Kulala Sangha Bengaluru

Kulala Sangha Bengaluru Kulala/Moolya caste in the coastal and Malnad region of Karnataka, Kasargod and neighbouring areas is the synonym of Kumbara Caste.

Basic occupation of Kulalas' is pottery. KULALAs who migrated to Bengaluru, founded KULALA SANGHA & serving since 50 yrs.

13/10/2025
ಆತ್ಮೀಯ ಪೋಷಕರೇ ಮತ್ತು ವಿದ್ಯಾರ್ಥಿಗಳೇ,*ಕುಲಾಲ ಸಂಘ  ಬೆಂಗಳೂರು(ರಿ.)*ತನ್ನ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ 2025-2026 ನೇ  ಶೈಕ್ಷಣಿಕ ವರ್ಷದ...
17/08/2025

ಆತ್ಮೀಯ ಪೋಷಕರೇ ಮತ್ತು ವಿದ್ಯಾರ್ಥಿಗಳೇ,

*ಕುಲಾಲ ಸಂಘ ಬೆಂಗಳೂರು(ರಿ.)*
ತನ್ನ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ 2025-2026 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಕಟಿಸಿದೆ. ಸದರಿ ಶೈಕ್ಷಣಿಕ ವರ್ಷ 2024-2025 ರಲ್ಲಿ ಪಿ.ಯು.ಸಿ(ದ್ವಿತೀಯ)/ ಸಿ.ಬಿ.ಎಸ್.ಸಿ(12th grade)/ಐ.ಸಿ.ಎಸ್.ಸಿ(12th grade)/ ಪರೀಕ್ಷೆಯಲ್ಲಿ ಶೇ. 85% ಮತ್ತು ಮೇಲ್ಪಟ್ಟು ಅಂಕಗಳೊಂದಿಗೆ ಉತೀರ್ಣರಾಗಿರುವ ನಮ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವು ಅನ್ವಯವಾಗುತ್ತದೆ. ವಿದ್ಯಾರ್ಥಿಗಳು *ಕುಲಾಲ/ಮೂಲ್ಯ/ಹಾಂಡ* ಕುಟುಂಬಕ್ಕೆ ಸೇರಿದ್ದು ಮತ್ತು ಆರ್ಥಿಕವಾಗಿ ಹಿಂದುಳಿದಿರುವವರನ್ನು ಬೆಂಬಲಿಸುವುದು ಸಂಘದ ಉದ್ದೇಶ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷ ಪದವಿ/ಡಿಪ್ಲೊಮ ಅಥವಾ ಪ್ರಥಮ ವರ್ಷದ ವೃತ್ತಿಪರ ಕೋರ್ಸ್‌ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಈ ಪ್ರಕಟಣೆಯ ಜೊತೆಗೆ ವಿದ್ಯಾರ್ಥಿ ವೇತನದ ಅರ್ಜಿಯ ನಮೂನೆಯನ್ನು
ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿ ಅರ್ಜಿಯಲ್ಲಿ ತಿಳಿಸಿರುವಂತೆ ಬೇಕಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯಲ್ಲಿ ತಿಳಿಸಿರುವ ಇಮೇಲ್ ಐಡಿ ಗೆ ಕಳುಹಿಸತಕ್ಕದ್ದು.
https://drive.google.com/file/d/1AZpnyX5nPMrYF55ev6y7HpgceJ3-ITJF/view?usp=drive_link

ಇಂತೀ..
ಶ್ರೀ ದಿವಾಕರ್ ಮೂಲ್ಯ
ಅಧ್ಯಕ್ಷರು, 9448069574.
ಶ್ರೀ ಆಶಾನಂದ ಕುಲಶೇಕರ
ಪ್ರ.ಕಾರ್ಯದರ್ಶಿ,9749127987.
ಶ್ರೀ ದಿನೇಶ್ಚಂದ್ರ ಜಿ. ಎಚ್.
ಉಪಾಧ್ಯಕ್ಷರು, 9742891493.
ಶ್ರೀ ಗಣೇಶ ಪ್ರಸಾದ್. ಸಂಚಾಲಕರು, 9164828775.
ಮತ್ತು ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು.
ಕುಲಾಲ ಸಂಘ ಬೆಂಗಳೂರು (ರಿ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ 20, 2025.

