24/09/2025
ಸಾರಸ್ವತ ಲೋಕದ ದಿಗ್ಗಜ, ಸಾರಸ್ವತ ಲೋಕದ ಅನರ್ಘ್ಯ ರತ್ನ...
ಕನ್ನಡದ ಕಂಪನ್ನು ದೇಶಾದ್ಯಂತ ಹರಡಿದ ಧೀಮಂತ....
ಕನ್ನಡದ ಖ್ಯಾತ ಕಾದಂಬರಿಕಾರರು
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅಸ್ತಂಗತ...
ಸಮಾಜ ಮುಖಿಯಾದ ವೈಚಾರಿಕತೆಯನ್ನು ಕಟ್ಟಿಕೊಟ್ಟವರು ಕನ್ನಡದ ಹೊಳಪು ಹೆಚ್ಚಿಸಿದವರು
ಶಿಸ್ತುಬದ್ಧ ಜೀವನಶೈಲಿಗೆ ಹೆಸರಾದವರು. ತಾನು ಹೇಳಬೇಕಾದ್ದನ್ನು ನೇರವಾಗಿ ಹೇಳಿದವರು. ಕಟುವಾದ, ನೇರ ನಿಷ್ಠುರವಾದ ನಿಲುವುಗಳಿಂದ ಸಮಾಜದ ಓರೆ ಕೋರೆಗಳನ್ನು ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನದ ಮೋನುಚಾದ ಬರಹಗಳು ...ಯಾರು ಹೇಗಾದರೂ ತೆಗೆದುಕೊಳ್ಳಲಿ, ನಾನು ಹೇಳಬೇಕಿರುವುದನ್ನು ನಾನು ಹೇಳಿಯೇ ತೀರುತ್ತೇನೆ ಅನ್ನುವ ಅವರ ಸಿದ್ಧಾಂತ ಮತ್ತು ಅವರ ಕೆಲವು ಕೃತಿಗಳು ಅನೇಕ ಟೀಕೆಗಳಿಗೂ ಒಳಗಾಗಿದ್ದವು... ಆದರೂ ಅವರ ವ್ಯಕ್ತಿತ್ವ ಅವೆಲ್ಲವನ್ನೂ ಮೆರೆಮಾಚುತ್ತಿದ್ದವು... ಅನೇಕ ಸಾಹಿತಿಗಳು ಅವರ ಕೆಲ ಅಭಿಪ್ರಾಯಗಳನ್ನು ಸಾರ ಸಗಟು ಖಂಡಿಸಿದ ಪ್ರಕರಣಗಳನ್ನು ಕಂಡಿದ್ದೇವೆ.. ಏನೇ ಆಗಲಿ ಅವರ ಬರಹಗಳು ಸೂಜಿಗಲ್ಲಿನಂತೆ ಸೆಳೆಯಬಲ್ಲ ಸಾಮರ್ಥ್ಯ ಹೊಂದಿರುವವು.
ಒಂದು ರೀತಿಯಲ್ಲಿ ಅವರೊಬ್ಬ ಬಂಡಾಯ ಸಾಹಿತಿ ಅನ್ನಿಸಿದರೂ, ಅವರ ಅನೇಕ ಕೃತಿಗಳು ಅನೇಕ ದಾಖಲೆಗಳನ್ನು ಮಾಡಿವೆ. ಎಲ್ಲ ವರ್ಗಗಳ ಎಲ್ಲ ಪಂಥಗಳ ಒಳ ಹೋರ ಗುಗಳನ್ನು ಆಳವಾಗಿ ಸಂಶೋಧಿಸಿ ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿದ ಜ್ಞಾನಿ, ಸಮಾಜದ ಅನೇಕ ಹುಳುಕುಗಳನ್ನು, ಸಮಾಜ ಘಾತುಕ ಆಚರಣೆಗಳ ವಿರೋಧಿಸಿ ಬೈರಪ್ಪನವರು ಬರೆದಷ್ಟು ಕಟುವಾಗಿ ಬರೆದವರು ಇನ್ನೊಬ್ಬರನ್ನು ನಾ...ಕಾಣೆ...
