ಸಾಮಾನ್ಯ ಕನ್ನಡಿಗ Samanya Kannadiga

  • Home
  • ಸಾಮಾನ್ಯ ಕನ್ನಡಿಗ Samanya Kannadiga

ಸಾಮಾನ್ಯ ಕನ್ನಡಿಗ  Samanya Kannadiga ನಾನು ನಿಮ್ಮಲೇ ಒಬ್ಬ ..ಸಾಮಾನ್ಯ ಕನ್ನಡಿಗ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಸಾಮಾನ್ಯ ಕನ್ನಡಿಗ .. ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರ ..ಬನ್ನಿ ಬೆಂಬಲಿಸಿ ...ಸಮೃದ್ದ ಕರ್ನಾಟಕವನ್ನು ಕಟ್ಟೋಣ

" #ಪ್ರಿಪೇಡ್ ಮರಣ"   ಬೆಂಗಳೂರಿನ ಬ್ಯಾಟರಾಯನಪುರ. 70 ವರ್ಷದ ನಾರಾಯಣಪ್ಪ. ರಿಟೈರ್ಡ್ ಬಸ್ ಕಂಡಕ್ಟರ್. ಹೆಂಡತಿ ಲಕ್ಷ್ಮಿ 5 ವರ್ಷದ ಹಿಂದೆ ತೀರಿಕ...
05/06/2026

" #ಪ್ರಿಪೇಡ್ ಮರಣ"

ಬೆಂಗಳೂರಿನ ಬ್ಯಾಟರಾಯನಪುರ. 70 ವರ್ಷದ ನಾರಾಯಣಪ್ಪ. ರಿಟೈರ್ಡ್ ಬಸ್ ಕಂಡಕ್ಟರ್. ಹೆಂಡತಿ ಲಕ್ಷ್ಮಿ 5 ವರ್ಷದ ಹಿಂದೆ ತೀರಿಕೊಂಡಳು. ಇಬ್ಬರು ಮಕ್ಕಳು - ಮಗ ರಮೇಶ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಮಗಳು ಸುಮಾ ದುಬೈನಲ್ಲಿ ನರ್ಸ್.

ನಾರಾಯಣಪ್ಪ ಒಬ್ಬಂಟಿ. ತಿಂಗಳಿಗೆ 18 ಸಾವಿರ (ಪೆನ್ಷನ್ ಮತ್ತು ಇತರ ಆದಾಯ).ಅದರಲ್ಲಿ 8ಸಾವಿರ ಮನೆ ಬಾಡಿಗೆ. ಉಳಿದ 10 ಸಾವಿರದಲ್ಲಿ ಔಷಧಿ, ಊಟ, ಕರೆಂಟ್ ಬಿಲ್.

ಪ್ರತಿ ಭಾನುವಾರ ಮಕ್ಕಳಿಗೆ ವೀಡಿಯೋ ಕಾಲ್. "ಹೇಗಿದ್ದೀರಪ್ಪಾ?" ಅಂತ ಕೇಳಿದರೆ ಇಬ್ಬರೂ ಒಂದೇ ಉತ್ತರ: "ಬ್ಯುಸಿ ಡ್ಯಾಡ್. ಮತ್ತೆ ಮಾತಾಡೋಣ."

ನಾರಾಯಣಪ್ಪನಿಗೆ 2 ವರ್ಷದಿಂದ ಕಿಡ್ನಿ ಪ್ರಾಬ್ಲಮ್. ವಾರಕ್ಕೆ 2 ಸಲ ಡಯಾಲಿಸಿಸ್. ಒಂದು ಸಲಕ್ಕೆ 2 ಸಾವಿರ. ತಿಂಗಳಿಗೆ 16 ಸಾವಿರ ಖರ್ಚು. ಪೆನ್ಷನ್ 18 ಸಾವಿರ ಮಾತ್ರ.

ಡಾಕ್ಟರ್ ಹೇಳಿದರು: "ನಾರಾಯಣಪ್ಪ, ಟ್ರಾನ್ಸ್‌ಪ್ಲಾಂಟ್ ಮಾಡಿದರೆ ಉಳೀತೀರಿ. 10 ಲಕ್ಷ ಖರ್ಚು."

