಿಂದ ದಿವ್ಯಾಕೃತಿಯ ಪುರುಷನೊಬ್ಬ ಹೊರಬಂದು ಅಂತರಿಕ್ಷದಲ್ಲಿ ಸೂರ್ಯನಂತೆ ಜ್ವಲಿಸುತ್ತ ನಿಂತು, ಹಿಂದೆ ವಿಶ್ವಾವಸುವೆಂಬ ಗಂಧರ್ವನಾದ ತನಗೆ ಸ್ಥೂಲಶಿರನೆಂಬ ಮುನಿಯ ಶಾಪದಿಂದ ರಾಕ್ಷಸ ಸ್ವರೂಪ ಬಂದುದನ್ನೂ ರಾಮಾದಿಗಳಿಂದ ಶಾಪವಿಮೋಚನೆಯಾದುದನ್ನೂ ತಿಳಿಸಿ, ರಾವಣ ಸೀತೆಯನ್ನು ಕದ್ದೊಯ್ದು ಲಂಕಾಪುರಿಯಲ್ಲಿ ಇಟ್ಟಿರುವನೆಂದೂ ಸಮಾನ ವ್ಯಸನಿಯಾದ ಸುಗ್ರೀವನಿಂದ ಸೀತಾಪ್ರಾಪ್ತಿಗೆ ಬೇಕಾದ ಅನುಕೂಲವೆಲ್ಲ ದೊರಕುವುದೆಂದೂ ತಿಳಿಸಿ ಅದೃಶ್ಯನಾದ.

ಇಷ್ಟೇ ಗೊತ್ತಾಗಿದ್ದು, ಇನ್ನೇನಾದ್ರೂ ಇದ್ರೆ ಹೇಳಿ. ಏನಿಲ್ಲ ಅಂದ್ರೂ ಮುಂದಿನ ಒಂದು ವರ್ಷ ಅಂತೂ ಇವನ ಹೆಸರಿನ ಒಂದು ವರ್ಷವಂತೂ ನಮ್ಮ ಜೊತೆ ಇದೆ. ವಿಶ್ವಾವಸು ನಮ್ಮನ್ನು ಚೆನ್ನಾಗಿ ನೋಡ್ಕಳಪ್ಪ 🌷🙏🌷

ನಮ್ಮ ಕನ್ನಡ ಸಂಪದ
ಬನವಾಸಿ ಕನ್ನಡಿಗರು
ಕನ್ನಡಮಯ
Banavasi Kannadigaru
Kannadamaya

23/12/2024

ಗಂಗರ ಕಾಲದ ಶ್ರೀ. ಚನ್ನಿಗರಾಯ ದೇವಾಲಯ ಹಾಗು ಅಲ್ಲಿನ ಶಾಸನಗಳು..
ಶ್ರೀ. ವೀರಭದ್ರ ದೇವಾಲಯ, ಕನ್ನಳ್ಳಿ, ಬೆಂಗಳೂರು

ವಿವರಣೆ: ಡಾ. ರಾಜೀವ್ ಎನ್ ನೃಪತುಂಗ
ಬನವಾಸಿ ಕನ್ನಡಿಗರು
ಕನ್ನಡಮಯ ಟ್ರಸ್ಟ್ (ನೋಂ)

Address

Kannada
Bangalore
560056

Website

Alerts

Be the first to know and let us send you an email when ಬನವಾಸಿ ಕನ್ನಡಿಗರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬನವಾಸಿ ಕನ್ನಡಿಗರು:

Share