ಬರೆಯುವುದು ಬದಲಾವಣೆಗೆ... ಬೆರೆಯುವುದು ಬೆಳವಣಿಗೆಗೆ ಅನ್ನುವ ತತ್ವಾದರ್ಶವನ್ನು ಕಟ್ಟಿಕೊಡಬಲ್ಲ ಧೀಮಂತ ವ್ಯಕ್ತಿತ್ವದ ಮೇರು ಪರ್ವತ. ಅವರ ಚಿಂತನ ಶೀಲತೆಯಿಂದ ಬರೆದ ಕೃತಿಗಳು ಅನೇಕ.. ಆಯಾ ಕಾಲಘಟ್ಟಕ್ಕೆ ಅನುರಣೀಯವಾಗಿ ಎಲ್ಲ ವಯೋಮಾನದವರನ್ನು ಆಕರ್ಷಿಸಿದ ಅನೇಕ ಕೃತಿಗಳು ಹಲವು ಭಾಷೆಗಳಿಗೆ ತರ್ಜುಮೆ ಹೊಂದಿದವು ಅವರ ಕೃತಿಗಳು.
ಇತಿಹಾಸವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಕಟ್ಟಿಕೊಟ್ಟವರು...
ಸಂಶೋಧನೆ ; ಅಧ್ಯಯನಗಳ ಪ್ರತೀಕವಾದ, ತಮ್ಮ ನಿಲುವುಗಳನ್ನು ಗಟ್ಟಿಯಾಗಿ ಮಂಡಿಸುವ, ತನ್ನ ನಿಲುವಿಗೆ ಅಂಟಿಕೊಂಡು ಅದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡಬಲ್ಲ ನೈಪುಣ್ಯತೆ ಅವರದು...ಅವರ ಅನೇಕ ಕೃತಿಗಳು ಹಲವು ಭಾಷೆಗಳಲ್ಲಿ ಪ್ರಕಟವಾದವು
ಅನೇಕ ಕೃತಿಗಳು ಭಾರತದಾದ್ಯಂತ ಅವರ ಕೃತಿಗಳು ಓದುಗರನ್ನು, ಅಭಿಮಾನಿಗಳನ್ನು ಸೃಷ್ಟಿಸಿದವು. ಈಗ ಅವರು ಭೌತಿಕವಾಗಿ ನಮ್ಮನ್ನಾಗಲಿದ್ದಾರೆ...
ಅವರ ಕೃತಿಗಳ ಮೂಲಕ ಅವರು ನಮ್ಮೊಂದಿಗೆ ಸದಾ
ಜೀವಂತವಾಗಿರುತ್ತಾರೆ..
ಎಸ್.ಎಲ್. ಭೈರಪ್ಪ ಅವರು ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ ಕನ್ನಡದಲ್ಲಿ ಅನೇಕ ಪ್ರಮುಖ ಕಾದಂಬರಿಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಆವರಣ, ಪರ್ವ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ತಂತು, ಮತ್ತು ಸಾರ್ಥ ಪ್ರಮುಖವಾಗಿವೆ. ಅವರ ಪರ್ವ ಕಾದಂಬರಿಯು ಮಹಾಭಾರತದ ಕಥೆಯನ್ನು ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ದೃಷ್ಟಿಕೋನದಿಂದ ಮರುರೂಪಿಸಿದ ಕೃತಿಯಾಗಿದೆ.
ಪ್ರಮುಖ ಕಾದಂಬರಿಗಳು
ಪರ್ವ ಮಹಾಭಾರತದ ಸಾಮಾಜಿಕ ಮತ್ತು ಮಾನವೀಯ ಮುಖಗಳನ್ನು ಸಮಾಜಶಾಸ್ತ್ರೀಯವಾಗಿ ನಿರೂಪಿಸುವ ವಿಮರ್ಶಾತ್ಮಕ ಕಾದಂಬರಿ.