ನಾರಾಯಣಪ್ಪ ನಕ್ಕ: "ಡಾಕ್ಟ್ರೇ, ನನ್ನ ಜೀವಕ್ಕೆ 10 ಲಕ್ಷ ರೇಟಾ? ನನ್ನ ಮಗ ತಿಂಗಳಿಗೆ 5 ಲಕ್ಷ ಸಂಪಾದನೆ ಮಾಡ್ತಾನೆ. ಆದ್ರೆ ಅವನಿಗೆ 5 ನಿಮಿಷ ಫೋನ್ ಮಾಡೋಕೆ ಟೈಮ್ ಇಲ್ಲ. 10 ಲಕ್ಷ ಎಲ್ಲಿ ಕೊಡ್ತಾನೆ?"
ನಾರಾಯಣಪ್ಪ ಒಂದು ಡಿಸಿಷನ್ ತಗೊಂಡರು. ಡಯಾಲಿಸಿಸ್ ನಿಲ್ಲಿಸಿದರು. ಮಕ್ಕಳಿಗೆ ಹೇಳಲಿಲ್ಲ. "ಸುಮ್ನೆ ಟೆನ್ಷನ್ ಯಾಕೆ?" ಅಂತ.

ಬದಲಾಗಿ ಒಂದು ಡೈರಿ ತಗೊಂಡರು. "ಪ್ರಿಪೇಡ್ ಮರಣ" ಅಂತ ಹೆಸರಿಟ್ಟರು.

ಮೊದಲ ಪುಟದಲ್ಲಿ ಬರೆದರು:
"ನನ್ನ ಸಾವಿಗೆ ನಾನೇ ಅಡ್ವಾನ್ಸ್ ಪೇ ಮಾಡ್ತಿದ್ದೀನಿ. ಜಿಯೋ , ಏರ್ಟೆಲ್ ಥರ ನನ್ನ ಲೈಫ್‌ಗೂ ರಿಚಾರ್ಜ್ ಬೇಕು. ಆದ್ರೆ ಯಾರೂ ಮಾಡಲ್ಲ. ಹಾಗಾಗಿ ನಾನೇ ಮಾಡ್ಕೋತಿದ್ದೀನಿ."

ಪ್ರತಿದಿನ ಏನಾದ್ರೂ ಒಂದನ್ನು "ಪ್ರಿಪೇಡ್" ಮಾಡೋಕೆ ಶುರು ಮಾಡಿದರು.

ದಿನ 1: ತನ್ನ ಫೋಟೋ ತಗೊಂಡು, ಫ್ರೇಮ್ ಹಾಕಿಸಿ, ಅದಕ್ಕೆ ಹಾರ ತಂದು ಇಟ್ಟರು. ಕೆಳಗೆ ಬರೆದರು - "ಪೇಡ್".
ದಿನ 2: ಸ್ಮಶಾನಕ್ಕೆ ಹೋಗಿ ತನಗಾಗಿ ಜಾಗ ನೋಡಿ ಬಂದರು. ಹುಡುಗನಿಗೆ 500 ಅಡ್ವಾನ್ಸ್ ಕೊಟ್ಟರು. "ಪೇಡ್".
ದಿನ 3: ಹೆಣ ಸುಡೋಕೆ hಕಟ್ಟಿಗೆ ಆರ್ಡರ್ ಮಾಡಿದರು. ₹3000 "ಪೇಡ್ ".
ದಿನ 4: ತಿಥಿಗೆ ಬ್ರಾಹ್ಮಣರಿಗೆ ದಕ್ಷಿಣೆ ಕವರ್ ಮಾಡಿ ಇಟ್ಟರು. "ಪೇಡ್ ".
ದಿನ 5: ಮಕ್ಕಳಿಗೆ ಕೊನೆ ಲೆಟರ್ ಬರೆದರು. ಪೋಸ್ಟ್ ಮಾಡಲಿಲ್ಲ. ಟ್ರಂಕ್‌ನಲ್ಲಿಟ್ಟರು. "ಪೇಡ್ ".
20 ದಿನ ಕಳೀತು. ನಾರಾಯಣಪ್ಪನ ಸ್ಥಿತಿ ಗಂಭೀರ ಆಯ್ತು. ನೆರೆಮನೆಯ ಪಾಪಣ್ಣ ಆಸ್ಪತ್ರೆಗೆ ಸೇರಿಸಿದ.

ಡಾಕ್ಟರ್ ರಮೇಶನಿಗೆ ಫೋನ್ ಮಾಡಿದರು: "ನಿಮ್ಮ ತಂದೆಗೆ ಲಾಸ್ಟ್ ಸ್ಟೇಜ್. ಕಿಡ್ನಿ ಫೇಲ್. 48 ಗಂಟೆ ಅಷ್ಟೇ. ಬೇಗ ಬನ್ನಿ."

ರಮೇಶ: "ಡಾಕ್ಟರ್, ನಾನು ಪ್ರಾಜೆಕ್ಟ್ ಡೆಲಿವರಿ‌ನಲ್ಲಿದ್ದೀನಿ. 3 ವಾರ ಬೇಕು. ವಿಡಿಯೋ ಕಾಲ್ ಮಾಡಿ. ನಾನು ಅವರ ಹತ್ತಿರ ಮಾತನಾಡುತ್ತೇನೆ."

