15/10/2026
*🇦🇪 ಅರಬ್ಬರ ನಾಡಲ್ಲಿ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ - 2026 🇮🇳*
*“ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ”*
*Dubai Kannadigas' Celebration of Unity & Unanimity*
*ದುಬೈ ಕರ್ನಾಟಕ ರಾಜ್ಯೋತ್ಸವ - 2026*
ಕರ್ನಾಟಕ ಸಂಘ ದುಬೈ ಆಯೋಜನೆಯಲ್ಲಿ ಮತ್ತು ಕನ್ನಡಿಗರ ಕೂಟ ದುಬೈ ಸಹಯೋಗದಲ್ಲಿ...
*ಐತಿಹಾಸಿಕ ಏಕತೆಯ ಮಹಾಸಂಭ್ರಮ!*
ದುಬೈಯ ಎಲ್ಲಾ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತಂದು *“ಏಕತೆಯಲ್ಲಿ ಕರ್ನಾಟಕ”* ಎಂಬ ಅನಿವಾಸಿ ಕನ್ನಡಿಗರ ಐಕ್ಯತೆಯ ಆಶಯವನ್ನು ಸಾಕಾರಗೊಳಿಸುವ ವಿಶೇಷ ರಾಜ್ಯೋತ್ಸವ.
*📅 ದಿನಾಂಕ:* ಭಾನುವಾರ, 22 ನವೆಂಬರ್ 2026
*📍 ಸ್ಥಳ:* ನ್ಯೂ ಡಾನ್ ಪ್ರೈವೇಟ್ ಸ್ಕೂಲ್, ಅಲ್ ಖುಸೈಸ್ - ದುಬೈ
*⏰ ಸಮಯ:* ಬೆಳಿಗ್ಗೆ 10:30 ರಿಂದ ಸಂಜೆ 8:00
*🍱 ಉಚಿತ ಉತ್ಸವಾಮೃತ* : ಮದ್ಯಾನ್ಹ 2:00 ಘಂಟೆಗೆ
*ಈ ಬಾರಿಯ ವಿಶೇಷತೆಗಳು:*
✨ ಗಣ್ಯ ಅತಿಥಿಗಳು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸಮ್ಮುಖ
✨ ಕರ್ನಾಟಕದ ಕಲೆ-ಸಂಸ್ಕೃತಿ ಬಿಂಬಿಸುವ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು
✨ ಕರ್ನಾಟಕ ಮತ್ತು UAEಯ ಪ್ರತಿಭಾವಂತ ಕಲಾವಿದರಿಂದ ಕಲಾ ಸಂಭ್ರಮ
✨ ವಿಶ್ವದ ಅತಿ ದೊಡ್ಡ ಹೊರನಾಡ ಉಚಿತ ಕನ್ನಡ ಪಾಠ ಶಾಲೆಯ 13ನೇ ವರ್ಷದ ತರಗತಿಗಳಿಗೆ ಚಾಲನೆ- ಕನ್ನಡ ಮಿತ್ರರು ಯು.ಎ.ಇ
ಈ ಬಾರಿಯ ರಾಜ್ಯೋತ್ಸವ ಕೇವಲ ಹಬ್ಬವಲ್ಲ, ಇದು ದುಬೈ ಕನ್ನಡಿಗರ ಒಗ್ಗಟ್ಟಿನ ಶಕ್ತಿ ಪ್ರದರ್ಶನ!
*ಬನ್ನಿ, ಒಟ್ಟಾಗಿ ಸೇರೋಣ - ಒಟ್ಟಾಗಿ ಸಂಭ್ರಮಿಸೋಣ*
*ಕನ್ನಡದ ಕಂಪನ್ನು, ನಾಡಿನ ಸಂಸ್ಕೃತಿಯನ್ನು, ಕನ್ನಡಿಗರ ಏಕತೆಯನ್ನು ಅರಬ್ಬರ ನಾಡಲ್ಲಿ ಮೊಳಗಿಸೋಣ!*
*ಜೈ ಕರ್ನಾಟಕ! ಜೈ ಕನ್ನಡ!*
*ಆತ್ಮೀಯವಾಗಿ,*
*ಶಶಿಧರ ನಾಗರಾಜಪ್ಪ*
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
ಕರ್ನಾಟಕ ಸಂಘ ದುಬೈ
ಮತ್ತು
*ಅರುಣ್ ಕುಮಾರ್*
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
ಕನ್ನಡಿಗರ ಕೂಟ ದುಬೈ