*ಸ್ವಾತಂತ್ರ್ಯ ದಿನಾಚರಣೆ*ಕುಲಾಲ ಸಂಘ ಬೆಂಗಳೂರು ವತಿಯಿಂದ ಇಂದು 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಘದ ಆಂದ್ರಹಳ್ಳಿ ಕಛೇರಿಯ ಆವರಣದಲ್ಲಿ ಆಚರಿಸ...
15/08/2025

*ಸ್ವಾತಂತ್ರ್ಯ ದಿನಾಚರಣೆ*

ಕುಲಾಲ ಸಂಘ ಬೆಂಗಳೂರು ವತಿಯಿಂದ ಇಂದು 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಘದ ಆಂದ್ರಹಳ್ಳಿ ಕಛೇರಿಯ ಆವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಬಿ.ಲೀಲಾ ಸುಂದರ್ ಮಾಸ್ಟರ್ ಮತ್ತು ಶ್ರೀಮತಿ ಉಮಾವತಿ ಈಶ್ವರ ಮೂಲ್ಯರವರು ಸೇರಿರುವ ಗಣ್ಯರ, ಸಂಘದ ಸದಸ್ಯರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲೀಲಾ ಸುಂದರ್ ಮತ್ತು ಉಮಾವತಿ ಈಶ್ವರ್ ರವರನ್ನು ಶಾಲು, ಹಾರ, ಫಲಪುಷ್ಪಗಳೊಂದಿಗೆ ಗೌರವಿಸಲಾಯಿತು. ಅತಿಥಿಗಳು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ಪ ಕಣ್ವತೀರ್ಥ, ಬಿ.ಮಾಧವ ಕುಲಾಲ್, ಜಿ.ಈಶ್ವರ ಮೂಲ್ಯ, ವಿಠಲ್ ಕನೀರ್ ತೋಟ, ಪುರುಷೋತ್ತಮ ಚೇಂಡ್ಲಾ, ಎ.ಎನ್.ಕುಲಾಲ್ ಮಾತನಾಡಿದರು.
ಸಭಿಕರಲ್ಲಿ ಚಿನ್ನಪ್ಪ ಮಡಿಕೇರಿ ಮತ್ತು ಮಹೇಶ್ ಮೂಲ್ಯರವರು ಮಾತನಾಡಿದರು.
ಅಧ್ಯಕ್ಷರಾದ ಶ್ರೀ ದಿವಾಕರ ಮೂಲ್ಯರವರು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಸಂಘವು ಹಮ್ಮಿಕೊಂಡಿರುವ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಸಂಘದ ಆಂದ್ರಹಳ್ಳಿಯ ನೋಂದಾಯಿತ ಕಛೇರಿ, ಉತ್ತರ ಹಳ್ಳಿಯ ಶಾಖಾ ಕಛೇರಿಯ ಜೊತೆಗೆ ಈಗ ಸಂಘದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಮಧ್ಯ ಭಾಗದಲ್ಲಿ (ರಾಜಾಜಿನಗರದ 5 ನೇ ಬ್ಲಾಕ್) ನೂತನವಾಗಿ ಆಡಳಿತಾತ್ಮಕ ಕಛೇರಿಯನ್ನು ಆರಂಭಿಸಿರುವುದರ ಬಗ್ಗೆ ತಿಳಿಸಿ, ಸಂಘದ ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ವಿನಂತಿಸಿದರು.
ಮಹಿಳಾ ಘಟಕದ ಸಂಚಾಲಕಿಯರಾದ ಶೀಮತಿ ಅನುಸೂಯ ಕೃಷ್ಣಪ್ಪ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಅನಿತಾ ಹರೀಶ್ ಮತ್ತು ಶ್ರೀಮತಿ ವಿನಯಾ ದಿವಾಕರ್ ರವರು ದೇಶ ಭಕ್ತಿ ಗೀತೆ ಹಾಡಿದರು.
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆಶಾನಂದ್ ಕುಲಶೇಖರ ರವರು ಧನ್ಯವಾದಗಳನ್ನು ಸಮರ್ಪಿಸಿದರು.
ಧ್ವಜಾರೋಹಣದ ನಂತರ ಎಲ್ಲರಿಗೂ ಸಿಹಿ ತಿಂಡಿ, ಲಘು ಉಪಹಾರದ ಜೊತೆಗೆ ಆಟಿ (ಆಷಾಡ) ತಿಂಗಳ ವಿಶೇಷ ತಿಂಡಿ ಪತ್ರೊಡೆ ಮತ್ತು ಕಣಿಲೆ ಪಲ್ಯದ ವ್ಯವಸ್ಥೆ ಮಾಡಲಾಯಿತು.