ಡಾಕ್ಟರ್ ಶಾಕ್ ಆದರು. ಸುಮಾಗೆ ಫೋನ್ ಮಾಡಿದರು. ಅವಳೂ ಸೇಮ್: "ಡಾಕ್ಟರ್, ಫ್ಲೈಟ್ ಟಿಕೆಟ್ 1 ಲಕ್ಷ. ಸದ್ಯ ಆಗಲ್ಲ. ಹಣ ಕಳಿಸ್ತೀನಿ. ಒಳ್ಳೆಯ ಟ್ರೀಟ್ಮೆಂಟ್ ಕೊಡಿ."

ಡಾಕ್ಟರ್ ನಾರಾಯಣಪ್ಪನ ಹತ್ರ ಬಂದು ಹೇಳಿದರು: "ಅಯ್ಯಾ, ನಿಮ್ಮ ಮಕ್ಕಳಿಗೆ ಹೇಳಿದ್ದೀನಿ."

ನಾರಾಯಣಪ್ಪ ನಿಧಾನವಾಗಿ ನಕ್ಕರು. ನರ್ಸ್‌ಗೆ ಸನ್ನೆ ಮಾಡಿ ಡೈರಿ ತರಿಸಿದರು. ಕೊನೆ ಪುಟ ತೆರೆದರು.

ಬರೆದಿದ್ದರು:
"ಡಯಾಲಿಸಿಸ್ - ನಿಲ್ಲಿಸಿದ್ದೇನೆ . ಪೇಡ್ .
ಮಕ್ಕಳ ನಿರೀಕ್ಷೆ - . ಪೇಡ್ .
ಜೀವ - ಟುಮಾರೋ ಸ್ಟಾಪ್ . ಆಲ್ರೆಡಿ ಪೇಡ್ ."

ಕೆಳಗೆ ಇನ್ನೊಂದು ಸಾಲು:
"ನನ್ನ ಸಾವಿಗೆ ನಾನೇ ರಿಚಾರ್ಜ್ ಮಾಡಿಕೊಂಡೆ. ಮಿಸ್ಸೆಡ್ ಕಾಲ್ ಕೊಡೋರು ಯಾರೂ ಇಲ್ಲ. ಹಾಗಾಗಿ ಫುಲ್ ಟಾಕ್ ಟೈಮ್ ಬಳಸಿ ಬಿಟ್ಟೆ."
ನಾರಾಯಣಪ್ಪ ಅದೇ ರಾತ್ರಿ ತೀರಿಕೊಂಡರು. ಕೈಯಲ್ಲಿ ಡೈರಿ, ಮುಖದಲ್ಲಿ ಸಮಾಧಾನ.

ಪಾಪಣ್ಣ ರಮೇಶನಿಗೆ ಫೋನ್ ಮಾಡಿದ: "ಸಾರ್, ನಿಮ್ಮ ತಂದೆ ಹೋದರು."

"ಓಹ್... ಓಕೆ . ಬಾಡಿ ಅನ್ನು ಮಾರ್ಚರಿಯಲ್ಲಿ ಇಡಿ. ನಾನು 3 ವಾರ ಬಿಟ್ಟು ಬಂದು ಪ್ರೊಸೀಜರ್ ಮಾಡ್ತೀನಿ. ಕ್ರೀಮೆಷನ್ ಪ್ಯಾಕೇಜ್ ಇದ್ದರೆ ಬುಕ್ ಮಾಡಿ. ಮನಿ ಟ್ರಾನ್ಸ್ಫರ್ ಮಾಡ್ತೀನಿ."

ಪಾಪಣ್ಣನಿಗೆ ಕೋಪ ಬಂತು. ಫೋನ್ ಕಟ್ ಮಾಡಿ, ಹಳ್ಳಿಯವರನ್ನು ಕರೆದ. ಎಲ್ಲ ಸೇರಿ ನಾರಾಯಣಪ್ಪನ ಅಂತ್ಯಸಂಸ್ಕಾರ ಮಾಡಿದರು.

ಕಟ್ಟಿಗೆ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.
ಜಾಗ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.
ಬ್ರಾಹ್ಮಣರ ದಕ್ಷಿಣೆ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.

ಒಂದೇ ಒಂದು ರೂಪಾಯಿ ಯಾರೂ ಖರ್ಚು ಮಾಡಲಿಲ್ಲ. "ಪ್ರಿಪೇಡ್ ಮರಣ" - ನಿಜ ಆಯ್ತು.