ಆವರಣ ಈ ಕಾದಂಬರಿಯನ್ನು
ವಂಶವೃಕ್ಷ 1966 ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ, ಇದು ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ.
ತಬ್ಬಲಿಯು ನೀನಾದೆ ಮಗನೆ 1977 ರಲ್ಲಿ ಬಿಡುಗಡೆಗೊಂಡ ಕಾದಂಬರಿ, ಇದು ಚಲನಚಿತ್ರ ರೂಪದಲ್ಲೂ ಜನಪ್ರಿಯವಾಗಿದೆ.
ಗೃಹಭಂಗ ಈ ಕಾದಂಬರಿಯನ್ನು ನಲ್ಲಿ ಕಾಣಬಹುದು.
ತಂತು 1993 ರಲ್ಲಿ ಪ್ರಕಟವಾದ ಈ ಕಾದಂಬರಿಯು ಮಾನವ ಸಂಬಂಧಗಳನ್ನು ವಿವೇಚಿಸುತ್ತದೆ.
ಸಾರ್ಥ 1998 ರಲ್ಲಿ ಪ್ರಕಟವಾದ ಮತ್ತೊಂದು ಗಮನಾರ್ಹ ಕಾದಂಬರಿ.
ಭೀಮಕಾಯ ಇದು ಅವರ ಮೊದಲ ಕಾದಂಬರಿಯಾಗಿದ್ದು 1958 ರಲ್ಲಿ ಪ್ರಕಟವಾಯಿತು.
ಮತದಾನ 2001 ರಲ್ಲಿ ಪ್ರಕಟವಾದ ಈ ಕಾದಂಬರಿಯೂ ಚಲನಚಿತ್ರವಾಗಿ ಹೊರಹೊಮ್ಮಿದೆ.
ನಾಯಿ ನೆರಳು 2006 ರಲ್ಲಿ ಬಿಡುಗಡೆಗೊಂಡ ಕಾದಂಬರಿ, ಇದು ಚಲನಚಿತ್ರ ರೂಪದಲ್ಲೂ ಪ್ರಸಿದಿ ಯಾಗಿದೆ
ಎಸ್.ಎಲ್. ಭೈರಪ್ಪ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ದೊಡ್ಡ ಹೆಸರು ತಂದುಕೊಟ್ಟಿದೆ.
ಎಸ್ ಎಲ್ ಭೈರಪ್ಪ - ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರದ ವಿಷಯದಲ್ಲಿ ಅನನ್ಯವಾಗಿವೆ. ಅವರು ಕನ್ನಡ ಭಾಷೆಯಲ್ಲಿ ಹೆಚ್ಚು ಮಾರಾಟವಾದ ಲೇಖಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರ ಪುಸ್ತಕಗಳನ್ನು ಹಿಂದಿ ಮತ್ತು ಮರಾಠಿಗಳಿಗೆ ಅನುವಾದಿಸಲಾಗಿದೆ ಮತ್ತು ಅವುಗಳು ಹೆಚ್ಚು ಕಾದಂಬರಿಗಳನ್ನು ವ್ಯಾಪಕವಾಗಿ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.
ಶ್ರೀ ಎಸ್ ಎಲ್ ಭೈರಪ್ಪ ಅವರು ಕನ್ನಡ ಭಾಷೆಯ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರು.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.
ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕುರುಹಿನಶೆಟ್ಟಿ ಸಮಾಜ ಕರ್ನಾಟಕ ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ Kuruhina shetty mahila samaj ಕುರುಹಿನಶೆಟ್ಟಿ ಸಮಾಜ ಹುಬ್ಬಳ್ಳಿ -ಧಾರವಾಡ ಕುರುಹಿನಶೆಟ್ಟಿ ಕ್ರೀಡಾ ಮತ್ತು ಕಲಾ ಸಂಘ(ರಿ) Kuruhinashetty Samaj India
#ಸಮಾಜದಗೆಲುವು #ಕುರುಹಿನಶೆಟ್ಟಿ