ಇಂದಿನ ಕಾರ್ಯಕ್ರಮಕ್ಕೆ ಸಿಹಿ ತಿಂಡಿಯ ವ್ಯವಸ್ಥೆ ಮಾಡಿದ ಶ್ರೀ ರಮೇಶ್ ಬಂಟ್ವಾಳರವರಿಗೆ, ಪತ್ರೊಡೆ ಮತ್ತು ಕಣಿಲೆ ಪಲ್ಯದ ವ್ಯವಸ್ಥೆ ಮಾಡಿದ ಶ್ರೀಮತಿ ಜ್ಯೋತಿ ಎನ್.ಕುಲಾಲ್ ಮತ್ತು ಶ್ರೀ ಎ.ಎನ್. ಕುಲಾಲ್ ರವರಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಮಾಜ ಬಾಂಧವರಿಗೆ,
ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
🙏🙏🙏

ಕುಲಾಲ ಸಂಘ ಬೆಂಗಳೂರು (ರಿ) ಇದರ ಸಂಘ ದ ನೂತನ ಕಚೇರಿಯು ರಾಜಾಜಿನಗರದ 5 ನೇ block ನಲ್ಲಿ ಇಂದು ದಿನಾಂಕ (8-8-25) ಉದ್ಘಾಟನಾ ಪೂಜೆ ಯಶಸ್ವಿಯಾಗಿ...
08/08/2025

ಕುಲಾಲ ಸಂಘ ಬೆಂಗಳೂರು (ರಿ) ಇದರ ಸಂಘ ದ ನೂತನ ಕಚೇರಿಯು ರಾಜಾಜಿನಗರದ 5 ನೇ block ನಲ್ಲಿ ಇಂದು ದಿನಾಂಕ (8-8-25) ಉದ್ಘಾಟನಾ ಪೂಜೆ ಯಶಸ್ವಿಯಾಗಿ ನೆರವೇರಿತು.ಹಾಗೂ ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು 🙏

25/05/2025
ಶ್ರೀ ನಿತಿನ್ ಕುಲಾಲ್, ಬಾಯರ್, ಸಮಗ್ರ ನಿರ್ವಹಣೆ ಮತ್ತು ಸಾಹಿತ್ಯ ರಚನೆ.
25/03/2025

ಶ್ರೀ ನಿತಿನ್ ಕುಲಾಲ್, ಬಾಯರ್,
ಸಮಗ್ರ ನಿರ್ವಹಣೆ ಮತ್ತು ಸಾಹಿತ್ಯ ರಚನೆ.

ಸಾಲಿಯನ್ ತರವಾಡ್ ಮುನ್ನೂರು ಪೆರ್ಮುದೆ ಇದರ ""ಮುನ್ನೂರುದ ಕಾರ್ಣಿಕ ಸತ್ಯೋಲು"".............. ತುಳು ಭಕ್ತಿ ಸುಗಿಪು🙏ಶ್ರೀ ಶಿವಸುಬ್ರಹ್ಮಣ್ಯ .....

25/03/2025

ಶ್ರೀ ನಿತಿನ್ ಕುಲಾಲ್, ಬಾಯರ್,
ಸಮಗ್ರ ನಿರ್ವಹಣೆ ಮತ್ತು ಸಾಹಿತ್ಯ ರಚನೆ.

Address

#630, Soumya Kali Layout, Andrahalli Main Road
Bangalore
560055

Alerts

Be the first to know and let us send you an email when Kulala Sangha Bengaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kulala Sangha Bengaluru:

Share