13ನೇ ದಿನದ ತಿಥಿ ಕೂಡ ಹಳ್ಳಿಯವರೇ ಮಾಡಿದರು. ನಾರಾಯಣಪ್ಪ "ಪೇಡ್ " ಮಾಡಿದ್ದ ಕವರನ್ನೇ ಉಪಯೋಗಿಸಿದರು.
3 ವಾರಕ್ಕೆ ಸುರೇಶ್ ಮತ್ತು ಸುಮಾ ಬಂದರು. ಮನೆ ಬೀಗ ಹಾಕಿತ್ತು. ಪಾಪಣ್ಣ ಕೀ ಕೊಟ್ಟ.

ಮನೆ ಒಳಗೆ ಹೋದರೆ ಟೇಬಲ್ ಮೇಲೆ 2 ಕವರ್. ಒಂದು "ರಮೇಶನಿಗೆ", ಇನ್ನೊಂದು "ಸುಮಾಗೆ". ಜೊತೆಗೆ "ಪ್ರಿಪೇಡ್ ಮರಣ" ಡೈರಿ.

ಸುರೇಶ್ ಕವರ್ ತೆರೆದ. ಒಳಗೆ 500 ರೂಪಾಯಿ ಮತ್ತು ಒಂದು ಚೀಟಿ:

"ಮಗನೇ ರಮೇಶ ,
ನೀನು ಅಮೆರಿಕದಿಂದ ಬರೋ ಫ್ಲೈಟ್ ಟಿಕೆಟ್ 1 ಲಕ್ಷ. ನನ್ನ ಹೆಣ ನೋಡೋಕೆ ಅಷ್ಟು ದುಡ್ಡು ವೇಸ್ಟ್ ಮಾಡಬೇಡ ಅಂತ 500 ಇಟ್ಟಿದ್ದೀನಿ. ಇದು ನಿನ್ನ ಬಸ್ ಚಾರ್ಜ್. ನನ್ನ ಸಮಾಧಿಗೆ ಬಂದು 2 ನಿಮಿಷ ನಿಂತು ಹೋಗು. ನಿನ್ನ ಟೈಮ್‌ಗೆ ನಾನು 'ಪೇಡ್' ಮಾಡಿದ್ದೀನಿ.
ಇಂತಿ, ನಿನ್ನ ಪ್ರಿಪೇಡ್ ಅಪ್ಪ."

ಸುಮಾ ಕವರ್ ತೆರೆದಳು. ಅದರಲ್ಲೂ 500 ರೂಪಾಯಿ ಮತ್ತು ಚೀಟಿ:

"ಮಗಳೇ ಸುಮಾ,
ನೀನು ನರ್ಸ್. ದಿನಾ ನೂರು ಜನರ ಸೇವೆ ಮಾಡ್ತೀಯಾ. ಆದ್ರೆ ನಿನ್ನ ಅಪ್ಪನ ಡಯಾಲಿಸಿಸ್‌ಗೆ ಬರೋಕೆ ಆಗಲಿಲ್ಲ. ಪರವಾಗಿಲ್ಲ. ಈ 500 ತಗೋ. ನನ್ನ ಸಮಾಧಿ ಮುಂದೆ ಒಂದು ಹಾರ ಹಾಕು. ಡ್ಯೂಟಿ ಮುಗಿದ ಮೇಲೆ ಬಂದರೂ ನಡೆಯುತ್ತೆ. ನಾನು ವೇಟ್ ಮಾಡಲ್ಲ. ಆಲ್ರೆಡಿ 'ಪೇಡ್ ' ಅಂಡ್ ಗಾನ್ .
ಇಂತಿ, ನಿನ್ನ ಪ್ರಿಪೇಡ್ ಅಪ್ಪ."
ನಾರಾಯಣಪ್ಪ
ಇಬ್ಬರೂ ಡೈರಿ ಓದಿದರು. ಕೊನೆ ಪುಟದಲ್ಲಿ ಕೆಂಪು ಅಕ್ಷರದಲ್ಲಿ:

"ಮಕ್ಕಳೇ, ನನ್ನ ಸಾವಿಗೆ ನಾನೇ ರಿಚಾರ್ಜ್ ಮಾಡಿಕೊಂಡೆ. ಯಾಕೆ ಗೊತ್ತಾ?
ನಿಮ್ಮ ಪ್ರೀತಿಗೆ 'ಇನ್ಕಮಿಂಗ್ ಕಾಲ್ ಫ್ರೀ ' ಇತ್ತು. ಆದ್ರೆ ನೀವು ಒಂದು 'ಮಿಸ್ಸೆಡ್ ಕಾಲ್ ' ಕೂಡ ಕೊಡಲಿಲ್ಲ.
ಹಾಗಾಗಿ ನಾನೇ 'ಔಟಗೋಯಿಂಗ್' ಆಗಿ ಬಿಟ್ಟೆ. ಬ್ಯಾಲೆನ್ಸ್ ಜೀರೋ . ವ್ಯಾಲಿಡಿಟಿ ಮುಗಿದಿದೆ. ನಂಬರ್ ನಾಟ್ ರಿಚಬಲ್ - ಫೋರೆವೆರ್ ."

ರಮೇಶ ಮತ್ತು ಸುಮಾ ಸಮಾಧಿ ಮುಂದೆ ಬಿದ್ದು ಅತ್ತರು. ಊರವರು ನೋಡಿ ಹೇಳಿದರು: "ಈಗ ಅತ್ತು ಏನ್ ಪ್ರಯೋಜನ? ಅವರು ಬದುಕಿದ್ದಾಗ 5 ನಿಮಿಷ ಟೈಮ್ ಕೊಟ್ಟಿದ್ರೆ, ಈ 500 ರೂಪಾಯಿ ಚೀಟಿ ಬರೆಯೋ ಅವಶ್ಯಕತೆ ಇರಲಿಲ್ಲ."

ರಮೇಶ ಬೆಂಗಳೂರಲ್ಲಿ "ಪ್ರಿಪೇಡ್ ಪಿತೃ ಕೇರ್ " ಅನ್ನೋ NGO ನಡೆಸುತ್ತಾನೆ. ಒಂಟಿ ವಯಸ್ಸಾದವರಿಗೆ ಉಚಿತ ಅರೋಗ್ಯ ತಪಾಸಣೆ, ಉಚಿತ ಊಟ.

NGO ನ ಬೋರ್ಡ್ ಮೇಲೆ ಬರೆದಿದೆ:
"ನಿಮ್ಮ ಅಪ್ಪ-ಅಮ್ಮನ ಜೀವಕ್ಕೆ ರಿಚಾರ್ಜ್ ಮಾಡಿ. ಮಿಸ್ಸೆಡ್ ಕಾಲ್ ಆದರೆ, ಲೈಫಟೈಂ ವ್ಯಾಲಿಡಿಟಿ ಕಳೆದುಹೋಗುತ್ತೆ.
ನಂತರ ಎಷ್ಟೇ ಟಾಪ್ -ಅಪ್ ಮಾಡಿದ್ರೂ ನೆಟ್ವರ್ಕ್ ಸಿಗಲ್ಲ."

ನೀತಿ: ಅಪ್ಪ-ಅಮ್ಮ ಪ್ರಿಪೇಡ್ ಸಿಮ್ ಥರ. ರೀಚಾರ್ಜ್ ಮಾಡದಿದ್ದರೆ ಒಂದು ದಿನ ನಾಟ್ ರೀಚಬಲ್ ಆಗಿ ಬಿಡ್ತಾರೆ. ಆಗ ಸ್ಮಶಾನದಲ್ಲಿ ಟವರ್ ಸಿಗಲ್ಲ.

"ಬ್ಯುಸಿ " ಅನ್ನೋದು ಕಾರಣ ಅಲ್ಲ.. ಇವತ್ತು ನಿಮ್ಮ ಅಪ್ಪ-ಅಮ್ಮಂಗೆ ಒಂದು "ಮಿಸ್ಸೆಡ್ ಕಾಲ್ " ಕೊಡಿ... ಅವರು "ಕಾಲ್ ಬ್ಯಾಕ್ " ಮಾಡೋ ವಯಸ್ಸಲ್ಲಿ ಇದ್ದಾರೆ.
ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರು, ಎಷ್ಟೇ ದುಡೀತಿದ್ದರು ಪೋಷಕರ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು, ಮುಕ್ತಿಗಾಣಿಸುವುದು ಪ್ರತಿ ಮಕ್ಕಳ ಕರ್ತವ್ಯ.
ಈ ಕಥೆ ನಿಮಗೆ ಇಷ್ಟವಾದರೆ #ಲೈಕ್
#ಕಾಮೆಂಟ್ & #ಶೇರ್ ಮಾಡಿ
#ಸುರೇಶಪಟ್ಟಣಗೆರೆ
ಕೃಪೆ:
kaduru ಅವರ ಫೇಸ್ಬುಕ್ ವಾಲ್ ನಿಂದ ನಕಲಿಸಿದ್ದು.

ಆ‌ರ್.ಕೆ.ಎಸ್. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ8 ನೇ , 9ನೇ ಮತ್ತು 10ನೇ ತರಗತಿ ಕನ್ನಡ ಮಾಧ್ಯಮ ಸಂಪೂರ್ಣ ಉಚಿತ ಶಿಕ್ಷಣ 27ನೇ ಅಡ್ಡರಸ್ತೆ, ...
01/06/2026

ಆ‌ರ್.ಕೆ.ಎಸ್. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ

8 ನೇ , 9ನೇ ಮತ್ತು 10ನೇ ತರಗತಿ ಕನ್ನಡ ಮಾಧ್ಯಮ ಸಂಪೂರ್ಣ ಉಚಿತ ಶಿಕ್ಷಣ

27ನೇ ಅಡ್ಡರಸ್ತೆ, ಜಯನಗರ, 7ನೇ ಬ್ಲಾಕ್, ಬೆಂಗಳೂರು - 560070

ಸಂಪರ್ಕಿಸಿ 9019108200

 #ದಿಲೀಪರಾಜ್ , ಸರ್ ಅಷ್ಟು ಅವಸರ ಏನಿತ್ತು..!! ಛೇ..!! ಭಗವಂತ ನಿನಗೇಕೆ ಈ ಕಲ್ಲು ಮನಸ್ಸು ಬಂದಿತು.! ಇತ್ತಿಚೆಗೆ ತಾನೇ ಒಳ್ಳೆಯ ಸಮಯ ಕಾಣ್ತಾ ಇ...
13/05/2026


#ದಿಲೀಪರಾಜ್ , ಸರ್ ಅಷ್ಟು ಅವಸರ ಏನಿತ್ತು..!!
ಛೇ..!! ಭಗವಂತ ನಿನಗೇಕೆ ಈ ಕಲ್ಲು ಮನಸ್ಸು ಬಂದಿತು.!
ಇತ್ತಿಚೆಗೆ ತಾನೇ ಒಳ್ಳೆಯ ಸಮಯ ಕಾಣ್ತಾ ಇರೋ ಜೀವಾನ ಕಿತ್ಕೊಂಡು ಬಿಟ್ಟಿಯಲ್ಲ..!!

ಬಹಳ ಆತ್ಮೀಯತೆ ತೋರುವ , ಅಹಂಕಾರವಿಲ್ಲದ ಸ್ನೇಹಿತನನ್ನ ಕಳೆದುಕೊಂಡಂತಾಗಿದೆ....!! 🔚

ಕನ್ನಡದ ಪ್ರತಿಭೆಯೊಂದು ಅಸ್ತಂಗತ..

ಸರ್..!! 😭😭😭
#ಭಾವಪೂರ್ಣ_ಶ್ರದ್ಧಾಂಜಲಿ

24/04/2026

ಕನ್ನಡಕ್ಕೊಬ್ಬನೆ #ರಾಜಕುಮಾರ
ವರನಟ ಅಂತ ಯಾಕೆ ಕರೆಯಲಾಗುತ್ತದೆ ಎಂದರೆ ಇಲ್ಲಿರುವ ಒಂದು ದೃಶ್ಯ ನೋಡಿದ ಮೇಲೆ ಗೊತ್ತಾಗುತ್ತದೆ.
ಹಾವ ಭಾವ ಮೌಕಿಕ ನಟನೆ , ಸಂಭಾಷಣೆಯ ಉಚ್ಚಾರಣೆ ಆಹಾ....
ರಾಜಕುಮಾರ ಅವರ ಜನ್ಮದಿನದ ನೆನಪಿನಲ್ಲಿ.!
#ಕಸ್ತೂರಿನಿವಾಸ 💕💞💓

ಮಗುವಿನ ಮೊದಲ ಹೆಜ್ಜೆ, ಜ್ಞಾನದ ಕಡೆಗೆ... 👣📚​ಬನ್ನಿ, ನಿಮ್ಮ ಮಕ್ಕಳ ಬಾಲ್ಯವನ್ನು ಮತ್ತಷ್ಟು ಬಣ್ಣಮಯವಾಗಿಸೋಣ! ಬ್ರಾಹ್ಮಿ ಮಾಂಟೆಸ್ಸರಿಯಲ್ಲಿ ಮಕ...
15/04/2026

ಮಗುವಿನ ಮೊದಲ ಹೆಜ್ಜೆ, ಜ್ಞಾನದ ಕಡೆಗೆ... 👣📚

​ಬನ್ನಿ, ನಿಮ್ಮ ಮಕ್ಕಳ ಬಾಲ್ಯವನ್ನು ಮತ್ತಷ್ಟು ಬಣ್ಣಮಯವಾಗಿಸೋಣ! ಬ್ರಾಹ್ಮಿ ಮಾಂಟೆಸ್ಸರಿಯಲ್ಲಿ ಮಕ್ಕಳ ಆಟದ ಜೊತೆಗಿನ ಪಾಠಕ್ಕೆ ನಾವು ಸದಾ ಸಿದ್ಧ.

​📍 ಜಯನಗರ 7ನೇ ಬ್ಲಾಕ್, ಬೆಂಗಳೂರು.

📞 ಇಂದು ಕರೆ ಮಾಡಿ: 9019108200

 #ಹಿಂದಿ ಕಲಿಕೆ ಮತ್ತು ಹಿಂದಿ ಹೇರಿಕೆ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದವರು ದೇಶಭಕ್ತಿಯ ಹೆಸರಿನಲ್ಲಿ ಈ **** ಹೆಬ್ಬಟ್ಟು ರಾಜಕಾರಣಿಗಳು ಉಪದೇಶ...
01/04/2026

#ಹಿಂದಿ ಕಲಿಕೆ ಮತ್ತು ಹಿಂದಿ ಹೇರಿಕೆ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದವರು ದೇಶಭಕ್ತಿಯ ಹೆಸರಿನಲ್ಲಿ ಈ **** ಹೆಬ್ಬಟ್ಟು ರಾಜಕಾರಣಿಗಳು ಉಪದೇಶ ಕೊಡುವುದು ನಿಜಕ್ಕೂ ಹಾಸ್ಯಾಸ್ಪದ.

#ಭಾಷೆ ಕಲಿಯುವುದು #ಸ್ವಯಂ ಇಚ್ಛೆ ,ಹೇರಿಕೆ ಮಾಡುವುದು ದಬ್ಬಾಳಿಕೆ. ಭಾರತದ ಶಕ್ತಿಯೇ ಅದರ ವೈವಿಧ್ಯತೆ ಅದನ್ನೇ ಅಳಿಸಲು ಪ್ರಯತ್ನಿಸುವುದು ಯಾವ ವೈವಿಧ್ಯತೆಯ ಸ್ವಾತಂತ್ರ್ಯಕ್ಕೆ ಗೌರವ ಕೊಡದ ಮನೋಭಾವ ಎಂಬುದು ಈ **** ಗಳು ಹೇಳಬೇಕು.

ಈ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಹಿಂದಿ ಕಡ್ಡಾಯತೆಯನ್ನು ಸಡಿಲಿಸಿದ ಶಿಕ್ಷಣ ಸಚಿವ #ಮಧು_ಬಂಗಾರಪ್ಪ ಅವರ Madhu Bangarappa ನಿರ್ಧಾರ ಧೈರ್ಯಶಾಲಿ , #ಕನ್ನಡಪರ ಸಾಕಷ್ಟು ದಶಕಗಳಿಂದ ಈ ಬೇಡಿಕೆ ಹೊತ್ತು ಹೋರಾಟ ಮಾಡುತ್ತಿದ್ದ ಅಷ್ಟು ಕನ್ನಡಪರ ಹೋರಾಟಗಾರರಿಗೆ ಸಿಕ್ಕ ಗೌರವ ಮತ್ತು ಕನ್ನಡ ನಾಡಿನ ವಿದ್ಯಾರ್ಥಿಗಳ ಪರವಾದ ಹೆಜ್ಜೆ.

ಇದು ರಾಜಕೀಯಕ್ಕಿಂತ ನಾಡಿನ ಹಿತಕ್ಕಾಗಿ ಕನ್ನಡ ವಿದ್ಯಾರ್ಥಿಗಳ ಪರ ಪ್ರಜಾಸತ್ತಾತ್ಮಕ, ಭಾರತದ ಭಾಷಾ ವೈವಿಧ್ಯತೆಯನ್ನು ಉಳಿಸುವ ದಿಟ್ಟ ನಿರ್ಧಾರ.

ಇಚ್ಛೆ ಇರುವವರು ಹಿಂದಿ ಕಲಿಯೋಕೆ ಈಗಲೂ ಕರ್ನಾಟಕ ಸರ್ಕಾರ ಯಾವುದೇ ತಡೆ ಒಟ್ಟಿಲ್ಲ ಆಸಕ್ತಿ ಇರುವವರು ಓದಬಹುದು

ವೈವಿಧ್ಯತೆಯನ್ನು ಕಾಪಾಡುವುದು ದೇಶಪ್ರೇಮವೇ ಹೊರತು #ಹೇರಿಕೆ ಮಾಡುವುದು ಅಲ್ಲ ಅನ್ನೋದು ಕನ್ನಡ ವಿರೋಧಿ ****ರ ಜೊತೆ ಮಾನಗೆಟ್ಟ ******* ಗಳು ಅರಿತುಕೊಳ್ಳಬೇಕು.

ಇದು ಮಧು ಬಂಗಾರಪ್ಪ ರವರ ರಾಜಕೀಯ ಜೀವನದಲ್ಲೇ ಅತ್ಯುನ್ನತ ನಿರ್ಧಾರ. ನೀವು ಮುಜುಗರ ಪಡುವಂತಹ ಯಾವ ಕೆಲಸವೂ ಮಾಡಿಲ್ಲ ಇಡೀ ಕರುನಾಡಿನ ಕನ್ನಡ ಪರರು ನಿಮ್ಮ ಜೊತೆಗಿದ್ದಾರೆ ಮುನ್ನುಗ್ಗಿ.
ಈ ಬರಹವನ್ನ #ಬೈರಪ್ಪ ಹರೀಶ ಅವರ ವಾಲ್ ನಿಂದ ನಕಲಿಸಲಾಗಿದೆ. ಮಾಹಿತಿಗಾಗಿ ಮಾತ್ರ.
(ಅಂದಹಾಗೆ ಇಲ್ಲಿರುವ ಚಿತ್ರಕ್ಕೂ ಬರಹಕ್ಕೆ ಯಾವುದೇ ಸಂಬಂಧ ಇಲ್ಲ. ಹಾಗೇನಾದ್ರೂ ಸಂಬಂಧ ಕಂಡುಬಂದರೆ ಅದು ಕೇವಲ ಕಾಕತಾಳಿಯ)

📌💐💐🌹🙏🙏 #ಮಹಾವೀರ_ಜಯಂತಿ ⚛
30/03/2026

📌💐💐🌹🙏🙏
#ಮಹಾವೀರ_ಜಯಂತಿ ⚛

27/03/2026

ಆಟಕ್ಕುಂಟು ಲೆಕ್ಕಕ್ಕಿಲ್ಲ 😭😭😭

27/03/2026

IPL Ticket Bhagya Guarantee

ನಿಮ್ಮ ಮಕ್ಕಳಿಗೆ ಪ್ರಕೃತಿಯೆಂದರೆ ಇಷ್ಟವೇ? ಹಾಗಿದ್ದರೆ ಅವರು ಪ್ರಕೃತಿಯನ್ನು ಅದರ ಪೂರ್ಣ ರೂಪದಲ್ಲಿ ಅನುಭವಿಸುವ ಸಮಯ ಬಂದಿದೆ! 🍃ದಿಡುಪೆಯಲ್ಲಿ ನ...
25/03/2026

ನಿಮ್ಮ ಮಕ್ಕಳಿಗೆ ಪ್ರಕೃತಿಯೆಂದರೆ ಇಷ್ಟವೇ? ಹಾಗಿದ್ದರೆ ಅವರು ಪ್ರಕೃತಿಯನ್ನು ಅದರ ಪೂರ್ಣ ರೂಪದಲ್ಲಿ ಅನುಭವಿಸುವ ಸಮಯ ಬಂದಿದೆ! 🍃

ದಿಡುಪೆಯಲ್ಲಿ ನಮ್ಮ 5 ದಿನಗಳ ಪ್ರಕೃತಿ ಒಡನಾಟದ ಬೇಸಿಗೆ ಶಿಬಿರವನ್ನು (Nature Immersion Summer Camp) ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಇದು ಕೇವಲ ಒಂದು ಶಿಬಿರವಲ್ಲ—ನಮ್ಮ ಮೂಲಕ್ಕೆ ಮರಳುವ ಒಂದು ಅದ್ಭುತ ಪಯಣ.

📍 ಸ್ಥಳ: ದಿಡುಪೆ ಗ್ರಾಮ (ಪಶ್ಚಿಮ ಘಟ್ಟಗಳು)
🏰 ವಿಶೇಷ ಆಕರ್ಷಣೆ: ಬಂಗ ರಾಜವಂಶದ ರಾಜಧಾನಿಗೆ ಪರಂಪರೆ ನಡಿಗೆ (Heritage Walk).

📅 ದಿನಾಂಕ: ಏಪ್ರಿಲ್ 20 ರಿಂದ ಏಪ್ರಿಲ್ 24 ರವರೆಗೆ

ಈ ಸುವರ್ಣ ಅವಕಾಶವನ್ನು ಕೈತಪ್ಪಿಸಿಕೊಳ್ಳಬೇಡಿ—ಸೀಟುಗಳು ವೇಗವಾಗಿ ಭರ್ತಿಯಾಗುತ್ತಿವೆ! ⏳

🔗 ಹೆಚ್ಚಿನ ಮಾಹಿತಿಗಾಗಿ ಈ ಫಾರ್ಮ್ ಅನ್ನು ಭರ್ತಿ ಮಾಡಿ:

https://docs.google.com/forms/d/e/1FAIpQLSelUqnTcFK7XuE9dbmmaG7jgBHNiLWpMk4y5oIBzvwYUZLiFQ/viewform?usp=publish-editor

Address


560078

Alerts

Be the first to know and let us send you an email when ಸಾಮಾನ್ಯ ಕನ್ನಡಿಗ Samanya Kannadiga posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಸಾಮಾನ್ಯ ಕನ್ನಡಿಗ Samanya Kannadiga:

  • Want your organization to be the top-listed Non Profit Organization?

Share